ಆತ್ಮಸಾಕ್ಷಿಗೆ ಹೆದರುವ ಸ್ಥಿತಿ ಬರಲಿ: ದತ್ತ
ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಸಮಾಜಕ್ಕೆ ಮಾರಕವಾಗುವ ಪ್ರಕರಣಗಳ ವರದಿ ಮಾಡುವುದು ಸಲ್ಲ
Team Udayavani, Jul 28, 2019, 11:25 AM IST
ಸಾಗರ: ಪತ್ರಕರ್ತರ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ರಾಜಕಾರಣಿ ವೈ.ಎಸ್.ವಿ. ದತ್ತ ಉದ್ಘಾಟಿಸಿದರು.
ಸಾಗರ: ಹಿಂದೆ ಪತ್ರಕರ್ತರ ಬಗ್ಗೆ ರಾಜಕಾರಣಿಗಳಿಗೆ ಗೌರವಮಿಶ್ರಿತ ಭಯ ಇತ್ತು. ಅದೇ ರೀತಿ ಪತ್ರಕರ್ತರು ಸಹ ರಾಜಕೀಯ ಕ್ಷೇತ್ರವನ್ನು ವಿಶೇಷವಾಗಿ ಪ್ರಭಾವಿಸುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ರಾಜಕೀಯ ಮತ್ತು ಮಾಧ್ಯಮ ರಂಗ ತನ್ನ ಹಿಂದಿನ ಶ್ರೇಷ್ಠತೆಯನ್ನು ಕಳೆದುಕೊಂಡಿರುವ ಕಾಲದಲ್ಲಿ ಆತ್ಮಸಾಕ್ಷಿಗೆ ಹೆದರುವ ಸ್ಥಿತಿ ಇಂದು ಇಲ್ಲ ಎಂದು ವಾಗ್ಮಿ ಹಾಗೂ ಹಿರಿಯ ರಾಜಕಾರಣಿ ವೈ.ಎಸ್.ವಿ. ದತ್ತ ಬೇಸರ ವ್ಯಕ್ತಪಡಿಸಿದರು.
ನಗರದ ಬ್ರಾಹ್ಮಣ ಸಂಘದ ಸಭಾಭವನದಲ್ಲಿ ಶನಿವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ಪ್ರಸ್ತುತ ರಾಜಕೀಯ ಬಿಕ್ಕಟ್ಟು-ಮಾಧ್ಯಮಗಳ ಹೊಣೆಗಾರಿಕೆ’ ವಿಷಯ ಕುರಿತು ಉಪನ್ಯಾಸ ನೀಡಿದರು. ಇದೀಗ ಬಹುತೇಕ ರಾಜಕಾರಣಿಗಳು ಮಾಧ್ಯಮಗಳಿಗೆ ಆಹಾರವಾಗಿ ವಿಲವಿಲ ಒದ್ದಾಡುತ್ತಿದ್ದಾರೆ. ರಾಜಕಾರಣ ಮತ್ತು ಪತ್ರಿಕಾ ರಂಗದ ಶ್ರೇಷ್ಠತೆಯನ್ನು ಇಬ್ಬರೂ ಅರ್ಥ ಮಾಡಿಕೊಂಡಿಲ್ಲ ಎಂದರು.
ಇತ್ತೀಚೆಗೆ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಜನರನ್ನು ಆತ್ಮಾವಲೋಕನಕ್ಕೆ ಹಚ್ಚಿದೆ. ನಾವು ಆಯ್ಕೆ ಮಾಡಿ ಕಳಿಸಿದ ಜನಪ್ರತಿನಿಧಿಗಳು ಇವರೇನಾ ಎಂದು ಪ್ರಶ್ನಿಸಿಕೊಳ್ಳುವಂತೆ ಮಾಡಿದೆ. ಜನರ ಮುಖವಾಣಿಯಾಗಬೇಕಾಗಿದ್ದ ಕೆಲವು ಮಾಧ್ಯಮಗಳು ಬೇರೆಬೇರೆ ಕಾರಣದಿಂದ ಮುಂಬೈಗೆ ಹೋಗಿ ಕುಳಿತವರ ಪರ ಪದೇಪದೇ ವಕಾಲತ್ತು ವಹಿಸುವಂತೆ ಸುದ್ದಿ ಮಾಡಿ ತಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳುತ್ತಿದೆಯೇ ವಿನಃ ಮುಂಬೈಗೆ ಹೋಗಿ ಶಾಸಕರು ಕುಳಿತ ಮೇಲೆ ಸ್ಥಳೀಯವಾಗಿ ಕ್ಷೇತ್ರ ವ್ಯಾಪ್ತಿಯ ಸಮಸ್ಯೆಗಳನ್ನು ಬಿಂಬಿಸುವ, ಮುಂಬೈನಲ್ಲಿ ಕುಳಿತವರ ಆತ್ಮಸಾಕ್ಷಿಯನ್ನು ಚುಚ್ಚುವಂತಹ ರೀತಿಯ ಪರಿಣಾಮಕಾರಿ ವರದಿ ಪ್ರಕಟಿಸಿಲ್ಲ ಎಂದರು.
ಶಾಸಕರ ವಿಷಯಕ್ಕೆ ಬಂದಾಗ ನ್ಯಾಯಾಲಯ, ಅನರ್ಹತೆ, ಷೆಡ್ಯೂಲ್ 10ರ ಬಗ್ಗೆ ಚಿಂತೆ ಮಾಡುವುದಕ್ಕಿಂತ ಆತ್ಮಸಾಕ್ಷಿ ಏನು ಹೇಳುತ್ತಿದೆ ಎನ್ನುವುದನ್ನು ಅರಿತುಕೊಳ್ಳಬೇಕಾಗಿದೆ. ಮಹಾಭಾರತದಲ್ಲಿ ಕರ್ಣನಿಗೆ ಶ್ರೀಕೃಷ್ಣ ಪಾಂಡವರ ಪಕ್ಷವನ್ನು ಸೇರುವಂತೆ ಸಾಕಷ್ಟು ಒತ್ತಾಯ ಮಾಡುತ್ತಾನೆ. ಆದರೆ ಕರ್ಣ ಲೋಕದ ಜನರು ತನ್ನನ್ನು ಹಂಗಿಸುವರು ಎಂದು ಪಕ್ಷಾಂತರ ಮಾಡಲು ಒಪ್ಪುವುದಿಲ್ಲ. ಪ್ರಸ್ತುತ ರಾಜಕೀಯ ಸಂದರ್ಭದಲ್ಲಿ ನಮಗೆ ಕರ್ಣನಂತಹ ದೃಢ ನಿರ್ಧಾರವುಳ್ಳ ಜನಪ್ರತಿನಿಗಳ ಅಗತ್ಯವಿದೆ ಎಂದರು.
ಕರ್ನಾಟಕ ವಿಧಾನಸಭೆಗೆ ತನ್ನದೇ ಆದ ವೈಶಿಷ್ಟ್ಯವಿದೆ. ವಿಧಾನಸಭೆಯಲ್ಲಿ ಅಂಕಿ-ಅಂಶಗಳ ಲೆಕ್ಕಾಚಾರ ನಿಜಕ್ಕೂ ಅಸಹ್ಯ ತರುತ್ತದೆ. ಯಾವುದೇ ಕಾರಣಕ್ಕೂ ಅಂಕಿ-ಸಂಖ್ಯೆಗಳ ಮೇಲೆ ರಾಜಕಾರಣ ನಡೆಯಬಾರದು. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಆಡಳಿತ ಪಕ್ಷದಲ್ಲಿ 160 ಶಾಸಕರು ಇದ್ದರು. ವಿರೋಧ ಪಕ್ಷದಲ್ಲಿ ದೇವೇಗೌಡರ ನೇತೃತ್ವದಲ್ಲಿ ಕೇವಲ 24 ಶಾಸಕರು ಮಾತ್ರ ಇದ್ದರು. ಆದರೂ ದೇವರಾಜ ಅರಸು ಅವರು ವಿಪಕ್ಷಗಳ ಮಾತಿಗೆ ಮನ್ನಣೆ ಕೊಡುವ ಮೂಲಕ ಸದನದಲ್ಲಿ ಅಂಕೆ ಸಂಖ್ಯೆಗಳಿಗಿಂತ ಮೌಲ್ಯವೇ ಪ್ರಧಾನ ಎನ್ನುವುದನ್ನು ಪ್ರತಿಪಾದಿಸಿದ್ದರು ಎಂದು ನೆನಪಿಸಿದರು.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮ ಯಾವುದೇ ಕಾರಣಕ್ಕೂ ಕವಲು ಹಾದಿಯತ್ತ ಸಾಗಬಾರದು. ಮಾಧ್ಯಮಕ್ಕೆ ಲಕ್ಷ್ಮಣರೇಖೆ ಹಾಕಿಕೊಳ್ಳುವತ್ತ ಮಾಧ್ಯಮ ಕ್ಷೇತ್ರದಲ್ಲಿದ್ದವರು ಚಿಂತಿಸಬೇಕು. ಸಾಮಾಜಿಕ ಜಾಲತಾಣಗಳು ಸಹ ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು ಇದರ ಬಗ್ಗೆ ಜಾಗ್ರತೆಯಿಂದ ಇರಬೇಕು. ನಮ್ಮನ್ನು ನಾವು ಸರಿದಾರಿಯತ್ತ ಸಾಗಲು ಆತ್ಮಾವಲೋಕನ ಸರಿಯಾದ ಮಾರ್ಗವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಎಚ್.ಬಿ. ರಾಘವೇಂದ್ರ, ದೀಪಕ್ ಸಾಗರ್, ಹಿರಿಯ ಪತ್ರಿಕಾ ವಿತರಕ ಶಿವರುದ್ರಪ್ಪ ಆರ್. ಜವಳಿ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಸುಜಲಾ ಜಿ. ಮತ್ತು ಎಂಎಸ್ಸಿಯಲ್ಲಿ ದ್ವಿತೀಯ ರ್‍ಯಾಂಕ್ ಪಡೆದ ರಂಜನಾ ಆರ್. ಹೆಗಡೆ ಅವರನ್ನು ಪುರಸ್ಕರಿಸಲಾಯಿತು.
ತಾಲೂಕು ಸಂಘದ ಅಧ್ಯಕ್ಷ ಜಿ. ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ನಗರಸಭೆ ಸದಸ್ಯ ಟಿ.ಡಿ. ಮೇಘರಾಜ್, ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈದ್ಯ, ತಾಲೂಕು ಕಾರ್ಯದರ್ಶಿ ರವಿನಾಯ್ಡು ಇದ್ದರು. ಅಂಬಿಕಾ ಪ್ರಾರ್ಥಿಸಿದರು. ರಾಜೇಶ್ ಬಡ್ತಿ ಸ್ವಾಗತಿಸಿದರು. ಎಂ. ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ್ ಗುಂಡೂಮನೆ ವಂದಿಸಿದರು. ಗಣಪತಿ ಶಿರಳಗಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!
Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.