ಗ್ರಂಥಾಲಯ ಅಭಿವೃದ್ಧಿ ಮೇಲೆ ಕರಿನೆರಳು!
ಗ್ರಂಥಾಲಯಗಳ ಕರಬಾಕಿ ಪಾವತಿಗೆ ಗ್ರಾಪಂಗಳ ಮೀನಾಮೇಷ ಕನಿಷ್ಟ ವೇತನಕ್ಕೆ ಗ್ರಂಥಪಾಲಕರ ಒತ್ತಾಯ
Team Udayavani, Oct 30, 2019, 3:25 PM IST
ಶಿವಮೊಗ್ಗ: ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿ 261 ಗ್ರಂಥಾಲಯಗಳಿದ್ದು ಅವುಗಳಿಂದ 1.37 ಕೋಟಿ ರೂ. ಕರ ಬಾಕಿ ಉಳಿಸಿಕೊಂಡಿವೆ. ಇದರಿಂದ ಅಭಿವೃದ್ಧಿ ಕಾರ್ಯಗಳ ಮೇಲೆ ಕರಿನೆರಳು ಬೀರಿದೆ.
20 ಕಡೆ ಸ್ವಂತ ಕಟ್ಟಡವಿದ್ದು, ಉಳಿದ ಕಡೆ ಗ್ರಾಪಂ ನೀಡಿದ ಉಚಿತ ಕಟ್ಟಡದಲ್ಲಿ ನಡೆಯುತ್ತಿದೆ. ಇಷ್ಟು ದಿನ ಇಲಾಖೆಯಿಂದಲೇ ವೇತನ ನೀಡಲಾಗುತ್ತಿತ್ತು, ಸರಕಾರ ಗ್ರಂಥಾಲಯಗಳನ್ನು ಮತ್ತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸುಪರ್ದಿಗೆ ವಹಿಸಲು ಸಿದ್ಧತೆ ನಡೆಸುತ್ತಿದ್ದು ಇನ್ಮುಂದೆ ಗ್ರಾಪಂಗಳಿಂದಲೇ ಗ್ರಂಥಪಾಲಕರಿಗೆ ಸಂಬಳ ಪಾವತಿಯಾಗಲಿದೆ.
ಗ್ರಾಮೀಣ ಗ್ರಂಥಾಲಯಗಳ ಜತೆ ಏಳು ಶಾಖಾ ಗ್ರಂಥಾಲಯ, 3 ಅಲೆಮಾರಿ ಗ್ರಂಥಾಲಯಗಳಿವೆ. ಕರ ಬಾಕಿ: 261 ಗ್ರಂಥಾಲಯಗಳಿಂದ 1.37 ಕೋಟಿ ರೂ. ಕರ ಬಾಕಿ ಇದ್ದು ಗ್ರಾಪಂಗಳು ಕರ ಬಾಕಿ ಪಾವತಿಸಲು ಮೀನಾಮೇಷ ಎಣಿಸುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಕರಪಾವತಿಯಲ್ಲಿ ಯಾವುದೇ ತೊಡಕಾಗಿಲ್ಲ. ನಾಲ್ಕು ಹಿಂದಿನ ಬಾಕಿ ಈಗಲೂ ಬರಬೇಕಿದೆ. ಅತಿ ಹೆಚ್ಚು ಬಾಕಿ ಬರಬೇಕಿರುವುದು ಭದ್ರಾವತಿ ತಾಲೂಕಿನಿಂದ ಎಂಬುದು ವಿಶೇಷ. 1.37 ಕೋಟಿ ರೂ.ನಲ್ಲಿ ಭದ್ರಾವತಿ ತಾಲೂಕಿನಿಂದ 40 ಲಕ್ಷ ರೂ. ಬಾಕಿ ಬರಬೇಕಿದೆ.
ಸರಕಾರದ ಅನುದಾನದಲ್ಲಿ ಗ್ರಂಥಾಲಯ ಅಭಿವೃದ್ಧಿಗೆ ಇಂತಿಷ್ಟು ಅನುದಾನ ಮೀಸಲಾಗಿದ್ದರೂ ಗ್ರಾಮ ಪಂಚಾಯತಗಳು ಆ ಅನುದಾನವನ್ನು ಬೇರೆಡೆ ಬಳಸಿಕೊಂಡಿರುವುದೇ ಬಾಕಿ ಉಳಿಯಲು ಕಾರಣ ಎನ್ನಲಾಗಿದೆ. ಬಾಕಿ ಹಣವನ್ನೂ ಕಡ್ಡಾಯವಾಗಿ ಪಾವತಿ ಮಾಡಬೇಕಾದ ಅನಿವಾರ್ಯತೆ ಕೂಡ ಗ್ರಾಪಂಗಳ ಮೇಲೆ ಇದೆ.
ಗ್ರಂಥಪಾಲರ ಡಿಮ್ಯಾಂಡ್: ಗ್ರಂಥಾಲಯ ಇಲಾಖೆ ವ್ಯಾಪ್ತಿಯಲ್ಲಿದ್ದ ಸಿಬ್ಬಂದಿಯನ್ನು ಆರ್‌ಡಿಪಿಆರ್ ಇಲಾಖೆ ವ್ಯಾಪ್ತಿಗೆ ಸೇರಿಸಲು ಸರಕಾರ ತೀರ್ಮಾನಿಸಿದೆ. ಆದರೆ ಸಂಬಳ ಮಾತ್ರ ನೀರಗಂಟಿಗಿಂತಲೂ ಕಡಿಮೆ ಇದೆ. ನಮ್ಮನ್ನು ಕೂಡ ನಿಷ್ಠ ವೇತನ ವ್ಯಾಪ್ತಿಗೆ ತರಬೇಕೆಂಬುದು ಅವರ ಒತ್ತಾಯ. ಈ ಹಿಂದೆ ಗ್ರಾಪಂಗಳಿಂದಲೇ ಸಂಬಳ ಕೊಡಲಾಗುತಿತ್ತು.
ರಾಜ್ಯದಲ್ಲಿ ಶೇ.50ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿಯೇ ಇರುವುದರಿಂದ ಅನೇಕ ಕಡೆ ಲೈಂಗಿಕ ಕಿರುಕುಳ, ದೌರ್ಜನ್ಯ ಪ್ರಕರಣಗಳು ಗಮನಕ್ಕೆ ಬಂದಿದ್ದವು. ನಂತರ ಸಂಬಳ ನೀಡುವ ಜವಾವಾªರಿಯನ್ನು ಮಾತೃ ಇಲಾಖೆಗೆ ವರ್ಗಾಯಿಸಲಾಗಿತ್ತು. ಮತ್ತೆ ಗ್ರಾಪಂ ಮೂಲಕ ಕೊಡುತ್ತಿರುವ ಬಗ್ಗೆ ಕೆಲ ಮಹಿಳಾ ಸಿಬ್ಬಂದಿಗಳಲ್ಲಿ ಅಸಮಾಧಾನ ಕೂಡ ಇದೆ. ಈಚೆಗೆ ನರೇಗಾ ಜವಾಬ್ದಾರಿಗೂ ಗ್ರಂಥಪಾಲಕರನ್ನು ಬಳಸಿಕೊಂಡಿರುವ ಬಗ್ಗೆ ಅಕ್ಷೇಪ ವ್ಯಕ್ತಪಡಿಸಿದ್ದಾರೆ.
ಗ್ರಾಪಂ ಮೂಲಕ ಸಂಬಳ ಕೊಡುತ್ತಿರುವು ಸ್ವಾಗತಾರ್ಹ. ಆದರೆ ನಮ್ಮನ್ನು ಕೂಡ ಕನಿಷ್ಠ ವೇತನದಡಿ ತಂದು ದಿನಕ್ಕೆ 8 ಗಂಟೆ ಕೆಲಸ ಕೊಡಿ ಎಂದು ಅಲವತ್ತುಕೊಂಡಿದ್ದಾರೆ. ಹಾಜರಾತಿ, ವೇತನ ಬಿಲ್ ಅನ್ನು ಪ್ರತಿ ತಿಂಗಳು ಜಿಲ್ಲಾ ಕೇಂದ್ರದಲ್ಲಿ ಕೊಟ್ಟು ಬರಬೇಕು. ಇದಕ್ಕೂ ಸಹ ಯಾವುದೇ ಟಿಎ, ಡಿಎ ಸಿಗುವುದಿಲ್ಲ. ಬರುವ 7 ಸಾವಿರ ಸಂಬಳದಲ್ಲಿ ಜೀವನ ನಿರ್ವಹಣೆಯೇ ಕಷ್ಟವಿದೆ ಎನ್ನುತ್ತಾರೆ ಗ್ರಂಥಪಾಲಕರು.
ಮದುವೆಗೆ ಹೆಣ್ಣು ಕೊಡುತ್ತಿಲ್ಲ: ಇಂದೋ ನಾಳೆಯೋ ಕನಿಷ್ಠ ವೇತನ ಸಿಗಬಹುದೆಂಬ ಕಾರಣದಿಂದ ಕೆಲಸಕ್ಕೆ ಸೇರಿದ್ದೇವೆ. ನಮ್ಮ ಸಂಬಳ ನೋಡಿ ಯಾರೂ ಹೆಣ್ಣು ಕೊಡುತ್ತಿಲ್ಲ. ಸರಕಾರ ನಮ್ಮನ್ನು ಬೇರೆ ಇಲಾಖೆಗಾದರೂ ವರ್ಗಾಯಿಸಿ ಪೂರ್ಣ ಪ್ರಮಾಣದ ನೌಕರರೆಂದು ಪರಿಗಣಿಸಲಿ. ಕನಿಷ್ಠ ವೇತನ ಜಾರಿಗೊಳಿಸಲಿ ಈಚೆಗೆ ಹಲವು ಮಂದಿ ಆರ್ಥಿಕ ಪರಿಸ್ಥಿತಿ ಹದಗೆಟ್ಟು ನೇಣಿಗೆ ಶರಣಾಗಿದ್ದಾರೆ.
ರಾಜ್ಯದಲ್ಲಿ 500ಕ್ಕೂ ಹೆಚ್ಚು ಮಂದಿ ಅಕಾಲಿಕ ಮರಣ ಹೊಂದಿದ್ದಾರೆ. ಯಾರಿಗೂ ಸರಕಾರದಿಂದ ಬಿಡಿಗಾಸು ಕೊಟ್ಟಿಲ್ಲ. ನಿವೃತ್ತಿ ನಂತರ ಬಿಡಿಗಾಸು ಸಿಗುವುದಿಲ್ಲ. ಮನವಿ, ಪ್ರತಿಭಟನೆ ಮಾಡಿದರೆ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ನಮ್ಮ ಕಷ್ಟ ಯಾರ ಬಳಿ ಹೇಳುವುದು ಎನ್ನುತ್ತಾರೆ ಅವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Court Judgement: ತಪ್ಪಿತಸ್ಥ ಎಂದಾದರೆ ಮಾತ್ರ ರಾಜೀನಾಮೆ ನೀಡಬೇಕು: ಜಿ.ಟಿ.ದೇವೇಗೌಡ
Ration Card: ರಾಜ್ಯದಲ್ಲಿ ಪಡಿತರ ನೀಡಲು ಹಣದ ಕೊರತೆ ಇಲ್ಲ: ಸಚಿವ ಮುನಿಯಪ್ಪ
MUST WATCH
ಹೊಸ ಸೇರ್ಪಡೆ
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.