ಶೇ. 69 ಮಳೆ ಕೊರತೆ ನಡುವೆಯೂ ಬಿತ್ತನೆಗೆ ಸಿದ್ಧತೆ
Team Udayavani, Jun 10, 2019, 12:27 PM IST
ಶಹಾಪುರ: ಸಗರ ಗ್ರಾಮದಲ್ಲಿ ಬಿತ್ತನೆಗಾಗಿ ರೈತ ಹೊಲ ಹದ ಮಾಡುತ್ತಿರುವುದು.
ಮಲ್ಲಿಕಾರ್ಜುನ ಮುದ್ನೂರ
ಶಹಾಪುರ: ಕಳೆದ ಎರಡು ದಿನದಿಂದ ತಾಲೂಕಿನ ಹಲವಡೆ ಮುಂಗಾರು ಮಳೆ ಸುರಿದ ಹಿನ್ನೆಲೆಯಲ್ಲಿ ಭೂಮಿ ತಂಪಾಗಿದೆ. ಅಲ್ಲದೆ ರೈತರ ಮೊಗದಲ್ಲಿ ಭರವಸೆ ಮೂಡಿದೆ.
ಕಳೆದ ವಾರವಷ್ಟೆ 44 ಡಿಗ್ರಿಗಿಂತಲೂ ಮಿಗಿಲು ತಾಪಮಾನ ಕಂಡಿದ್ದ ಜನರಿಗೆ ಮೃಗಶಿರ ಮಳೆ ವಾತಾವರಣವನ್ನೇ ಬದಲಾಯಿಸಿದೆ. ಬರದ ಛಾಯೆಯಿಂದ ನಲುಗಿದ್ದ ರೈತಾಪಿ ಜನರಿಗೆ ಕೃಷಿ ಕಾಯಕದಲ್ಲಿ ತೊಡಗಿಸಿಕೊಳ್ಳಲು ಒಂದಿಷ್ಟು ಭರವಸೆ ಮೂಡಿಸಿದೆ.
ಬರ ಹಾಗೂ ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಜನರಿಗೆ ಮುಂಗಾರು ಮಳೆ ಸುರಿಯುವ ಮೂಲಕ ಪಶು ಪಕ್ಷಿಗಳಿಗೆ ಕುಡಿಯಲು ನೀರು ಆದರೂ ದೊರೆತಂತಾಗಿದೆ. ಅಲ್ಲದೆ ಕಷ್ಟದ ದಿನಗಳು ನೀರಿನ ಹಾಹಾಕಾರ ದೂರವಾಯಿತು. ಇನ್ನೇನು ಕುಡಿಯಲಾದರೂ ನೀರು ದೊರೆಯಲಿದೆ ಎಂಬ ಆಶಾಭಾವನೆ ಮೂಡಿದೆ.
ಶುಕ್ರವಾರ ರಾತ್ರಿ, ಸಗರ, ದೋರನಹಳ್ಳಿ, ಶಿರವಾಳ ಮತ್ತು ವಡಿಗೇರಾ, ಹಯ್ನಾಳ, ಗೋಗಿ ಭಾಗದಲ್ಲಿ ಮಳೆ ಚೆನ್ನಾಗಿಯಾಗಿದೆ. ರೈತರು ಈ ಭಾಗದಲ್ಲಿ ತಮ್ಮ ಭೂಮಿ ಹದ ಮಾಡಿಕೊಂಡು ಬಿತ್ತನೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ಜೂನ್ 8ರವರಗೆ ಮಳೆ ಪ್ರಮಾಣ: ವಡಿಗೇರಾ 45.8 ಮಿಮೀ ಮಳೆಯಾಗಿದೆ. ಶಹಾಪುರ 20.08 ಮಿಮೀ, ಭೀಮರಾಯನಗುಡಿ 38.2 ಮಿಮೀ, ಗೋಗಿ 79 ಮಿಮೀ, ದೋರನಹಳ್ಳಿ 16 ಮಿಮೀ, ಹಯ್ನಾಳ 23.2 ಮಿಮೀ, ಹತ್ತಿಗೂಡೂರು 41 ಮಿಮೀ ಮಳೆಯಾಗಿದೆ. ಒಟ್ಟು ತಾಲೂಕಿನಾದ್ಯಂತ ಶೇ. 37.7ರಷ್ಟು ಮಳೆಯಾಗಿದೆ. ಶೇ.69.3ರಷ್ಟು ಮಳೆ ಕೊರತೆ ಇದೆ ಎಂದು ಕೃಷಿ ಇಲಾಖೆ ಅಧಿಕಾರಿ ದಾನಪ್ಪ ಕತ್ನಾಳ ತಿಳಿಸಿದ್ದಾರೆ.
ಭೂಮಿ ಹದ ಮಾಡಿಕೊಳ್ಳವಷ್ಟು ಮಳೆ ಬಂದಿದೆ. ಮಳೆ ಅಭಾವದಿಂದ ಸಾಕಷ್ಟು ಸಂಕಷ್ಟ ಎದುರಿಸಿದ್ದೇವೆ. ಈ ಬಾರಿಯಾದರೂ ವರುಣಕೃಪೆ ತೋರುವುದೇ ಎಂಬುದನ್ನು ನೋಡಬೇಕಿದೆ. ಮಳೆ ಅಭಾವದ ಆತಂಕದಿಂದಲೇ ಭೂಮಿ ಹಸನು ಮಾಡುತ್ತಿದ್ದೇವೆ.
•ಬಾಪುಗೌಡ ಕರಕಳ್ಳಿ, ರೈತ.
ಹೊಲ ಹಸನು ಮಾಡಿಕೊಳ್ಳುತ್ತಿದ್ದೇವೆ. ಹೆಸರು, ಸಜ್ಜೆ ಇತರೆ ಬೆಳೆ ಬಿತ್ತನೆಗೆ ಸಿದ್ಧತೆಯಲ್ಲಿದ್ದೇವೆ. ಈ ಭಾಗದಲ್ಲಿ ಹೊಲ ಹದ ಮಾಡಿಕೊಳ್ಳುವಷ್ಟು ಮಳೆಯಾಗಿದೆ. ಹೀಗಾಗಿ ರೈತರೆಲ್ಲರೂ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇವೆ.
•ಮಾಳಪ್ಪ ಸಗರ, ರೈತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.