ಅಭಿವೃದ್ಧಿಗೆ ಜನಪದ ಅವಶ್ಯ
ಸೈದ್ಧಾಂತಿಕ ಅಧ್ಯಯನ ಮೂಲಕ ಜಾಗತಿಕ ಚರ್ಚೆಗಳಾಗಲಿ: ಪ್ರೊ| ನಾಯಕ
Team Udayavani, Aug 24, 2019, 4:22 PM IST
ಶಿಗ್ಗಾವಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ 'ವಿಶ್ವ ಜಾನಪದ ದಿನಾಚರಣೆ-2019' ಸಮಾರಂಭವನ್ನು ಕುಲಪತಿ ಪ್ರೊ| ಡಿ.ಬಿ. ನಾಯಕ ಉದ್ಘಾಟಿಸಿದರು.
ಶಿಗ್ಗಾವಿ: ಜಗತ್ತಿನ ಪ್ರತಿ ಕ್ಷೇತ್ರದ ಸುಸ್ಥಿರ ಅಭಿವೃದ್ಧಿಗೆ ನೆಲಮೂಲ ಜ್ಞಾನವಾದ ಜನಪದದ ಅವಶ್ಯಕತೆ ಇದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಡಿ.ಬಿ. ನಾಯಕ ಹೇಳಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆಡಳಿತದ ಭವನದ ಮಲ್ಲಿಗೆ ದಂಡೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ವಿಶ್ವ ಜಾನಪದ ದಿನಾಚರಣೆ-2019’ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜನಪದ ಪಾರಂಪರಿಕ ಜ್ಞಾನವಾಗಿದ್ದು, ಈ ಜ್ಞಾನದಲ್ಲಿ ಸಾಧಕ-ಬಾಧಕಗಳಿವೆ.ಅವುಗಳನ್ನು ಸರಿದೂಗಿಸಿ ಶೈಕ್ಷಣಿಕ ಶಿಸ್ತಿಗೆ ಅಳವಡಿಸುವ ಜಾವಿವಿ ಪ್ರಯತ್ನ ಅವಿರತವಾಗಿ ನಡೆದಿದೆ ಎಂದು ವಿಶ್ವವಿದ್ಯಾಲಯದ ಕಾರ್ಯಗಳನ್ನು ವಿವರಿಸಿದರು.
ಜಗತ್ತು ಎಷ್ಟೇ ಆಧುನಿಕ ವೈಜ್ಞಾನಿಕವಾಗಿ ಮುಂದುವರೆದರೂ, ಪಾರಂಪರಿಕ ಜ್ಞಾನ ಬಿಟ್ಟು ಬದುಕಲು ಸಾಧ್ಯವಿಲ್ಲ. ಅಲ್ಲದೆ ಜನಪದವು ಆಯಾ ಕಾಲಕ್ಕೆ ತಕ್ಕಂತೆ ಪರಿಷ್ಕರಣೆಯಾಗಿ ನಮ್ಮೆದುರು ಬಂದು ನಿಲ್ಲುತ್ತದೆ. ಅನೇಕ ಶಿಸ್ತುಗಳಲ್ಲಿ ಜನಪದ ಜ್ಞಾನ ಸೇರಿಕೊಂಡಿದ್ದು, ಸೈದ್ಧಾಂತಿಕ ಅಧ್ಯಯನದ ಮೂಲಕ ಜಾಗತಿಕ ಚರ್ಚೆಗಳಾಬೇಕು. ಆ ನಿಟ್ಟಿನಲ್ಲಿ ಜನಪದ ಯುವ ಸಂಶೋಧಕರು, ಯುವ ಆಧ್ಯಯನಕಾರರು ಕಾರ್ಯೋನ್ಮುಕವಾಗುವಂತೆ ಪ್ರೇರೇಪಿಸಿದರು.
ವಿವಿಯ ಕುಲಸಚಿವ ಪ್ರೊ| ಚಂದ್ರಶೇಖರ ಮಾತನಾಡಿ, ಸಮಾಜದಲ್ಲಿ ಜನಪದ ಬಹಳ ವಿಧದಲ್ಲಿ ಮನುಷ್ಯನ ಬದುಕನ್ನು ಕಟ್ಟಿಕೊಟ್ಟಿದೆ. ಜಗತ್ತಿನ ಎಲ್ಲ ಭಾಷೆ, ಪ್ರದೇಶಗಳಲ್ಲೂ ಜನಪದ ಇದೆ. ನಾವು ಜನಪದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರೂ, ನೀಡದಿದ್ದರೂ ಅದು ಮಾನವನೊಂದಿಗೆ ಬೆರೆತಿದೆ ಎಂದರು.
ಅಜ್ಜ, ಅಜ್ಜಿ ಕಥೆ ಹೇಳುವುದರಿಂದ ಬಹಳಷ್ಟು ವಿಚಾರಗಳನ್ನು ಹಂಚುತ್ತಿದ್ದರು. ಇಂದು ಕಥೆ ಹೇಳುವ ಪರಂಪರೆ ಬಹಳ ಕಡಿಮೆಯಾಗಿದೆ. ಜನಪದ ನಮ್ಮ ಪರಂಪರೆಯಾಗಿದೆ. ಅದನ್ನು ಪೋಷಿಸುವ ಕೆಲಸ ನಾವೆಲ್ಲ ಮಾಡುವ ಅಗತ್ಯವಿದೆ ಎಂದರು.
ವಿವಿಯ ಮೌಲ್ಯಮಾಪನ ಕುಲಸಚಿವ ಡಾ| ಎಂ.ಎನ್. ವೆಂಕಟೇಶ ಮಾತನಾಡಿ, ಜನಪದವು ಮನುಷ್ಯನ ಬದುಕಿನ ಜತೆಗೆ ಬಂದಿದ್ದು, ಜನಪದ ಕಥೆಗಳು ಮನುಷ್ಯನ ನೆಮ್ಮದಿ ಮತ್ತು ವೈಚಾರಿಕ ಚಿಂತನೆಗಳ ಜತೆ ಹಂಚಿಕೆಯಾಗಿದೆ. ಜನಪದದ ವಿದ್ವಾಂಸರು ತಿಳಿಸಿದ ಕಾಲಕ್ಕಿಂತಲೂ ಮೊದಲೇ ಮಾನವನೊಂದಿಗೆ ಬೆರೆತಿದೆ. ಜನಪದ ಯಾವಾಗಲೂ ಜೀವಂತವಾಗಿ ಇರುವಂತದ್ದು ಎಂದು ವಿಶ್ಲೇಷಿಸಿದರು.
ರಾಮನಗರದ ಇಫ್ರೂೕ ಜನಪದ ಮಹಾವಿದ್ಯಾಲಯದ ಡಾ| ಎಂ. ಬೈರೇಗೌಡ ಅವರು ಮತ್ತು ಜನಪದ ಗೀತ ಸಂಪ್ರದಾಯದ ಅಧ್ಯಾಪಕ ಶರೀಫ್ ಮಾಕಪ್ಪನವರ ಜನಪದ ಗೀತೆಗಳನ್ನು ಪ್ರಸ್ತುತ ಪಡಿಸಿದರು.
ವಿವಿಯ ಸಂಶೋಧನಾ ವಿದ್ಯಾರ್ಥಿ ಸಣ್ಣಯ್ಯ ಜಿ.ಎಸ್.ಪ್ರಾರ್ಥಿಸಿದರು. ಸಹಾಯಕ ಕುಲಸಚಿವ ಶಹಾಜಾನ್ ಮುದಕವಿ ಸ್ವಾಗತಿಸಿದರು. ಯೋಜನಾ ಸಹಾಯಕ ಡಾ| ಹನಮಪ್ಪ ಎಸ್. ಘಂಟಿ ಕಾರ್ಯಕ್ರಮ ನಿರ್ವಹಿಸಿದರು. ಸಹಾಯಕ ಪ್ರಾಧ್ಯಾಪಕ ಡಾ| ವೃಷಭಕುಮಾರ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.