ಗುಡುಗು ಸಹಿತ ಉತ್ತಮ ಮಳೆ
ಬಿರುಗಾಳಿಗೆ ಹಾರಿ ಹೋದ ಮನೆಗಳಿಗೆ ಹಾಕಿದ್ದ ಸಿಮೆಂಟ್ ತಗಡು
Team Udayavani, Apr 11, 2019, 2:58 PM IST
ಸಂಡೂರು: ಎಸ್. ಓಬಳಾಪುರದಲ್ಲಿ ಸುರಿದ ಮಳೆಯಿಂದಾಗಿ ರಸ್ತೆಯಲ್ಲಿ ನೀರು ಹರಿಯುತ್ತಿರುವುದು.
ಸಂಡೂರು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ಗುಡುಗು ಸಹಿತ ಉತ್ತಮ ಮಳೆಯಾಗಿದ್ದು, ಓಬಳಾಪುರ, ದೇವರ ಬುಡ್ಡೇನಹಳ್ಳಿ ಗ್ರಾಮದಲ್ಲಿ ಕೆಲವು ಮನೆಗಳಿಗೆ ಹಾಕಿದ್ದ ಸಿಮೆಂಟ್ ತಗಡಿನ ಶೀಟ್‌ಗಳು ಹಾರಿ
ಹೋಗಿವೆ.
ತಾಲೂಕಿನ ಎಸ್. ಓಬಳಾಪುರ, ಗೌರಿಪುರ, ತಿಪ್ಪನಮರಡಿ, ಸೋವೇನಹಳ್ಳಿ, ಬೊಮ್ಮಘಟ್ಟ, ಚೋರನೂರು, ಸಂಡೂರು, ತಾರಾನಗರ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಬಿರುಗಾಳಿ, ಗುಡುಗು ಹಾಗೂ ಆನೆಕಲ್ಲು ಸಹಿತ ಮಳೆಯಾಗಿದೆ.
ಓಬಳಾಪುರ, ದೇವರ ಬುಡ್ಡೇನಹಳ್ಳಿ ಗ್ರಾಮದಲ್ಲಿ ಸುರಿದ ಮಳೆಯಿಂದಾಗಿ
ಉಮಾದೇವಿ, ಸುಮಂಗಲಮ್ಮ, ಗೌರಮ್ಮ, ದಾನಮ್ಮ, ಅಂಕಮನಾಳ ಗ್ರಾಮದಲ್ಲಿ ತಿಮ್ಮಕ್ಕ, ಲಕ್ಷ್ಮೀ , ಸಾರಮ್ಮ, ಮಾರೆಮ್ಮ, ರಾಜಮ್ಮ, ಓಬಕ್ಕ, ನಿರ್ಮಲ, ಗಂಗಮ್ಮ, ಹುಲಿಗೆಮ್ಮ, ತಿಮ್ಮಕ್ಕ, ಲಕ್ಷ್ಮೀ , ಓಬಮ್ಮ, ಪವಿತ್ರಾ, ಕಾಳಮ್ಮ ಎಂಬುವರಿಗೆ ಸೇರಿದ ಮನೆಗಳ ಮೇಲಿನ ಸಿಮೆಂಟ್ ತಗಡಿನ ಶೀಟ್ ಗಳು ಭಾರೀ ಬಿರುಗಾಳಿಗೆ ಹಾರಿ ಹೋಗಿವೆ. ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಕೆರೆಗಳಿಗೆ ಸ್ವಲ್ಪ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಇನ್ನು ಭುಜಂಗನಗರ ಗಟಾರದಲ್ಲಿ ಕಸಕಡ್ಡಿ, ಪ್ಲಾಸ್ಟಿಕ್ ಕವರ್‌ಗಳು ತುಂಬಿ ಹೋಗಿದ್ದು, ಕಸ ತೆರವುಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸಿಡಿಲಿಗೆ 6 ಮೇಕೆ, 3 ಕುರಿ ಸಾವು ಸಂಡೂರು: ತಾಲೂಕಿನ ತಿಪ್ಪನಮರಡಿ ಗ್ರಾಮದಲ್ಲಿ ಸಿಡಿಲು ಬಡಿದು 6 ಮೇಕೆ, 3 ಕುರಿಗಳು ಸಾವನ್ನಪ್ಪಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಒಡೇರಹಳ್ಳಿ ಗ್ರಾಮದ ಸಣ್ಣ ಬೊಮ್ಮಯ್ಯ ಎಂಬುವರು ತಿಪ್ಪನಮರಡಿ ಗ್ರಾಮದ ಹೊಲದಲ್ಲಿ ಕುರಿಗಳನ್ನು ತಂಗಿಸಿದ್ದರು. ಈ ವೇಳೆ ಮಂಗಳವಾರ ರಾತ್ರಿ ಸಿಡಿಲು ಬಡಿದು ಈ ಘಟನೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.