ವಿದ್ಯುತ್‌ ಕಡಿತಕ್ಕೆ ನಿರ್ವಹಣೆಯ ವ್ಯತ್ಯಯ ಕಾರಣ

Team Udayavani, Aug 18, 2019, 4:18 PM IST

18-Agust-41

ಸಾಗರ: ನಗರದ ಬಿವಿಆರ್‌ ಕಚೇರಿಯ ವಿವೇಕ ಸಭಾಂಗಣದಲ್ಲಿ ನಡೆದ ಸಂಸ್ಥೆಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಶರಾವತಿ ವಿದ್ಯುತ್‌ ಸೌಹಾರ್ದ ಸಹಕಾರಿಯ ಅಧ್ಯಕ್ಷ ಗೋಪಾಲಕೃಷ್ಣ ಬಾರಂಗಿ ಮಾತನಾಡಿದರು.

ಸಾಗರ: ಇಂದು ರಾಜ್ಯದಲ್ಲಿ ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದಲ್ಲಿಯೇ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಆದರೂ ನಾವು ಪದೇ ಪದೇ ವಿದ್ಯುತ್‌ ಕಡಿತ ಅನುಭವಿಸುವಂತಾಗಲು ವ್ಯವಸ್ಥೆಯಲ್ಲಿನ ನಿರ್ವಹಣೆಯ ಕೊರತೆಯೇ ಕಾರಣ ಎಂದು ಶರಾವತಿ ವಿದ್ಯುತ್‌ ಸೌಹಾರ್ದ ಸಹಕಾರಿಯ ಅಧ್ಯಕ್ಷ ಗೋಪಾಲಕೃಷ್ಣ ಬಾರಂಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಬಿವಿಆರ್‌ ಕಚೇರಿಯ ವಿವೇಕ ಸಭಾಂಗಣದಲ್ಲಿ ನಡೆದ ಸಂಸ್ಥೆಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಸಂಸ್ಥೆ ಸಾಗರ, ಹೊಸನಗರ ತಾಲೂಕು ಹಾಗೂ ಭಾಗಶಃ ಸೊರಬ ತಾಲೂಕುಗಳಲ್ಲಿ ವಿದ್ಯುತ್‌ ಗ್ರಾಹಕರಿಗೆ ದಿನದ 24 ಗಂಟೆ ಗುಣಮಟ್ಟದ ವಿದ್ಯುತ್‌ ಪೂರೈಕೆ ಮಾಡುವ ಗುರಿಯೊಂದಿಗೆ ಸ್ಥಾಪಿತವಾಗಿದೆ. 2018ರಲ್ಲಿ ಸೌಹಾರ್ದ ಸಹಕಾರಿ ನಿಯಮದಡಿ ನಾವು ನೋಂದಾಯಿತರಾಗಿದ್ದೇವೆ. ದೀಪದಿಂದ ದೀಪ ಹಚ್ಚುವಂತೆ ಮುಂದಿನ ವರ್ಷಗಳಲ್ಲಿ ಷೇರುದಾರರ ಸಂಖ್ಯೆ, ಠೇವಣಿಯನ್ನು ಹೆಚ್ಚಿಸಿ ನಮ್ಮ ಗುರಿ ಈಡೇರಿಕೆಗೆ ಮುಂದಾಗಲಿದ್ದೇವೆ ಎಂದು ಘೋಷಿಸಿದರು.

ಸಂಸ್ಥೆ ವಿದ್ಯುತ್‌ ವಿತರಣೆಗೆ ಅಗತ್ಯವಾದ ಆಡಳಿತಾತ್ಮಕ ಹಾಗೂ ತಾಂತ್ರಿಕ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೆಇಆರ್‌ಸಿ ಎದುರು ನಿಲ್ಲುವಾಗ ಷೇರು ಬಂಡವಾಳ ಹೆಚ್ಚಬೇಕು. ಎರಡರಿಂದ ಮೂರು ಕೋಟಿ ರೂ. ಬಂಡವಾಳ ಸಂಗ್ರಹಿಸುವ ಗುರಿ ಹೊಂದಬೇಕಾಗಿದೆ. ಮೆಸ್ಕಾಂ ಸಾಗರ ವಿಭಾಗದಲ್ಲಿರುವ 1.5 ಲಕ್ಷ ಗ್ರಾಹಕರಲ್ಲಿ ಶೇ. 10ರಷ್ಟು ಜನರನ್ನು ಷೇರುದಾರರನ್ನಾಗಿಸಿಕೊಂಡರೂ ಗುರಿ ತಲುಪುತ್ತೇವೆ. ಈ ನಿಟ್ಟಿನಲ್ಲಿ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದರು.

ಉಪಾಧ್ಯಕ್ಷ ಬಿ.ವಿ.ರವೀಂದ್ರನಾಥ್‌ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜಕೀಯೇತರ ಸಂಸ್ಥೆಯಾಗಿಯೂ ನಾವು ರಾಜಕೀಯ ಪಕ್ಷಗಳಲ್ಲಿ ಈ ರೀತಿಯ ಯೋಜನೆಗೆ ಬೆಂಬಲಿಸುವವರನ್ನು ಸಂಪರ್ಕಿಸುತ್ತೇವೆ. ತಾಲೂಕಿನಲ್ಲಿ ಸಹಕಾರಿ ಧುರೀಣರ ಅಗಾಧ ಶಕ್ತಿ ವಿದ್ಯುತ್‌ ಕ್ಷೇತ್ರದ ಈ ಸುಧಾರಣಾ ಕ್ರಮಕ್ಕೆ ಬೆಂಬಲವಾಗಿ ನಿಂತರೆ ಯೋಜನೆಯ ಸಾಕಾರ ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಸಂಸ್ಥೆ ಅಕ್ಟೋಬರ್‌ನಿಂದ ಹೆಚ್ಚು ವೇಗದಲ್ಲಿ ಕೆಲಸ ಮಾಡಲಿದೆ ಎಂದರು.

ಸಂಸ್ಥೆಯ ಕಾರ್ಯ ನಿರ್ವಹಣಾಧಿಕಾರಿ ಮಂಜುನಾಥ ಹೆಗಡೆ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು. ನಿರ್ದೇಶಕ ಹೊಸನಗರದ ಎಂ.ವಿ. ಜಯರಾಮ್‌, ಪ್ರಕಾಶ್‌ ಬೆಳೆಯೂರು ಇದ್ದರು. ಅರುಣಾಚಲ ಬೆಳೆಯೂರು ಸ್ವಾಗತಿಸಿದರು. ಕೆ. ವೆಂಕಟೇಶ್‌ ವಂದಿಸಿದರು. ಸುಮಾ ನಿರ್ವಹಿಸಿದರು.

ಟಾಪ್ ನ್ಯೂಸ್

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ

1-amudaa

MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ‌ 9 ಗಂಟೆ ವಿಚಾರಣೆ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.