ಡ್ರಗ್ಸ್ ಮಾಫಿಯಾ ಮಟ್ಟ ಹಾಕಲು ಕಠಿಣ ಕಾನೂನು ರೂಪಿಸಿ
Team Udayavani, Sep 22, 2020, 8:02 PM IST
ಶಿವಮೊಗ್ಗ: ಡ್ರಗ್ ಮಾಫಿಯಾದಲ್ಲಿ ತೊಡಗಿರುವವರನ್ನು ಮಟ್ಟಹಾಕಲು ಕಠಿಣ ಕಾನೂನು ರೂಪಿಸಬೇಕೆಂದು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಮಾಡಿದೆ.
ರಾಜ್ಯದಲ್ಲಿ ಇತ್ತೀಚೆಗೆ ಮಾದಕ ವಸ್ತುಗಳ ಪಿಡುಗು ಹೆಚ್ಚಾಗಿರುವುದು ವಿಷಾದಕರ ಮತ್ತು ಖಂಡನೀಯ. ಇದು ಕೇವಲ ಯುವ ಸಮೂಹವನ್ನಷ್ಟೇ ಅಲ್ಲದೇ ಎಲ್ಲಾ ವಯೋಮಾನದವರನ್ನು ಕೂಡ ಗುರಿಯಾಗಿಸಿಕೊಂಡಿದೆ. ದೇಶಕ್ಕೆ ಆದರ್ಶವಾಗಬೇಕಾದ ವ್ಯಕ್ತಿಗಳು ವ್ಯಸನಿಗಳಾಗುತ್ತಿರುವುದು ಅತ್ಯಂತ ದುರಂತ ಎಂದು ಪ್ರತಿಭಟನಾಕಾರರು ದೂರಿದರು.
ಈ ಡ್ರಗ್ಸ್ ದಂಧೆಗೆ ಸಿನಿಮಾ ಲೋಕದವರು ಬರುತ್ತಿರುವುದು ತೀರಾ ವಿಷಾದನೀಯ. ಸಾಮಾನ್ಯವಾಗಿ ಯುವ ಸಮೂಹ ಆಕರ್ಷಕ ಮತ್ತು ಜನಪ್ರಿಯವಾದ ಸಿನಿಮಾ ಲೋಕವನ್ನು ಇಷ್ಟಪಡುತ್ತದೆ. ನಟ, ನಟಿಯರ ನಡವಳಿಕೆ ಅನುಸರಿಸುತ್ತದೆ. ಇವರ ಮೂಲಕ ಡ್ರಗ್ಸ್ ಕೂಡ ಯುವ ಸಮೂಹವನ್ನುತಲುಪಲು ಸುಲಭದ ದಾರಿಯಾಗುತ್ತದೆ. ಮಾದಕ ವಸ್ತುಗಳ ಬಗ್ಗೆ ಅದರ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಲು, ವ್ಯಸನಿಗಳಾಗದಂತೆ ತಡೆಯಲು ಇಡೀ ರಾಜ್ಯಾದ್ಯಂತ ಜಾಗೃತಿ ಮೂಡಿಸಲು ಎಬಿವಿಪಿ “ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ’ಕ್ಕೆ ಚಾಲನೆ ನೀಡಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ರಾಜ್ಯ ಸರ್ಕಾರ ಎಲ್ಲಾ ಶಾಲಾ, ಕಾಲೇಜುಗಳ ಮುಖ್ಯಸ್ಥರಿಗೆ ತಮ್ಮ ತಮ್ಮ ಕ್ಯಾಂಪಸ್ ಗಳಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ಎಚ್ಚರಿಕೆ ವಹಿಸಬೇಕು ಮತ್ತು ಶಿಕ್ಷಣ ಕ್ಷೇತ್ರವನ್ನು ಮಾದಕ ವಸ್ತುಗಳಿಂದ ರಕ್ಷಿಸಲು ಮಾದಕ ವಸ್ತು ನಿಗ್ರಹದಳ ಸ್ಥಾಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಡ್ರಗ್ ದಂಧೆ ಕೂಡ ಟೆರರಿಸಂ ಭಾಗವೇ ಆಗುವುದರಲ್ಲಿ ಸಂಶಯವಿಲ್ಲ. ದೇಶವನ್ನು ನಾಶ ಮಾಡಲು ಬಾಂಬ್ ಹಾಕಬೇಕಿಲ್ಲ. ದೇಶದ ಯುವಕರನ್ನು ಮಾದಕ ವ್ಯಸನಿಗಳನ್ನಾಗಿ ಮಾಡಿದರೆ ಸಾಕು. ಇದರಿಂದ ದೇಶ ತಾನಾಗೇ ಸರ್ವನಾಶವಾಗುತ್ತದೆ ಎಂಬುದು ಕೂಡ ಸತ್ಯವಾಗಿದೆ. ಆದ್ದರಿಂದ ಈ ದಂಧೆಯಲ್ಲಿ ಇರುವ ರಾಜಕಾರಣಿಗಳೇ ಆಗಲಿ, ಉದ್ಯಮಿಗಳೇ ಆಗಲಿ, ಸಿನಿಮಾ ನಟ, ನಟಿಯರೇ ಆಗಲಿ, ದೊಡ್ಡವರೆನ್ನದೇ ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳಬೇಕು. ಡ್ರಗ್ಸ್ ಮಟ್ಟಹಾಕಲು ಪ್ರಬಲ ಕಾನೂನು ರೂಪಿಸಬೇಕು. ಇದರ ಹಿಂದಿರುವ ಬೃಹತ್ ಜಾಲವನ್ನು ಪತ್ತೆಹಚ್ಚಿ ಶಿಕ್ಷೆ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಎಬಿವಿಪಿಯ ಮಹಾನಗರ ಸಹಕಾರ್ಯದರ್ಶಿ ಪ್ರೇಮ್ ಕುಮಾರ್, ಪ್ರಜ್ವಲ್, ವಿವೇಕ್, ಸುಭಾಷ್, ಯೋಗೀಶ್, ಸುಚೇಂದ್ರ, ರಘುವೀರ್, ಲಿಂಗರಾಜ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
40 percent commission ಸುಳ್ಳು ಸಾಬೀತು : ಕಾಂಗ್ರೆಸಿಗರಿಗೆ ತಾಕೀತು ಮಾಡಿದ ಯಡಿಯೂರಪ್ಪ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ
Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.