ಶಾಂತಿಯುತ ಚುನಾವಣೆ ನಡೆಸಲು ಸಹಕರಿಸಿ
ರಾಜಕೀಯ ಪಕ್ಷಗಳ ಮುಖಂಡರ ಸಭೆ ನೀತಿ ಸಂಹಿತೆ ಉಲ್ಲಂಘಿಸಿದರೆ ಕ್ರಿಮಿನಲ್ ಪ್ರಕರಣ: ಜಿಲ್ಲಾ ಚುನಾವಣಾಧಿಕಾರಿ ಎಚ್ಚರಿಕೆ
Team Udayavani, Apr 10, 2019, 3:39 PM IST
ರಾಯಚೂರು: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಮುಖಂಡರಿಗೆ ನೀತಿ ಸಂಹಿತೆ ಪಾಲನೆಕುರಿತು ಸಭೆ ನಡೆಯಿತು.
ರಾಯಚೂರು: ರಾಜಕೀಯ ಪಕ್ಷಗಳ ಮುಖಂಡರು ಚುನಾವಣೆ
ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ
ಶಾಂತಿಯುತವಾಗಿ ಚುನಾವಣೆ ನಡೆಯಲು ಸಹಕರಿಸಬೇಕು ಎಂದು
ಜಿಲ್ಲಾ ಚುನಾವಣಾಧಿ ಕಾರಿ ಶರತ್ ಬಿ. ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ
ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗಾಗಿ ಹಮ್ಮಿಕೊಂಡಿದ್ದ
ಚುನಾವಣೆ ನೀತಿ ಸಂಹಿತೆ ಪಾಲಿಸುವ ಕುರಿತ ಸಭೆಯಲ್ಲಿ ಅವರು
ಮಾತನಾಡಿದರು. ಯಾವುದೇ ಮತದಾರ ಭಯ, ದಾಕ್ಷಿಣ್ಯಕ್ಕೆ
ಒಳಗಾಗಿ ಮತ ಹಾಕಬಾರದು ಎಂಬುದು ಸಂವಿಧಾನದ ಆಶಯ.ಅದಕ್ಕಾಗಿ ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಖಾಸಗಿ ಸ್ಥಳಗಳಲ್ಲಿ ಚುನಾವಣಾ ಸ್ಪರ್ಧಿಗಳ ಅಥವಾ ಪಕ್ಷಗಳ ಬ್ಯಾನರ್, ಪೋಸ್ಟರ್ ಹಾಕಬಾರದು. ನೀತಿ ಸಂಹಿತೆ ಜಾರಿಯಾಗುವುದರೊಳಗೆ ಸಿವಿಲ್ ಕಾಮಗಾರಿ ಆರಂಭವಾಗಿದ್ದಲ್ಲಿ
ಮಾತ್ರ ಮುಂದುವರಿಸಬಹುದು. ಆದರೆ, ಯಾವುದೇ
ಹೊಸ ಕಾಮಗಾರಿ ಕೈಗೊಳ್ಳುವಂತಿಲ್ಲ. ಕುಡಿಯುವ ನೀರಿಗೆ ಸಂಬಂ ಧಿಸಿದ ಕಾಮಗಾರಿಗಳಿಗೆ ಇದು ಅನ್ವಯಿಸುವುದಿಲ್ಲ ಎಂದು
ಹೇಳಿದರು.
ಭದ್ರತೆ, ಅಕ್ರಮ ತಡೆಗಟ್ಟುವ ಉದ್ದೇಶದಿಂದ ಪ್ರತಿ ವಾಹನ ತಪಾಸಣೆ ನಡೆಸಲಾಗುವುದು. ಸರ್ಕಾರಿ ನೌಕರರು ಯಾವುದೇ ಜನಪ್ರತಿನಿಧಿ ಗಳನ್ನು ಖಾಸಗಿ ಸ್ಥಳಗಳಲ್ಲಿ ಭೇಟಿ ಮಾಡಿದರೆ ಅವರ
ವಿರುದ್ಧ ಸೂಕ್ತ ಕ್ರಮ ಕೈಗೊಳಲಾಗುವುದು ಎಂದು ಎಚ್ಚರಿಸಿದರು.
ಕೋಮು ಗಲಭೆಗೆ ಆಸ್ಪದ ನೀಡುವ ಭಾಷಣ, ಟೀಕೆ ಮಾಡಬಾರದು. ಜಾತಿ, ಪಂಗಡ, ಭಾಷೆಗಳನ್ನು ಟೀಕಿಸಬಾರದು.
ರಾಜಕೀಯ ಪಕ್ಷಗಳು ಕರಪತ್ರ ಮುದ್ರಿಸಿಕೊಂಡಲ್ಲಿ ಈ ಬಗ್ಗೆ ಸೂಕ್ತ
ದಾಖಲೆ ಪಡೆಯಬೇಕು ಎಂದು ಸೂಚಿಸಿದರು. ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದರೆ ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಮತದಾನದ ದಿನದಂದು ಮತದಾರರಿಗೆ ರಾಜಕೀಯ ಪಕ್ಷಗಳು ವಾಹನಗಳ ನೆರವು ನೀಡಬಾರದು ಎಂದು ತಿಳಿಸಿದರು.
ಚುನಾವಣಾ ವೀಕ್ಷಕಿ ಶೈಲಾ ಎ., ಪೊಲೀಸ್ ವೀಕ್ಷಕ ಡಿ.ವೈ. ಮಾಂಡಲೀಕ್, ಚುನಾವಣಾ ವೆಚ್ಚ ವೀಕ್ಷಕ ವಿ.ಕೆ.ಚಕ್ರವರ್ತಿ, ಜಿಪಂ
ಸಿಇಒ ನಲಿನ್ ಅತುಲ್, ಎಸ್‌ಪಿ ಡಿ.ಕಿಶೋರಬಾಬು, ಸಹಾಯಕ ಚುನಾವಣಾ ಧಿಕಾರಿ ವೆಂಕಟೇಶ ಇತರರಿದ್ದರು.
ಪಕ್ಷಗಳು ಅಥವಾ ಅಭ್ಯರ್ಥಿಗಳು 24 ಗಂಟೆಗೂ ಮುನ್ನ ಹೆಲಿಕಾಪ್ಟರ್ ಲ್ಯಾಂಡಿಂಗ್‌ಗೆ ಅನುಮತಿ ಪಡೆಯಬೇಕು. ಬೆಳಗಿನ 10ರಿಂದ ಸಂಜೆ 6 ಗಂಟೆವರೆಗೆ ಲೌಡ್ ಸ್ವೀಕರ್ ಬಳಸಲು ಅನುಮತಿ ನೀಡಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಕೈಗೊಂಡಲ್ಲಿ ನಮೂನೆ 26ರಲ್ಲಿ ಅಭ್ಯರ್ಥಿಗಳು ಸಲ್ಲಿಸಿರುವ ಖಾತೆಗಳಲ್ಲಿಯೇ ಪ್ರಚಾರ ಕೈಗೊಳ್ಳಬೇಕು. ಇಲೆಕ್ಟ್ರಾನಿಕ್ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತು ಪ್ರಚಾರ ಮಾಡಬೇಕಿದ್ದಲ್ಲಿ ಎಂಸಿಎಂಸಿ ಸಮಿತಿ ಪೂರ್ವಾನುಮತಿ ಕಡ್ಡಾಯ.
ಶರತ್ ಬಿ.,
ಜಿಲ್ಲಾ ಚುನಾವಣಾಧಿಕಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
MUST WATCH
ಹೊಸ ಸೇರ್ಪಡೆ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.