ಎಲ್ಲರ ಬಾಯಲ್ಲೂ’ಏನಿದು ಉರಿ ಬಿಸಿಲು; ಸೆಕೆಯ ಕಿರಿಕಿರಿ’!

ಕರಾವಳಿಯಲ್ಲಿ ಏರುತ್ತಿದೆ ಸುಡು ಬಿಸಿಲು; ದಾಖಲೆಯತ್ತ ಗರಿಷ್ಠ ತಾಪಮಾನ

Team Udayavani, Apr 1, 2019, 10:07 AM IST

01-April-1-

ಮಹಾನಗರ: ಕರಾವಳಿ ಭಾಗದಲ್ಲಿ ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಗರಿಷ್ಠ ಉಷ್ಣಾಂಶದ ಪ್ರಮಾಣ ದಾಖಲೆಯತ್ತ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ ಮಧ್ಯಾಹ್ನ ವೇಳೆ 36 ಡಿ.ಸೆ.ನಷ್ಟು ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದ್ದು, ವಿಪರೀತ ಸೆಕೆಯಿಂದ ಜನರು ಮನೆಯಿಂದ ಹೊರಬರುವುದನ್ನು ಕಡಿಮೆ ಮಾಡಿದ್ದಾರೆ. ಇದೇ ಕಾರಣಕ್ಕೆ ನಗರದ ಪ್ರಮುಖ ರಸ್ತೆಗಳಲ್ಲಿ ಮಧ್ಯಾಹ್ನ ವೇಳೆ ಜನಸಂಚಾರ ಕೂಡ ವಿರಳವಾಗಿದೆ.

ನಗರದಲ್ಲಿ ವಾಹನಗಳಲ್ಲಿ ಓಡಾಡುವ ಮಂದಿ ಎ.ಸಿ. ಮೊರೆಹೋಗಿದ್ದು, ಕಾರುಗಳಲ್ಲಿ ಎ.ಸಿ. ಹಾಕದೆ ಕೂರಲು ಸಾಧ್ಯ ವಾಗದ ಪರಿಸ್ಥಿತಿ ತಲೆದೋರಿದೆ. ನಗರದಿಂದ ದೂರದ ಊರುಗಳಿಗೆ ಬಸ್‌ನಲ್ಲಿ ತೆರಳುವ ಮಂದಿ ಹೆಚ್ಚಾಗಿ ಎ.ಸಿ. ಬಸ್‌ ಗಳನ್ನು ಆಯ್ಕೆ ಮಾಡುತ್ತಿದ್ದಾರೆ.


ಬಿಸಿಲಿನ ಝಳಕ್ಕೆ ಕರಾವಳಿ ಮಂದಿ ತತ್ತರಿಸಿದ್ದು, ಮನೆಯಿಂದ ಹೊರ ಬಂದರೆ ಮೈ ಸುಡುವಂತಹ ರಣಬಿಸಿಲು. ಮನೆಯೊಳಗೆ ಇದ್ದರೆ ವಿಪರೀತ ಸೆಕೆ. ಇದರಿಂದ ಪಾರಾಗಲು ನಗರದ ಮಂದಿ ಏರ್‌ ಕೂಲರ್‌, ಹವಾನಿಯಂತ್ರಿತ ವಸ್ತುಗಳ ಮೊರೆಹೋಗುತ್ತಿದ್ದಾರೆ. ಇನ್ನು, ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್‌ ಕಡ್ಡಾಯವಾಗಿದ್ದು, ಸೆಕೆ ಪ್ರಮಾಣ ಹೆಚ್ಚಳದಿಂದ ಹೆಲ್ಮೆಟ್‌ ಹಾಕಿದರೆ ಕುತ್ತಿಗೆಯಲ್ಲಿ ಅಲರ್ಜಿ ಸಮಸ್ಯೆ ಉಂಟಾಗುತ್ತಿದೆ.

ಬಿಸಿಲಿನಿಂದ ಹೈರಾಣಾದ ಮಂದಿ ತಂಪು ಪಾನೀಯದ ಮೊರೆ ಹೋಗುತ್ತಿದ್ದು, ಎಳನೀರು, ವಿವಿಧ ಜ್ಯೂಸ್‌, ಕಲ್ಲಂಗಡಿ, ವಿವಿಧ ತಂಪು ಪಾನೀಯಗಳ ಮಾರಾಟ ಹೆಚ್ಚಳವಾಗಿವೆ.

ನಗರದ ಕೆಲವು ಕಡೆಗಳಲ್ಲಿ ಕಲ್ಲಂಗಡಿ, ಅನಾನಸು, ಮುಳ್ಳು ಸೌತೆ ಮೊದಲಾದವುಗಳನ್ನು ಹೋಳುಗಳಾಗಿ ಮಾಡಿ ಮಾರಲಾಗುತ್ತಿದೆ. ಎಳನೀರಿಗೆ ಬೇಡಿಕೆ ಹೆಚ್ಚಿದಂತೆ ಕೆಲವು ಅಂಗಡಿಗಳಲ್ಲಿ ಬೆಲೆ ಕೂಡ ಹೆಚ್ಚಾಗಿದೆ. ಈ ಹಿಂದೆ ಊರಿನ ಎಳನೀರಿಗೆ 30 ರೂ. ಇತ್ತು.

ಇದೀಗ 32 ರೂ.ಗೆ ಮಾರುತ್ತಿದ್ದಾರೆ. ಹೈಬ್ರೀಡ್‌ ಎಳನೀರು ಬೆಲೆ 35 ರೂ. ಆಗಿದೆ. ಬೇಸಗೆ ಹೆಚ್ಚಾದಂತೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಬೇಸಗೆಯಲ್ಲಿ ಹೆಚ್ಚಾಗಿ ಚಿಕನ್‌ ಪಾಕ್ಸ್‌, ಅಲರ್ಜಿ, ತುರಿಕೆ, ಸಿಡುಬು, ಹೆಪಟೈಟಿಸ್‌ ಇತ್ಯಾದಿಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಿದೆ.

ಶ್ವಾನಗಳ ಆರೈಕೆಗೆ ಹೀಗಿರಲಿ
ಇನ್ನು ಮನೆಯಲ್ಲಿರುವ ಶ್ವಾನಗಳು ಕೂಡ ಬಿಸಿಲಿನ ತಾಪಕ್ಕೆ ಬಹುಬೇಗ ಬಳಲುತ್ತವೆ. ಹಾಗಾಗಿ ಅವುಗಳನ್ನು ಆದಷ್ಟು ನೆರಳಿನ ಪ್ರದೇಶದಲ್ಲಿರಿಸಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಬಿಸಿಲಿನ ಝಳ ಹೆಚ್ಚಾಗುವ ಮೊದಲು ಶ್ವಾನಗಳನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗಬೇಕು. ತಣ್ಣಗಿನ ನೀರಿನಲ್ಲಿ ಸ್ನಾನ ಮಾಡಿಸಬೇಕು. ನೀರಿನ ಅಂಶವಿರುವ ಆಹಾರವನ್ನು ತಿನ್ನಲು ಕೊಡಬೇಕು. ಅವುಗಳ ಕೂದಲು ಆದಷ್ಟು ಟ್ರಿಮ್‌ ಮಾಡಿದರೆ ಉತ್ತಮ. ಇನ್ನು ಜಾನುವಾರುಗಳಿಗೆ ಮನೆ ಮುಂದೆ, ಪಕ್ಷಿಗಳಿಗೆ ಕೊಂಚ ಎತ್ತರದ ಪ್ರದೇಶದಲ್ಲಿ ನೀರು ಇಡುವ ವ್ಯವಸ್ಥೆ‌ ಮಾಡಿದರೆ ಉತ್ತಮ.

ಎರಡು ವರ್ಷಗಳ ಹಿಂದೆ ಹೀಗೆ ಸೆಕೆ ಇತ್ತು !
ಎರಡು ವರ್ಷಗಳ ಹಿಂದೆ ಇದೇ ರೀತಿಯ ಉರಿ ಬಿಸಿಲು ಕರಾವಳಿಯಲ್ಲಿತ್ತು. 2017ರ ಮಾ.2ರಂದು 39.6 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿತ್ತು. ಇದಾದ ಬಳಿಕ 2018ರಲ್ಲಿ ಮಾ.12ರಂದು 36.8 ಡಿ.ಸೆ. ತಾಪಮಾನ ದಾಖಲಾಗಿತ್ತು. ಇದೀಗ 2019ರಲ್ಲೂ ಸುಮಾರು 37 ಡಿ.ಸೆ. ನಷ್ಟು ತಾಪಮಾನ ದಾಖಲಾಗುತ್ತಿದ್ದು, ಹವಾಮಾನ ಇಲಾಖೆ ಅಧಿಕಾರಿಗಳು ಹೇಳುವಂತೆ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಚುನಾವಣ ಪ್ರಚಾರಕ್ಕೆ ಬಿಸಿ ತಾಪ
ಜಿಲ್ಲೆಯಲ್ಲಿ ಚುನಾವಣೆಯ ಕಾವು ಏರಿದ್ದು, ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು
ಕೂಡ ತಮ್ಮ ಪಕ್ಷದ ಪರವಾಗಿ ಪ್ರಚಾರ ಪ್ರಾರಂಭಿಸಿದ್ದಾರೆ. ನಗರದಲ್ಲಿ ಏರುತ್ತಿರುವ
ಬಿಸಿಲಿನ ತಾಪಕ್ಕೆ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಕೂಡ ಹೈರಾಣಾಗಿದ್ದಾರೆ.

ಏರಿದ ಉಷ್ಣಾಂಶ
ಈ ಬಾರಿ ಗರಿಷ್ಠ. ಕನಿಷ್ಠ ಉಷ್ಣಾಂಶದಲ್ಲಿ ಏರಿಳಿತವಾಗಿದೆ. ಸದ್ಯದ ಮುನ್ಸೂಚನೆಯ ಪ್ರಕಾರ ಕೆಲವು ದಿನಗಳ ಕಾಲ ಇದೇ ರೀತಿಯ ತಾಪಮಾನ ಇರಲಿದೆ.
– ಗವಾಸ್ಕರ್‌ ಸಾಂಗ,
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವಿಜ್ಞಾನಿ

ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌

CM-Shiigavi-2

MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ

vidan-soudha-kannada

Golden Jubilee: ಕನ್ನಡವೇ ಅಧಿಕಾರಿಗಳ‌ ಹೃದಯದ ಭಾಷೆ ಆಗಲಿ

KSRTC

Transport: ಕೆಎಸ್ಸಾರ್ಟಿಸಿ ದಾಖಲೆ: ಒಂದೇ ದಿನ 1.23 ಕೋಟಿ ಮಂದಿ ಪ್ರಯಾಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌

CM-Shiigavi-2

MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.