ಅಡಕೆ ಕೊಳೆ ರೋಗಕ್ಕೆ ಔಷಧ ಕಂಡುಹಿಡಿಯಲು ಒತ್ತಾಯ
ವಿಜ್ಞಾನಿಗಳನ್ನು ನಿಯೋಜಿಸಲು ಯುವಕ ಸಂಘ ಆಗ್ರಹ
Team Udayavani, Aug 22, 2019, 12:19 PM IST
ಸಾಗರ: ಕೊಳೆರೋಗಕ್ಕೆ ಶಾಶ್ವತ ಮದ್ದು ಸಂಶೋಧಿ ಸಲು ವಿಜ್ಞಾನಿಗಳಿಗೆ ನಿರ್ದೇಶಿಸಬೇಕು ಎಂದು ಚಿಪ್ಪಳಿ ಲಿಂಗದಹಳ್ಳಿಯ ನವೋದಯ ಯುವಕ ಸಂಘದ ಸದಸ್ಯರು ಎಸಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಾಗರ: ಹವಾಮಾನ ಬದಲಾವಣೆಯಿಂದ ಸುರಿದ ಅತಿವೃಷ್ಟಿಯಿಂದಾಗಿ ಮಲೆನಾಡಿನ ಅಡಕೆ ಬೆಳೆಗಾರ ಬದುಕು ಅಕ್ಷರಶಃ ನಲುಗಿದ್ದು, ಸತತವಾಗಿ ಬೋರ್ಡೋ ಸಿಂಪಡನೆ ಮಾಡಿದ ತೋಟಗಳಲ್ಲೂ ಕೊಳೆರೋಗ ತನ್ನ ಅಟ್ಟಹಾಸ ಮೆರೆದಿದೆ. ಈ ಹಿನ್ನೆಲೆಯಲ್ಲಿ ಕೊಳೆ ರೋಗದ ಸಮಸ್ಯೆಗೆ ಸಮರ್ಥ ಔಷಧವನ್ನು ಕಂಡು ಹಿಡಿಯಲು ಕ್ಷಿಪ್ರವಾಗಿ ಕೃಷಿ ವಿಜ್ಞಾನಿಗಳಿಗೆ ನಿರ್ದೇಶನ ನೀಡಬೇಕು ಎಂದು ತಾಲೂಕಿನ ಚಿಪ್ಪಳಿ ಲಿಂಗದಹಳ್ಳಿಯ ನವೋದಯ ಯುವಕ ಸಂಘ ಸಾಗರ ಉಪ ವಿಭಾಗದ ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ನೆರೆ ಇನ್ನಿಲ್ಲದ ಹಾನಿ ಮಾಡಿದೆ. ಅದರಲ್ಲೂ ಅಡಕೆ ತೋಟಕ್ಕೆ ತೀವ್ರ ಹಾನಿಯಾಗಿದ್ದು, ತಾಲೂಕಿನ ಹೊಸಳ್ಳಿ, ಎಡಜಿಗಳೇಮನೆ, ಸುಳುಮನೆ, ಶೆಡ್ತಿಕೆರೆ, ವರದಾಮೂಲ, ಲಿಂಗದಹಳ್ಳಿ, ಮಾವಿನಸರ, ತೆಂಕೋಡು, ಆವಿನಹಳ್ಳಿ ಭಾಗದ ತೋಟಗಳ ಅಡಕೆ ಗೊನೆಗಳಲ್ಲಿ ಒಂದೇ ಒಂದು ಅಡಕೆ ಉಳಿಯದ ಸ್ಥಿತಿ ನಿರ್ಮಾಣವಾಗಿದೆ ಎಂದು ವಿವರಿಸಲಾಗಿದೆ.
ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳಿಗೆ ಸರ್ಕಾರ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಸುರಿಯುತ್ತದೆ. ಶಿವಮೊಗ್ಗದಲ್ಲಿ ಸರ್ಕಾರಿ ಸ್ವಾಮ್ಯದ ನವಿಲೆ ಕೃಷಿ ವಿಶ್ವವಿದ್ಯಾಲಯವೇ ಇದೆ. 1940ರ ದಶಕದಲ್ಲಿ ಡಾ|ಕೋಲ್ಮನ್ ಎಂಬ ಬ್ರಿಟಿಷ್ ವಿಜ್ಞಾನಿ ಕಂಡುಹಿಡಿದ ಬೋರ್ಡೋ ಮಿಶ್ರಣವನ್ನು ಈಗಲೂ ವಿಜ್ಞಾನಿಗಳು ಶಿಫಾರಸು ಮಾಡುವುದು ಬಿಟ್ಟರೆ ಕೊಳೆರೋಗ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಮಾದರಿ ಕಂಡುಹಿಡಿಯುವ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಲಾಗಿದೆ.
ಜಿಲ್ಲಾಡಳಿತ ಈ ಹಂತದಲ್ಲಿ ಮಧ್ಯಪ್ರವೇಶಿಸಿ ಆವರಿಸಿರುವ ಕೊಳೆ ರೋಗ ನಿಯಂತ್ರಣಕ್ಕೆ ತೋಟಗಾರಿಕಾ ವಿಜ್ಞಾನಿಗಳನ್ನು ನಿಯೋಜಿಸಿ ರೋಗದ ತೀವ್ರತೆ ಕಡಿಮೆ ಮಾಡುವ ಕ್ರಮಗಳನ್ನು ಕಂಡುಕೊಳ್ಳಲು ಸೂಕ್ತ ನಿರ್ದೇಶನ ನೀಡಬೇಕು ಮತ್ತು ಶಾಶ್ವತ ಮದ್ದು ಕಂಡುಕೊಳ್ಳಲು ಅವರಿಗೆ ಆದೇಶಿಸಬೇಕು ಎಂದು ಆಗ್ರಹಿಸಲಾಗಿದೆ.
ಬೆಳೆ ಉಳಿಸಿಕೊಳ್ಳಲು ರೈತ ಸಾಲ-ಸೋಲ ಮಾಡಿ ಬೋರ್ಡೋ ಮಿಶ್ರಣವನ್ನು ಖರೀದಿಸಿ ಸಿಂಪಡಿಸುತ್ತಿರುವ ಕಾಲದಲ್ಲಿ ಆತನ ವರ್ಷದ ಬೆಳೆ ನೆಲ ಕಚ್ಚುತ್ತಿದೆ. ಈ ಸಾಲಬಾಧೆಗಳಿಂದ ರೈತರು ಆತ್ಮಹತ್ಯೆಯಂತಹ ಅತಿರೇಕದ ನಿರ್ಧಾರಕ್ಕೆ ಬಂದಲ್ಲಿ ಅದಕ್ಕೆ ಸೂಕ್ತ ಔಷಧ ಕಂಡುಹಿಡಿಯದ ವಿಜ್ಞಾನಿಗಳೇ ಕಾರಣರಾಗುತ್ತಾರೆ. ಇಂತಹ ಸಂಭಾವ್ಯ ದುರ್ಘಟನೆಗಳನ್ನು ತಪ್ಪಿಸಲು ಸರ್ಕಾರ ವಿಜ್ಞಾನಿಗಳನ್ನು ಸಂಶೋಧನೆಗೆ ಹಚ್ಚಬೇಕು ಹಾಗೂ ರೈತರನ್ನೊಳಗೊಂಡ ನಿಯೋಗ ರಚನೆ ಮಾಡಿ ಬೆಳೆ ಹಾನಿ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಲು ಕ್ರಮ ತೆಗೆದುಕೊಳ್ಳಬೇಕು ಎಂದು ಸಂಘದ ಕಾರ್ಯದರ್ಶಿ ಅರುಣ್ ಟಿ.ಎಸ್., ಕಲ್ಮನೆ ಗ್ರಾಪಂ ಸದಸ್ಯ ಎಲ್.ವಿ. ಅಕ್ಷರ, ಶಿವಮೊಗ್ಗ ಹಾಪ್‌ಕಾಮ್ಸ್ ಉಪಾಧ್ಯಕ್ಷ ಎಲ್.ವಿ. ಸತೀಶ್, ಸಾಮಾಜಿಕ ಕಾರ್ಯಕರ್ತರಾದ ಜಯಪ್ರಕಾಶ್ ಗೋಳಿಕೊಪ್ಪ, ಬಳಕೆದಾರರ ವೇದಿಕೆ ನಿರ್ದೇಶಕ ಜನಾರ್ದನ ರಾವ್ ಹಕ್ರೆ, ವರದೇಶ್ ಲಿಂಗದಹಳ್ಳಿ ಮೊದಲಾದವರು ಎಸಿ ದರ್ಶನ್ ಪಿ.ವಿ. ಅವರಿಗೆ ಮನವಿ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.