ದರ್ಶನ ಇಲ್ಲದಿದ್ರೂ ಸಿಗಂದೂರಲ್ಲಿ ಭಕ್ತರ ದಂಡು
ಬೇರೆ ಬೇರೆ ಸ್ಥಳಗಳಿಂದ ಭಕ್ತರು, ಪ್ರವಾಸಿಗರ ಆಗಮನ-ಸ್ಥಳೀಯರಲ್ಲಿ ಆತಂಕ
Team Udayavani, Jun 30, 2020, 1:22 PM IST
ಸಾಗರ: ಸಿಗಂದೂರಿನ ಚೌಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಲು ಲಾಂಚ್‌ನಲ್ಲಿ ಪ್ರವಾಸಿ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ.
ಸಾಗರ: ತಾಲೂಕಿನ ಪ್ರಮುಖ ಧಾರ್ಮಿಕ ಸ್ಥಳಗಳಲ್ಲೊಂದಾದ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಭಕ್ತರಿಗೆ ನಿರ್ಬಂಧ ಮುಂದುವರೆದಿದ್ದರೂ ರಾಜ್ಯದ ಬೇರೆ ಬೇರೆ ಸ್ಥಳಗಳಿಂದ ಭಕ್ತರು, ಪ್ರವಾಸಿಗರು ಖಾಸಗಿ ವಾಹನಗಳಲ್ಲಿ ಆಗಮಿಸುತ್ತಿದ್ದಾರೆ. ಇದು ಸ್ಥಳೀಯರ ಆತಂಕ ಹೆಚ್ಚಿಸಿದೆ. ರಾಜ್ಯದಲ್ಲಿ ಕೊರೊನಾ ಭಯ ತೀವ್ರವಾಗುತ್ತಿದ್ದರೂ ಲಾಕ್‌ಡೌನ್ ಸಡಿಲಿಕೆಯಾಗಿದ್ದರಿಂದ ಎಲ್ಲೆಡೆಯಿಂದ ಪ್ರವಾಸಿಗರು ಆಗಮಿಸುತ್ತಲೇ ಇದ್ದಾರೆ. ಕೆಲ ದಿನಗಳ ಹಿಂದೆ ಈ ತುಮರಿ ದ್ವೀಪದ ಹಳ್ಳಿಯೊಂದರಲ್ಲಿ ಯುವಕನೋರ್ವನಿಗೆ ಕೊರೊನಾ ಸೋಂಕು ತಗುಲಿದ್ದರೂ, ಆತ ಬೇರೆ ರಾಜ್ಯದಿಂದ ಬಂದು ಕ್ವಾರಂಟೈನ್ ಆಗಿದ್ದ ಹಿನ್ನೆಲೆಯಲ್ಲಿ ಸೋಂಕು ಪಸರಿಸಿರಲಿಲ್ಲ. ಆದರೆ ಈಗ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಸಿಗಂದೂರು ಪ್ರದೇಶವನ್ನು ಸೂಕ್ಷ್ಮವಾಗಿಸಿದೆ.
ಈಗಾಗಲೇ ತಾಲೂಕಿನ ವರದಪುರದಲ್ಲಿ ಸರ್ಕಾರದ ಸಡಿಲಿಕೆಯ ಅವಕಾಶದ ಹೊರತಾಗಿಯೂ ಶ್ರೀಧರರ ಸಮಾಧಿ ದರ್ಶನ ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಈ ನಡುವೆ ಸಿಗಂದೂರಿನಲ್ಲಿಯೂ ಭಕ್ತರಿಗೆ ನಿಷೇಧ ಮುಂದುವರಿಸಿದ್ದನ್ನು ಕ್ಷೇತ್ರದ ವ್ಯವಸ್ಥಾಪಕರಾದ ರವಿಕುಮಾರ್ ಕೆಲ ದಿನಗಳ ಹಿಂದೆ ಪ್ರಕಟಣೆಯಲ್ಲಿ ತಿಳಿಸಿದ್ದರು. ಆದರೂ ಜನ ಸಿಗಂದೂರಿನತ್ತ ಧಾವಿಸುತ್ತಿದ್ದಾರೆ. ಜನರ ಒತ್ತಡಕ್ಕೆ ಮಣಿದು ಸಿಗಂದೂರಿನ ಚೌಡೇಶ್ವರಿಯ ದರ್ಶನ, ಪೂಜೆ, ಸೇವೆಗಳಿಗೆ ಯಾವುದೇ ರೀತಿಯಲ್ಲಿ ಅವಕಾಶ ಕೊಡಬಾರದು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈಗಿನ ಪರಿಸ್ಥಿತಿಯನ್ನು ಸೂಕ್ತವಾಗಿ ಅವಲೋಕಿಸಿ, ಶರಾವತಿ ಹಿನ್ನೀರಿನಲ್ಲಿ ತುಮರಿ ಭಾಗಕ್ಕೆ ಸಂಚರಿಸಲು ಸ್ಥಳೀಯರಿಗೆ ಮಾತ್ರ ಲಾಂಚ್‌ನಲ್ಲಿ ಅವಕಾಶ ಕಲ್ಪಿಸುವ ಷರತ್ತನ್ನು
ಜಿಲ್ಲಾಡಳಿತ ಜಾರಿಗೆ ತಂದು ಕೋವಿಡ್ ಆಪತ್ತಿನಿಂದ ಸ್ಥಳೀಯರನ್ನು ಕಾಪಾಡಬೇಕು ಎಂದು ತುಮರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಜಿ.ಟಿ. ಸತ್ಯನಾರಾಯಣ ಅವರು
ಡಿಸಿಯವರಿಗೆ ಮನವಿ ಮಾಡಿದ್ದಾರೆ.
ನಾನು ಊರಿಗೆ ಬರುವಾಗ ಬೆಂಗಳೂರು ರಿಜಿಸ್ಟ್ರೇಷನ್ ಇರುವ ಬಹಳಷ್ಟು ವಾಹನಗಳು ಲಾಂಚಿನಲ್ಲಿದ್ದವು. ನಿಜಕ್ಕೂ ಅಂಜಿಕೆಯಾಗುತ್ತಿದೆ. ಬೆಂಗಳೂರು ಈಗ ಅತಿ ಹೆಚ್ಚು ಕೊರೊನಾ ಸೋಂಕಿತರ ಹೊಂದಿರುವ ನಗರವಾಗಿದೆ. ಅಲ್ಲಿಂದ ಬಂದವರೊಂದಿಗೆ ಪ್ರಯಾಣಿಸುವಾಗ ಅತೀ ಎಚ್ಚರ ಅಗತ್ಯ. ಈ ಪ್ರವಾಸಿಗರು ಮಾಸ್ಕ್ ಸಹ ಧರಿಸುತ್ತಿಲ್ಲ. ತಾಲೂಕು ಆಡಳಿತದ ಗಮನ ಈ ಕಡೆ ಬಹು ಮುಖ್ಯವಾಗಿದೆ. ರಾಮಸ್ವಾಮಿ ಕಳಸವಳ್ಳಿ, ಸ್ಥಳೀಯ ಹಾಗೂ ಸಾಗರ ಬಳಕೆದಾರರ ವೇದಿಕೆ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
40 percent commission ಸುಳ್ಳು ಸಾಬೀತು : ಕಾಂಗ್ರೆಸಿಗರಿಗೆ ತಾಕೀತು ಮಾಡಿದ ಯಡಿಯೂರಪ್ಪ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ
Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.