ಕೊತ್ತಲ ಬಸವೇಶ್ವರ ಜಾತ್ರೆ: ಅಗ್ನಿ ಹಾಯ್ದ ಭಕ್ತರು
Team Udayavani, May 2, 2019, 11:19 AM IST
ಸೇಡಂ: ಅಗ್ನಿ ಪ್ರವೇಶಕ್ಕೂ ಮುನ್ನ ನೂರಾರು ಅಡಿ ಉದ್ದದ ದಾರವನ್ನು ನಾಲಿಗೆಗೆ ಚುಚ್ಚಿಕೊಂಡು ಹೊರ ತೆಗೆದ ಪುರವಂತರ ಸೇವೆ ನೆರೆದವರ ಗಮನ ಸೆಳೆಯಿತು.
ಸೇಡಂ: ಬಿಸಿಲು ನಾಡಿನ ಆರಾಧ್ಯ ದೈವ, ಹೈದ್ರಾಬಾದ ಕರ್ನಾಟಕ ಭಾಗದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಪಟ್ಟಣದ ಐತಿಹಾಸಿಕ ಶ್ರೀ ಕೊತ್ತಲ ಬಸವೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
ಸಂಜೆ 6:05ಕ್ಕೆ ನಡೆದ ಶ್ರೀ ಕೊತ್ತಲ ಬಸವೇಶ್ವರ ರಥೋತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಪಾಲ್ಗೊಂಡು, ರಥಕ್ಕೆ ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು.
ಹಳೆ ಗಂಜ್ ರಸ್ತೆಯಲ್ಲಿನ ರಥ ಬೀದಿಯಲ್ಲಿ ಗಂಟೆಗೂ ಹೆಚ್ಚು ಕಾಲ ರಥ ಸಾಗಿತು. ರಥೋತ್ಸವ ಕಣ್ತುಂಬಿಕೊಳ್ಳಲು ರಸ್ತೆ ಅಕ್ಕಪಕ್ಕದ ಕಟ್ಟಡಗಳ ಮೇಲೆ ಸಾರ್ವಜನಿಕರು ಜಮಾಯಿಸಿದ್ದರು.
ಇದಕ್ಕೂ ಮುನ್ನ ಪಟ್ಟಣದಲ್ಲಿ ಅಹೋರಾತ್ರಿ ಸಂಚರಿಸಿದ ಉಚ್ಛಾಯಿ ಮೆರವಣಿಗೆ ಬೆಳಗ್ಗೆ 8:40ಕ್ಕೆ ಹಳೆ ಗಂಜ್ ಏರಿಯಾದಲ್ಲಿನ ಅಗ್ಗಿ ಕಟ್ಟೆಗೆ ತಲುಪಿತು. ಸಾವಿರಾರು ಭಕ್ತರು ಶ್ರೀ ಕೊತ್ತಲ ಬಸವೇಶ್ವರ ಮಹಾರಾಜ ಕೀ ಜೈ, ಓಂ ಪರಾಗ್, ಜೈ ಜೈ ಪರಾಗ್ ಎನ್ನುವ ಜಯಘೋಷ ಮೊಳಗಿಸಿದರು.
ಶ್ರೀ ಕೊತ್ತಲ ಬಸವೇಶ್ವರ ಸಂಸ್ಥಾನದ ಸದಾಶಿವ ಸ್ವಾಮೀಜಿ ಹಾಗೂ ಸಾವಿರಾರು ಭಕ್ತರು ಇದೆ ವೇಳೆ ಅಗ್ಗಿ ಪ್ರವೇಶಿಸಿ ಭಕ್ತಿ ಸಮರ್ಪಿಸಿದರು.
ಪರಂಪರಾಗತವಾಗಿ ನಡೆದು ಬಂದ ಪುರವಂತರ ಸೇವೆ ನೆರೆದವರ ಗಮನ ಸೆಳೆಯಿತು. ನೂರಾರು ಅಡಿ ಉದ್ದದ ದಾರವನ್ನು ನಾಲಿಗೆಗೆ ಚುಚ್ಚಿ ಕೊಂಡು ಹೊರತೆಗೆಯುವ ದೃಶ್ಯ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು.
ಭಕ್ತರು ಅಗ್ನಿ ಕಟ್ಟೆಗೆ ಪೂಜೆ ಸಲ್ಲಿಸಿದರು. ಅಗ್ನಿಯಲ್ಲಿನ ಭಸ್ಮ ಹಣೆಗೆ ಹಚ್ಚಿಕೊಂಡರು. ಅಗ್ನಿ ಪ್ರವೇಶ ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಮನೆಗಳ ಮೇಲೆ ಹತ್ತಿ ಜನ ಕೂತಿದ್ದರು.
ಸಿಪಿಐ ಮಹ್ಮದ ಫಸಿಯೋದ್ದಿನ್, ಪಿಎಸ್‌ಐ ಸುನೀಲ ಮೂಲಿಮನಿ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಪುರಾತನ ಕಾಲದಿಂದಲೂ ನಡೆದುಕೊಂಡು ಬರುತ್ತಿರುವಂತೆ (ಭೋವಿ) ವಡ್ಡರ್ ಸಮಾಜದ ವತಿಯಂದ ತೇರು ಎಳೆಯುವ ಸೇವೆ, ತಡಕಲ್ ಪರಿವಾರದ ಕಳಸಾರೋಹಣ ಸೇವೆ, ಉದ್ಯಮಿ ಶ್ರೀನಿವಾಸ ಕಾಸೋಜು ಅವರಿಂದ ರಥ ಅಲಂಕಾರ ಸೇವೆಗಳು ನಡೆದವು.
ಶಿವಶಂಕರೇಶ್ವರ ಮಠದ ಶಿವಶಂಕರ ಸ್ವಾಮೀಜಿ, ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ, ರಾಚೋಟಯ್ಯ ಸ್ವಾಮೀಜಿ, ಜಗಶಾಂತಿ ಧಾಮದ ಮಾತಾಜಿ ಹಾಗೂ ಇನ್ನಿತರ ಶ್ರೀಗಳು ಮತ್ತಿತರರು ಇದ್ದರು.
ಗಣ್ಯರು ಭಾಗಿ: ರಾಜ್ಯಸಭಾ ಮಾಜಿ ಸದಸ್ಯ ಡಾ| ಬಸವರಾಜ ಪಾಟೀಲ ಸೇಡಂ, ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಹಾಗೂ ಜಿಲ್ಲೆ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.