ತ್ಯಾಜ್ಯ ವಸ್ತುಗಳಿಂದ ಸೃಷ್ಟಿಯಾದ ಗಣಪ!
Team Udayavani, Sep 4, 2019, 12:40 PM IST
ಬಾಳೆಹೊನ್ನೂರು: ಶ್ರೀ ರಂಭಾಪುರಿ ಪೀಠದಲ್ಲಿ ಗೌರಿ-ಗಣೇಶ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.
ಸಾಗರ: ಪ್ರತಿ ವರ್ಷವೂ ಸ್ಥಳೀಯ ಪರಿಸರದಲ್ಲಿ ಸಿಕ್ಕ ವಸ್ತುಗಳನ್ನೇ ಆಧರಿಸಿ ಗಣಪತಿ ರಚಿಸುವ ವಿಶಿಷ್ಟ ಸಂಪ್ರದಾಯವನ್ನು ತಾಲೂಕಿನ ಕಾರ್ಗಲ್ ಸಮೀಪದ ಕಾಳಮಂಜಿಯ ಕಲಾವಿದ ಶ್ರೀಕಾಂತ್ ಕಳೆದ 41 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು, ಈ ವರ್ಷದ ತೆಂಗಿನ ಕಾಯಿಯ ಸಿಗಡಿನಿಂದ ಮಾಡಿ ಪೂಜಿಸಿದ್ದು ಜನರನ್ನು ಆಕರ್ಷಿಸುತ್ತಿದೆ.
ಅಜ್ಜ ಶೇಡಿಮನೆ ನಾರಾಯಣಪ್ಪ ಅವರು ಮೃತ್ತಿಕಾ ಗಣಪತಿಯನ್ನು ಹಬ್ಬದ ದಿನ ಮಾಡಿ ಪೂಜಿಸುತ್ತಿದ್ದರು. ಸಂಗೀತದ ಆಸಕ್ತಿಯ ಶ್ರೀಕಾಂತ ಕಾಳಮಂಜಿ ತಮ್ಮ ಹತ್ತನೆಯ ವಯಸ್ಸಿನಲ್ಲಿಯೇ ರಂಗೋಲಿಗಳನ್ನು ಗಮನಿಸುತ್ತ್ತಿದ್ದಾಗ ತಾನೂ ಗಣಪತಿ ಮಾಡಬೇಕು ಎಂಬ ಬಯಕೆ ಹೊತ್ತರು. ಅವತ್ತು ಅಡಕೆ ಹಾಳೆ ಬಳಸಿ ಗಣಪತಿ ರಚಿಸಿದರು. ಇದು ಊರ ಜನರಿಂದ ಶಹಭಾಷ್‌ಗಿರಿ ಪಡೆದಿದ್ದು ಉತ್ಸಾಹ ಉಳಿದುಕೊಳ್ಳಲು ಕಾರಣವಾಯಿತು.
ಅಂದಿನಿಂದ ಆರಂಭಿಸಿ ಪ್ರತಿ ವರ್ಷ ಒಂದೊಂದು ಹೊಸ ಕಲ್ಪನೆಯ ಗಣಪತಿ ಸಿದ್ಧವಾಗತೊಡಗಿತು. ಕರಟ, ಮರದ ಹೊಟ್ಟು, ಪ್ಲಾಸ್ಟರ್ ಆಫ್ ಪ್ಯಾರಿಸ್ ಮುಂತಾದವುಗಳನ್ನು ಬಳಸಿ ರೂಪಿಸುತ್ತಿದ್ದ ಗಣಪತಿಯ ಹಿನ್ನೆಲೆಯಲ್ಲಿ ಪ್ರತಿ ವರ್ಷ, ಪೋಷಕರು, ಹಿತೈಷಿಗಳು ‘ಈ ವರ್ಷ ಯಾವುದರ ಗಣಪ’ ಎಂದು ಕೇಳುವ ಹಾಗೆ ಶ್ರೀಕಾಂತ್ ಅವರ ಕಲಾಪ್ರತಿಭೆ ಗಮನ ಸೆಳೆಯುತ್ತಿದೆ.
ಇಂತದೊಂದು ಸಂಪ್ರದಾಯ ಆರಂಭವಾಗಿ 41 ವರ್ಷಗಳೇ ಸಂದಿವೆ. ಆದರೆ ಉತ್ಸಾಹ ಬತ್ತಿಲ್ಲ. ತೆಂಗಿನ ಕಾಯಿಯನ್ನು ಬಿಡಿಸಿದಾಗ ಸಿಗುವ ಕತ್ತದ ಸಿಗಡನ್ನು ಬಳಸಿಕೊಂಡು ಈ ವರ್ಷ ರಚಿಸಲಾದ ಗಣಪತಿ ಕಲ್ಪನೆ ಕೂಡ ಗಮನ ಸೆಳೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.