ಸಾಗರ ಗ್ರಂಥಾಲಯಕ್ಕೆ ಬೇಕಿದೆ ಆಧುನಿಕ ಸ್ಪರ್ಶ

ಗ್ರಂಥಾಲಯದ ಎದುರು ಸಾಲುಗಟ್ಟಿರುವ ವಾಹನಗಳ ಸಾಲಿನಿಂದ ಸಮಸ್ಯೆ

Team Udayavani, Oct 26, 2019, 5:06 PM IST

26-October-21

ಸಾಗರ: ನಗರದಲ್ಲಿ ಜನನಿಬಿಡ ಪ್ರದೇಶದಲ್ಲಿರುವ ಸರ್ಕಾರಿ ಗ್ರಂಥಾಲಯದಲ್ಲಿ ಕಥೆ- ಕಾದಂಬರಿ ಪುಸ್ತಕಗಳಿವೆ, ಪ್ರತಿನಿತ್ಯ ದೈನಿಕ, ನಿಯತಕಾಲಿಕಗಳು ಲಭ್ಯವಾಗುತ್ತವೆ. ಆದರೆ ಓದಲು ಬರುವ ನಾಗರಿಕರ ಸಂಖ್ಯೆ ಕಡಿಮೆಯಾಗಿರುವುದೇ ಎದ್ದು ಕಾಣುವ ಸಮಸ್ಯೆ. ಇದಕ್ಕಿಂತ ಮುಖ್ಯವಾಗಿ ಯುವ ವರ್ಗ ಸಂಪೂರ್ಣವಾಗಿ ಗ್ರಂಥಾಲಯದಿಂದ ವಿಮುಖವಾಗಿರುವುದು ಗಮನಿಸಲೇಬೇಕಾದ ಸಂಗತಿಯಾಗಿದೆ.

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಜಿಲ್ಲಾ ಕೇಂದ್ರ ಗ್ರಂಥಾಲಯದ ಅಡಿಯಲ್ಲಿ ಸಾಗರದಲ್ಲಿ ಎರಡು ಶಾಖೆಗಳು ಕೆಲಸ ಮಾಡುತ್ತಿವೆ. ನಗರದ ಕೋರ್ಟ್‌ ರಸ್ತೆಯಲ್ಲಿ ಮುಖ್ಯ ಖಾಸಗಿ ಬಸ್‌ ನಿಲ್ದಾಣದಿಂದ ಕೂಗಳತೆಯ ದೂರದಲ್ಲಿ ದಶಕಗಳಿಂದ ಒಂದು ಶಾಖೆ ಕಾರ್ಯ ನಿರ್ವಹಿಸುತ್ತಿದ್ದರೆ ನಗರದ ಹೊರವಲಯದ ಅಣಲೆಕೊಪ್ಪದಲ್ಲಿ ನಾಲ್ಕು ವರ್ಷಗಳ ಈಚೆಗೆ ಇನ್ನೊಂದು ಗ್ರಂಥಾಲಯ ಶಾಖೆ ಆರಂಭಗೊಂಡಿದೆ.

1976ರಲ್ಲಿ ಸೆಂಟ್ರಲ್‌ ಲೈಬ್ರರಿ ಎಂದು ಜನರಿಂದ ಕರೆಸಿಕೊಳ್ಳುವ ಈ ಗ್ರಂಥಾಲಯ ಆರಂಭವಾಗಿದೆ. 40-100ರ ವಿಶಾಲ ನಿವೇಶನದಲ್ಲಿರುವ ಗ್ರಂಥಾಲಯಕ್ಕೆ ಆ ಕಾಲದಲ್ಲಿ ದಾನಿಗಳು ಕೊಟ್ಟ ಜಾಗ, ಗ್ರಂಥಾಲಯ ಇಲಾಖೆಗೇ ಖಾತೆ ಆಗಿದೆ. ಮರ-ಗಿಡಗಳ ನಡುವೆ ಇರುವ ಗ್ರಂಥಾಲಯ ಒಂದರ್ಥದಲ್ಲಿ ಓದಲು ಬರುವವರಿಗೆ ನೆಮ್ಮದಿಯ ತಾಣವನ್ನು ಒದಗಿಸುತ್ತದೆ.

ನಾಲ್ಕು ಸಾವಿರಕ್ಕೂ ಹೆಚ್ಚು ಸದಸ್ಯರು!: ಕೋರ್ಟ್‌ ರಸ್ತೆಯ ಗ್ರಂಥಾಲಯಕ್ಕೆ ತಾಲೂಕಿನ 4,791 ಜನ ಸದಸ್ಯತ್ವ ಪಡೆದುಕೊಂಡಿದ್ದಾರೆ. ಇಬ್ಬರು ಸಿಬ್ಬಂದಿ ಇದ್ದಾರೆ. ಸ್ವಂತ ಜಾಗವಿದೆ. ಹತ್ತಿರದಲ್ಲಿಯೇ ಸರ್ಕಾರಿ ಪ್ರೌಢಶಾಲೆ, ತುಂಬಿ ತುಳುಕುವ ಜೂನಿಯರ್‌ ಕಾಲೇಜು ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳಿವೆ. ತಾಲೂಕು ಕಚೇರಿ, ಎಸಿ ಕಚೇರಿ, ತಾಪಂ, ಮುಖ್ಯ ಅಂಚೆ ಕಚೇರಿ, ಬಸ್‌ ನಿಲ್ದಾಣ, ನ್ಯಾಯಾಲಯಗಳೆಲ್ಲ ಗ್ರಂಥಾಲಯದ ಆಜುಬಾಜಿ ನಲ್ಲಿಯೇ ಇವೆ. ಆದರೆ ಗ್ರಂಥಾಲಯಕ್ಕೆ ಎಡತಾಕುವ ಜನ ಮಾತ್ರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದಾರೆ.

ಗ್ರಂಥಾಲಯಕ್ಕೆ ಸ್ವಂತ ಸ್ಥಳವಿದೆ. ಹಿಂದಿನ ಮಾದರಿಯ ಮಂಗಳೂರು ಹೆಂಚಿನ ಮನೆಯಿದೆ. ಗ್ರಂಥಾಲಯದ ಒಳಗೆ ಬೇಕಾದ ಮೂಲ ಸೌಲಭ್ಯಗಳಿಗೂ ಕೊರತೆಯೇನಿಲ್ಲ. ಕುರ್ಚಿ, ಟೇಬಲ್‌ಗ‌ಳಿವೆ. 21 ದೈನಿಕಗಳು ಪ್ರತಿದಿನ ಇಲ್ಲಿ ಓದುಗರಿಗೆ ಲಭ್ಯ.
11 ವಾರಪತ್ರಿಕೆಗಳು, 8 ಪಾಕ್ಷಿಕಗಳು ಹಾಗೂ 19 ಮಾಸಿಕ ಈಗ ಇಲ್ಲಿ ಸಿಗುತ್ತಿವೆ. ಗ್ರಂಥಾಲಯದಲ್ಲಿ 56 ಸಾವಿರ ಪುಸ್ತಕಗಳು ಇವೆ. ಅದೃಷ್ಟಕ್ಕೆ ಗ್ರಂಥಾಲಯಕ್ಕೆ ದೈನಿಕಗಳನ್ನು ಓದಲು ಸ್ವಲ್ಪ ಸಂಖ್ಯೆಯ ಜನರು ಓದಲು ಬರುತ್ತಿದ್ದಾರೆ. 4,791 ಸದಸ್ಯರು ಇದ್ದರೂ ಪ್ರಸ್ತುತ ಕೇವಲ 200 ಜನ ಸದಸ್ಯರು ಮಾತ್ರ ಗ್ರಂಥಾಲಯದ ಪ್ರಯೋಜನ ಪಡೆಯುತ್ತಿದ್ದರು ಉಳಿದವರು ವಿಮುಖರಾಗಿರುವುದು ಬೇಸರದ ವಿಷಯ.

ಬೇರೆ ಸಮಸ್ಯೆಗಳೂ ಇವೆ!: ಪುಸ್ತಕಗಳ ಲೋಕದ ಗ್ರಂಥಾಲಯ ಇವತ್ತಿಗೂ ಈ ಆಧುನಿಕ ಕಾಲದ ತಾಂತ್ರಿಕತೆಯನ್ನು ತನ್ನದಾಗಿಸಿಕೊಂಡಿಲ್ಲ. ಇಲ್ಲಿನ ಪ್ರತಿಯೊಂದು ಮಾಹಿತಿ, ದಾಖಲೆ ಕಡತ, ಫೈಲ್‌ಗ‌ಳಲ್ಲಿ ಇದೆಯೇ ವಿನಃ ಕಂಪ್ಯೂಟರ್‌ ತಂತ್ರಜ್ಞಾನದ ನೆರವಿನಿಂದ ಡೇಟಾ ಸಂಗ್ರಹಿಸುವ ಕೆಲಸ ಆಗಿಲ್ಲ. ಪುಸ್ತಕಗಳಲ್ಲಿ ಕಾದಂಬರಿಗಳು ಲೇಖಕರ ಪ್ರಕಾರವಾಗಿ ಹಾಗೂ ಸೃಜನೇತರ ಪುಸ್ತಕಗಳನ್ನು ವಿಷಯಾಧಾರಿತವಾಗಿ ಸಂಗ್ರಹಿಸುವ ಪ್ರಯತ್ನ ಮಾಡಲಾಗಿದೆ. ಆದರೂ ಓದುಗನೋರ್ವನಿಗೆ ತಾನು ಬಯಸಿದ ಪುಸ್ತಕವನ್ನು ಹುಡುಕುವುದು ಸುಲಭವಲ್ಲ. ಕಂಪ್ಯೂಟರ್‌ ಡೇಟಾ ವ್ಯವಸ್ಥೆ ಇದ್ದಿದ್ದರೆ ಯಾವ ಅಲ್ಮೆರಾದಲ್ಲಿ ಯಾವ ಪುಸ್ತಕ ಇದೆ ಎಂಬ ಮಾಹಿತಿಯನ್ನು ಒಂದು ಕ್ಲಿಕ್‌ನಲ್ಲಿ ನೋಡಿ ಹುಡುಕಿಕೊಳ್ಳಬಹುದಿತ್ತು. ಗ್ರಂಥಾಲಯದ ಖಾಯಂ ಓದುಗರಾದ ಜಿತೇಂದ್ರ ಹಿಂಡೂಮನೆ ಹೇಳುವಂತೆ ಸರ್ಕಾರದ ವ್ಯವಸ್ಥೆ ಆಗಿರುವುದರಿಂದ ಪುಸ್ತಕಗಳಲ್ಲಿಯೂ ಕಸ ಜಾಸ್ತಿ. ಅವುಗಳಲ್ಲಿ ಉತ್ತಮವಾದುದನ್ನು ಆರಿಸಿಕೊಳ್ಳುವುದು ತುಸು ಸಾಹಸದ ಕೆಲಸ!

ಗ್ರಂಥಾಲಯದ ಕಟ್ಟಡ ಸಾಕಷ್ಟು ಹಳೆಯದಾಗಿರುವುದರಿಂದ ಇಂದಿನ ಅವಶ್ಯಕತೆಗಳಿಗೆ ಪೂರಕವಾದ ಹೊಸ ಕಟ್ಟಡ ನಿರ್ಮಾಣವಾಗಬೇಕು. ಆಗ ಪುಸ್ತಕಗಳನ್ನು ವಿಭಾಗವಾರು ಸಂಗ್ರಹಿಸಲು ಅನುಕೂಲವಾಗುತ್ತದೆ. ಇಂದು ಪ್ರತಿ ವರ್ಷ ಸಾವಿರದಿಂದ ಸಾವಿರದೈನೂರು ಪುಸ್ತಕಗಳು ಹೊಸದಾಗಿ ಸೇರ್ಪಡೆಯಾಗುತ್ತವೆ. ಈ ಹಿನ್ನೆಲೆಯಲ್ಲಿ ಇಲಾಖೆ ಮುಂದೆ ಹೊಸ ಕಟ್ಟಡ ನಿರ್ಮಾಣದ ಪ್ರಸ್ತಾವನೆ ಇದೆ ಎಂದು ಮೇಲ್ವಿಚಾರಕಿ ನಿರ್ಮಲಾ ತಿಳಿಸುತ್ತಾರೆ.

ಗ್ರಂಥಾಲಯ ಇರುವ ಜಾಗದ ಕಾರಣಕ್ಕಾಗಿಯೇ ಇಲ್ಲಿಗೆ ಬರುವ ಜನರಿಗೆ ಕೆಲ ಮಟ್ಟಿನ ಸಮಸ್ಯೆ ಉಂಟಾಗುತ್ತಿದೆ. ದೊಡ್ಡ ಸಂಖ್ಯೆಯ ಜನ ಈ ರಸ್ತೆಗೇ ಬರುವುದರಿಂದ ವಾಹನಗಳನ್ನು ಗ್ರಂಥಾಲಯದ ಎದುರು ಪಾರ್ಕ್‌ ಮಾಡುವುದು ಸಾಮಾನ್ಯವಾಗಿದೆ. ಇದರಿಂದ ಲೈಬ್ರರಿಗೆ ಬರುವವರಿಗೆ ಸಮಸ್ಯೆ ಆಗುತ್ತದೆ. ಕೊನೆ ಪಕ್ಷ ಗ್ರಂಥಾಲಯದ ಗೇಟ್‌ ಎದುರಾಗಿ ವಾಹನಗಳನ್ನು ನಿಲ್ಲಿಸದಂತೆ ನಿರ್ಬಂಧ ಹೇರಬೇಕಾದ ಅಗತ್ಯವಿದೆ ಎಂದು ರಾಘವೇಂದ್ರ ಸಾಗರ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಟಾಪ್ ನ್ಯೂಸ್

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಕನಿಷ್ಠ 53 ಮಂದಿ ಮೃತ್ಯು, 60ಕ್ಕೂ ಹೆಚ್ಚು ಮಂದಿ ಗಾಯ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Karinja: ಅಪಾಯಕಾರಿ ವಿದ್ಯುತ್‌ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1

Karinja: ಅಪಾಯಕಾರಿ ವಿದ್ಯುತ್‌ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಕನಿಷ್ಠ 53 ಮಂದಿ ಮೃತ್ಯು, 60ಕ್ಕೂ ಹೆಚ್ಚು ಮಂದಿ ಗಾಯ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.