ನಡಿಹಾಳ ಕೆರೆಗೆ ಕಾಲುವೆ ನೀರು
ನೀರು ಜಾನುವಾರುಗಳಿಗೆ ಕುಡಿಯಲು, ಬಳಸಲು ಶಾಸಕ ದರ್ಶನಾಪುರ ಸಲಹೆ
Team Udayavani, May 2, 2019, 3:50 PM IST
ಶಹಾಪುರ: ನಡಿಹಾಳ ಗ್ರಾಮದ ಕೆರೆಗೆ ಕಾಲುವೆ ನೀರು ಹರಿಯುತ್ತಿರುವುದನ್ನು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಪರಿಶೀಲಿಸಿದರು.
ಶಹಾಪುರ: ಆಲಮಟ್ಟಿ ಜಲಾಶಯದಿಂದ ಬೇಸಿಗೆ ಸಮಯದಲ್ಲಿ ಜನ ಜಾನುವಾರುಗಳಿಗಾಗಿ ನೀರನ್ನು ಹರಿಸಲು ನೀರಾವರಿ ಸಲಹಾ ಸಮಿತಿಯಲ್ಲಿ ನಿರ್ಧರಿಸಲಾಗಿತ್ತು. ಅದರಂತೆ ಕಳೆದ ಏ. 25ರಿಂದ ಜೆಬಿಸಿ, ಎಸ್‌ಬಿಸಿ ಮತ್ತು ಎಂಬಿಸಿ ಕಾಲುವೆಗಳಿಗೆ ನೀರು ಹರಿ ಬಿಡಲಾಗಿದ್ದು, ಈ ನೀರನ್ನು ಕಾಲುವೆ ಮೂಲಕ ಕೆರೆಗಳನ್ನು ತುಂಬುವ ಕಾರ್ಯ ಮಾಡಲಾಗುತ್ತಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ತಾಲೂಕಿನ ನಡಿಹಾಳ ಗ್ರಾಮದ ಕೆರೆಗೆ ಕಾಲುವೆ ಮೂಲಕ ನೀರನ್ನು ತುಂಬಲು ಕೈಗೊಂಡ 1 ಕೋಟಿ 42 ಲಕ್ಷ ರೂ. ವೆಚ್ಚದ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು.
ನಡಿಹಾಳ ಕೆರೆ ಕಾಲುವೆಗೂ ಸಾಕಷ್ಟು ದೂರ ಇರುವುದರಿಂದ ಪೈಪ್ ಲೈನ್ ಇತರೆ ಕಾಮಗಾರಿಗೆ ವೆಚ್ಚ ಮಾಡಲಾಗಿದೆ. ಇದರಿಂದ ಜನ ಜಾನುವಾರುಗಳಿಗೆ ನೀರಿನ ಅನುಕೂಲವಾಗಲಿದೆ. ಕೆರೆಗೆ ತುಂಬಿದ ನೀರಿನಿಂದ ಯಾರೊಬ್ಬರು ದುರ್ಬಳಕೆ ಮಾಡಿಕೊಳ್ಳಬಾರದು. ಜಾನುವಾರುಗಳಿಗೆ ಕುಡಿಯಲು ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ನಡಿಹಾಳ, ಮುಡಬೂಳ, ಗೋಗಿ, ಹೊಸ್ಕೇರಾ ಸೇರಿದಂತೆ ಕೆಲವು ಕೆರೆಗಳಿಗೆ ಮತ್ತು ಚೆಕ್ ಡ್ಯಾಂಗಳಲ್ಲಿ ನೀರು ಸಂಗ್ರಹಣೆ ಮಾಡಲಾಗುತ್ತಿದೆ ಎಂದರು. ಸುತ್ತಮುತ್ತಲಿನ ಜನ ಜಾನುವಾರುಗಳಿಗೆ ನೀರಿನ ಸೌಕರ್ಯಗಳಿಂದ ಅಲ್ಪ ಪ್ರಮಾಣದಲ್ಲಿ ನೀರಿನ ದಾಹ ಹಿಂಗಿಸಿಕೊಳ್ಳಲು ಅನೂಕೂಲ ಆಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕೆಬಿಜೆಎನ್ನೆಲ್ ಮುಖ್ಯ ಅಭಿಯಂತರ ಎಚ್. ಕೃಷ್ಣೇಗೌಡ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕಿಶನ್ ರಾಠೊಡ್ ಮುಖಂಡರಾದ ಶಿವಮಾಂತ ಚಂದಾಪುರ, ಚಂದಪ್ಪಗೌಡ ನಡಿಹಾಳ, ಮಹಾಂತಗೌಡ ಚಾಮನಾಳ, ದೇವಣಗೌಡ, ರಾಜು ರಾಠೊಡ್, ಶರಣಗೌಡ ಪಾಟೀಲ, ನಿಂಗಣಗೌಡ ಹದನೂರ ಸೇರಿದಂತೆ ಕಿರಿಯ ಅಭಿಯಂತರರು ನಡಿಹಾಳ ಮತ್ತು ಚಾಮನಾಳ ಗ್ರಾಮದ ಮುಖಂಡರು ಇದ್ದರು.
ತಾಲೂಕಿನ ಕೆರೆಗಳಿಗೆ ಹೂಳೆತ್ತುವ ಕಾಮಗಾರಿಗೆ 7 ಕೋಟಿ ರೂ. ಮಂಜೂರಿಯಾಗಿದ್ದು, ಇನ್ನೂ ಹೆಚ್ಚಿನ ಬೇಡಿಕೆ ಇಟ್ಟಿದ್ದು, ಅದಕ್ಕನುಗುಣವಾಗಿ ಹೆಚ್ಚುವರಿ ಅನುದಾನ ಒದಗಿಸಲಾಗುತ್ತಿದೆ. ಕೆರೆಗಳಿಗೆ ನೀರು ತುಂಬಿಸುವುದಕ್ಕಾಗಿ ನಡಿಹಾಳ ಕೆರೆಗೆ ಒಟ್ಟು 35 ಎಚ್.ಪಿ. 2 ಮೋಟಾರು ಯಂತ್ರಗಳನ್ನು ಅಳವಡಿಸಲಾಗಿದೆ. ನಿತ್ಯ 24 ಗಂಟೆಯೂ ವಿದ್ಯುತ್ ಸಂಪರ್ಕದೊಂದಿಗೆ ನೀರು ತುಂಬಿಸುವ ಕಾರ್ಯ ನಡೆಯುತ್ತದೆ. •ಶರಣಬಸಪ್ಪಗೌಡ ದರ್ಶನಾಪುರ
ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.