ಅಧಿಕಾರಿಗಳ ಗೈರು: ಸದಸ್ಯರ ಆಕ್ರೋಶ
ಕೌಶಲ್ಯಬಂಧು ವಿಶೇಷ ಕಾರ್ಯಕ್ರಮದಡಿ ತರಬೇತಿ ಶಿಬಿರ: ಫರ್ಜಾನಾ ಗೌಸ್
Team Udayavani, Dec 22, 2019, 5:09 PM IST
ಸಂಡೂರು: 3 ತಿಂಗಳಿಗೊಮ್ಮೆ ಸಭೆ ಕರೆದರೂ ಅಧಿಕಾರಿಗಳು ಸಭೆಗೆ ಹಾಜರಾಗುತ್ತಿಲ್ಲವೇಕೆ ಎಂದು ಸದಸ್ಯರು ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ತಾಪಂ ಸಾಮಾನ್ಯ ಸಭೆಯಲ್ಲಿ ಜರುಗಿತು.
ತಾ.ಪಂ. ದಿ.|| ಎಂ.ವೈ. ಘೋರ್ಪಡೆ ಸಭಾಂಗಣದಲ್ಲಿ ನಡೆದ 14ನೇ ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು, ಅ ಧಿಕಾರಿಗಳು ನಿಮ್ಮ ಮಾತಿಗೆ ಬೆಲೆ ಕೊಡಲಿಲ್ಲವೆಂದರೆ ನೀವು ಸಭೆ ಏಕೆ ಮಾಡಬೇಕು? ಅನಧಿಕೃತ ಅಧಿಕಾರಿಗಳನ್ನು ಹೊರಗೆ ಹಾಕಿ ಎಂದು ಬಿಜೆಪಿಯ ರಾಮಾಂಜಿನೇಯ, ಗಂಗಮ್ಮ, ಪರಿಮಳ, ತಾಳೂರಿನ ಮೇಘನಾಥ, ಹೊಸಗೇರೆಪ್ಪ ವಿಠಲಾಪುರ, ಅಂತಾಪುರದ ಶಂಕ್ರಪ್ಪ, ಪ್ರಕಾಶ ಬೊಮ್ಮಘಟ್ಟ, ವಿಶಾಲಕ್ಷಮ್ಮ ಲಿಂಗಾನಹಳ್ಳಿ, ಗಂಗಮ್ಮ ಭುಜಂಗನಗರ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಅಧ್ಯಕ್ಷೆ ಫರ್ಜಾನಾ ಗೌಸ್ ಅಜಂ ಡಿ. ಅವರು ಅಧಿ ಕಾರಿಗಳು ಹೊರಹೋಗಲು ಮನವಿ ಮಾಡಿದಾಗ ಪ್ರಭಾರಿ ತಹಶೀಲ್ದಾರ್ ಕೆ.ಎಂ. ಶಿವಕುಮಾರ್ ಅವರನ್ನೊಳಗೊಂಡು ಎಲ್ಲರೂ ಹೊರನಡೆದರು. ಇದರಿಂದ ಇಡೀ ಸಭೆ ಖಾಲಿಯಾಯಿತು. ಇದನ್ನು ಕಂಡ ಅಧ್ಯಕ್ಷರು ತಕ್ಷಣ ಸಭೆ ಮುಂದೂಡಿ ಮುಂದಿನ ವಾರದಲ್ಲಿ ಸಭೆ ಕರೆಯಲಾಗುವುದು. ಅಂದು ಗೈರಾದರೆ ಶಿಸ್ತುಕ್ರಮದ ಎಚ್ಚರಿಕೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.