ಮತದಾನ ಹೆಚ್ಚಳಕ್ಕೆ ಪತ್ರಕರ್ತರ ಸಹಕಾರ ಶ್ಲಾಘನೀಯ
ಪತ್ರಕರ್ತರು ನಿರ್ಮಿಸಿದ ಮತದಾನ ಜಾಗೃತಿಯ ವೈಲೆಟ್ ಇಂಕ್-2 ಹಾಗೂ ಹೋಪ್ ಕಿರುಚಿತ್ರ ಬಿಡುಗಡೆ
Team Udayavani, Apr 11, 2019, 4:03 PM IST
ರಾಯಚೂರು: ಪತ್ರಿಕಾ ಭವನದಲ್ಲಿ ನಡೆದ ಪತ್ರಕರ್ತರು ನಿರ್ಮಿಸಿದ ಮತದಾನ ಮಹತ್ವ ಕುರಿತ ಕಿರುಚಿತ್ರಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬಿ. ಶರತ್ ಮಾತನಾಡಿದರು.
ರಾಯಚೂರು: ಮತದಾನ ಹೆಚ್ಚಳಕ್ಕೆ ಸರ್ಕಾರ ಅನೇಕ ಕಾರ್ಯಕ್ರಮ ರೂಪಿಸಿ ಜನ ಜಾಗೃತಿ ಮೂಡಿಸುತ್ತಿದೆ. ಆ ಕೆಲಸಕ್ಕೆ ಪತ್ರಕರ್ತರು ಕೂಡ ಕೈ ಜೋಡಿಸಿರುವುದು ಉತ್ತಮ ಬೆಳವಣಿಗೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ರಾಯಚೂರು ರಿಪೋರ್ಟರ್ ಗಿಲ್ಡ್ ಸಹಕಾರದಲ್ಲಿ ಪತ್ರಕರ್ತರು ನಿರ್ಮಿಸಿ, ವಿಜಯ್ ಜಾಗಟಗಲ್ ನಿರ್ದೇಶಿಸಿದ ವೈಲೆಟ್ ಇಂಕ್-2 ಹಾಗೂ ಹೋಪ್ ಎಂಬ 2 ಕಿರುಚಿತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಬಹುದೊಡ್ಡ ಅಸ್ತ್ರವಿದ್ದಂತೆ. ಮತದಾನ ಪ್ರಕ್ರಿಯೆ ಅಮೂಲ್ಯವಾಗಿದ್ದು, ಜಿಲ್ಲಾ ಸ್ವೀಪ್ ಸಮಿತಿಯಿಂದ ಹಲವು ರೀತಿಯ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಒತ್ತಡದ ಕೆಲಸದ
ನಡುವೆಯೂ ಮತದಾನ ಹೆಚ್ಚಳಕ್ಕೆ ಜನ ಜಾಗೃತಿಗಾಗಿ ಬಹುತೇಕ ಪತ್ರಕರ್ತರೇ ಅಭಿನಯಿಸಿ ಮಹತ್ವದ ಸಂದೇಶ ಸಾರುವ ಕಿರುಚಿತ್ರಗಳನ್ನು ನಿರ್ಮಿಸಿರುವುದು ಪ್ರಶಂಶನೀಯ ಎಂದರು.
ಎಸ್ಪಿ ಡಿ.ಕಿಶೋರಬಾಬು ಮಾತನಾಡಿ, ಮಾಧ್ಯಮ ಪ್ರತಿನಿಧಿಗಳು ನಿರ್ಮಿಸಿದ ಈ ಕಿರುಚಿತ್ರದಿಂದ ಮತದಾರರು ಪ್ರೇರಿತರಾಗಿ ಜನ ಮತ ಚಲಾಯಿಸಿದರೆ ಪತ್ರಕರ್ತರ ಪ್ರಯತ್ನಕ್ಕೂ ಅರ್ಥ ಬರುತ್ತದೆ ಎಂದರು.
ಜಿಪಂ ಸಿಇಒ ನಲಿನ್ ಅತುಲ್ ಮಾತನಾಡಿದರು. ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ನಾಗಡದಿನ್ನಿ, ಕಾರ್ಯದರ್ಶಿ ಗುರುನಾಥ, ಪತ್ರಕರ್ತರಾದ ಬಿ.ವೆಂಕಟಸಿಂಗ್, ಚನ್ನಬಸವಣ್ಣ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ
Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.