ಭಾಷೆಯಿಂದ ಬದುಕಿನ ಸ್ಪಷ್ಟ ಚಿತ್ರಣ ವ್ಯಕ್ತ: ನಾ| ಡಿಸೋಜ
Team Udayavani, Nov 26, 2018, 5:32 PM IST
ಶಿಕಾರಿಪುರ: ಭಾಷೆಗೆ ಸಂವಹನಾ ಶಕ್ತಿಯಿದ್ದು, ಭಾಷೆ ಬದುಕಿನ ಸ್ಪಷ್ಟವಾದ ಚಿತ್ರಣವನ್ನು ನೀಡುತ್ತದೆ. ಆದ್ದರಿಂದ ಬಾಷೆ ಬಳಸಿ ಬರೆದ ಪುಸ್ತಕವನ್ನು ಪ್ರತಿಯೊಬ್ಬರೂ ಪೂಜಿಸುವ ಆರಾಧಿಸುವ ಪದ್ಧತಿ ಅನಾದಿ ಕಾಲದಿಂದ ಚಾಲ್ತಿಯಲ್ಲಿದೆ ಎಂದು ಖ್ಯಾತ ಸಾಹಿತಿ ನಾ. ಡಿಸೋಜ ಅಭಿಪ್ರಾಯಪಟ್ಟರು. ಭಾನುವಾರ ಪಟ್ಟಣದ ಸಾಂಸ್ಕೃತಿಕ ಭವನದ ಸುರಗಿ ವೇದಿಕೆಯಲ್ಲಿ ಜನಸ್ಪಂದನಾ ಟ್ರಸ್ಟ್, ಸುವ್ವಿ
ಪಬ್ಲಿಕೇಷನ್ ವತಿಯಿಂದ ನಡೆದ ಶಿಕಾರಿಪುರ ಸಾಹಿತ್ಯೋತ್ಸವ -2018 ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯಕ್ಕೆ ವಿಶೇಷವಾದ ಶಕ್ತಿಯಿದೆ. ಸಂಗೀತ, ಚಿತ್ರಕಲೆ, ನೃತ್ಯ, ಶಿಲ್ಪಕಲೆ ಪ್ರದರ್ಶನಕ್ಕೆ ಅಸಾಧ್ಯವಾದ ಜನಾಕರ್ಷಣೆ ಸಾಹಿತ್ಯಕ್ಕೆ ಇದೆ. ಇಂತಹ ಸಮ್ಮೇಳನದಲ್ಲಿ ಸಾಹಿತ್ಯದ ಬಗ್ಗೆ ಚರ್ಚೆ ಅವಲೋಕನಗಳಿಗೆ ವೇದಿಕೆ ದೊರೆಯಲಿದೆ. ಶಿಕಾರಿಪುರದ ಸಾಹಿತ್ಯೋತ್ಸವದ ಮೂಲಕ ಹೊಸ ಮನ್ವಂತರ ಆರಂಭವಾಗುವ ಶುಭ ಸೂಚನೆಗಳಿದೆ ಎಂದು ಪ್ರಶಂಸಿಸಿದ ಅವರು, ಎಲ್ಲಾ ಭಾಷೆಗಳಿಗೆ ಸಂವಹನಾ ಶಕ್ತಿಯಿದ್ದು ಬಾಷೆಯನ್ನು ಬಳಸಿ ಶಬ್ದದ ಮೂಲಕ ರಚಿಸಲಾದ ಪುಸ್ತಕದಿಂದ ಪ್ರತಿಯೊಬ್ಬರಿಗೂ ಹೊಸ ವಿಚಾರ ಆಲೋಚನೆಗಳಿಗೆ ಪ್ರೇರಣೆ ದೊರೆಯಲಿದೆ ಎಂದು ತಿಳಿಸಿದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ತಂತ್ರಜ್ಞಾನದಿಂದ ಮಾಹಿತಿ ಮಾತ್ರ ಸಾಧ್ಯ. ಸಾಹಿತ್ಯದಿಂದ ಜ್ಞಾನ ವೃದ್ಧಿಸಲಿದೆ. ದೇಶ ಸುತ್ತಬೇಕು. ಕೋಶ ಓದಬೇಕು. ಇದರಿಂದ ಸಾಕಷ್ಟು ಅನುಭವ ದೊರೆಯಲಿದೆ ಎಂದು ತಿಳಿಸಿದರು.
ಕಾಲೇಜು ಅವಧಿಯಲ್ಲಿಯೇ ಕನ್ನಡ ಸಾಹಿತ್ಯ ಲೋಕದ ಹಲವು ದಿಗ್ಗಜರ ಕೃತಿ ಅಧ್ಯಯನದ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕಾಗಿದೆ. ಪದವಿಯಲ್ಲಿನ ಅಂಕದ ಬಗ್ಗೆ ಹೆಚ್ಚಿನ ಗಮನ ನೀಡದೆ ಜೀವನದಲ್ಲಿ ಹೆಚ್ಚು ಅಂಕ ಗಳಿಕೆಗೆ ಸಾಹಿತ್ಯ ಅಧ್ಯಯನ ಅನಿವಾರ್ಯ. ಇದರಿಂದ ವ್ಯಕ್ತಿ ಪರಿಪೂರ್ಣವಾಗಲು ಸಾಧ್ಯ ಎಂದರು.
ಪ್ರಾಸ್ತಾವಿಕವಾಗಿ ಸಾಹಿತ್ಯೋತ್ಸವ ಸಮಿತಿ ಸಂಚಾಲಕ ಜಿ. ಸುಧಾಕರ್ ಹಿರೇಕಸವಿ ಮಾತನಾಡಿ, ತಾಲೂಕು ಐತಿಹಾಸಿಕ, ಸಾಂಸ್ಕೃತಿಕ, ಸಾಹಿತ್ಯಕ ಶ್ರೀಮಂತಿಕೆಯನ್ನು ಹೊಂದಿದ್ದು ದೇಶದ ಸಾಂಸ್ಕೃತಿಕ ಚರಿತ್ರೆಗೆ ಬಹು ದೊಡ್ಡ ಕೊಡುಗೆಯನ್ನು ಸಲ್ಲಿಸಿದೆ ಎಂದು ತಿಳಿಸಿದರು.
ಖ್ಯಾತ ಕತೆಗಾರ್ತಿ ಜಯಶ್ರೀ ಕಾಸರವಳ್ಳಿ, ಕವಯತ್ರಿ ಅನಿತಾ ಪಿ. ಪೂಜಾರಿ ತಾಕೋಡೆ ಅವರಿಗೆ ಅಲ್ಲಮ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಬಿ.ಎನ್. ಸುನೀಲ್‌ಕುಮಾರ್ ವಹಿಸಿದ್ದರು. ಪುರಸಭಾ ಸದಸ್ಯ ವಸಂತ ಗೌಡ, ಬಿಇಒ ಸಿದ್ದಪ್ಪ, ಭೂಗರ್ಭ ವಿಜ್ಞಾನಿ ಡಾ| ಎಂ.ಷಣ್ಮುಖಪ್ಪ, ಸತೀಶ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!
CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ
Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
Derogatory Term: ರಾಜಭವನ ಅಂಗಳಕ್ಕೆ ತಲುಪಿದ ಲಕ್ಷ್ಮೀ ಹೆಬ್ಬಾಳ್ಕರ್- ಸಿ.ಟಿ.ರವಿ ವಾಗ್ವಾದ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Session: ಹೊಸ ವರ್ಷಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ “ಕೈ’ ಹಾಕಲಿದೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.