ಪಿಎಂ ಕಿಸಾನ್‌ ಯೋಜನೆಗೆ ಗ್ರಹಣ!

ದಾಖಲೆಗಳಿಗಾಗಿ ಕಚೇರಿಗೆ ಅಲೆದಾಡುವ ಸ್ಥಿತಿ •ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ವಿಫಲ

Team Udayavani, Aug 25, 2019, 12:42 PM IST

25-Agust-20

ಸಾಗರ: ರೈತ ನೋಂದಣಿ ಅರ್ಜಿಗಳು ತೋಟಗಾರಿಕಾ ಇಲಾಖೆ ಕಚೇರಿಗೆ ದೊಡ್ಡ ಸಂಖ್ಯೆಯಲ್ಲಿಯೇ ಬರುತ್ತಿವೆ.

•ಮಾ.ವೆಂ.ಸ. ಪ್ರಸಾದ್‌
ಸಾಗರ:
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿಗಳ ಮಾಹಿತಿ ಪದ್ಧತಿ-ಪಿಎಂ ಕಿಸಾನ್‌ ಯೋಜನೆ- ಫ್ರೂಟ್ಸ್‌’ ರೈತರಿಗೆ ಯಾವ ರೀತಿಯಲ್ಲಿಯೂ ನೆರವು ನೀಡದ ಹಿನ್ನೆಲೆಯಲ್ಲಿ ಕೃಷಿಕರು ತಮ್ಮ ತೋಟ- ಗದ್ದೆಗಳಲ್ಲಿ ಕೃಷಿ ಕೆಲಸ ಮಾಡುವುದರ ಬದಲು ದಾಖಲೆಗಳಿಗಾಗಿ ಸರ್ಕಾರದ ವಿವಿಧ ಇಲಾಖೆ, ಅಧಿಕಾರಿಗಳಲ್ಲಿ ಎಡತಾಕುವ ಪರಿಸ್ಥಿತಿ ಮುಂದುವರಿದಿದೆ.

ಒಂದೊಮ್ಮೆ ಫಾರ್ಮರ್‌ ರಿಜಿಸ್ಟ್ರೇಷನ್‌ ಎಂಡ್‌ ಬೆನಿಫಿಶಿಯರಿ ಇನ್‌ಫಾರ್ಮೇಶನ್‌ ಸೆಂಟರ್‌ (ಫ್ರೂಟ್ಸ್‌) ಸರಿಯಾಗಿ ಚಾಲ್ತಿಯಲ್ಲಿದ್ದಿದ್ದರೆ ಇದರಲ್ಲಿ ತಮ್ಮ ದಾಖಲೆಗಳನ್ನು ಸಲ್ಲಿಸಿ ನೋಂದಣಿಯಾದ ರೈತರು ಸಾಲ, ಸಹಾಯಧನ, ಪರಿಹಾರ ಮೊದಲಾದವುಗಳನ್ನು ಪಡೆಯಲು ಕನಿಷ್ಟ ದಾಖಲೆಗಳನ್ನು ಕೊಟ್ಟಿದ್ದರೆ ಸಾಕಿತ್ತು. ಆದರೆ ರಾಜ್ಯದಾದ್ಯಂತ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದರಲ್ಲಿ ಆಗಿರುವ ವೈಫಲ್ಯದಿಂದ ರೈತರ ಗೋಳು ಮುಂದುವರಿದಿದೆ.

ಏನಿದು ಪಿಎಂಕೆಐಡಿ?: ರಾಜ್ಯದ ರೈತರು ತಮ್ಮ ಪಹಣಿ, ಆಧಾರ್‌ ಸಂಖ್ಯೆ, ಬ್ಯಾಂಕ್‌ ಖಾತೆ ವಿವರಗಳ ಸಹಿತ ತೋಟಗಾರಿಕೆ, ಕೃಷಿ, ಪಶುಸಂಗೋಪನೆ, ರೇಷ್ಮೆ ಮೊದಲಾದ ಕೃಷಿ ಸಂಬಂಧಿತ ಇಲಾಖೆಗಳ ಮೂಲಕ ರಾಜ್ಯ ಸರ್ಕಾರದ ಫ್ರೂಟ್ಸ್‌ ಅಪ್ಲಿಕೇಷನ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆಯನ್ನು ಒದಗಿಸಲಾಗಿತ್ತು. ಇದರಲ್ಲಿ ನೋಂದಣಿಯಾದ ರೈತರಿಗೆ ವಿಶಿಷ್ಟ ಪಿಎಂಕೆ ಐಡಿಯನ್ನು ನೀಡಲಾಗಿದೆ. ಈ ಐಡಿಯನ್ನು ದಾಖಲಿಸುತ್ತಿದ್ದಂತೆ ರೈತನ ಜಮೀನು ವಿವರ, ವಿವಿಧ ಇಲಾಖೆಗಳಲ್ಲಿ ಆತ ಪಡೆದ ಸಹಾಯಧನ, ಪರಿಹಾರ, ಸಾಲ ವಿವರಗಳು ಪ್ರತ್ಯಕ್ಷವಾಗುವ ಸೌಲಭ್ಯವನ್ನು ಅಳವಡಿಸಲಾಗಿತ್ತು.

ಇಲಾಖೆಯ ಅಂಕಿ-ಅಂಶಗಳನ್ನೇ ನಂಬುವುದಾದರೆ, ಕಳೆದ 12 ತಿಂಗಳಿನಲ್ಲಿ 11,15,121 ರೈತರ ನೋಂದಣಿಯಾಗಿದ್ದರೆ, ಈವರೆಗೆ 57,14,094 ಜನ ಕೃಷಿಕರನ್ನು ದಾಖಲಿಸಿ ಪಿಎಂಕೆ ಐಡಿ ನೀಡಲಾಗಿದೆ. ಆದರೆ ಈವರೆಗೆ ಸರ್ಕಾರ ರೈತರ ಪರಿಹಾರ, ಸಬ್ಸಿಡಿ ಮೊದಲಾದ ವಿಚಾರಗಳಲ್ಲಿ ಪಿಎಂಕೆಐಡಿಯನ್ನೇ ದಾಖಲೆಯಾಗಿ ಪರಿಗಣಿಸಲು ಆದೇಶ ಹೊರಡಿಸಿಲ್ಲ.

ಮತ್ತದೇ ಸರದಿ ಸಾಲಲ್ಲಿ ರೈತ!: ಕೃಷಿ ಕೆಲಸ ಮಾಡುವ ಹೊತ್ತಲ್ಲಿ ಕೊನೆಯ ದಿನಾಂಕದ ಒತ್ತಡಕ್ಕೆ ಸಿಲುಕುವ ರೈತ ಪಹಣಿ, ಮ್ಯುಟೇಷನ್‌, ಬೆಳೆ ದೃಢೀಕರಣ ಮೊದಲಾದ ದಾಖಲೆ ಪಡೆಯಲು ಮತ್ತೆ ಕ್ಯೂನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಉದಾಹರಣೆಗೆ ತೋಟಗಾರಿಕಾ ಇಲಾಖೆ ಪ್ರತಿ ವರ್ಷ ರಾಷ್ಟ್ರೀಯ ತೋಟಗಾರಿಕಾ ಮಿಷನ್‌ ಅಡಿಯಲ್ಲಿ ಅಡಕೆಯ ಕೊಳೆ ರೋಗದ ಬೋರ್ಡೋ ಔಷಧ ಖರೀದಿಗೆ ಸಹಾಯ ಧನವಿದೆ. ಇದಕ್ಕೆ ಅರ್ಜಿ ಸಲ್ಲಿಸುವ ರೈತ ತನ್ನ ಆಧಾರ್‌, ಬ್ಯಾಂಕ್‌ ಪಾಸ್‌ಬುಕ್‌ ನಕಲು, ವರ್ಷದ ಪಹಣಿ, ಮತದಾರರ ಗುರುತಿನ ಚೀಟಿ ಹಾಗೂ ಸಸ್ಯ ಸಂರಕ್ಷಣಾ ಔಷಧ ಖರೀದಿಸಿದ ಜಿಎಸ್‌ಟಿ ಬಿಲ್ ದಾಖಲೆ ಇರಿಸಬೇಕು. ಪಹಣಿಯಲ್ಲಿ ಬೆಳೆ ನಮೂದು ಇಲ್ಲದಿದ್ದರೆ ಮತ್ತೆ ಗ್ರಾಮ ಲೆಕ್ಕಿಗರಿಂದ ಬೆಲೆ ದೃಢೀಕರಣ ಪತ್ರವನ್ನು ಲಗತ್ತಿಸಬೇಕು. ರೈತ ಕೇವಲ ಪಹಣಿ ಪಡೆಯಲೇ ಹನುಮಂತನ ಬಾಲದಂತಹ ಕ್ಯೂನಲ್ಲಿ ನಿಂತು ದಿನಗಟ್ಟಲೆ ಕಳೆಯುವ ಪರಿಸ್ಥಿತಿಯಿದೆ. ಒಂದೊಮ್ಮೆ ಪಿಎಂಕೆ ಐಡಿ ಕಾರ್ಯ ನಿರ್ವಹಿಸಿದ್ದರೆ ಕೇವಲ ಸಸ್ಯ ಸಂರಕ್ಷಣಾ ಔಷಧ ಖರೀದಿಯ ಅಧಿಕೃತ ದಾಖಲೆ ಇಟ್ಟು ಅರ್ಜಿ ಸಲ್ಲಿಸಿದ್ದರೆ ಸಾಕಿತ್ತು.

ಈ ಕುರಿತು ಪ್ರತಿಕ್ರಿಯಿಸುವ ಅಂತಾರಾಜ್ಯ ರೈತಸಂಘದ ಸಂಚಾಲಕ ಕೆ.ಟಿ. ಗಂಗಾಧರ್‌, ಆಡಳಿತಾತ್ಮಕ ಸುಧಾರಣೆಯ ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿ ಕಾರ್‍ಯಾಂಗ ಸೋಲುತ್ತಿದೆ. ಸೇವಾ ಮನೋಭಾವದ ಬದಲು ಸುಲಿಗೆ ಮನೋಭಾವವೇ ಮುಂದುವರಿದಿದೆ. ಸರ್ಕಾರ ತರುವ ಅಂಥ ವ್ಯವಸ್ಥೆಗಳನ್ನು ನೌಕರರು, ಅಧಿಕಾರಿಗಳು ಉದಾಸೀನ ಮಾಡುತ್ತಾರೆ. ಅವಿದ್ಯಾವಂತ ಕೃಷಿವರ್ಗಕ್ಕೆ ಇಂಥ ಯೋಜನೆಗಳ ಮಾಹಿತಿಯೂ ಇರುವುದಿಲ್ಲ. ವ್ಯವಸ್ಥೆಯ ಇಂಥ ನ್ಯೂನತೆಗಳ ವಿರುದ್ಧ ನಾವು ಹೋರಾಡಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಆಗಬೇಕಾದುದು ಇಷ್ಟೇ!
ಈಗಾಗಲೇ ಫ್ರೂಟ್ಸ್‌ನಲ್ಲಿ ರಾಜ್ಯದ ಹಲವು ರೈತರ ವಿವರ ನೋಂದಣಿಯಾಗಿದೆ. ರೈತರಿಗೆ ಪಿಎಂಕೆ ಐಡಿಯನ್ನೂ ನೀಡಲಾಗಿದೆ. ಸಾಫ್ಟ್‌ವೇರ್‌ನಲ್ಲಿರುವ ದೋಷಗಳನ್ನು ಸರಿಪಡಿಸುವ ಕೆಲಸವನ್ನು ಮಾಡಲಿ. ಈ ನಡುವೆ ನೋಂದಣಿಯಾಗಿರುವ ರೈತರು ತಮ್ಮ ಅರ್ಜಿ ಜೊತೆಗೆ ಪಿಎಂಕೆ ಐಡಿ ನಮೂದಿಸಿದರೆ ದಾಖಲೆಗಳು ಸಾಕು ಎಂದು ಸರ್ಕಾರ ಆದೇಶ ಹೊರಡಿಸಿದರೆ ಕೊನೆ ಪಕ್ಷ ನೋಂದಾಯಿತ ರೈತರಿಗೆ ಅನುಕೂಲವಾಗುತ್ತದೆ. ಇದರಿಂದ ಉಳಿದ ರೈತರೂ ಉತ್ತೇಜಿತರಾಗಿ ನೋಂದಣಿಗೆ ಕ್ಯೂ ನಿಲ್ಲುವಂತಾಗುತ್ತದೆ ಎಂಬ ಅಭಿಪ್ರಾಯವನ್ನು ಹೆಸರು ಪ್ರಕಟಿಸಲಿಚ್ಛಿಸದ ತೋಟಗಾರಿಕಾ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸುತ್ತಾರೆ.

ಇಲಾಖೆಯ ಅಧಿಕಾರಿಗಳು ಈ ಯೋಜನೆ ಬಗ್ಗೆ ಮಾಹಿತಿ ನೀಡಿದ್ದರು. ನೋಂದಣಿ ಅರ್ಜಿ, ವಿವರ ನೀಡುವುದಾಗಿ ತಿಳಿಸಿದ್ದರು. ಆದರೆ ಆ ನಂತರ ಏನೂ ಮಾಹಿತಿ ಇಲ್ಲ. ರೈತರ ಮಾಹಿತಿ ಇಲಾಖೆ ಬಳಿ ಇದ್ದರೆ ವಿವಿಧ ಯೋಜನೆಗಳ ಅರ್ಜಿ ಸಲ್ಲಿಕೆಯ ಸಂದರ್ಭದಲ್ಲಿ ಅಗತ್ಯ ದಾಖಲೆಗಳ ಸಂಗ್ರಹ, ಜೆರಾಕ್ಸ್‌ ಮಾಡುವ ಶ್ರಮ ಇರುತ್ತಿರಲಿಲ್ಲ. ರೈತ ನೋಂದಣಿ ಕಾರ್ಯ ಶೀಘ್ರವಾಗಿ ಆಗಬೇಕು.
•ಬಿ.ಆರ್‌. ಗಣಪತಿ ಬಂದಗದ್ದೆ,
ಕೃಷಿಕ

ಟಾಪ್ ನ್ಯೂಸ್

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.