ಜೋಗಕ್ಕೆ ಸೈಕಲ್ ಹೊಡೆದ ಸಾಗರ ಸೈಕ್ಲಿಂಗ್ ಕ್ಲಬ್ ಸದಸ್ಯರು!
14 ಜನರ ತಂಡದಿಂದ ಪ್ರವಾಸ
Team Udayavani, May 13, 2019, 1:29 PM IST
ಸಾಗರ: ನಗರದಿಂದ ಜೋಗದವರೆಗೆ ಸೈಕಲ್ ತುಳಿದ ಸಾಗರದ ಯುವಕರು ಸಂಭ್ರಮಿಸಿದರು.
ಸಾಗರ: ಪೆಟ್ರೋಲ್ ವಾಹನಗಳ ಬಳಕೆಯನ್ನು ಕಡಿಮೆಗೊಳಿಸುವ ಅಸ್ತ್ರವೂ ನಮ್ಮದೇ ಕೈಯಲ್ಲಿದೆ ಎಂದು ಜಾಗೃತಿ ಮೂಡಿಸುವ ನಿರಂತರ ಪ್ರಯತ್ನದಲ್ಲಿರುವ ನಗರದ ಸೈಕ್ಲಿಂಗ್ ಕ್ಲಬ್ ಸದಸ್ಯರು ಈ ಭಾನುವಾರ ಸಾಗರದಿಂದ ಜೋಗ ಜಲಪಾತದವರೆಗೆ ಸೈಕಲ್ ಹೊಡೆದರು. ಈವರೆಗಿನ ವಾರಾಂತ್ಯದ ಸೈಕಲ್ ಪ್ರವಾಸದಲ್ಲಿ 68 ಕಿಮೀ ದೂರ ಸೈಕಲ್ ಹೊಡೆದ ಈ ಪ್ರವಾಸ ದೀರ್ಘ ಪೆಡಲಿಂಗ್‌ನದಾಗಿತ್ತು. 14 ಜನರ ತಂಡ ಈ ಜೋಗ ಪ್ರವಾಸವನ್ನು ಯಶಸ್ವಿಯಾಗಿ ಪೂರೈಸಿತು.
ಬೆಳಗ್ಗೆ ಐದೂವರೆಗೆ ಹೊರಟ ನಟರಾಜ, ಮುರುಳಿ ಗೀಜಗಾರು, ಕೀರ್ತಿ, ಕಿರಣ್, ವಿಶಾಲ್ ಪಟೇಲ್, ಮೇಘ ಮಂಕಾಳೆ, ಭಾವೇಶ್ ಪಟೇಲ್, ಆದಿತ್ಯ ಮಂಕಳಲೆ, ಸೂರಜ್, ಜಗದೀಶ್, ಸಮರ್ಥ, ಮಹೇಶ್ ಮಧುಸೂಧನ್ ಶೇಟ್ ಮೊದಲಾದವರಿದ್ದ ತಂಡ 7-15ರ ವೇಳೆಗೆ ಜೋಗ ತಲುಪಿದೆ. ಕಳೆದ ಕೆಲವು ತಿಂಗಳಿನಿಂದ ಈ ವಾರಾಂತ್ಯ ಸೈಕಲ್ ಪ್ರವಾಸ ಜಾರಿಯಲ್ಲಿದೆ. ಸುತ್ತಮುತ್ತಲ ಹಳ್ಳಿಗಳ ಪುಟ್ಟ ಪ್ರವಾಸಗಳನ್ನು ದಾಟಿ ಕ್ಲಬ್ ಸದಸ್ಯರು ದೀರ್ಘಾಂತರದ ಪ್ರಯಾಣಕ್ಕೂ ಸೈ ಎನ್ನುತ್ತಿದ್ದಾರೆ. ಎರಡು ವಾರಗಳ ಹಿಂದೆ 48 ಕಿಮೀ ಪೆಡಲ್ ಹೊಡೆದು ಹಸಿರುಮಕ್ಕಿ ಶರಾವತಿ ಹಿನ್ನೀರಿನ ದಡವನ್ನು ತಂಡ ಮುಟ್ಟಿತ್ತು. ಕಾನ್ಲ, ಸೈದೂರು, ಮಾಸೂರು, ಸಾಗರ ಮಾರ್ಗದಲ್ಲಿ 47 ಕಿಮೀ, ಸಾಗರ, ಶಿರೂರು, ಬೆಳ್ಳೆಣ್ಣೆ ಮಾರ್ಗದಲ್ಲಿ 46 ಕಿಮೀ ಸೈಕಲ್ ಹೊಡೆದಿದ್ದು ಇತಿಹಾಸದ ಪುಟಗಳನ್ನು ಸೇರಿದೆ.
ಕೇವಲ ವಾರಾಂತ್ಯದಲ್ಲಿ ಸೈಕಲ್ ಹೊಡೆಯುವುದರಿಂದ ಆಗುವ ಜಾಗೃತಿಯೇನು ಎಂದು ಸಾಮಾನ್ಯವಾಗಿ ಕಾಡುವ ಪ್ರಶ್ನೆಗೆ ಉತ್ತರಿಸುವ ತಂಡದ ನಟರಾಜ್ ಗುಲಗಂಜಿಮನೆ, ವೀಕೆಂಡ್ ರೈಡ್ ಮಾಡುವುದು ಸುಲಭವಲ್ಲ. ಇದಕ್ಕೆ ಸಿದ್ಧಗೊಳ್ಳಲು ಸೈಕಲ್ ಸವಾರ ಪ್ರತಿದಿನ ಸೈಕಲ್ ಹೊಡೆದು ಫಿಟ್ ಎನ್ನಿಸಿಕೊಳ್ಳಬೇಕು. ಇಂದು ನಾವು 15 ಜನ ಷಟಲ್ ಅಭ್ಯಾಸಕ್ಕೆ ತೆರಳುವಾಗ ಸೈಕಲ್ನ್ನೇ ಬಳಸುತ್ತೇವೆ ಎಂದರೆ ಅಷ್ಟರಮಟ್ಟಿಗೆ ಪೆಟ್ರೋಲ್ ಬಳಕೆಯನ್ನು ತಗ್ಗಿಸಿದ್ದೇವೆ ಎಂದೇ ಹೇಳಬೇಕು. ನಮ್ಮ ಪ್ರವಾಸಗಳಿಗೆ ಸಾಥ್ ನೀಡುವವರು ಪರಿಸರಕ್ಕೆ ಒಳಿತು ಮಾಡುವ ದೀಕ್ಷೆ ತೆಗೆದುಕೊಂಡಿದ್ದಾರೆ ಎಂಬುದು ಸ್ಪಷ್ಟ ಎಂದರು.
ನಾನು ಒಂದೂವರೆ ವರ್ಷದ ಹಿಂದೆಯೇ ಬೈಕ್ ಮಾರಿಬಿಟ್ಟೆ. ನಗರದ ಓಡಾಟದ ಕೆಲಸಗಳಿಗೆ ಸೈಕಲ್ ಬಳಸುತ್ತೇನೆ. ಸೈಕಲ್ಗೆ ಮೀಟರ್ ಅಳವಡಿಸಿದ ನಂತರವೇ ಒಂದೂವರೆ ಸಾವಿರ ಕಿಮೀ ಸಂಚರಿಸಿದ್ದೇನೆ. ಅಂದರೆ ಕಾರು ಓಡಿಸಲು ಬೇಕಾದ ಸರಿಸುಮಾರು 100 ಲೀಟರ್ ಪೆಟ್ರೋಲ್ ಸುಡುವುದನ್ನು ತಪ್ಪಿಸಿದ್ದೇನೆ. ನಾವು ಸೈಕಲ್ ಸವಾರಿಯ ನಿರ್ಧಾರ ಮಾಡಿದರೆ ಇಂದಿನ ರಸ್ತೆಗಳ ಗುಣಮಟ್ಟ ಉತ್ತಮವಾಗಿರುವಾಗ ತ್ರಾಸವೂ ಆಗುವುದಿಲ್ಲ, ಪರಿಸರ ಮಾಲಿನ್ಯವೂ ಕಡಿಮೆಯಾಗುತ್ತದೆ ಎಂದರು. ಕ್ಲಬ್‌ಗ ಸದಸ್ಯರಾಗಲು ಯಾವುದೇ ಶುಲ್ಕವಿಲ್ಲ. ಮಕ್ಕಳು ಸದಸ್ಯರಾಗಲು ಪೋಷಕರ ಅನುಮತಿ ಪತ್ರ ಅಗತ್ಯ. ವಾರಾಂತ್ಯದ ಪ್ರವಾಸದ ಸಂದರ್ಭದಲ್ಲಿ ಒಯ್ಯುವ ತಿಂಡಿ ಪಾನೀಯಗಳ ಖರ್ಚನ್ನು ಪರಸ್ಪರರ ಹಂಚಿಕೆ ವಿಧಾನದಲ್ಲಿ ಭರಿಸುವುದು ಮಾತ್ರ ಜಾರಿಯಲ್ಲಿದೆ. ವಾರಾಂತ್ಯದ ಸ್ಥಳ ನಿರ್ಧರಿಸುವಲ್ಲಿಯೂ ಎಲ್ಲರಿಗೂ ದೂರದ ಗುರಿ ನಿಗದಿಪಡಿಸುವುದಿಲ್ಲ. ಜೋಗದತ್ತ ಹಲವರು ತೆರಳಿದರೆ ಅವರಲ್ಲೇ ಕೆಲವರು ಕೇವಲ ತಾಳಗುಪ್ಪದವರೆಗೆ ಬಂದು ತಂಡದ ಜಾಗೃತಿ ಅಭಿಯಾನಕ್ಕೆ ಸಾಥ್ ನೀಡಿದರು. ನಿಧಾನವಾಗಿಯಾದರೂ ನಗರದಲ್ಲಿ ಸೈಕಲ್ಗಳ ಸಂಖ್ಯೆ ಹೆಚ್ಚಲು ಈ ಪ್ರಯೋಗ ಸಫಲವಾಗಬೇಕಾಗಿದೆ.
ಸೈಕಲ್ಗೂ 10 ರೂ. ಪ್ರವೇಶ
ಜೋಗ ತಲುಪಿದ ಸಾಗರ ಸೈಕ್ಲಿಂಗ್ ಕ್ಲಬ್ ಸದಸ್ಯರಿಗೆ ಜೋಗ ಅಭಿವೃದ್ಧಿ ಪ್ರಾಧಿಕಾರದ ಸುಪರ್ದಿಯಲ್ಲಿರುವ ಮೈಸೂರು ಬಂಗ್ಲೋ ಪ್ರದೇಶಕ್ಕೆ ಮಾತ್ರ ಉಚಿತವಾಗಿ ಪ್ರವೇಶ ಸಿಗಲಿಲ್ಲ. ಪರಿಸರ ಉಳಿಸುವ ಕಾಳಜಿಯ ಸೈಕಲ್ ಸವಾರರು ತಮ್ಮ ಉದ್ದೇಶ ಹೇಳಿದರೂ ರಿಯಾಯ್ತಿ ಜಾರಿಯಾಗಲಿಲ್ಲ. ಸೈಕ್ಲಿಂಗ್ ಕ್ಲಬ್ ಸದಸ್ಯರು ಕೂಡ ವಾದಗಳನ್ನು ಮಾಡದೆ ತಲಾ 10 ರೂ. ಹಾಗೂ ಕಾರಿನ ಬಾಬತ್ತಾಗಿ 50 ರೂ. ತೆತ್ತು ಜೋಗ ಜಲಪಾತದ ಆವರಣಕ್ಕೆ ಪ್ರವೇಶ ಪಡೆದರು. ಸಾಮಾಜಿಕ ಕಳಕಳಿ ಅರ್ಥವಾಗದೆ ಇರುವುದರಿಂದ ನಮ್ಮ ಸರ್ಕಾರಿ ವ್ಯವಸ್ಥೆಗಳ ವಿಫಲವಾಗುತ್ತವೆ. ನಾಳೆ ಇದೇ ಜೋಗ ಅಭಿವೃದ್ಧಿ ಪ್ರಾಧಿಕಾರ ಜಾಗೃತಿ ಕಾರ್ಯಕ್ರಮದ ಪ್ರಹಸನ ಮಾಡಿ ಒಂದೆರಡು ಲಕ್ಷ ರೂ. ಖರ್ಚು ಮಾಡಿದರೂ ಅಚ್ಚರಿಯಿಲ್ಲ ಎಂದು ಜೋಗದ ಫೋಟೋಗ್ರಾಫರ್ ಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.