ಕನ್ನಡ ಉಳಿಸಿ ಬೆಳೆಸುವ ಕಾರ್ಯವಾಗಲಿ
ಇಂಗ್ಲೀಷ್ ವ್ಯಾಮೋಹದಲ್ಲಿ ಕನ್ನಡ ಶಾಲೆಗಳು ಮುಚ್ಚುವಂತಹ ದುಸ್ಥಿತಿ:ರಾಘವೇಂದ್ರ ರಾವ್
Team Udayavani, Nov 22, 2019, 5:53 PM IST
ಸಂಡೂರು: ಕನ್ನಡ ನಾಡು ಹರಿದು ಹಂಚಿಹೋಗಿತ್ತು. ಅದನ್ನು ಒಂದುಗೂಡಿಸುವಂಥ ಮಹತ್ತರ ಕಾರ್ಯಕ್ಕೆ 1905ರಲ್ಲಿ ಆಲೂರು ವೆಂಕಟರಾಯರು ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದರ ಫಲವೇ 1973ರಲ್ಲಿ ಕರ್ನಾಟಕ ಎಂದು ನಾಮಕರಣವಾಯಿತು ಎಂದು ಥೀಯೋಸಿಫಿಕಲ್ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಯು. ರಾಘವೇಂದ್ರ ರಾವ್ ತಿಳಿಸಿದರು.
ಅವರು ಸಂಡೂರು ತಾಲೂಕಿನ ಯಶವಂತನಗರ ಗ್ರಾಮದ ಶ್ರೀಗುರು ಸಿದ್ದರಾಮೇಶ್ವರ ಸಂಸ್ಥಾನ ವಿರಕ್ತಮಠದಲ್ಲಿ ಏರ್ಪಡಿಸಿದ್ದ 42ನೇ ತ್ತೈಮಾಸಿಕ ಶಿವಾನುಭವಗೋಷ್ಠಿಯಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಕನ್ನಡನಾಡು ಹರಿದು ಹಂಚಿಹೋಗಿತ್ತು, ಕವಿಗಳು, ಸಾಹಿತಿಗಳು, ನಾಡಪ್ರೇಮಿಗಳು ಶ್ರಮಿಸಿದ ಪರಿಣಾಮ ಕರ್ನಾಟಕವಾಯಿತು. ಇಂದು ಇಂಗ್ಲೀಷ್ ವ್ಯಾಮೋಹದಲ್ಲಿ ಇದ್ದು ಕನ್ನಡ ಶಾಲೆಗಳು ಮುಚ್ಚುವಂತಹ ದುಸ್ಥಿತಿಗೆ ಬಂದಿದೆ. ಇಂದು ನಾವೆಲ್ಲರೂ ಸಹ ಕನ್ನಡ ಉಳಿಸುವ ಮತ್ತು ಬೆಳೆಸುವಂಥ ಕಾರ್ಯ ಮಾಡಬೇಕು ಎಂದರು.
ಸಾನ್ನಿಧ್ಯವಹಿಸಿದ ಶ್ರೀಗುರು ಸಿದ್ಧರಾಮೇಶ್ವರ ಮಠದ ಗಂಗಾಧರ ಮಹಾಸ್ವಾಮೀಜಿ ಮಾತನಾಡಿ ಸಂಸ್ಕಾರ, ಆಚಾರ, ವಿಚಾರ, ಪರಿಸರ, ಕಾಯಕ, ದಾಸೋಹ ಇವುಗಳಿಂದ ಭಾರತ ದೇಶಸಂಪತºರಿತವಾಗಿದೆ. ಸತ್ಸಂಗ, ಶಿವಾನುಭವ ಗೋಷ್ಠಿ ಮಹಾತ್ಮರ ವಾಣಿಯಿಂದ ಸಂಸ್ಕಾರ ಬೆಳೆಯಲು ಸಾಧ್ಯವೆಂದು ತಿಳಿಸಿದರು.
ರಮಣ ಪ್ರಶಸ್ತಿಗೆ ಭಾಜನರಾದ ಹಂಪಿ ವಿ.ವಿ. ನಿಲಯದ ಪ್ರಾಧ್ಯಾಪಕ ಡಾ|
ಕೆ.ರವೀಂದ್ರನಾಥ ಮಾತನಾಡಿ, ಸಂಡೂರು ಸಂಸ್ಥಾನವನ್ನೊಳಗೊಂಡು ಕರ್ನಾಟಕ ರಾಜ್ಯ 20 ಸಂಸ್ಥಾನಗಳಾಗಿ ಹಂಚಿಹೋಗಿ ಆಡಳಿತಾತ್ಮಕವಾಗಿ ಕುಸಿದು ಬಿದ್ದು ಅನಾಥ ಪ್ರಜ್ಞೆ ಕಾಡಿತು. ಆದರೆ ವಚನ ಸಾಹಿತ್ಯ ಅದನ್ನು ತುಂಬುವುದರ ಜೊತೆಗೆ ಕಾಯಕವೆಂದರೆ ಬರೀ ವೃತ್ತಿ ಅಲ್ಲ ಅದು ಬದುಕಾಗಿತ್ತು. ಬಸವಕಲ್ಯಾಣ, ವಿಜಯಕಲ್ಯಾಣ, ಅಮರಕಲ್ಯಾಣ, ಕೊಡೇಕಲ್ ಕಲ್ಯಾಣ, ಧರ್ಮ ಕಲ್ಯಾಣ ಈ ಐದು ಚರಿತ್ರೆಗಳನ್ನ ಕಟ್ಟಿದ್ದು ವಚನಕಾರರು, ಇಡೀ ಕನ್ನಡ ನಾಡಿಗೆ ನಮ್ಮತನವನ್ನು ತೋರಿಸುವಂತಹ ಸ್ಥಿತಿ ಇಲ್ಲದಂತಹ ಸಮಯದಲ್ಲಿ ಅದನ್ನು ನಾಡಿಗೆ ತಿಳಿಸಿದ ಶರಣರು ತಮ್ಮ ಬದುಕನ್ನೇ ಕನ್ನಡ ನಾಡಿಗೆ ಅರ್ಪಿಸಿದರು ಎಂದರು. ಯಾವುದೇ ಜಾಹೀರಾತುರಹಿತ ಸ್ಮರಣ ಸಂಚಿಕೆಯನ್ನು ಶ್ರೀ ಸಿದ್ಧರಾಮೇಶ್ವರ ಸಂಸ್ಥಾನ ಮಠದ ಪಟ್ಟಾಕಾರ ಮಹೋತ್ಸವದ ಸಂಚಿಕೆ ಮರೆಯಲಾರದಂತಹ ಮತ್ತು ಮಾರ್ಗಸೂಚಿಯಾದಂಥ ಕೃತಿಯಾಗಿದೆ ಎಂದರು.
ಸಂಡೂರು ವಿರಕ್ತಮಠದ ಪ್ರಭುಮಹಾಸ್ವಾಮೀಜಿ ಮಾತನಾಡಿ, ಕರ್ನಾಟಕ ಎಂದು ನಾಮಕರಣಕ್ಕೆ ದೇವರಾಜ ಅರಸರು ಕಾರಣರಲ್ಲ ದೊಡ್ಡಮೇಟಿ ಅಂದಾನಪ್ಪ ಕಾರಣ ಎಂದು ತಿಳಿಸಿದರು. ಅಕ್ಕನಬಳಗದವರು ಪ್ರಾರ್ಥಿಸಿದರು, ಟಿ. ವೆಂಕಟೇಶ ಎಚ್. ಕುಮಾರಸ್ವಾಮಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಎಚ್. ಮಲಿಯಪ್ಪ, ಎಚ್. ತಿಪ್ಪೇಸ್ವಾಮಿ ದಾಸೋಹ ಸೇವೆಗೈದರು. ವೀರೇಶ ನಿರೂಪಿಸಿದರು. ಸಮಾರಂಭದಲ್ಲಿ ಗಣ್ಯರಾದ ಸಿ.ಜೆ.ಕೆಂಚನಗೌಡ, ಚಿತ್ರಿಕಿ ಸತೀಶ್, ಚಿತ್ರೀಕಿ ವಿಶ್ವನಾಥ, ಮೇಕೆ ಈರಣ್ಣ ಇತರ ಹಲವಾರು ಗಣ್ಯರು, ಮಹಿಳೆಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.