ಚುನಾವಣಾ ಆಯೋಗದ ಮಾರ್ಗಸೂಚಿ ಪಾಲಿಸಿ
ಮತದಾರರನ್ನು ಓಲೈಸುವ ಅಡ್ಡ ಮಾರ್ಗ ತಡೆಗೆ ಸೂಚನೆ ಕಾರ್ಯಕ್ರಮ ನಡೆಸಲು ಅನುಮತಿ ಕಡ್ಡಾಯ
Team Udayavani, Apr 10, 2019, 5:26 PM IST
ಶಿವಮೊಗ್ಗ: ಲೋಕಸಭಾ ಚುನಾವಣೆಗೆ ಆಯ್ಕೆ ಬಯಸಿ ಸ್ಪ ರ್ಧಿಸಿರುವ ಅಭ್ಯರ್ಥಿಗಳು
ಚುನಾವಣಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ
ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ.ಎ. ದಯಾನಂದ್ ಸೂಚಿಸಿದರು.
ಮಂಗಳವಾರ ಚುನಾವಣಾ ವೀಕ್ಷಕರ ಉಪಸ್ಥಿತಿಯಲ್ಲಿ ತಮ್ಮ ಕಚೇರಿ ಕಾರ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಭಾಗವಹಿಸಿ
ಅವರು ಮಾತನಾಡಿದರು.
ಚುನಾವಣಾ ಪ್ರಚಾರ ಕಾರ್ಯಕ್ಕಾಗಿ ಬಳಸುವ ವಾಹನಗಳಿಗೆ ಸಂಬಂಧಿ ಸಿದಂತೆ,
ಕಾರ್ಯಕ್ರಮಗಳ ಆಯೋಜನೆ, ಸ್ಟಾರ್ ಕ್ಯಾಂಪೇನರ್‌ಗಳನ್ನು ಬಳಸಿಕೊಂಡು
ಆಯೋಜಿಸುವ ಕಾರ್ಯಕ್ರಮಗಳು ಸೇರಿದಂತೆ ಕಡ್ಡಾಯವಾಗಿ ಸಕ್ಷಮ ಪ್ರಾಧಿ
ಕಾರಿಗಳಿಂದ 48 ಗಂಟೆಗಳೊಳಗಾಗಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ
ಎಂದು ಅವರು ತಿಳಿಸಿದರು. ಒಂದೇ ಸ್ಥಳದಲ್ಲಿ ಇಬ್ಬರು ಕಾರ್ಯಕ್ರಮ ಆಯೋಜಿಸಲು
ಮನವಿ ಸಲ್ಲಿಸಿದಲ್ಲಿ ಮೊದಲು ಬಂದವರಿಗೆ ಅನುಮತಿ ನೀಡಲಾಗುವುದು. ಒಂದೇ ದಿನ 5-6 ಕಡೆ ಕಾರ್ಯಕ್ರಮ ಆಯೋಜಿಸುವುದಿದ್ದಲ್ಲಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕಾಗುತ್ತದೆ. ಮತದಾರರನ್ನು ಓಲೈಸಲು ಊಟ, ಹಣ ಮದ್ಯ ಹಂಚುವುದು ಸೂಕ್ತವಲ್ಲ. ಅನುಮತಿ ಇಲ್ಲದೇ ರಾತ್ರಿ 10ರ ನಂತರ ಕಾರ್ಯಕ್ರಮ ಮಾಡುವುದು ಬೇಡ ಎಂದರು.
ಚುನಾವಣಾ ಅಕ್ರಮಗಳು ನಡೆಸದಂತೆ ಹಾಗೂ ಬೇರೆ ಯಾವುದೇ ರಾಜಕೀಯ ಪಕ್ಷಗಳು ಅಥವಾ ಅವರಿಗೆ ಸಂಬಂಧಿಸಿದ ವ್ಯಕ್ತಿಗಳು ಅಕ್ರಮಗಳು ನಡೆಸುತ್ತಿದ್ದಲ್ಲಿ ಸಿವಿಜಲ್ ಮೂಲಕ ದೂರು ದಾಖಲಿಸಿದಲ್ಲಿ ಅತ್ಯಲ್ಪ ಸಮಯದಲ್ಲಿ ಅವುಗಳನ್ನು ನಿರ್ವಹಿಸಲಾಗುವುದಲ್ಲದೇ
ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. 8 ವಿಧಾನ ಸಭಾ
ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಂಚರಿಸುವ ಅಭ್ಯರ್ಥಿಗಳು ತಮ್ಮ ವಾಹನಗಳಿಗೆ
ಪರವಾನಗಿಯನ್ನು ಸುವಿಧಾದಲ್ಲಿ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ. ಒಟ್ಟಾರೆಯಾಗಿ ಓರ್ವ ಅಭ್ಯರ್ಥಿಯು 70 ಲಕ್ಷ ರೂ.ಗಳ ಮಿತಿಯಲ್ಲಿ ಚುನಾವಣಾ
ವೆಚ್ಚವನ್ನು ನಿರ್ವಹಿಸಬೇಕಾಗುವುದು. ಮತದಾನ ಮುಕ್ತಾಯಗೊಳ್ಳುವ 48
ಗಂಟೆಗಳ ಮುನ್ನ ಪ್ರಚಾರ ಕಾರ್ಯವನ್ನು ಸ್ಥಗಿತಗೊಳಿಸಬೇಕಲ್ಲದೇ ಚುನಾವಣಾ
ಪ್ರಚಾರಕ್ಕಾಗಿ ಬಂದ ಪ್ರಚಾರಕರು ಕ್ಷೇತ್ರ ಬಿಟ್ಟು ತೆರಳಬೇಕೆಂದರು.
ಸಿನಿಮಾ ಮಂದಿರ, ವಿಡಿಯೋವಾಲ್ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ
ಪ್ರಚಾರ ಕೈಗೊಳ್ಳುವ ಅಭ್ಯರ್ಥಿಯು ಪ್ರಚಾರ ಸಾಮಗ್ರಿಯನ್ನು ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲುಸ್ತುವಾರಿ ಸಮಿತಿಯ ಮುಂದೆ ಹಾಜರುಪಡಿಸಿ, ಕಡ್ಡಾಯವಾಗಿ ಅನುಮತಿ ಪಡೆದ ನಂತರವೇ ಪ್ರಚಾರ ಕೈಗೊಳ್ಳಬೇಕು. ಧಾರ್ಮಿಕ ಸ್ಥಳಗಳು, ಸರ್ಕಾರಿ ಕಚೇರಿ-ಕಟ್ಟಡಗಳನ್ನು ಪ್ರಚಾರ ಕಾರ್ಯಕ್ಕೆ ಬಳಸದಂತೆ ಸೂಚಿಸಿದ ಅವರು, ಅಪ್ರಾಪ್ತರನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳದಂತೆ ಸೂಚಿಸಿದರು.
ಮತದಾರರ ಪಟ್ಟಿಯಲ್ಲಿ ಹೆಸರಿರುವುದನ್ನು ಪ್ರತಿಯೊಬ್ಬರೂ ಖಚಿತಪಡಿಸಿಕೊಂಡೇ
ಮತಕೇಂದ್ರಕ್ಕೆ ಹೋಗುವುದು ಒಳಿತು. ಹಳೆಯ ಗುರುತಿನ ಚೀಟಿಯನ್ನಿಟ್ಟುಕೊಂಡು
ತಮ್ಮ ಹೆಸರಿರುವುದನ್ನು ಪರಿಶೀಲಿಸಿಕೊಳ್ಳದೆ ಮತಗಟ್ಟೆಗೆ ಹೋಗಿ ಹೆಸರಿಲ್ಲದಿರುವ ಬಗ್ಗೆ
ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ ಎಂದ ಅವರು, ರಾಜಕೀಯ ಪಕ್ಷಗಳ ಮುಖಂಡರು
ಇವುಗಳ ಬಗ್ಗೆ ಗಮನ ಹರಿಸುವಂತೆ ತಿಳಿಸಿದರು.
ಪ್ರತಿ ಅಭ್ಯರ್ಥಿಯು ಪ್ರತಿ ಮೂರು ದಿನಗಳಿಗೊಮ್ಮೆ ತಮ್ಮ ಲೆಕ್ಕ ಪತ್ರವನ್ನು
ಚುನಾವಣಾ ಶಾಖೆಯ ಲೆಕ್ಕಪತ್ರ ನಿರ್ವಾಹಕರಲ್ಲಿ ಸಲ್ಲಿಸಿ ದಾಖಲಿಸಿಕೊಳ್ಳಬೇಕು.
ತಮ್ಮ ಪ್ರಚಾರ ಸಾಮಗ್ರಿ, ಜಾಹೀರಾತುಗಳು ಸೇರಿದಂತೆ ಎಲ್ಲ ರೀತಿಯ ಲೆಖ್ಖ ಪತ್ರವನ್ನು
ಸಕಾಲದಲ್ಲಿ ಸಲ್ಲಿಸಬೇಕು. ರಾಜಕೀಯ ಪಕ್ಷದ ಪರವಾಗಿ ಕಾರ್ಯ ನಿರ್ವಹಿಸುವ
ಕಾರ್ಯಕರ್ತರಿಗೆ ತಮ್ಮ ಜವಾಬ್ದಾರಿಗಳ ಹಾಗೂ ನೀತಿಸಂಹಿತೆಯ ಕುರಿತು ಅರಿವು
ಮೂಡಿಸುವುದು ಅಗತ್ಯ ಎಂದರು.
ಪ್ರಸ್ತುತ ಚುನಾವಣೆಯಲ್ಲಿ ರಾಷ್ಟ್ರೀಯ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ
ಅಭ್ಯರ್ಥಿಗಳಿಗೆ ಮತದಾರರ ಯಾದಿಯನ್ನು ನೀಡಲಾಗುವುದು. ಪಕ್ಷೇತರ ಅಭ್ಯರ್ಥಿಗಳು
ಹಣ ಪಾವತಿಸಿ ಯಾದಿಯನ್ನು ಪಡೆದುಕೊಳ್ಳಬೇಕಾಗುವುದು ಎಂದ ಅವರು, ಕ್ರಿಮಿನಲ್ ಪ್ರಕರಣದ ವಿಚಾರಣೆ ಬಾಕಿ ಇರುವ ಅಭ್ಯರ್ಥಿಯು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಸಾರ ಹೊಂದಿರುವ ದಿನಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ 3 ಬಾರಿ ಕಡ್ಡಾಯವಾಗಿ
ಜಾಹೀರಾತನ್ನು ನೀಡುವುದು ಕಡ್ಡಾಯವಾಗಿದೆ ಎಂದರು.
ಪ್ರಸ್ತುತ ಚುನಾವಣೆಯಲ್ಲಿ ಮತದಾನದ ನಂತರ ಸ್ಟ್ರಾಂಗ್‌ರೂಮ್‌ನಲ್ಲಿ ಸಂಗ್ರಹಿಸಿರುವ
ಮತಯಂತ್ರಗಳನ್ನು ಕಾಯ್ದುಕೊಳ್ಳಲಿಚ್ಛಿಸುವ ರಾಜಕೀಯ ಪಕ್ಷದ ಅಭ್ಯರ್ಥಿಗಳು ಅಥವಾ
ಅವರ ಪರವಾಗಿರುವವರಿಗಾಗಿ ಸ್ಟ್ರಾಂಗ್ ರೂಂಗೆ ಸಮೀಪದಲ್ಲಿರುವಂತೆ ಪ್ರತ್ಯೇಕ
ಕೊಠಡಿಯನ್ನು ಕಲ್ಪಿಸಿಕೊಡಲಾಗುವುದು. ಅಲ್ಲಿಂದಲೇ ಭದ್ರತಾ ಕೊಠಡಿಯಲ್ಲಿ
ಸಂಗ್ರಹಿಸಿಡಲಾಗಿಡುವ ಎಲ್ಲಾ ಮತಗಟ್ಟೆಗಳ ಚಿತ್ರಣವನ್ನು ಕ್ಯಾಮೆರಾ ಮೂಲಕ
ವೀಕ್ಷಿಸಬಹುದಾಗಿದೆ ಎಂದರು.
ಸಭೆಯಲ್ಲಿ ಸಾಮಾನ್ಯ ವೀಕ್ಷಕ ಶಾಹಿದ್ ಮಂಜರ್ ಅಬ್ಟಾಸ್ ರಿಜ್ವಿ, ಪುಷ್ಪೇಂದ್ರ ಸಿಂಗ್,
ರಾಜೀವ್‌ಕುಮಾರ್ ಹಾಗೂ ಪೊಲೀಸ್ ವೀಕ್ಷಕ ರಾಮ್‌ಸಿಂಗ್, ಮಹಾನಗರ
ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್, ಅಪರ ಜಿಲ್ಲಾ ಧಿಕಾರಿ ಪೂರ್ಣಿಮಾ, ಉಪ
ವಿಭಾಗಾ ಧಿಕಾರಿ ಟಿ.ವಿ.ಪ್ರಕಾಶ್ ಸೇರಿದಂತೆ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಸಹಾಯಕ
ಚುನಾವಣಾಧಿ ಕಾರಿಗಳು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ
ಮುಖಂಡರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.