ಕಾರ್ತಿಕ ಆತ್ಮ ಜ್ಯೋತಿ ಬೆಳಗುವ ಹಬ್ಬ

ಎಲ್ಲರೂ ಬದುಕಿನಲ್ಲಿ ಕತ್ತಲೆಯಿಂದ ಬೆಳಕಿನೆಡೆಗೆ ಸಾಗಿ: ಪ್ರಭುಮಹಾ ಸ್ವಾಮೀಜಿ

Team Udayavani, Nov 24, 2019, 3:42 PM IST

24-November-16

ಸಂಡೂರು: ಕಾರ್ತಿಕೋತ್ಸವ ಬರೀ ಕತ್ತಲೆಯನ್ನು ಓಡಿಸಿ ಬೆಳಕನ್ನು ತರುವುದಲ್ಲ, ಅದು ನಮ್ಮ ಮನದಲ್ಲಿಯ ಕತ್ತಲೆಯನ್ನು ತೊಲಗಿಸಿ ಆತ್ಮ ಜ್ಯೋತಿಯನ್ನು ಬೆಳಗುವಂತಹ ಹಬ್ಬವಾಗಿ ಪ್ರತಿಯೊಬ್ಬರೂ ಆಚರಿಸಬೇಕು ಎಂದು ಸಂಡೂರು ವಿರಕ್ತಮಠದ ಪ್ರಭುಮಹಾಸ್ವಾಮೀಜಿ ತಿಳಿಸಿದರು.

ಅವರು ಪಟ್ಟಣ ಕಾಲಪಟ್ಟಿಯ ಕಾಲೋನಿಯಲ್ಲಿ ಬನ್ನಿಮಹಾಂಕಾಳಿ ಸಂಘದವರು ಹಮ್ಮಿಕೊಂಡಿದ್ದ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಕೃತಿ ಅದ್ಭುತವಾಗಿದ್ದು ತನ್ನದೇ ಅದ ಸಮಯದಲ್ಲಿ ಮಳೆ, ಬಿಸಿಲು, ಚಳಿ, ಬೇಸಿಗೆ ಕಾಲವನ್ನು ತರುತ್ತದೆ. ಕಾರ್ತಿಕ ಮಾಸದಲ್ಲಿ ಬೇಗನೆ ಕತ್ತಲಾಗಿ ಬೇಗನೆ ಬೆಳಗಾಗುತ್ತದೆ, ಇಂಥ ಸಮಯದಲ್ಲಿ ಪ್ರತಿಯೊಬ್ಬರೂ ಸಹ ಸಂಪ್ರದಾಯದ ಹೆಸರಿನಲ್ಲಿ ನಮ್ಮ ರೈತರು ಕಾರ್ತಿಕೋತ್ಸವವನ್ನು ಆಚರಿಸುವ ಮೂಲಕ ಕತ್ತಲನ್ನು ಕಳೆದು ಬೆಳಕನ್ನು ನೀಡುವ ಕಾರ್ಯ ಮಾಡುತ್ತಾರೆ, ಅಲ್ಲದೆ ವೈಜ್ಞಾನಿಕವಾಗಿಯೂ ಸಹ ತನ್ನದೇ ಅದ ಮಹತ್ವವನ್ನು ಹೊಂದಿದ್ದು ಇದರಿಂದ ಕೀಟಗಳ ಬಾಧೆಯನ್ನು ತಡೆಯುವ ಕಾರ್ಯವೂ ಇದಾಗಿದೆ ಎನ್ನುತ್ತಾರೆ, ಎಲ್ಲರೂ ಬದುಕಿನಲ್ಲಿ ಕತ್ತಲೆಯಿಂದ ಬೆಳಕಿನೆಡೆಗೆ ಸಾಗಲಿ ಎಂದರು.

ಯಶವಂತನಗರದ ಶ್ರೀ ಸಿದ್ಧರಾಮೇಶ್ವರ ಸಂಸ್ಥಾನ ವಿರಕ್ತಮಠದ ಗಂಗಾಧರ ದೇವರು ಮಾತನಾಡಿ, ನಮ್ಮ ದೇಶದ ಪ್ರತಿಯೊಂದು ಸಂಪ್ರದಾಯದಲ್ಲಿಯೂ ಸಹ ಒಂದು ವೈಜ್ಞಾನಿಕ ಅಂಶ ಅಡಗಿದೆ. ಅದನ್ನು ಅನುಸರಿಸುವ ಮೂಲಕ ಬದುಕಿನಲ್ಲಿ ಶಾಂತಿ, ನೆಮ್ಮದಿ ಪಡೆದುಕೊಳ್ಳುವುದು ಅತಿ ಅಗತ್ಯವಾಗಿದೆ.

ಕಾರ್ತಿಕದ ನೆಪದಲ್ಲಿ ಎಲ್ಲರೂ ಸಹ ಜಾತಿ, ಮತ, ಧರ್ಮಗಳನ್ನು ದೂರತಳ್ಳಿ ಸಮಾನತೆಯಿಂದ ಪ್ರತಿಯೊಬ್ಬರೂ ಸಹ ಸ್ವ ಇಚ್ಛೆಯಿಂದ ಹೆಣ್ಣು, ಗಂಡು ಸೇರಿ ಸಮಾನವಾಗಿ ದೀಪವನ್ನು ಬೆಳಗುತ್ತಿರುವುದು ಹೆಮ್ಮೆ ಸಂಗತಿಯಾಗಿದೆ. ಅಲ್ಲದೆ ಸಾಮೂಹಿಕ ದಾಸೋಹವನ್ನು ಮಾಡುತ್ತಿರುವುದು ಸಹ ಸಮಾನತೆಯ ಸಂಕೇತವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಸಹ ಇಂಥ ಕಾರ್ಯಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ಅಹಂಗಳನ್ನು ಮರೆತು, ನೆಮ್ಮದಿ ಬದುಕನ್ನು ಸಾಗಿಸೋಣ, ಕಾರ್ತಿಕದ ಕತ್ತಲೆಯನ್ನು ಓಡಿಸಿ ಬೆಳಕನ್ನು ತರೋಣ ಎಂದರು.

ಕಾರ್ಯಕ್ರಮದಲ್ಲಿ ಇಡೀ ಕಾಲೋನಿಯ ಎಲ್ಲ ಸದ್ಭಕ್ತರು ಸಾಮೂಹಕವಾಗಿ ದೀಪೋತ್ಸವವನ್ನು ಮಾಡಿದರು, ಅಲ್ಲದೆ ಪಟ್ಟಣದ ವಿವಿಧ ಭಾಗಗಳಿಂದ ಅಗಮಿಸಿದ ಮಹಿಳೆಯರು ಅಲಂಕಾರಿಕವಾಗಿ ಅಗಮಿಸಿ ದೀಪ ಬೆಳಗುವ ಮೂಲಕ ಶ್ರೀ ಬನ್ನಿಮಹಾಂಕಾಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.

ಟಾಪ್ ನ್ಯೂಸ್

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-maralu

Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ

1-swami-sm-bg

Udupi; ಸ್ವಯಂ ರಕ್ಷಣೆಗಾಗಿ ಕರಾಟೆ ಕಲೆಯ ಅಭ್ಯಾಸ ಇಂದಿನ ಅಗತ್ಯತೆ: ಪುತ್ತಿಗೆ ಶ್ರೀ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

3

Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.