25 ಕೆ.ಜಿ ಅಕ್ಕಿ,5 ಕೆ.ಜಿ ಟೊಮೇಟೋ; ಸಂಬಳ ಕೊಡುವವರೆಗೂ ದಿನಸಿ ಕಳಿಸಿ ಎಂದ ಅತಿಥಿ ಉಪನ್ಯಾಸಕರು
Team Udayavani, Aug 1, 2023, 9:02 PM IST
ಶಿವಮೊಗ್ಗ: ಸಂಬಳ ಇಲ್ಲದ ಅತಿಥಿ ಉಪನ್ಯಾಸಕರು ವಿಶೇಷ ರೀತಿಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಮೂರು ತಿಂಗಳಿನಿಅದ ಸಂಬಳ ಇಲ್ಲ, ಜೀವನ ನಡೆಸುವುದು ಕಷ್ಟವಾಗುತ್ತಿದೆ. ಸಂಬಳ ಕೊಡುವವರೆಗೂ ಪ್ರತಿ ತಿಂಗಳ ರೇಷನ್ ಕೊಡುವಂತೆ ಪಟ್ಟಿ ಮಾಡಿ ಪ್ರಾಂಶುಪಾಲರ ಮೂಲಕ ಶಿಕ್ಷಣ ಇಲಾಖೆ ಬೇಡಿಕೆ ಸಲ್ಲಿಸಿದ್ದಾರೆ.
ರಾಜ್ಯಾದ್ಯಂತ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರಿಗೆ ಮೂರು ತಿಂಗಳಿನಿಂದ ಸಂಬಳ ಆಗಿಲ್ಲ. ಇದನ್ನು ಖಂಡಿಸಿ ಇಲ್ಲಿನ ಹೊಳೆಹೊನ್ನೂರು ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರು ವಿಶೇಷ ರೀತಿ ಮನವಿ ಪತ್ರ ಬರೆದಿದ್ದಾರೆ.
“ಮಾನ್ಯ ಘನ ಸರಕಾರ ಕಳೆದ ಮೂರು ತಿಂಗಳಿನಿಂದ ಬಡ, ನಿರ್ಗತಿಕ ಅತಿಥಿ ಉಪನ್ಯಾಸಕರಿಗೆ ಬರಬೇಕಾದ ಗೌರವ ಧನವನ್ನು ತಡೆ ಹಿಡಿದಿದ್ದು ಇದರಿಂದ ನಮ್ಮನ್ನು ನಂಬಿಕೊಂಡಿರುವ ಕುಟುಂಬ ವರ್ಗದವರು ಉಪವಾಸದಿಂದ ನರಳುವಂತಾಗಿದೆ. ಸರಕಾರ ನಮ್ಮ ಗೌರವ ಧನವನ್ನು ಬಿಡುಗಡೆ ಮಾಡುವವರೆಗೂ ನಮಗೆ ಅಗತ್ಯವಿರುವ ಈ ಕೆಳಕಂಡ ದಿನಸಿ ವಸ್ತುಗಳನ್ನು ಪೂರೈಸಬೇಕೆಂದು ತಮ್ಮ ವಿನಂತಿ ವಿನಿಂತಿಸಿಕೊಳ್ಳುತ್ತಿದ್ದೇನೆ” ಎಂದು ಜತೆಗೆ ಅಗತ್ಯವಿರುವ ವಸ್ತುಗಳ ಪಟ್ಟಿ ಹಾಕಿದ್ದಾರೆ.
25 ಕೆ.ಜಿಯ ಅಕ್ಕಿ, 5 ಕೆ.ಜಿ ಟೊಮೇಟೋ, 10 ಕೆ.ಜಿ ಈರುಳ್ಳಿ, 1 ಕೆ.ಜಿ. ಒಣಮೆಣಸು, 2 ಕೆ.ಜಿ. ಹಸಿ ಮೆಣಸು, 2 ಕೆ.ಜಿ ತೊಗರಿಬೇಳೆ, ಅರ್ಧ ಕೆ,ಜಿ ಬೆಳ್ಳುಳ್ಳಿ, ಕಾಲು ಕೆ.ಜಿ ಶುಂಠಿ, ಅಗತ್ಯವಿರುವಷ್ಟು ಹಾಲು, ಮೊಸರು, 1 ಎಲ್‌ಪಿಜಿ ಸಿಲಿಂಡರ್ ಕೊಡಬೇಕು ಎಂದು ಸರಕಾರಕ್ಕೆ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.