ಮರಳು ಬೇಕಾದಲ್ಲಿ ಗೊಂದಲ ಪಡಬೇಕಿಲ್ಲ

ದ.ಕ. ಜಿಲ್ಲಾಡಳಿತದಿಂದ 'ಸ್ಯಾಂಡ್‌ ಬಜಾರ್‌' ಆ್ಯಪ್‌

Team Udayavani, Apr 1, 2019, 11:09 AM IST

01-April-3

ದ.ಕ. ಜಿಲ್ಲಾಡಳಿತದಿಂದ ಪ್ರಾರಂಭಗೊಂಡ ಸ್ಯಾಂಡ್‌ ಬಜಾರ್‌ ಆ್ಯಪ್‌.

ಮಹಾನಗರ: ಮನೆ ಅಥವಾ ಬಿಲ್ಡಿಂಗ್‌ ಕಾಮಗಾರಿಗೆ ಮರಳು ಬೇಕಾದಾಗ ಯಾರಲ್ಲಿ ವಿಚಾರಿಸಬೇಕು ಎಂಬ ಬಗ್ಗೆ ಗೊಂದಲ ಇನ್ನು ಮುಂದೆ ಅಗತ್ಯವಿಲ್ಲ. ಯಾಕೆಂದರೆ ತಮ್ಮಲ್ಲಿರುವ ಮೊಬೈಲ್‌ನಲ್ಲಿ ‘ಸ್ಯಾಂಡ್‌ ಬಜಾರ್‌’ ಎಂಬ ಆ್ಯಪ್‌ ಡೌನ್‌ಲೋಡ್‌ ಮಾಡಿ ಅದರ ಮೂಲಕ ಮರಳು ಬುಕ್ಕಿಂಗ್‌ ಮಾಡಬಹುದು!

ದ.ಕ. ಜಿಲ್ಲೆಯಲ್ಲಿ ಮರಳು ಲಭ್ಯತೆಯ ಬಗ್ಗೆ ಹಲವು ರೀತಿಯ ಸಮಸ್ಯೆ ಮತ್ತು ಸವಾಲುಗಳು ಮತ್ತೆ ಮತ್ತೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ, ಗ್ರಾಹಕರಿಗೆ ಸೂಕ್ತ ಸಮಯದಲ್ಲಿ ಸಿಗುವಂತಾಗಲು ದ.ಕ. ಜಿಲ್ಲಾಡಳಿತ ‘ಸ್ಯಾಂಡ್‌ ಬಜಾರ್‌’ ಎಂಬ ಆ್ಯಪ್‌ ಅನ್ನು ಪರಿಚಯಿಸಲಿದೆ. ಸದ್ಯಕ್ಕೆ ಇದು ಮಂಗಳೂರು ಸುತ್ತಮುತ್ತ ವ್ಯಾಪ್ತಿಯಲ್ಲಿ ಅಂದರೆ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಜಾರಿಗೆ ಬರಲಿದೆ. ಆ ಬಳಿಕ ಜಿಲ್ಲೆಯಾದ್ಯಂತ ಈ ಆ್ಯಪ್‌ ಕಾರ್ಯನಿರ್ವಹಿಸಲಿದೆ.

ಮರಳು ಬೇಕಾದ ಗ್ರಾಹಕರು ಮೊಬೈಲ್‌ನಲ್ಲಿ ‘ಸ್ಯಾಂಡ್‌ ಬಜಾರ್‌’ ಆ್ಯಪ್‌ ಡೌನ್ಲೋಡ್‌ ಮಾಡಬೇಕು. ಬಳಿಕ ಗ್ರಾಹಕರ ಸಂಪೂರ್ಣ ವಿಳಾಸ, ಮರಳು ಎಲ್ಲಿಗೆ ಪೂರೈಕೆ ಮಾಡಬೇಕು ಎಂಬ ವಿವರ ನಮೂದಿಸಬೇಕು. ಗ್ರಾಹಕನ ಆಧಾರ್‌ ನಂಬರ್‌ ನಮೂದಿಸಿ ಹತ್ತಿರವಿರುವ ಮರಳು ದಕ್ಕೆ ಸ್ಥಳವನ್ನು ಟೈಪ್‌ ಮಾಡಿ ಕಳುಹಿಸಬೇಕು.

ಈ ಸಂದರ್ಭ ಒಟಿಪಿ ಸಂಖ್ಯೆ ಬರಲಿದ್ದು, ಆ್ಯಪ್‌ ಮುಖೇನ ಮರಳು ಸಾಗಾಟದ ದರ ಸಂದೇಶ
ಬರಲಿದೆ. ಈ ಮೊತ್ತವನ್ನು ಪೇಟಿಎಂ, ನೆಟ್‌ಬ್ಯಾಂಕಿಂಗ್‌ ಮುಖೇನ ಸಂದಾಯ ಮಾಡಬೇಕು.

ಹಣ ಸಂದಾಯವಾದ ಕೂಡಲೇ ಮೊಬೈಲ್‌ ಸಂದೇಶ ಬರಲಿದ್ದು, ಅದನ್ನು ಸಂಬಂಧಪಟ್ಟ
ಮರಳು ದಕ್ಕೆಯ ಗಮನಕ್ಕೆ ತರಬೇಕು. ಜತೆಗೆ ದಕ್ಕೆಗೆ ಕಂಟ್ರೋಲ್‌ ರೂಂನಿಂದ ಸಂದೇಶ ಹೋಗಲಿದೆ. ಇದರ ಆಧಾರದ ಮೇಲೆಯೇ ಮರಳು ಸಾಗಾಟ ನಡೆಯಲಿದೆ.

ಮರಳು ಪೂರೈಕೆಯಲ್ಲಿ ನಡೆಯುವ ಮಧ್ಯವರ್ತಿಗಳ ಹಾವಳಿ, ದರಗಳ ಏರಿಳಿತ ಸಹಿತ ಮರಳು ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಈ ಕ್ರಮ ಎನ್ನುವುದು ಜಿಲ್ಲಾಡಳಿತದ ಅಭಿಪ್ರಾಯ.

ಗ್ರಾಹಕರಿಗೆ ಅನುಕೂಲ
ಮರಳು ಬುಕ್ಕಿಂಗ್‌ ನೋಂದಣಿಯಿಂದ ಹಿಡಿದು ಹಣಪಾವತಿ, ಮರಳು ಬುಕ್ಕಿಂಗ್‌, ವಾಹನ ಬುಕ್ಕಿಂಗ್‌, ಮರಳು ಲಾರಿ ಸಾಗಾಟವಾಗುವ ಟ್ರ್ಯಾಕಿಂಗ್‌ ಸ್ಟೇಟಸ್‌ ಹಂತಹಂತವಾಗಿ ಸ್ಯಾಂಡ್‌ ಬಜಾರ್‌ ಆ್ಯಪ್‌ನಲ್ಲಿ ದೊರೆಯಲಿದ್ದು, ಇದು ಗ್ರಾಹಕರ ಮಾಹಿತಿಗೆ ಅನುಕೂಲವಾಗಲಿದೆ.

ಜತೆಗೆ, ಬುಕ್ಕಿಂಗ್‌ ಮಾಹಿತಿ, ಗ್ರಾಹಕರ ಮಾಹಿತಿ, ‘ಗೂಗಲ್‌ ಮ್ಯಾಪ್‌ ವಿವ್‌’ ಮುಖೇನ ಮರಳು ದಕ್ಕೆಯ ವಿವರವೂ ಸಿಗಲಿದೆ.

ನಿಗದಿತ ಸಮಯದೊಳಗೆ ಸಾಗಿಸಿ
ಆ್ಯಪ್‌ನಲ್ಲಿ ಬುಕ್ಕಿಂಗ್‌ ಮಾಡಿದ ಮರಳನ್ನು ನಿಗದಿತ ಸಮಯದೊಳಗೆ ಸಂಬಂಧಪಟ್ಟ ಮರಳು ಲಾರಿಯವ ಸಾಗಾಟ ಮಾಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡುವಂತಿಲ್ಲ.

ಒಂದು ವೇಳೆ ವಿಳಂಬ ಮಾಡಿದರೆ ಆ ಲಾರಿಯ ಮೇಲೆ ಕ್ರಮಕೈಗೊಳ್ಳಲಾಗುತ್ತದೆ.
ನಿರಂತರ ಮೂರು ಬಾರಿ ಇದೇ ರೀತಿ ಲೋಪವಾದರೆ ಆ ಲಾರಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಪಾರದರ್ಶಕತೆ ಉದ್ದೇಶ
ಮರಳುಗಾರಿಕೆಯಲ್ಲಿ ಪಾರದರ್ಶಕತೆ ಮತ್ತು ನಿರ್ವಹಣೆ ಸುಲಭವಾಗುವ ನೆಲೆಯಲ್ಲಿ ‘ಸ್ಯಾಂಡ್‌ ಬಜಾರ್‌’ ಆ್ಯಪ್‌ ತಯಾರಿಸಲಾಗಿದೆ. ಶೀಘ್ರದಲ್ಲಿ ಇದಕ್ಕೆ ಚಾಲನೆ ನೀಡಲಾಗುವುದು. ಈ ಮೂಲಕ ಗ್ರಾಹಕರಿಗೆ ಸುಲಭವಾಗಿ ಮರಳು ಸಿಗಲಿದೆ.
– ಶಶಿಕಾಂತ್‌ ಸೆಂಥಿಲ್‌,
ಜಿಲ್ಲಾಧಿಕಾರಿ, ದ.ಕ.

ಏನಿದು ಆ್ಯಪ್‌?
‘ಸ್ಯಾಂಡ್‌ ಬಜಾರ್‌ ಆ್ಯಪ್‌’-ಶೋರ್‌ ಟು ಎವಿರಿ ಡೋರ್‌- (ನದಿ ದಡದಿಂದ ಮನೆಬಾಗಿಲಿಗೆ) ಎಂಬ ಸ್ಲೋಗನ್‌ನಲ್ಲಿ ಈ ಆ್ಯಪ್‌ ತಯಾರಿಸಲಾಗಿದ್ದು, ಮರಳು ಸಾಗಾಟ ಸುಲಭವಾಗಿ ಗ್ರಾಹಕರಿಗೆ ತಲುಪಲು ಅನುಕೂಲವಾಗಲಿದೆ. ಜಿಲ್ಲಾಡಳಿತ ಮರಳಿಗೆ ದರ ನಿಗದಿ ಮಾಡಿ ಅದರ ಆಧಾರದಲ್ಲಿ ಪೂರೈಕೆ ಮಾಡಲಿದೆ. ಈ ನೂತನ ಐಡಿಯಾ ರಾಜ್ಯದಲ್ಲೇ ಮೊದಲ ಪ್ರಯೋಗ. ಇದರ ನಿರ್ವಹಣೆಯನ್ನು ಭೂವಿಜ್ಞಾನ ಮತ್ತು ಗಣಿ ಇಲಾಖೆ ಮಾಡಲಿದೆ.

ಟಾಪ್ ನ್ಯೂಸ್

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.