ಬಿಸಿಲಿನ ತಾಪಕ್ಕೆ ತತ್ತರಿಸಿದ ಜನ-ಜಾನುವಾರು
ಮೇವಿಗಾಗಿ ಪರದಾಟ
Team Udayavani, May 18, 2019, 4:33 PM IST
ಶಹಾಪುರ: ಸಗರ ಗ್ರಾಮ ಪ್ರದೇಶದಲ್ಲಿ ಮೇವಿಗೆ ಅಲೆಯುತ್ತಿರುವ ಜಾನುವಾರುಗಳು.
ಶಹಾಪುರ: ಬೇಸಿಗೆ ದಿನಗಳು ಇನ್ನೂ ಹದಿನೈದು ದಿನ ಇವೆ. ಆದರೆ ಬಿಸಿಲಿನ ತಾಪಕ್ಕೆ ಜನ ಆತಂಕಗೊಂಡು ರಸ್ತೆಗಿಳಿಯದೆ ಮನೆ ಸೇರಿರುವುದು, ಗಿಡ ಮರಗಳ ನೆರಳ ಆಸರೆ ಪಡೆದಿರುವುದು ಕಂಡು ಬರುತ್ತಿದೆ.
ನಗರದ ಹಲವು ಹವಾ ನಿಯಂತ್ರಿತ ಹೋಟೆಲ್ಗಳಲ್ಲಿ ಜನ ತಂಪು ಪಾನೀಯ ಕುಡಿದು ಕಾಲ ಕಳೆಯುತ್ತಿದ್ದಾರೆ. ಹಲವಡೆ ಎಳೆ ನೀರು, ಐಸ್ ಕ್ರೀಮ್ ವ್ಯಾಪಾರ ಜೋರಾಗಿಯೇ ನಡೆಯುತ್ತಿದೆ. ದಿನ ಕಳೆದಂತೆ ಬಿಸಿಲಿನ ಕಾವು ಏರುತ್ತಿದೆ. ಬಿಸಲಿನ ಝಳಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಸದಾ ಜನ ಜಂಗುಳಿಯಿಂದ ಕೂಡಿರುತ್ತಿದ್ದ ನಗರ ಬಿಸಿಲ ತಾಪಕ್ಕೆ ಹೆದರಿದ ಜನ ಹೊರ ಬರುತ್ತಿಲ್ಲ.
ಜಾನುವಾರುಗಳ ಪರದಾಟ: ಮೇವು ನೀರು ಇಲ್ಲದೆ ಜಾನುವಾರುಗಳು ಪರದಾಡುವಂತಾಗಿದೆ. ಅಡವಿಯಲ್ಲಿ ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ಬಾಯಾರಿಕೆ ನೀಗಿಸಿಕೊಳ್ಳಲು ನೀರು ದೊರೆಯುತ್ತಿಲ್ಲ. ಈ ನಡುವೆ ಬಿಸಿಲನ ತಾಪ ಬೇರೆ, ಹೀಗಾಗಿ ಜಾನುವಾರುಗಳು ತತ್ತರಿಸಿ ಹೋಗಿವೆ. ಪಶು ಇಲಾಖೆಯವರು ಮೇವು ಆಹಾರಕ್ಕಾಗಿ ನಗರದಲ್ಲಿ ಎಲ್ಲೆಂದರಲ್ಲಿ ಅಲೆಯುವ ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕಿದೆ.
ನೆರಳಿನ ವ್ಯವಸ್ಥೆ ಮಾಡಲಿ
ನಗರದ ಪ್ರಮುಖ ರಸ್ತೆ ಹಾಗೂ ತರಕಾರಿ ಮಾರುಕಟ್ಟೆ ಸೇರಿದಂತೆ ಪ್ರಮುಖ ವೃತ್ತಗಳ ಬದಿಯಲ್ಲಿ ಹಸಿರು ಹೊದಿಕೆಯಿಂದ ಸಮರ್ಪಕವಾಗಿ ಟೆಂಟ್ ಹಾಕುವ ಮೂಲಕ ಸಾರ್ವಜನಿಕರಿಗೆ ಬಿಸಿಲಿನಿಂದ ವಿಶ್ರಾಂತಿ ಪಡೆಯಲು ವಿಜಯಪುರ ಮಾದರಿಯಲ್ಲಿ ನಗರದಲ್ಲಿಯೂ ಅಳವಡಿಸಬೇಕು ಎಂದು ಪೌರಾಯುಕ್ತರಲ್ಲಿ ಬಿಜೆಪಿ ಮುಖಂಡ ಗುರು ಕಾಮಾ ಮನವಿ ಮಾಡಿದ್ದಾರೆ. ಕಲಬುರಗಿ, ಯಾದಗಿರಿ ಜಿಲ್ಲೆಯ ಶಹಾಪುರ ಮತ್ತು ಸುರಪುರ ನಗರಗಳಲ್ಲಿ ಜನರು ಒಂದಿಷ್ಟು ವಿಶ್ರಾಂತಿ ಪಡೆಯಲು ರಸ್ತೆ ಬದಿ ನೆರಳಿನ ಪರದೆ ಅಳವಡಿಸುವ ಕಾರ್ಯ ಮಾಡುವ ಮೂಲಕ ಜನರಿಗೆ ಅನುಕೂಲ ಮಾಡಬೇಕು. ಕರ್ನಾಟಕದಲ್ಲಿಯೇ ಬಿಸಿಲು ನಾಡು ಎಂದು ಪ್ರಸಿದ್ಧ ಪಡೆದ ಹೈಕ ಪ್ರದೇಶದಲ್ಲಿ ಪ್ರಸ್ತುತ 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇದ್ದು, ವಿಜಯಪುರ ಮಾದರಿಯಲ್ಲಿ ನೆರಳಿನ ವ್ಯವಸ್ಥೆ ಮಾಡುವ ಅಗತ್ಯವಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು
Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್. ಸಂತೋಷ್ ಹೆಗ್ಡೆ
Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್
Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.