ಬಿಜೆಪಿ ಕಾರ್ಯತಂತ್ರ ಇಲ್ಲಿ ನಡೆಯಲ್ಲ
ಜನರ ಕೆಲಸ ಮಾಡಿಕೊಡಲು ಸಿದ್ಧ •ಸಂಡೂರು ಅಭಿವೃದ್ಧಿಗೆ ಬದ್ಧ •ಅಭ್ಯರ್ಥಿಗಳ ಮೆರವಣಿಗೆ
Team Udayavani, Jun 1, 2019, 11:43 AM IST
ಸಂಡೂರು: ಪುರಸಭೆ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳೊಂದಿಗೆ ವೈದ್ಯಕೀಯ ಶಿಕ್ಷಣ ಸಚಿವ ಈ.ತುಕಾರಾಂ ಹಾಗೂ ಅನಿಲ್ ಲಾಡ್ ಮೆರವಣಿಗೆಯಲ್ಲಿ ಪಾಲ್ಗೊಂಡರು
ಸಂಡೂರು: ಪುರಸಭೆ ಚುನಾವಣೆಯನ್ನು ಸರಳವಾಗಿ ಗೆಲ್ಲಬೇಕಾಗಿತ್ತು. ಆದರೆ ನಮ್ಮವರೇ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರೇ ಖುದ್ದು ಬಿಜೆಪಿ ಪರ ಪ್ರಚಾರ ಮಾಡಿದ ಪರಿಣಾಮ ಪ್ರಯಾಸದಿಂದ ಕಾಂಗ್ರೆಸ್ ಪುರಸಭೆಯ ಗದ್ದುಗೆ ಹಿಡಿಯಬೇಕಾಯಿತು. ಇಲ್ಲಿ ಮೋದಿ ಅಲೆ ನಡೆಯದು ಎಂದು ಮಾಜಿ ಶಾಸಕ ಅನಿಲ್ ಲಾಡ್ ತಿಳಿಸಿದರು.
ಪುರಸಭೆಯಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳ ಮೆರವಣಿಗೆ ವೇಳೆ ಮಾತನಾಡಿದ ಅವರು, ಜನತೆ ಸಚಿವ ತುಕಾರಾಂ ಅವರ ಶ್ರಮ, ಸಂತೋಷ್ ಲಾಡ್ ಅವರ ಕಾರ್ಯ, ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಪರಿಗಣಿಸಿ ಎಷ್ಟೇ ಒತ್ತಡವಿದ್ದರೂ ಸಹ ಮತ ಹಾಕುವ ಮೂಲಕ ನಮ್ಮನ್ನು ಗೆಲ್ಲಿಸಿದ್ದಾರೆ. ಸಂಡೂರು ಕಾಂಗ್ರೆಸ್ ಭದ್ರಕೋಟೆಯಾಗಿದೆ. ಇಡೀ ಜಿಲ್ಲೆಯಲ್ಲಿ ಜನಾರ್ದನರಡ್ಡಿ ಸಮಯದಲ್ಲಿ ಸಂಡೂರಿನಲ್ಲಿ ಕಾಂಗ್ರೆಸ್ ಗೆದ್ದಿದೆ. ಇಲ್ಲಿ 16-18 ಸ್ಥಾನಗಳನ್ನು ಗೆಲ್ಲಬೇಕಾಗಿತ್ತು. ಆದರೆ ನಮ್ಮವರೇ ಕೆಲವರು ಉಂಟು ಮಾಡಿದ ಗೊಂದಲ, ಅಲ್ಲದೆ ಪಕ್ಷ ಬಿಟ್ಟು ಮನೆತನಗಳು ಚುನಾವಣೆಯಲ್ಲಿ ಭಾಗವಹಿಸಿದ ಪರಿಣಾಮ ಬೀರಿದೆ. 15 ವರ್ಷ ಕಾಂಗ್ರೆಸ್ ಅಡಳಿತ ನಡೆಸಿದೆ. ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರು ಬಿಜೆಪಿ ಪರವಾಗಿ ಪ್ರಚಾರ ನಡೆಸಿದ್ದಾರೆ. ಈ ಬಗ್ಗೆ ಖುದ್ದಾಗಿ ದಿನೇಶ್ ಗುಂಡೂರಾವ್ ಅವರಿಗೆ ದೂರು ನೀಡಿದ್ದೇವೆ ಎಂದರು.
ಹಗರಿಬೊಮ್ಮನಹಳ್ಳಿಯಿಂದಲೂ ಸಹ ಭೀಮಾನಾಯ್ಕ ದೂರು ನೀಡಿದ್ದಾರೆ. ಕ್ರಮ ಏಕೆ ಇಲ್ಲ ಎಂದಾಗ ಚುನಾವಣೆ ಹತ್ತಿರ ಇದ್ದ ಕಾರಣ ಕ್ರಮವಾಗಿಲ್ಲ, ಈಗ ಮಾತ್ರ ಆ ರೀತಿಯಾಗದು ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ ಮಾತನಾಡಿ, ಜನತೆಯ ಅಶೀರ್ವಾದ, ಯಾರೇ ಎಷ್ಟೇ ವಿರೋಧಿಸಿದರೂ ಸಹ ಜನತೆ ಕೈ ಹಿಡಿದಿದ್ದಾರೆ. ನಾವು ಜನರ ಕೈ ಬಿಡುವುದಿಲ್ಲ, ಅವರ ಕೆಲಸಗಳನ್ನು ಮಾಡಿಕೊಡುತ್ತೇವೆ. ಸಂಡೂರಿನ ಪೂರ್ಣ ಅಭಿವೃದ್ಧಿ ಮಾಡುತ್ತೇವೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಅಕ್ಷಯ ಲಾಡ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.