ಮಂಡಗಳ್ಳಿ ರುದ್ರಭೂಮಿ ಅತಿಕ್ರಮಣ
ಶವ ಸಂಸ್ಕಾರಕ್ಕೆ ಅವಕಾಶ ಕಲ್ಪಿಸುತ್ತಿಲ್ಲ: ಮುಖಂಡರ ಆರೋಪ
Team Udayavani, Jun 7, 2019, 11:18 AM IST
ಶಹಾಪುರ: ಮಂಡಗಳ್ಳಿ ಸ್ಮಶಾನ ಭೂಮಿಯಲ್ಲಿ ಬಣಿಮೆ ಒಟ್ಟಿರುವುದು.
ಶಹಾಪುರ: ಬಹು ವರ್ಷಗಳ ಹಿಂದೆಯೇ ದಲಿತರ ಶವ ಸಂಸ್ಕಾರಕ್ಕಾಗಿ ನೀಡಿದ್ದ ಸ್ಮಶಾನ ಭೂಮಿಯೊಂದನ್ನು ಗ್ರಾಮದ ಕೆಲವರು ಅತಿಕ್ರಮಣ ಮಾಡಿದ್ದು, ಸ್ಮಶಾನ ಭೂಮಿಯಲ್ಲಿ ಶವ ಸಂಸ್ಕಾರ ಅವಕಾಶ ಕಲ್ಪಿಸದೆ ಸಮೀಪದ ಹಳ್ಳದ ದಂಡೆಯಲ್ಲಿ ಮಾಡಿ ಎಂದು ದಾರಿ ತಪ್ಪಿಸುವ ಮೂಲಕ ಸ್ಮಶಾನ ಭೂಮಿ ಕಬಳಿಕೆಗೆ ಮುಂದಾಗಿದ್ದಾರೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.
ತಾಲೂಕಿನ ಮಂಡಗಳ್ಳಿ ಗ್ರಾಮದಲ್ಲಿರುವ ದಲಿತರ ಸ್ಮಶಾನ ಭೂಮಿಯನ್ನು ಕೆಲ ಪಟ್ಟಭದ್ರ ಹಿತಾಸಕ್ತಿ ಜನರು ಸ್ಮಶಾನ ಭೂಮಿಯಲ್ಲಿ ತಮ್ಮ ಬಣಮೆಗಳನ್ನು ಒಟ್ಟಿದ್ದು, ಅಲ್ಲದೇ ಪಕ್ಕದ ತಮ್ಮ ಜಮೀನಿನಲ್ಲಿ ನಿವೇಶನಗಳನ್ನು ಮಾಡಿ ಮಾರಾಟ ಮಾಡುತ್ತಿರುವ ಹಿನ್ನೆಲೆ ಸ್ಮಶಾನ ಭೂಮಿಯಲ್ಲಿ ಶವ ಸಂಸ್ಕಾರಕ್ಕೆ ಆಸ್ಪದ ನೀಡುತ್ತಿಲ್ಲವೆಂದು ಗ್ರಾಮದ ದಲಿತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಅಲ್ಲದೆ ಈ ಕುರಿತು ತಹಶೀಲ್ದಾರ್ ಗಮನಕ್ಕೆ ಸಾಕಷ್ಟು ಬಾರಿ ತಂದರೂ ಇಲ್ಲಿವರೆಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಸರ್ಕಾರ ದಲಿತರಿಗಾಗಿ ಶವ ಸಂಸ್ಕಾರ ಮಾಡಲು ಇಲ್ಲಿನ ಸರ್ವೇ ನಂ. 24ರಲ್ಲಿ 17 ಗುಂಟೆ ಜಮೀನನ್ನು ಬಹು ವರ್ಷಗಳ ಹಿಂದೆಯೇ ನೀಡಿದೆ. ಈಗಾಗಲೇ ಸ್ಮಶಾನ ಭೂಮಿ ಅತಿಕ್ರಮಿಸಿದ್ದು, ಅಲ್ಲದೆ ಮುಂದಿನ ಸ್ಥಳಕ್ಕೂ ಹೋಗಲು ರಸ್ತೆ ನೀಡದೆ ಶವ ಊಳಲು ಅಡ್ಡಗಾಲ ಹಾಕುತ್ತಿದ್ದಾರೆ. ಸಮೀಪದ ಹಳ್ಳದ ದಂಡೆಯಲ್ಲಿ ಸಂಸ್ಕಾರ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಗ್ರಾಮದ ದಲಿತರು ತಿಳಿಸಿದ್ದಾರೆ.
ಬಣಮೆ, ತಿಪ್ಪೆಗುಂಡಿ ಹಾಕಿಕೊಂಡು ಶವ ಸಂಸ್ಕಾರಕ್ಕೆ ಜಾಗವಿಲ್ಲದಂತೆ ಮಾಡಿದ್ದು, ಕೂಡಲೇ ತಾಲೂಕು ದಂಡಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಅತಿಕ್ರಮಣಗೊಂಡಿರುವ ದಲಿತರ ಸ್ಮಶಾನ ಭೂಮಿಯನ್ನು ಮರಳಿ ವಶಕ್ಕೆ ಒಪ್ಪಿಸಬೇಕೆಂದು ಮನವಿ ಮಾಡಿದ್ದಾರೆ.
ಬಹು ವರ್ಷಗಳ ಹಿಂದೆಯೇ ದಲಿತರ ಶವ ಸಂಸ್ಕಾರಕ್ಕಾಗಿ ನೀಡಿದ್ದ ಸ್ಮಶಾನ ಭೂಮಿಯೊಂದನ್ನು ಗ್ರಾಮದ ಕೆಲವರು ಅತಿಕ್ರಮಣ ಮಾಡಿದ್ದು, ಸ್ಮಶಾನ ಭೂಮಿಯಲ್ಲಿ ಶವ ಸಂಸ್ಕಾರ ಅವಕಾಶ ಕಲ್ಪಿಸದೆ ಸಮೀಪದ ಹಳ್ಳದ ದಂಡೆಯಲ್ಲಿ ಮಾಡಿ ಎಂದು ದಾರಿ ತಪ್ಪಿಸುವ ಮೂಲಕ ಸ್ಮಶಾನ ಭೂಮಿ ಕಬಳಿಕೆಗೆ ಮುಂದಾಗಿದ್ದಾರೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.
ತಾಲೂಕಿನ ಮಂಡಗಳ್ಳಿ ಗ್ರಾಮದಲ್ಲಿರುವ ದಲಿತರ ಸ್ಮಶಾನ ಭೂಮಿಯನ್ನು ಕೆಲ ಪಟ್ಟಭದ್ರ ಹಿತಾಸಕ್ತಿ ಜನರು ಸ್ಮಶಾನ ಭೂಮಿಯಲ್ಲಿ ತಮ್ಮ ಬಣಮೆಗಳನ್ನು ಒಟ್ಟಿದ್ದು, ಅಲ್ಲದೇ ಪಕ್ಕದ ತಮ್ಮ ಜಮೀನಿನಲ್ಲಿ ನಿವೇಶನಗಳನ್ನು ಮಾಡಿ ಮಾರಾಟ ಮಾಡುತ್ತಿರುವ ಹಿನ್ನೆಲೆ ಸ್ಮಶಾನ ಭೂಮಿಯಲ್ಲಿ ಶವ ಸಂಸ್ಕಾರಕ್ಕೆ ಆಸ್ಪದ ನೀಡುತ್ತಿಲ್ಲವೆಂದು ಗ್ರಾಮದ ದಲಿತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಅಲ್ಲದೆ ಈ ಕುರಿತು ತಹಶೀಲ್ದಾರ್ ಗಮನಕ್ಕೆ ಸಾಕಷ್ಟು ಬಾರಿ ತಂದರೂ ಇಲ್ಲಿವರೆಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಸರ್ಕಾರ ದಲಿತರಿಗಾಗಿ ಶವ ಸಂಸ್ಕಾರ ಮಾಡಲು ಇಲ್ಲಿನ ಸರ್ವೇ ನಂ. 24ರಲ್ಲಿ 17 ಗುಂಟೆ ಜಮೀನನ್ನು ಬಹು ವರ್ಷಗಳ ಹಿಂದೆಯೇ ನೀಡಿದೆ. ಈಗಾಗಲೇ ಸ್ಮಶಾನ ಭೂಮಿ ಅತಿಕ್ರಮಿಸಿದ್ದು, ಅಲ್ಲದೆ ಮುಂದಿನ ಸ್ಥಳಕ್ಕೂ ಹೋಗಲು ರಸ್ತೆ ನೀಡದೆ ಶವ ಊಳಲು ಅಡ್ಡಗಾಲ ಹಾಕುತ್ತಿದ್ದಾರೆ. ಸಮೀಪದ ಹಳ್ಳದ ದಂಡೆಯಲ್ಲಿ ಸಂಸ್ಕಾರ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಗ್ರಾಮದ ದಲಿತರು ತಿಳಿಸಿದ್ದಾರೆ.
ಬಣಮೆ, ತಿಪ್ಪೆಗುಂಡಿ ಹಾಕಿಕೊಂಡು ಶವ ಸಂಸ್ಕಾರಕ್ಕೆ ಜಾಗವಿಲ್ಲದಂತೆ ಮಾಡಿದ್ದು, ಕೂಡಲೇ ತಾಲೂಕು ದಂಡಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಅತಿಕ್ರಮಣಗೊಂಡಿರುವ ದಲಿತರ ಸ್ಮಶಾನ ಭೂಮಿಯನ್ನು ಮರಳಿ ವಶಕ್ಕೆ ಒಪ್ಪಿಸಬೇಕೆಂದು ಮನವಿ ಮಾಡಿದ್ದಾರೆ.
ಕಳೆದ ಮೂರ್‍ನಾಲ್ಕು ಬಾರಿ ತಹಶೀಲ್ದಾರ್‌ಗೆ ದಲಿತರ ಸ್ಮಶಾನ ಭೂಮಿ ಅತಿಕ್ರಮಣ ಕುರಿತು ಅರ್ಜಿ ಸಲ್ಲಿಸಿದ್ದೇವೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ ಸ್ಮಶಾನ ಜಮೀನು ಸರ್ವೇ ನಂ. 24ರಲ್ಲಿ ಇರುವ 17 ಗುಂಟೆ ಅಳತೆ ಮಾಡಿಸಿ ಕೊಡಲಿ, ಆಕ್ರಮಿತ ಬಣಮೆ, ತಿಪ್ಪೆಗುಂಡೆಗಳನ್ನು ತೆರವುಗೊಳಿಸಲಿ. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ತಹಶೀಲ್ದಾರ್ ಕಚೇರಿ ಎದುರು ಧರಣಿ ಸತ್ಯಾಗ್ರಹ ಹೋರಾಟ ಅನಿವಾರ್ಯ.
•ಹಣಮಂತ ಬೀರನೂರ,
ದಲಿತ ಮುಖಂಡ
ಮಂಡಗಳ್ಳಿ ಗ್ರಾಮದಲ್ಲಿ ದಲಿತರಿಗೆ ನೀಡಿದ ಸ್ಮಶಾನ ಭೂಮಿ ಅಷ್ಟೇ ಅಲ್ಲದೆ ಇನ್ನೂ ಕೆಲವು ಸರ್ಕಾರಿ ಜಮೀನುಗಳನ್ನು ಅಕ್ರಮವಾಗಿ ಸ್ವಾಧೀನ ಪಡಿಸಿಕೊಂಡು ಉಳುಮೆ ಮಾಡುತ್ತಿದ್ದಾರೆ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಸಂಪೂರ್ಣ ಜಮೀನುಗಳ ಸರ್ವೇ ಮಾಡಿಸಿ ಮೂಲಕ ಭೂ ಕಬಳಿಕೆಯನ್ನು ಸರ್ಕಾರ ಸ್ವಾಧೀನತೆಗೆ ಪಡೆಯಬೇಕು.
• ಸೋಪಣ್ಣ ಸಗರ,
ಸ್ಥಳೀಯ ನಿವಾಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.