ಬೆಳೆ ವಿಮಾ ಸೌಲಭ್ಯಕ್ಕೆ ನೋಂದಣಿ ಕಡ್ಡಾಯ
ಜಿಲ್ಲಾ ಸಾಂಖ್ಯೀಕ ಅಧಿಕಾರಿ ವಾಗೀಶ್ ಶಿವಾಚಾರ್ಯ ಮಾಹಿತಿ
Team Udayavani, Aug 3, 2019, 1:21 PM IST
ಸಂಡೂರು: ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ರೈತರ ಬೆಳೆಕಟಾವು ಸಮೀಕ್ಷಾ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಸಾಂಖ್ಯೀಕ ಅಧಿಕಾರಿ ವಾಗೀಶ್ ಶಿವಾಚಾರ್ಯ ಮಾತನಾಡಿದರು.
ಸಂಡೂರು: ರೈತರ ಬೆಳೆಗಳಿಗೆ ವಿಮಾ ಸೌಲಭ್ಯ ಸಿಗಬೇಕಾದರೆ ಅವರಿಗೆ ನೋಂದಣಿ ಮತ್ತು ಬೆಳೆಕಟಾವು ಸಮೀಕ್ಷೆ ಅತಿ ಮುಖ್ಯವಾಗಿರುತ್ತದೆ. ಆದ್ದರಿಂದ ಕಡ್ಡಾಯವಾಗಿ ಪ್ರತಿಯೊಬ್ಬ ರೈತರ ಬೆಳೆ ಕಟಾವು ಮತ್ತು ನೋಂದಣಿಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ಜಿಲ್ಲಾ ಸಾಂಖ್ಯೀಕ ಅಧಿಕಾರಿ ವಾಗೀಶ್ ಶಿವಾಚಾರ್ಯ ತಿಳಿಸಿದರು.
ಅವರು ಶುಕ್ರವಾರ ಪಟ್ಟಣದ ತಾಲೂಕು ಪಂಚಾಯಿತಿ ಅವರಣದಲ್ಲಿ ಒಂದು ದಿನದ ಕೃಷಿ, ತೋಟಗಾರಿಕೆ, ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಉನ್ನತಾಧಿಕಾರಿಗಳು, ಪಿಡಿಓ, ವಿಲೇಜ್ ಅಕೌಟೆಂಟ್ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಶಿಬಿರ ಉದ್ದೇಶಿಸಿ ಮಾತನಾಡಿ, ರೈತರು ನಮಗೆ ವಿಮೆ ಸಿಕ್ಕಿಲ್ಲ ಎಂದು ನೂರಾರು ದೂರುಗಳು ಬರುತ್ತಿವೆ, ಕಾರಣ ಅವರ ಬೆಳೆ ಕಟಾವು ಸಮೀಕ್ಷೆಯಾಗದೇ ಇರುವುದು, ಅಲ್ಲದೆ ಬಹಳಷ್ಟು ರೈತರು ನೋಂದಾವಣೆಯನ್ನು ಮಾಡದೇ ಇರುವುದು ಕಾರಣವಾಗುತ್ತದೆ, ಇದಕ್ಕೆ ಪ್ರಮುಖವಾಗಿ 4 ಇಲಾಖೆಗಳು ಸಹ ಕಾರ್ಯಪ್ರವೃತ್ತರಾಗಬೇಕು. ಕೃಷಿ ಇಲಾಖೆಯ ಅಧಿಕಾರಿಗಳು ನಿಗದಿತ ಸಮಯದಲ್ಲಿ ಅವರು ಬಿತ್ತಿದೆ ಮತ್ತು ಕಟಾವು ಮಾಹಿತಿಯನ್ನು ಮೊಬೈಲ್ ಆ್ಯಪ್ ಮೂಲಕ ನೋಂದಾವಣೆ ಮಾಡಲು ಅವಕಾಶವಿರುತ್ತದೆ. ಆದರೆ ಅದೂ ಪೂರ್ಣಪ್ರಮಾಣದಲ್ಲಿ ಅಗದೇ ಇರುವುದರಿಂದ ಬಹಳಷ್ಟು ರೈತರಿಗೆ ತಮ್ಮ ಬೆಳೆ ನಷ್ಟದ ಪರಿಹಾರವಾಗಲಿ, ವಿಮಾ ಸೌಲಭ್ಯಗಳಾಗಲಿ ಸಿಗುವುದಿಲ್ಲ. ಆದ್ದರಿಂದ ಕಂದಾಯ ಇಲಾಖೆಯವರ ನಿಗದಿತ ಜಮೀನಿನ ದಾಖಲಾತಿಗಳು, ತೋಟಗಾರಿಕೆ, ಕೃಷಿ ಬೆಳೆಯಾಗಿದ್ದಲ್ಲಿ ಅವುಗಳ ಮಾಹಿತಿಗಳನ್ನು ಅನ್‌ಲೈನ್ ನೋಂದಣಿ ಮಾಡಬೇಕು, ಸರಿಯಾದ ಅಂಕಿ ಸಂಖ್ಯೆಗಳನ್ನು ಕೊಡದೇ ಇರುವುದು ಸಹ ರೈತರಿಗೆ ಸಕಾಲದಲ್ಲಿ ಸೌಲಭ್ಯಗಳು ಇಲ್ಲವಾಗುತ್ತವೆ. ಆದ್ದರಿಂದ ಸೂಕ್ತ ಹಾಗೂ ನಿಗದಿತ ಸಮಯದಲ್ಲಿ ಎಲ್ಲ ಬೆಳೆಗಳ ಮಾದರಿ, ಕಟಾವು ಮಾಡಿದ ಸಮಯದಲ್ಲಿ ಇದ್ದ ಬೆಳೆಗಳ ವಿವರ, ನಷ್ಟಕ್ಕೆ ಒಳಗಾದ ಬೆಳೆ, ರೈತರು ಮಾಡಿಸಿದ ವಿಮಾ ವಿವರಗಳನ್ನು ಕಡ್ಡಾಯವಾಗಿ ನೋಂದಾಯಿಸಬೇಕು ಎಂದು ಎಲ್ಲ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಮತ್ತು ಪಿಡಿಓಗಳಿಗೆ ತಿಳಿಸಿದರು.
ಅಲ್ಲದೆ ಆನ್‌ಲೈನ್ ಮತ್ತು ಮೊಬೈಲ್ ಆಪ್ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಜೆ.ಎಂ. ಅನ್ನದಾನಯ್ಯ ಸ್ವಾಮಿ ಮಾತನಾಡಿ, ಬಹಳಷ್ಟು ಸಾಮಾನ್ಯ ಮತ್ತು ಕೆಡಿಪಿ ಸಭೆಗಳಲ್ಲಿ ಸದಸ್ಯರು ದೂರುಗಳನ್ನು ನೀಡುತ್ತಿದ್ದಾರೆ. ರೈತರಿಗೆ ವಿಮಾ ಸೌಲಭ್ಯ, ಇಲಾಖೆಯ ಇತರ ಸೌಲಭ್ಯಗಳು ಸಿಗುತ್ತಿಲ್ಲ, ಕಷ್ಟಕ್ಕೆ ಗುರಿಯಾಗಿದ್ದಾರೆ ಎಂದು ದೂರು ನೀಡುತ್ತಾರೆ. ಅದರೆ ಈಗ ನಾವು ಸರಿಯಾದ ರೀತಿಯಲ್ಲಿ ಬೆಳೆ ಕಟಾವು ಸಮೀಕ್ಷೆ ಮಾಡುವುದರಿಂದ ರೈತರು ಬೆಳೆದ ಬೆಳೆ, ಅದರ ಮೊತ್ತವನ್ನು ಆಧರಿಸಿಕೊಂಡು ವಿಮೆಯನ್ನು ಮಂಜೂರುಮಾಡಿಸಲು ಅನುಕೂಲವಾಗುತ್ತದೆ, ಅದ್ದರಿಂದ ಕಡ್ಡಾಯವಾಗಿ ನೋಂದಾಯಿಸಿ ಸಮೀಕ್ಷೆ ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಕುಬೇರ್ ಅಚಾರ್ ಅವರು ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ಬರುವ ತೋಟಗಾರಿಕೆ ಬೆಳೆಗಳಾದ ಮಾವು, ತೆಂಗು, ಅಲ್ಲದೆ ಬಾಳೆ, ದಾಳಿಂಬೆ, ಹೂವಿನ ಬೆಳೆಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ತಹಶೀಲ್ದಾರ್ ಸಿದ್ದೇಶ್, ತಾಲೂಕಿನ ನಾಲ್ಕು ಇಲಾಖೆಯ ಅಕಾರಿಗಳು, ಪಿ.ಡಿ.ಓಗಳು, ವಿಲೇಜ್ ಅಕೌಟೆಂಟ್ ಇತರ ಸಿಬ್ಬಂದಿ ವರ್ಗದವರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರನ್ನು ತಕ್ಷಣ ಬಂಧಿಸಿ; ಕಾಂಗ್ರೆಸ್ ಆಗ್ರಹ
Ullal: ನ್ಯೂಪಡ್ಪುವಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಉದ್ಘಾಟನೆ
Hosanagara: ನಗರದ ಹೋಬಳಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಬಿಜೆಪಿ ಪ್ರತಿಭಟನೆ
Mangaluru: ಪಿಲಿಕುಳದಲ್ಲಿ ಚಿಟ್ಟೆಪಾರ್ಕ್; ಪ್ರವಾಸಿಗರಿಗೆ ಹೊಸ ಆಕರ್ಷಣೆ
Mangaluru: ಕಾರು ಢಿಕ್ಕಿಯಾಗಿ ಮಹಿಳೆ ಸಾವು
MUST WATCH
ಹೊಸ ಸೇರ್ಪಡೆ
Sagara: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರನ್ನು ತಕ್ಷಣ ಬಂಧಿಸಿ; ಕಾಂಗ್ರೆಸ್ ಆಗ್ರಹ
Ullal: ನ್ಯೂಪಡ್ಪುವಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಉದ್ಘಾಟನೆ
Hosanagara: ನಗರದ ಹೋಬಳಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಬಿಜೆಪಿ ಪ್ರತಿಭಟನೆ
Mangaluru: ಪಿಲಿಕುಳದಲ್ಲಿ ಚಿಟ್ಟೆಪಾರ್ಕ್; ಪ್ರವಾಸಿಗರಿಗೆ ಹೊಸ ಆಕರ್ಷಣೆ
Mangaluru: ಕಾರು ಢಿಕ್ಕಿಯಾಗಿ ಮಹಿಳೆ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.