8 ಸಾವಿರ ಮಾವಿನ ಸಸಿ ಮಾರಾಟ
Team Udayavani, Jun 11, 2019, 2:43 PM IST
ಶಿವಮೊಗ್ಗದ ತೋಟಗಾರಿಕೆ ಆವರಣದಲ್ಲಿ ನಡೆದ ಮೇಳದಲ್ಲಿ ಮಾವು ಖರೀದಿಸುತ್ತಿರುವ ಗ್ರಾಹಕರು.
ಶಿವಮೊಗ್ಗ: ನಾಲ್ಕು ವರ್ಷಗಳ ನಂತರ ಜಿಲ್ಲೆಯಲ್ಲಿ ನಡೆದ ಮಾವು, ಹಲಸು, ಪ್ರದರ್ಶನ, ಮಾರಾಟ, ಜೇನು, ಸಾವಯವ ತೋಟಗಾರಿಕೆ ಮೇಳಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ತೋಟಗಾರಿಕೆ ಇಲಾಖೆಯಿಂದ ಜೂ. 7ರಿಂದ 9ರ ವರೆಗೆ ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಏರ್ಪಡಿಸಿದ್ದ ಮೇಳದಲ್ಲಿ ಸಾವಿರಾರು ಜನ ಭೇಟಿ ನೀಡಿ ಮಾವು ಮತ್ತು ಹಲಸಿನ ಸ್ವಾದ ಸವಿದರು.
ಸುಮಾರು 60 ಟನ್ ಮಾವು, 4 ಟನ್ ಹಲಸು, 8 ಸಾವಿರ ಮಾವಿನ ಸಸಿಗಳ ಮಾರಾಟ ಮಾಡಲಾಯಿತು. ಮೇಳಕ್ಕೆ ನಿರೀಕ್ಷೆಗೂ ಮೀರಿ ಜನರಿಂದ ಸ್ಪಂದನೆ ಸಿಕ್ಕಿದೆ. ಅದರಲ್ಲೂ ವೀಕೆಂಡ್‌ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿವಿಧ ಬಡಾವಣೆಗಳಿಂದ ಜನರು ಭಿನ್ನಭಿನ್ನ ಮಾವಿನ ಹಣ್ಣುಗಳನ್ನು ಖರೀದಿಸುವುದಕ್ಕೆ ಆಗಮಿಸಿದ್ದರು.
14-15 ಪ್ರಭೇದದ ಮಾವಿನ ಹಣ್ಣು ಮಾರಾಟಕ್ಕೆ ಇಡಲಾಗಿತ್ತ್ತ್ರು. 45-50 ತಳಿಯ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. 8-10 ಪ್ರಭೇದ ಹಲಸಿನ ತಳಿಯ ಪ್ರದರ್ಶನ ಮತ್ತು 3ರಿಂದ 4 ಪ್ರಭೇದಗಳ ಮಾರಾಟ ನಡೆಯಿತು. ಶಿವಮೊಗ್ಗದಿಂದ ಮೂವರು ವ್ಯಾಪಾರಿಗಳು ಮೇಳದಲ್ಲಿ ಪಾಲ್ಗೊಂಡಿದ್ದರೆ, ರಾಮನಗರ, ಕೋಲಾರ, ಶ್ರೀನಿವಾಸಪುರ, ಚನ್ನರಾಯ ಪಟ್ಟಣದಿಂದಲೂ ವ್ಯಾಪಾರಿಗಳು ಆಗಮಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.