ಕೆಎಫ್‌ಡಿ ಪೀಡಿತರ ನೆರವಿಗೆ ಮನವಿ

ಸಾವಿಗೀಡಾದವರ ಕುಟುಂಬಕ್ಕೆ ತುರ್ತಾಗಿ 5 ಲಕ್ಷ ರೂ.ಪರಿಹಾರ ನೀಡಿ: ವೃಕ್ಷಲಕ್ಷ ಆಂದೋಲನ ಒತ್ತಾಯ

Team Udayavani, Apr 6, 2019, 5:21 PM IST

Udayavani Kannada Newspaper

ಸಾಗರ: ಕಾರ್ಗಲ್‌, ಸಂಪ, ಅರಲಗೋಡು ವ್ಯಾಪ್ತಿಯ ಹಳ್ಳಿಗಳಲ್ಲಿ ಇನ್ನೂ ಮಂಗಗಳು ಸಾಯುತ್ತಿವೆ. ಗ್ರಾಮಗಳ ಜನರು ಅರಳಗೋಡು
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಿಲೆ ತಪಾಸಣೆಗೆ ಆಸ್ಪತ್ರೆಯಲ್ಲಿ ಕ್ಯೂ ನಿಲ್ಲುವಂತಾಗಿದೆ. ಗ್ರಾಮದಲ್ಲಿ ಕೆಎಫ್‌ಡಿಗೆ ತುತ್ತಾಗಿ ಸಾವು ಕಂಡವರ ಸಂಖ್ಯೆ 20 ದಾಟಿದೆ. ಈ ಹಳ್ಳಿಗಳ ಶೇ. 25ರಷ್ಟು ಜನ ಹಳ್ಳಿ ತೊರೆದು ಬೇರೆಡೆ ಹೋಗಿದ್ದಾರೆ. ಈ ದಯನೀಯ ಸ್ಥಿತಿಯ ಶರಾವತಿ ಅಭಯಾರಣ್ಯದಲ್ಲಿರುವ ಅರಳಗೋಡಿನ ಜನರ ನೆರವಿಗೆ ಯಾವುದೇ ನೆಪಗಳಿಲ್ಲದೆ ಧಾವಿಸಬೇಕು ಎಂದು ನಗರದ ವೃಕ್ಷಲಕ್ಷ ಆಂದೋಲನ
ಒತ್ತಾಯಿಸಿದೆ.

ಅರಲಗೋಡು ಗ್ರಾಮಕ್ಕೆ ಭೇಟಿ ನೀಡಿದ ವೃಕ್ಷಲಕ್ಷ ತಂಡದ ಸದಸ್ಯರು ಪರಿಸ್ಥಿತಿಯನ್ನು ನೋಡಿ ವಿಶ್ಲೇಷಿಸಿ, ನೆಲ್ಲಿಮಕ್ಕಿ, ಮರಬಿಡಿ, ಚೇಗಳ, ಸಂಪ, ಬಣ್ಣುಮನೆ, ಕಂಚಿಕೈ, ಕಾಳಮಂಜಿ, ಇಟಿಗೆ, ಐತುಮನೆ, ಮರಾಠಿಕೇರಿ ಮಜರೆಗಳ ಸುಮಾರು 170 ಕುಟುಂಬಗಳು ಮಂಗನ ಕಾಯಿಲೆ ಪೀಡಿತ ಸಂತ್ರಸ್ತರಾಗಿದ್ದಾರೆ. ಸರ್ಕಾರ ಪರಿಹಾರ ನೀಡಿಲ್ಲ. ಕೃಷಿ ಚಟುವಟಿಕೆ ಪೂರ್ಣ ನಿಂತಿದೆ. ಅರಣ್ಯ ಇಲಾಖೆ ಲೆಕ್ಕದಲ್ಲಿ 176 ಮಂಗಗಳು ಸತ್ತಿವೆ. ಆದರೆ ಗ್ರಾಮದ ಮುಖಂಡ ಲೋಕರಾಜ್‌ ಪ್ರಕಾರ ಈ ಸಂಖ್ಯೆ 900 ದಾಟಿದೆ. ಹಳ್ಳಿ ಬಿಟ್ಟು ತೆರಳಿದ ಜನರಿಗೆ ಕಾಯಿಲೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಇನ್ನಷ್ಟು ಕುಟುಂಬಗಳು ತಾತ್ಕಾಲಿಕವಾಗಿ ಊರು ಬಿಡುವ ತಯಾರಿಯಲ್ಲಿ ಇದ್ದಾರೆ ಎಂದಿದೆ.

ಮಂಗನ ಕಾಯಿಲೆಯಿಂದ ಸಾವಿಗೀಡಾದ ಕುಟುಂಬಗಳಿಗೆ ಪರಿಹಾರ ನೀಡಬೇಕು. ಮಳೆ ಬೀಳುವವರೆಗೆ ಏಪ್ರೀಲ್‌ – ಮೇ 2 ತಿಂಗಳ ಕಾಲ ಅರಲಗೋಡು ಹಳ್ಳಿಗಳ ಜನರಿಗೆ ಬೇರೆ ಸ್ಥಳಗಳಲ್ಲಿ
ತಾತ್ಕಾಲಿಕ ಪುನರ್ವಸತಿ ಕಲ್ಪಿಸಿಕೊಡಬೇಕು. ಅರಳಗೋಡು ಆಸ್ಪತ್ರೆಗೆ ಇನ್ನಷ್ಟು ಹಾಸಿಗೆ, ಉಪಕರಣ, ಔಷ ಧ, ಸಿಬ್ಬಂದಿಯನ್ನು ತಕ್ಷಣ ಒದಗಿಸಬೇಕು. ಔಷಧ ಕಂಡು ಹಿಡಿಯಬೇಕು. ಐಸಿಎಂಆರ್‌ ನವದೆಹಲಿ ಅವರ ತಜ್ಞರ ತಂಡ ಅರಳಗೋಡಿಗೆ ಬರುವಂತೆ ತುರ್ತು ಕ್ರಮ ಬೇಕು. ವನ್ಯ ಜೀವಿ ಅರಣ್ಯ ಇಲಾಖೆ
ಅರಳಗೋಡಿನಲ್ಲಿ ಸಾವಿಗೀಡಾದ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಬೇಕು ಮತ್ತು ಸಾಮಾಜಿಕ- ಧಾಮಿಕ ಸಂಘಸಂಸ್ಥೆ,
ಮಠಗಳು ಅರಲಗೋಡಿಗೆ ಬಂದು ಸಂತ್ರಸ್ತರಿಗೆ ನೆರವಿನ ಹಸ್ತ ನೀಡುವಂತಾಗಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ.

ಪಶ್ಚಿಮ ಘಟ್ಟ ಕಾರ್ಯಪಡೆಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಸಂಚಾಲಕ ಬಿ.ಎಚ್‌. ರಾಘವೇಂದ್ರ, ಸಾಗರ ಗ್ರಾಮಾಂತರ ಸಮುದಾಯ ವಿಜ್ಞಾನ ಕೇಂದ್ರದ ಕೆ. ವೆಂಕಟೇಶ,
ಕವಲಕೋಡು, ವೃಕ್ಷಲಕ್ಷದ ಆನೆಗುಳಿ ಸುಬ್ಬರಾವ್‌, ಜಗದೀಶ, ಶ್ರೀಕಾಂತ, ಅಶೋಕ ಮುಂತಾದ ಕಾರ್ಯಕರ್ತರು ತಂಡದಲ್ಲಿ ಇದ್ದರು. ತಂಡ ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರ,
ಪಂಚಾಯತ್‌, ಅರಣ್ಯ ವನ್ಯಜೀವಿ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿತು.

ಟಾಪ್ ನ್ಯೂಸ್

Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ

Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ

Bareilly Court: ಪ್ಯಾಲೆಸ್ತೀನ್‌ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್‌

Bareilly Court: ಪ್ಯಾಲೆಸ್ತೀನ್‌ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್‌

8-bntwl

Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು

7-dvg

Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

Laxmi-Minister

ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ

6-aranthodu

Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು

SriLanka ನೌಕಾಪಡೆಯಿಂದ 17 ತಮಿಳುನಾಡಿನ ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-bntwl

Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು

7-dvg

Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ

ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ

ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!

ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!

6-aranthodu

Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ

Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ

Bareilly Court: ಪ್ಯಾಲೆಸ್ತೀನ್‌ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್‌

Bareilly Court: ಪ್ಯಾಲೆಸ್ತೀನ್‌ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್‌

8-bntwl

Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು

7-dvg

Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ

ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.