ರಾಜಧಾನಿಗೆ ನೀರು; ಹೆಚ್ಚುತ್ತಿರುವ ಪ್ರತಿರೋಧ

ಶರಾವತಿ ನೀರು ಬೆಂಗಳೂರಿಗೆ; ಇಂದು ಹೋರಾಟದ ನಿರ್ಧಾರ•ಪರಿಸರಾಸಕ್ತರ ವ್ಯಾಪಕ ವಿರೋಧ

Team Udayavani, Jun 22, 2019, 11:34 AM IST

22–June-16

ಸಾಗರ: ತುಂಬಿ ಹರಿಯುವ ಲಿಂಗನಮಕ್ಕಿ ಜಲಾಶಯ

ಮಾ.ವೆಂ.ಸ. ಪ್ರಸಾದ್‌
ಸಾಗರ:
ತಾಲೂಕಿನ ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ಸಂಗ್ರಹವಾಗಿರುವ ಶರಾವತಿ ನದಿಯ ನೀರನ್ನು ರಾಜಧಾನಿ ಬೆಂಗಳೂರಿಗೆ ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳಲು ಅನುಕೂಲವಾಗುವಂತೆ ಯೋಜನೆ ರೂಪಿಸಲು ರಾಜ್ಯ ಸರ್ಕಾರದ ಚಿಂತನೆಯನ್ನು ವಿರೋಧಿಸಿ ಸಾಗರದಲ್ಲಿ ಚಳುವಳಿಯ ಕಾವು ಹಬ್ಬುತ್ತಿದೆ. ಈ ಕುರಿತು ವಾದ- ಪ್ರತಿವಾದಗಳು ಶುಕ್ರವಾರವೂ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹರಿದಾಡುತ್ತಿದೆ. ಈ ನಡುವೆ ಸಾಗರದಲ್ಲಿ ಶನಿವಾರ ಸಂಜೆ ಸರ್ಕಾರಿ ನೌಕರರ ಭವನದಲ್ಲಿ ಸಂಜೆ 5ಕ್ಕೆ ನಡೆಯುವ ಪರಿಸರಾಸಕ್ತರ ಸಮಾಲೋಚನಾ ಸಭೆ ಈ ಹೋರಾಟದ ದಾರಿಗಳನ್ನು ನಿರ್ಧರಿಸಬಹುದು ಎಂದು ಅಂದಾಜಿಸಲಾಗಿದೆ.

ಲಿಂಗನಮಕ್ಕಿಯಲ್ಲಿ ಈಗ ಸಂಗ್ರಹವಾಗುವ ನೀರನ್ನು ಬೆಂಗಳೂರಿಗೆ ಕುಡಿಯುವ ಉದ್ದೇಶಕ್ಕೆ ಕೊಡುವುದರಲ್ಲಿ ನ್ಯಾಯವಿದೆ. ಸದ್ಯ ತಾಲೂಕಿನಲ್ಲಿ ಕೃಷಿಗಾಗಲಿ, ಕುಡಿಯುವ ಉದ್ದೇಶಕ್ಕಾಗಲಿ ಈ ನೀರನ್ನು ಬಳಸಿಕೊಳ್ಳದೇ ಇರುವುದರಿಂದ ತಾಲೂಕಿನವರಿಗೆ ನಷ್ಟವೇನೂ ಆಗುವುದಿಲ್ಲ. ಇಂದು ಬೆಂಗಳೂರಿನಲ್ಲಿ ಈ ಭಾಗದ ಜನರೇ ಬಹುಸಂಖ್ಯಾತರು ಉದ್ಯೋಗ ನಿಮಿತ್ತ ಹೋಗಿರುವುದರಿಂದ ಅವರಿಗೆ ಅನುಕೂಲವಾಗುತ್ತದೆ ಎಂಬ ವಾದವನ್ನು ಕೂಡ ಈ ಭಾಗದ ಹಲವರು ವ್ಯಕ್ತಪಡಿಸುತ್ತಾರೆ.

ಅವೈಜ್ಞಾನಿಕ ಯೋಜನೆ: ಕೆಪಿಸಿಯಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿರುವ ಹುಕ್ಕಲು ಗಜಾನನ ಶರ್ಮ ಅಂಕಿ-ಅಂಶಗಳ ಸಮೇತ, ಈ ಯೋಜನೆ ಸಂಪೂರ್ಣವಾಗಿ ಅವೈಜ್ಞಾನಿಕ ಎಂದು ಪ್ರತಿಪಾದಿಸುತ್ತಾರೆ. ಸಮುದ್ರ ಮಟ್ಟದಿಂದ 1819 ಅಡಿ ಎತ್ತರದ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರನ್ನು ಒಯ್ಯುವುದಾದರೆ ಕನಿಷ್ಟ 1650 ಅಡಿಗಳ ಮಟ್ಟದಿಂದ ಪೈಪ್‌ಲೈನ್‌ ಅಳವಡಿಸಬೇಕು. ಸಮುದ್ರ ಮಟ್ಟದಿಂದ ಬೆಂಗಳೂರಿನ ಸರಾಸರಿ ಎತ್ತರ 3000 ಅಡಿಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ನೀರೊಯ್ಯಲು ಶರಾವತಿಯಿಂದ ಹೆಚ್ಚು ಕಡಿಮೆ ಅದನ್ನು 1500 ಅಡಿ ಎತ್ತಬೇಕು. ಇದರ ಜೊತೆ 400 ಕಿಮೀ ದೂರಕ್ಕೆ ತಳ್ಳಬೇಕು. ಈಗ ಶರಾವತಿಯ ಟರ್ಬೈನುಗಳ ಹೆಡ್‌ ಸುಮಾರು 1525 ಅಡಿ. ಕ್ಷಮತೆಯ ಲೆಕ್ಕದಲ್ಲಿ ಈ ಹೆಡ್‌ ಬಳಸಿಕೊಂಡು ಬೆಂಗಳೂರಿನ ಎತ್ತರಕ್ಕೆ ನೀರೆತ್ತುವುದಕ್ಕೆ ಶರಾವತಿಯಲ್ಲಿ ಉತ್ಪಾದನೆಯಾಗುವ ಒಂದೂವರೆ ಪಟ್ಟು ವಿದ್ಯುತ್‌ ಬೇಕು. ಇನ್ನು ಅದನ್ನು 400 ಕಿಮೀ ತಳ್ಳಲು ಬೇಕಾಗುವ ಶಕ್ತಿಯನ್ನು ಅಂದಾಜಿಸಿದರೆ ಯೋಜನೆಯ ದೋಷ ಕಾಣಿಸುತ್ತದೆ ಎನ್ನುತ್ತಾರೆ. ಲಿಂಗನಮಕ್ಕಿ ಆಣೆಕಟ್ಟು ವಿದ್ಯುತ್‌ ಉತ್ಪಾದನೆಗಾಗಿಯೇ ನಿರ್ಮಾಣವಾಗಿರುವಂತದ್ದು ಎಂಬ ಕಾರಣಕ್ಕೆ ಈವರೆಗೆ ಈ ನೀರನ್ನು ತಾಲೂಕಿನ ಕುಡಿಯುವ ಹಾಗೂ ಕೃಷಿ ಉದ್ದೇಶಕ್ಕೆ ಬಳಸಿಕೊಳ್ಳಲಾಗಿಲ್ಲ. ಸತತ ಬರದಲ್ಲಿರುವುದರಿಂದ ಸಾಗರದ ಗ್ರಾಮೀಣ ಭಾಗಕ್ಕೆ ಈ ನೀರು ಕೊಡಬೇಕು ಎಂಬ ಮಾತಿದ್ದರೂ, ಪ್ರಸ್ತುತ ವಿದ್ಯುತ್‌ ಉತ್ಪಾದನೆ ನಡೆದ ನಂತರದ ನೀರನ್ನು ಸಾಗರ ಪಟ್ಟಣಕ್ಕೆ ಕೊಡಲಾಗುತ್ತದೆ. ಅದಕ್ಕೆ ಪ್ರತಿ ತಿಂಗಳು 9 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ. ಈ ರೀತಿಯ ಅಸಂಬದ್ಧ ಯೋಜನೆಗಳಿಗಿಂತ ಬೆಂಗಳೂರಿನಲ್ಲಿ ಬೀಳುವ ಮಳೆ ನೀರನ್ನು ಸಂಗ್ರಹಿಸುವ ಯೋಜನೆ ಜಾರಿಯಾದರೆ ಅರ್ಧ ಸಮಸ್ಯೆ ಬಗೆಹರಿಯುತ್ತದೆ ಎಂದು ಪರಿಸರ ಕಾರ್ಯಕರ್ತ ಅಖೀಲೇಶ್‌ ಚಿಪಿÛ ಪ್ರತಿಪಾದಿಸುತ್ತಾರೆ.

ಹೊನ್ನಾವರ ಭಾಗದಲ್ಲಿ ಹೆಚ್ಚು ಅನಾಹುತ?: ಬೆಂಗಳೂರಿಗೆ ಲಿಂಗನಮಕ್ಕಿಯಿಂದ ನೀರು ಒಯ್ಯುವ ಯೋಜನೆಯಿಂದ ಗೇರುಸೊಪ್ಪ ಟೇಲರೇಸ್‌ನಿಂದ ಹೊನ್ನಾವರದ ಭಾಗಕ್ಕೆ ಹರಿಯುವ ನೀರಿನ ಹರಿವು ಕಡಿಮೆಯಾಗುತ್ತದೆ. ಈ ಯೋಜನೆಯ ನಂತರ ನದಿಯ ಕೆಳ ಭಾಗದ ಜನ ಜೀವನ ಅಸ್ತವ್ಯಸ್ತವಾಗಿದೆ. ಈ ನೀರಿನಿಂದ ನಡೆಯುವ ಕೃಷಿ, ಮೀನುಗಾರಿಕೆಗೆ ಹೊಡೆತ ಬೀಳುತ್ತದೆ. ಈಗಾಗಲೇ ಬಳಕೂರು ಭಾಗದ ನಾಲೆಯಿಂದ ಮುರುಡೇಶ್ವರಕ್ಕೆ ನೀರನ್ನು ಒಯ್ಯುವ ಕಾಮಗಾರಿಯಿಂದ ಇಲ್ಲಿನ ಅಂತರ್ಜಲ ಮಟ್ಟ ಕುಸಿದಿರುವುದನ್ನು ಕೆಲವರು ಉದಾಹರಿಸುತ್ತಾರೆ.

ಇಲ್ಲಿನ ಬದುಕಿನ ಅವಿಭಾಜ್ಯ ಅಂಗವಾದ ಶರಾವತಿಗೆ 11 ಕಡೆಗಳಲ್ಲಿ ಲಿಫ್ಟ್‌ ಇರ್ರಿಗೇಶನ್‌ ಮಾಡಲಾಗುತ್ತಿದೆ. ಹೊನ್ನಾವರ ತಾಲೂಕಿನ ಅನಿಲಗೋಡು ಗುಡ್ಡದ ಮೇಲಿರುವ ಗ್ರಾಮದಲ್ಲಿ ಕೃಷಿ ಸಾಧ್ಯವಾಗಿದೆ. ಈ ಹಿಂದೆ ಹೊನ್ನಾವರ ತಾಲೂಕಿನ ನಾಕೆ ಎಂಬಲ್ಲಿಂದ ಶರಾವತಿ ನೀರನ್ನು ಮಂಕಿ, ಇಡಗುಂಜಿ, ಮುರ್ಡೇಶ್ವರಕ್ಕೆ ಒದಗಿಸುವ ಯೋಜನೆಯನ್ನು ಡಾ| ಕುಸುಮಾ ಸೊರಬ ವಿರೋಧಿಸಿದ್ದರು. ಆದರೂ ಯೋಜನೆ ಅನುಷ್ಠಾನವಾಗಿದೆ. ಪರಿಣಾಮ ಬಳ್ಕೂರು ಎಂಬ ಗ್ರಾಮದಲ್ಲಿ ನೀರಿನ ಸಮಸ್ಯೆಯಾಗಿದೆ. ಜೊತೆಗೆ ನದಿಯ ಈ ಭಾಗದಲ್ಲಿಯೇ ಉಪ್ಪು ನೀರು ಸಿಗುತ್ತಿದೆ. ಈಗ ಲಿಂಗನಮಕ್ಕಿ ನೀರನ್ನು ಬೆಂಗಳೂರಿಗೆ ಒಯ್ಯುವ ಯೋಜನೆ ದುರದೃಷ್ಟಕರ. ಭವಿಷ್ಯದಲ್ಲಿ ಲಿಂಗನಮಕ್ಕಿ ಭಾಗದ ನದಿಯಲ್ಲಿಯೂ ಉಪ್ಪುನೀರು ಸಿಗತೊಡಗಿದರೆ ಆಶ್ಚರ್ಯವಿಲ್ಲ ಎಂದು ಹೊನ್ನಾವರದ ಸಂಗಮ ಸಮಾಜಸೇವಾ ಟ್ರಸ್ಟ್‌ನ ರವೀಂದ್ರ ಶೆಟ್ಟಿ ಎಚ್ಚರಿಸುತ್ತಾರೆ.

ವ್ಯರ್ಥ ನೀರು ಅಲ್ಲ!: ಸಮುದ್ರ ಸೇರುವ ನದಿಯ ನೀರನ್ನು ಮತ್ತೂಂದು ಕಾರ್ಯಕ್ಕೆ ಬಳಸುತ್ತೇವೆ ಎಂಬ ಯೋಜನೆಯೇ ಮೂರ್ಖತನದ್ದಾಗಿದೆ. ನದಿ ಪರಿಸರ ವ್ಯವಸ್ಥೆ ಅತ್ಯಂತ ಸೂಕ್ಷ್ಮವಾದುದು. ಈಗಾಗಲೇ ಜಲಾಶಯ, ಅಣೆಕಟ್ಟುಗಳ ಮೂಲಕ ಆ ಸೂಕ್ಷ್ಮತೆಗೆ ಧಕ್ಕೆ ತರಲಾಗಿದೆ. ಧಾರಣಾ ಸಾಮರ್ಥ್ಯವನ್ನು ಅಲ್ಲೋಲಕಲ್ಲೋಲ ಮಾಡಬಾರದು. ಅಳ್ವೆ ಪರಿಸರ ವ್ಯವಸ್ಥೆ ಅನನ್ಯವಾಗಿದೆ. ಅಳ್ವೆಯಲ್ಲಿ ವಿಶೇಷ ಉತ್ಪಾದನಾ ಸಾಮರ್ಥ್ಯ ಇರುತ್ತದೆ. ಸಮುದ್ರ ಜೀವಿಗೆ ಅಗತ್ಯ ಪೋಷಕಾಂಶಗಳನ್ನು ನದಿ ನೀರು ಕೊಡುತ್ತದೆ. ಆ ಭಾಗದಲ್ಲಿ ಸಮತೋಲಿತ ಲವಣಾಂಶವಿರುತ್ತದೆ. ಕಾಂಡ್ಲ ವನದಂಥ ಸಸ್ಯರಾಶಿಗಳ ಬೇರು ವ್ಯವಸ್ಥೆ ವಿಶೇಷವಾಗಿರುತ್ತದೆ. ಸಮುದ್ರ ಜೀವಿಗಳ ಸಂತಾನೋತ್ಪತ್ತಿಯ ಅಡಗುದಾಣಗಳಾಗಿರುತ್ತವೆ. ಒಟ್ಟಾರೆಯಲ್ಲಿ ನದಿಯ ನೀರು ಸಮುದ್ರಕ್ಕೆ ಸೇರುವುದು ವ್ಯರ್ಥ ಎಂಬುದು ಬಾಲಿಶ ಆಲೋಚನೆ. ಆಹಾರ ಸರಪಣಿಯ ಮೊದಲ ಕೊಂಡಿಗಳಿಗೆ ನದಿನೀರು ಸಮುದ್ರ ಸೇರದಿದ್ದರೆ ದೊಡ್ಡ ಹೊಡೆತ ಬೀಳುತ್ತದೆ ಎಂದು ಪರಿಸರ ತಜ್ಞ ಡಾ| ಗಿರೀಶ್‌ ಜನ್ನೆ ಅಭಿಪ್ರಾಯ ಪಡುತ್ತಾರೆ. ನಿಧಾನವಾಗಿ ಸಾಗರ ತಾಲೂಕಿನಲ್ಲಿ ಚಳುವಳಿಯ ಕಾವು ಶುರುವಾಗುತ್ತಿದೆ. ಇದಕ್ಕೆ ಉತ್ತರ ಕನ್ನಡದವರು ಸಾಥ್‌ ಕೂಡ ಸಿಗಬೇಕು. ಪರಿಸರದ ಅಂಶಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ಕಾರಣದಿಂದಲೇ ಜೂ. 21ನೇ ದಿನ ಬಂದಿದ್ದರೂ ಮುಂಗಾರು ಮಾರುತಗಳು ಪ್ರಬಲವಾಗುತ್ತಿಲ್ಲ ಎಂಬ ಪ್ರತಿಪಾದನೆಗಳ ಜೊತೆಗೆ ಹಿರಿಯ ಸಾಹಿತಿ ಡಾ| ನಾ.ಡಿಸೋಜಾ ಸೇರಿದಂತೆ ತಾಲೂಕಿನ ಜನ ಹೋರಾಟದ ರೂಪುರೇಷೆಯನ್ನು ಶನಿವಾರ ರೂಪಿಸಲಿದ್ದಾರೆ.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.