ಶಾಸಕರ ವಿರುದ್ಧದ ಘೋಷಣೆಗೆ ಬಿಜೆಪಿ ಕಿಡಿ

ಮೂರೂವರೆ ತಾಸು ಬಿಗುವಿನ ವಾತಾವರಣ •ಠಾಣೆಗೆ ನುಗ್ಗಲೆತ್ನಿಸಿದ ಬಿಜೆಪಿ ಕಾರ್ಯಕರ್ತರು

Team Udayavani, Jun 19, 2019, 11:24 AM IST

19-June-13

ಸಾಗರ: ಬಿಜೆಪಿ ಮುಖಂಡರು ನಗರ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಸಾಗರ: ಬೆಂಗಳೂರಿನ ಕನ್ನಡ ಸೇನೆ ಕರ್ನಾಟಕ ಸಂಘಟನೆ ಹಮ್ಮಿಕೊಂಡಿದ್ದ ಕನ್ನಡಾಭಿಮಾನದ ಸಂಕಲ್ಪ ಯಾತ್ರೆ ಸಂದರ್ಭದಲ್ಲಿ ಹಾದುಹೋಗುತ್ತಿದ್ದ ಶಾಸಕ ಹಾಲಪ್ಪ ಅವರ ವಿರುದ್ಧ ಕೆಲವರು ಆಕ್ಷೇಪಕಾರಿ ಘೋಷಣೆಗಳನ್ನು ಕೂಗಿದರು ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದ ಪೊಲೀಸ್‌ ಠಾಣೆ ಎದುರು ನಡೆಸಿದ ದಿಢೀರ್‌ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸುಮಾರು ಮೂರೂವರೆ ತಾಸುಗಳ ಕಾಲ ಬಿಗುವಿನಿಂದ ಕೂಡಿದ ವಾತಾವರಣ ಮಂಗಳವಾರ ಸಂಜೆ ನಗರದಲ್ಲಿ ನಿರ್ಮಾಣಗೊಂಡಿತ್ತು. ಕನ್ನಡಸೇನೆ ರಾಜ್ಯಾಧ್ಯಕ್ಷ ಕೆ.ಆರ್‌.ಕುಮಾರ್‌, ಜಿಲ್ಲಾಧ್ಯಕ್ಷ ಟಿಪ್‌ಟಾಪ್‌ ಬಶೀರ್‌, ತಸ್ರೀಫ್‌ ನೇತೃತ್ವದಲ್ಲಿ ಕನ್ನಡಾಭಿಮಾನದ ಸಂಕಲ್ಪ ಯಾತ್ರೆ ಮಂಗಳವಾರ ಸಾಗರಕ್ಕೆ ಆಗಮಿಸಿತ್ತು. ಸಾಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಸಾಗರ ಹೋಟೆಲ್ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿ ಮೆರವಣಿಗೆಯು ಪೋಸ್ಟ್‌ ಆಫೀಸ್‌ ವೃತ್ತಕ್ಕೆ ಬರುತ್ತಿರುವ ಸಂದರ್ಭದಲ್ಲಿ ಗಲಾಟೆ ನಡೆದಿದ್ದು, ಬಿಜೆಪಿ ಮತ್ತು ಕನ್ನಡ ಸೇನೆ ಕಾರ್ಯಕರ್ತರ ನಡುವೆ ತಳ್ಳಾಟ ಹಾಗೂ ಬೈಗುಳದ ಸುರಿಮಳೆಯಾಗಿದೆ. ಒಂದು ಹಂತದಲ್ಲಿ ಬಿಜೆಪಿ ಕಾರ್ಯಕರ್ತರು ಪೊಲೀಸ್‌ ಠಾಣೆಯೊಳಗೆ ನುಗ್ಗುವ ಸನ್ನಿವೇಶ ನಿರ್ಮಾಣವಾಗಿ ಲಾಠಿ ಚಾರ್ಜ್‌ನ ಹಂತ ತಲುಪಿತ್ತು.

ಕ್ಷೇತ್ರದ ಶಾಸಕ ಎಚ್. ಹಾಲಪ್ಪ ಕಸಬಾ ಹೋಬಳಿ ಪ್ರವಾಸ ಮುಗಿಸಿಕೊಂಡು ನಗರಸಭೆಯಲ್ಲಿರುವ ತಮ್ಮ ಕಚೇರಿಗೆ ಹೊರಟಿದ್ದರು. ಈ ಸಂದರ್ಭದಲ್ಲಿ ಕನ್ನಡಾಭಿಮಾನ ಸಂಕಲ್ಪದ ಯಾತ್ರೆಯ ಬೃಹತ್‌ ಮೆರವಣಿಗೆ ರಸ್ತೆಯಲ್ಲಿ ಸಾಗುತ್ತಿತ್ತು. ಶಾಸಕರು ಸ್ವಲ್ಪ ಹೊತ್ತು ಮೆರವಣಿಗೆ ಸಾಗಲಿ ಎಂದು ಕಾರಿನಲ್ಲಿ ಕಾಯುತ್ತಾ ಕುಳಿತಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಶಾಸಕರು ಕಚೇರಿಗೆ ಹೋಗಲು ಜಾಗ ಮಾಡಿಕೊಡುವಂತೆ ವಿನಂತಿ ಮಾಡಿದ್ದಾರೆ. ಇದಕ್ಕೆ ಕನ್ನಡ ಸೇನೆಯ ಕೆಲವು ಕಾರ್ಯಕರ್ತರು ಒಪ್ಪಿಗೆ ಸೂಚಿಸಿ ರಸ್ತೆ ತೆರವು ಮಾಡುತ್ತಿದ್ದ ಸಂದರ್ಭದಲ್ಲಿ ಗಲಾಟೆ ನಡೆದಿದೆ.

ಮೆರವಣಿಗೆಯಲ್ಲಿದ್ದ ಒಂದಿಬ್ಬರು ಶಾಸಕರಿಗೆ ಅವಹೇಳನಕಾರಿಯಾದ ಭಾಷೆಯನ್ನು ಉಪಯೋಗಿಸಿ ನಿಂದಿಸುವ ಜೊತೆಗೆ ಅವರಿಗೆ ರಸ್ತೆ ಏಕೆ ಬಿಡಬೇಕು ಎನ್ನುವ ಉದ್ಧಟತನದ ಮಾತನ್ನು ಆಡಿದ್ದಾರೆ. ಶಾಸಕರ ವಾಹನ ಮುಂದೆ ಹೋದಾಗ ಸಹ ಕೆಲವರು ವಾಹನ ಹಿಂಬಾಲಿಸಿ ಶಾಸಕರ ವಿರುದ್ಧ ಘೋಷಣೆ ಕೂಗಿದ್ದಾರೆ.

ಇದರಿಂದ ಕೆರಳಿದ ಬಿಜೆಪಿ ಕಾರ್ಯಕರ್ತರು ಕನ್ನಡಸೇನೆ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಪರಸ್ಪರ ಮಾತಿನ ಚಕಮಕಿ ನಡೆದಿದೆ. ಇದರಿಂದ ಕ್ರೋಧಗೊಂಡ ಶಾಸಕರು ಮತ್ತು ಬಿಜೆಪಿ ಕಾರ್ಯಕರ್ತರು ಪೊಲೀಸ್‌ ಠಾಣೆ ಎದುರು ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ನೂರಾರು ಸಂಖ್ಯೆಯಲ್ಲಿ ಠಾಣೆ ಎದುರು ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು ಶಾಸಕರ ಬೆಂಬಲಕ್ಕೆ ನಿಂತು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ ಸ್ವಲ್ಪಕಾಲ ಠಾಣೆ ಎದುರು ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು. ಇದಕ್ಕೆ ಪ್ರತಿಯಾಗಿ ಕನ್ನಡಸೇನೆ ಕಾರ್ಯಕರ್ತರು ಮತ್ತೂಂದು ಕಡೆ ಶಾಸಕರ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸತೊಡಗಿದರು.

ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಅರಿತ ಸಹಾಯಕ ಪೊಲೀಸ್‌ ಅಧಿಧೀಕ್ಷಕ ಯತೀಶ್‌ ಎನ್‌. ಶಾಸಕರನ್ನು ಮತ್ತು ಕನ್ನಡಸೇನೆಯ ಪ್ರಮುಖರನ್ನು ಠಾಣೆಯೊಳಗೆ ಕರೆದು ರಾಜಿಸಂಧಾನ ನಡೆಸಲು ಮುಂದಾದರು. ಈ ಸಂದರ್ಭದಲ್ಲಿ ಕನ್ನಡಸೇನೆಯ ಪ್ರಮುಖರೊಬ್ಬರು ಆವೇಶಭರಿತವಾಗಿ ಮಾತನಾಡಿದ್ದು ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿ ಠಾಣೆಗೆ ನುಗ್ಗುವ ಪ್ರಯತ್ನ ನಡೆಸಿದರು. ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ತಡೆಯುವಲ್ಲಿ ಯಶಸ್ವಿಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಚ್. ಹಾಲಪ್ಪ, ಊರಿನಲ್ಲಿ ಕೋಮು ಸೌಹಾರ್ದವನ್ನು ಕದಡುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಕಳೆದ ಮೂರ್‍ನಾಲ್ಕು ತಿಂಗಳಿನಿಂದ ಇದಕ್ಕೆ ನಿರಂತರ ಪ್ರಯತ್ನ ನಡೆಯುತ್ತಿದೆ. ಊರಿನ ನೆಮ್ಮದಿ ಹಾಳು ಮಾಡುವ ಕೃತ್ಯ ನಡೆಸುತ್ತಿರುವವ ಕೆಲವರಿಗೆ ಪೊಲೀಸರು ಸಹಕಾರ ನೀಡುತ್ತಿದ್ದಾರೆ ಎಂದು ದೂಷಿಸಿದರು.

ನಮ್ಮ ಕಾರ್ಯಕರ್ತರು ಸಣ್ಣಪುಟ್ಟ ಮೆರವಣಿಗೆ ಮಾಡಲು ಮುಂದಾದರೆ ಪೊಲೀಸರು ನೂರಾರು ಕಾಯ್ದೆ ಹೇಳುತ್ತಾರೆ. ನಮಗೂ ಕನ್ನಡನಾಡು, ನುಡಿ ಬಗ್ಗೆ ಗೌರವವಿದೆ. ಆದರೆ ಕನ್ನಡಸೇನೆ ಹೆಸರಿನಲ್ಲಿ ಕೆಲವರು ಕನ್ನಡ ಭಾಷೆ ಉಳಿಸುವ ಹೆಸರಿನಲ್ಲಿ ನೂರಾರು ವಾಹನಗಳನ್ನು ರಸ್ತೆಗೆ ತಂದು ಶಾಂತಿ ಸುವ್ಯವಸ್ಥೆಗೆ ಭಂಗ ತಂದಿದ್ದಾರೆ. ಅಂತಹವರ ಬಗ್ಗೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ನಮ್ಮನ್ನು ದೂಷಣೆ ಮಾಡುತ್ತಿರುವುದು ಖಂಡನೀಯ. ನಗರದ ಮಧ್ಯಭಾಗದಲ್ಲಿ ಕನ್ನಡಾಭಿಮಾನದ ಸಂಕಲ್ಪ ಯಾತ್ರೆ ನಡೆಯುತ್ತಿದ್ದರೆ ಕೆಲವರು ನಗರದ ಹೊರವಲಯಗಳಲ್ಲಿ ಬಿಜೆಪಿ ಕಾರ್ಯಕರ್ತರು ಇರುವ ಮನೆಗಳ ಎದುರು ಪಟಾಕಿ ಸಿಡಿಸಿ, ಬೈಕ್‌ ಮೂಲಕ ಸಂಭ್ರಮಾಚರಣೆ ನಡೆಸಿದ್ದಾರೆ. ಇದು ಊರಿನಲ್ಲಿ ಅಶಾಂತಿ ಮೂಡಿಸಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ ಎನ್ನುವುದನ್ನು ಎತ್ತಿ ತೋರಿಸುತ್ತದೆ. ನನ್ನ ವಿರುದ್ದ ಘೋಷಣೆ ಕೂಗಿ, ಅವಹೇಳನಕಾರಿಯಾಗಿ ಮಾತನಾಡಿರುವವರನ್ನು ಬಂಧಿಸುವ ತನಕ ಪ್ರತಿಭಟನೆ ಹಿಂದಕ್ಕೆ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.

ರಾಜಿ ಸಂಧಾನ: ಎರಡು ಘಂಟೆಗಳ ಕಾಲ ನಡೆದ ಸಹಾಯಕ ಪೊಲೀಸ್‌ ಅಧಿಧೀಕ್ಷಕ ಯತೀಶ್‌ ಎನ್‌. ನೇತೃತ್ವದಲ್ಲಿ ನಡೆದ ರಾಜಿ ಪಂಚಾಯ್ತಿ ಸಭೆಯಲ್ಲಿ ಮೆರವಣಿಗೆಯ ನೇತೃತ್ವವನ್ನು ಶಾಸಕ ಎಚ್. ಹಾಲಪ್ಪ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಕನ್ನಡಸೇನೆ ರಾಜ್ಯಾಧ್ಯಕ್ಷ ಕೆ.ಆರ್‌. ಕುಮಾರ್‌ ಇನ್ನಿತರರು ಇರುತ್ತಾರೆ. ಶಾಸಕರ ವಿರುದ್ಧ ಘೋಷಣೆ ಕೂಗಿದ ಆಲಿ ಎಂಬಾತನನ್ನು ಮೆರವಣಿಗೆಯಿಂದ ಹೊರಗೆ ಇಟ್ಟು, ಕನ್ನಡಾಭಿಮಾನದ ಸಂಕಲ್ಪ ಯಾತ್ರೆಯನ್ನು ಮುಂದುವರಿಸಲು ಸಭೆಯಲ್ಲಿ ತೀರ್ಮಾನವಾಯಿತು.

ಕನ್ನಡಾಭಿಮಾನದ ಸಂಕಲ್ಪ ಯಾತ್ರೆ ನಗರವ್ಯಾಪ್ತಿಯಿಂದ ಹೊರಗೆ ಹೋಗುವವರೆಗೂ ಕನ್ನಡ ಪರ ಘೋಷಣೆ ಕೂಗಿ ಎಲ್ಲ ರೀತಿಯ ಗೌರವಾದರಗಳನ್ನು ಕನ್ನಡಾಭಿಮಾನ ಸಂಕಲ್ಪಯಾತ್ರೆಗೆ ನೀಡುವ ತೀರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.

ರಾಜಿ ಸಭೆಯಲ್ಲ್ಲಿ ಬಿಜೆಪಿ ಪ್ರಮುಖರಾದ ಟಿ.ಡಿ. ಮೇಘರಾಜ್‌, ಆರ್‌. ಶ್ರೀನಿವಾಸ್‌, ಚೇತನರಾಜ್‌ ಕಣ್ಣೂರು, ಗಣೇಶಪ್ರಸಾದ್‌, ತಾಪಂ ಸದಸ್ಯ ದೇವೇಂದ್ರಪ್ಪ, ತಸ್ರೀಫ್‌, ಕನ್ನಡಸೇನೆ ರಾಜ್ಯಾಧ್ಯಕ್ಷ ಕೆ.ಆರ್‌.ಕುಮಾರ್‌, ನಗರಸಭೆಯ ಬಿಜೆಪಿ ಸದಸ್ಯರು ಇದ್ದರು.

ಟಾಪ್ ನ್ಯೂಸ್

ಪ್ರೀತಿಯಲ್ಲಿ ಬಿದ್ದ ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್: 2ನೇ ಮದುವೆಗೆ ರೆಡಿ

ಪ್ರೀತಿಯಲ್ಲಿ ಬಿದ್ದ ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್: 2ನೇ ಮದುವೆಗೆ ರೆಡಿ

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು

Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು

Borewell Tragedy: ಹತ್ತು ದಿನಗಳ ಕಾರ್ಯಾಚರಣೆ… ಕೊನೆಗೂ ಬದುಕಿ ಉಳಿಯಲಿಲ್ಲ ಚೇತನಾ

Borewell Tragedy: ಹತ್ತು ದಿನಗಳ ಕಾರ್ಯಾಚರಣೆ… ಕೊನೆಗೂ ಬದುಕಿ ಉಳಿಯಲಿಲ್ಲ ಚೇತನಾ

Raichuru-hospi

ರಾಯಚೂರಲ್ಲಿ ಮತ್ತೋರ್ವ ಬಾಣಂತಿ, ಹಸುಗೂಸು ಸಾವು

Borewell Tragedy: 10 ದಿನದ ಕಾರ್ಯಾಚರಣೆ ಬಳಿಕ ಬದುಕಿ ಬಂದ ಬಾಲೆ, ಇದು ಪವಾಡ ಎಂದ ಪೋಷಕರು

Borewell Tragedy: 10 ದಿನದ ಕಾರ್ಯಾಚರಣೆ ಬಳಿಕ ಬದುಕಿ ಬಂದ ಬಾಲೆ, ಇದು ಪವಾಡ ಎಂದ ಪೋಷಕರು

yoga-nara

Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kinnigoli: ರಿಕ್ಷಾ ಪಲ್ಟಿ; ಚಾಲಕ ಗಂಭೀರ

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

WhatsApp Image 2025-01-01 at 19.31.55

Udupi: ಅಸ್ವಸ್ಥಗೊಂಡ ರೈಲು ಪ್ರಯಾಣಿಕೆ ಸಾವು

Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು

Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು

6

Udupi: ಗಾಂಜಾ ಸೇವನೆ; ಓರ್ವ ವಶಕ್ಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಪ್ರೀತಿಯಲ್ಲಿ ಬಿದ್ದ ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್: 2ನೇ ಮದುವೆಗೆ ರೆಡಿ

ಪ್ರೀತಿಯಲ್ಲಿ ಬಿದ್ದ ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್: 2ನೇ ಮದುವೆಗೆ ರೆಡಿ

Untitled-1

Kasaragod ಅಪರಾಧ ಸುದ್ದಿಗಳು: ಅಂಗಡಿಗೆ ಲಾರಿ ಢಿಕ್ಕಿ

accident

Kinnigoli: ರಿಕ್ಷಾ ಪಲ್ಟಿ; ಚಾಲಕ ಗಂಭೀರ

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

WhatsApp Image 2025-01-01 at 19.31.55

Udupi: ಅಸ್ವಸ್ಥಗೊಂಡ ರೈಲು ಪ್ರಯಾಣಿಕೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.