ಮತ ಮಾರಾಟಕ್ಕಿಟ್ಟಿಲ್ಲ- ಆಮಿಷ ಒಡ್ಡಲು ಬರಬೇಡಿ!
Team Udayavani, May 10, 2019, 5:29 PM IST
ಶಹಾಪುರ: ನಗರದ ಮುಸ್ತಫಾ ಕಾಲೋನಿಯ ಲೋಹಾರಿ ಕುಟುಂಬದ ಮನೆ ಗೇಟ್‌ಗೆ ಬೋರ್ಡ್ ತೂಗು ಹಾಕಿರುವುದು.
ಶಹಪುರ: ನಗರಸಭೆ ಚುನಾವಣೆ ಕಾವು ದಿನೇ ದಿನೇ ಹೆಚ್ಚಾಗುತ್ತಿದೆ. ನಗರದ 31 ವಾರ್ಡ್ ಗಳಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದಂತೆ ಕೆಲವಡೆ ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸುವ ಸಾಧ್ಯತೆ ಕಂಡು ಬರುತ್ತಿದೆ. ಗುರುವಾರ ಮೊದಲನೇ ದಿನ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಮೊದಲನೇ ದಿನ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಈಗಾಗಲೇ ಆಯಾ ವಾರ್ಡ್‌ಗಳಿಂದ ಸ್ಪರ್ಧಿಸ ಬಯಸುವ ಅಭ್ಯರ್ಥಿಗಳು ಬಡಾವಣೆ ಮತದಾರರಲ್ಲಿ ಇಂತಹ ಪಕ್ಷದಿಂದ ಸ್ಪರ್ಧಿಸಲು ಬಯಸಿದ್ದು, ಆಶೀರ್ವದಿಸಬೇಕೆಂದು ಮನೆ-ಮನೆ ಸಂಚರಿಸಿ ಆಶ್ವಾಸನೆ ನೀಡುತ್ತಿರುವುದು ಎಲ್ಲೆಡೆ ಕಂಡು ಬರುತ್ತಿದೆ.
ಈ ನಡುವೆ ಇಲ್ಲಿನ ಮುಸ್ತಫಾ ಕಾಲೋನಿ ಮನೆವೊಂದರ ಗೇಟ್‌ಗೆ ವೋಟ್ ಫಾರ್ ನಾಟ್ ಸೇಲ್ ವೋಟು ಪಡೆಯಲು ಯಾವುದೇ ಆಮಿಷವೊಡ್ಡಲು ಬರಬೇಡಿ ಎಂದು ಇಂಗ್ಲಿಷ್‌ನಲ್ಲಿ ಬರೆದು ತಮ್ಮ ಮನೆಯೊಂದರ ಗೇಟ್‌ಗೆ ಬೋರ್ಡ್ ತೂಗು ಹಾಕಿದ ಸಂಗತಿ ಅಚ್ಚರಿ ಮೂಡಿಸಿದೆ. ಸುಶಿಕ್ಷತರಾದ ಇಲ್ಲಿನ ಲೋಹಾರಿ ಕುಟುಂಬ ಕೆಲಸ ಮಾಡುವ ಮೂಲಕ ಹಣ ಹಂಚಲು ಬರುವವರಿಗೆ ಹಣ ನೀಡಿ ಮತ ಕೇಳಲು ಬರಬೇಡಿ ವೋಟು ಮಾರಾಟಕ್ಕಿಲ್ಲ ಎನ್ನುವ ಸಂದೇಶ ರವಾನಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ ಎನ್ನಬಹುದು.
ಮತದಾನ ಶ್ರೇಷ್ಠ ಕೆಲಸವಾಗಿದ್ದು, ಪ್ರತಿ ಮತದಲ್ಲಿ ಬಡಾವಣೆ ಅಭಿವೃದ್ಧಿ, ನಮ್ಮ ಏಳ್ಗೆಗೆ ಉತ್ತಮ ಸಮಾಜ ನಿರ್ಮಾಣದ ಕೆಲಸ ಅಡಗಿರುತ್ತದೆ. ಅದನ್ನೇ ಮಾರಾಟ ಮಾಡಿದಲ್ಲಿ ಮುಂದೆ ಯಾವುದೇ ಸಮಸ್ಯೆ ಕೇಳಲು ನಮಗ್ಯಾವ ಹಕ್ಕು ಇರುವದಿಲ್ಲ. ಕಾರಣ ನಾವು ಮತ ಮಾರಾಟಕ್ಕಿಟ್ಟಿಲ್ಲ ದುಡ್ಡು ಆಮಿಷವೊಡ್ಡಲು ಬರಬೇಡಿ ಎಂಬ ಖಡಕ್ ಸಂದೇಶ ನೀಡಿದ್ದೇವೆ ಎನ್ನುತ್ತಿದೆ ಲೋಹಾರಿ ಕುಟುಂಬ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಹೊಸ ಸೇರ್ಪಡೆ
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.