9 ವರ್ಷ ಬಳಿಕ ಪ್ರತಿಷ್ಠಿತ ಕುಟುಂಬಗಳ ಮುಖಾಮುಖಿ!
Team Udayavani, Oct 28, 2018, 6:00 AM IST
ಶಿವಮೊಗ್ಗ: ರಾಜ್ಯ ರಾಜಕೀಯದಲ್ಲಿ ಮೈಲಿಗಲ್ಲುಗಳನ್ನು ಸೃಷ್ಟಿಸಿದ ಮಲೆನಾಡಿನ ಎರಡು ಪ್ರಮುಖ ರಾಜಕೀಯ ಕುಟುಂಬಗಳು ಒಂಭತ್ತು ವರ್ಷಗಳ ಬಳಿಕ ಮತ್ತೆ ಮುಖಾಮುಖಿಯಾಗುತ್ತಿವೆ. ಶಿವಮೊಗ್ಗ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಸ್.ಬಂಗಾರಪ್ಪ ಮತ್ತು ಬಿ.ಎಸ್. ಯಡಿಯೂರಪ್ಪ ಹೆಸರು ಚಿರಸ್ಥಾಯಿ. ಈ ಇಬ್ಬರೂ ತಮ್ಮ ಚಾಣಾಕ್ಷತನದ ರಾಜಕಾರಣದಿಂದ ಬಹಳಷ್ಟು ದಾಖಲೆಗಳನ್ನು ನಿರ್ಮಿಸಿದ್ದಾರೆ. ಕೆಲವೊಮ್ಮೆ ಮುಗ್ಗರಿಸಿದ್ದರೂ, ಮತ್ತೆ ಮೇಲೆದ್ದು ಪಕ್ಷಗಳನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ಇಬ್ಬರು ಪ್ರಮುಖ ರಾಜಕಾರಣಿಗಳು ಚುನಾವಣೆಗಳಲ್ಲಿ ನೇರ ಎದುರಾಳಿಗಳಾಗಿದ್ದು ಒಮ್ಮೆ ಮಾತ್ರ. ಕುಟುಂಬದ ಹಿನ್ನೆಲೆಯಿಂದ ನೋಡಿದಾಗ ಒಟ್ಟಾರೆ ನಾಲ್ಕನೇ ಬಾರಿ ಎದುರಾಗುತ್ತಿವೆ.
ಜಿಲ್ಲೆ ಜತೆಗೆ ರಾಜ್ಯ ರಾಜಕಾರಣದಲ್ಲಿಯೂ ಚಾಣಾಕ್ಷತನ ಮೆರೆದ ಬಂಗಾರಪ್ಪ ಮತ್ತು ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿ ಅಧಿಕಾರಕ್ಕೆ ತಂದ ಯಡಿಯೂರಪ್ಪ ಅವರ ಕುಟುಂಬದ ಕುಡಿಗಳು ಲೋಕಸಭೆ ಉಪಚುನಾವಣೆಯಲ್ಲಿ ಎದುರಾಳಿಗಳಾಗಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಬಿ.ವೈ. ರಾಘವೇಂದ್ರ ಹಾಗೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟದಿಂದ ಮಾಜಿ ಶಾಸಕ ಮಧು ಬಂಗಾರಪ್ಪ ಕಣದಲ್ಲಿದ್ದು, ಸೈದ್ದಾತಿಕವಾಗಿ ವಿರುದ್ದ ದಿಕ್ಕಿನ ಎರಡು ಕುಟುಂಬಗಳು ಮತ್ತೂಮ್ಮೆ ತೊಡೆ ತಟ್ಟಿವೆ.
“ಸೋಲಿಲ್ಲದ ಸರದಾರ’ ಎಂದೇ ಖ್ಯಾತಿ ಪಡೆದಿದ್ದ ಬಂಗಾರಪ್ಪ ಅವರಿಗೆ ಅವರ ಕಡೇ ಎರಡು ಚುನಾವಣೆಗಳಲ್ಲಿ ಸೋಲಿನ ರುಚಿ ತೋರಿಸಿದ್ದು ಇದೇ ಯಡಿಯೂರಪ್ಪ ಕುಟುಂಬ. ಒಮ್ಮೆ ಯಡಿಯೂರಪ್ಪ ಸೋಲುಣಿಸಿದರೆ, ಮತ್ತೂಮ್ಮೆ ಅವರ ಪುತ್ರ ರಾಘವೇಂದ್ರ ಸೋಲುಣಿಸಿದ್ದರು. ಅದಾದ ಬಳಿಕ ಈ ಎರಡು ಕುಟುಂಬಗಳು ಪರಸ್ಪರ ಎದುರಾಗಿರಲಿಲ್ಲ. 9 ವರ್ಷಗಳ ಬಳಿಕ ಈಗ ಅದಕ್ಕೆ ವೇದಿಕೆ ಒದಗಿಸಿದೆ. ಬಿಜೆಪಿಗೆ ಸಮರ್ಥ ಎದುರಾಳಿಯಾಗಿ ಮಧು ಬಂಗಾರಪ್ಪ ಕಣದಲ್ಲಿದ್ದಾರೆ.
ಬಂಗಾರಪ್ಪ ಹಾಗೂ ಯಡಿಯೂರಪ್ಪ 2008ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ನೇರ ಎದುರಾಳಿಗಳಾದರು. ಆದರೆ, ಅಷ್ಟೊತ್ತಿಗಾಗಲೇ ವಯಸ್ಸು ಹಾಗೂ ಅನಾರೋಗ್ಯದ ಕಾರಣ ಬಂಗಾರಪ್ಪ ರಾಜಕೀಯವಾಗಿ ದಣಿದಿದ್ದರು. ಜತೆಗೆ ಆರ್ಥಿಕವಾಗಿಯೂ ಕುಗ್ಗಿ ಹೋಗಿದ್ದರು. ಇಷ್ಟಾಗಿಯೂ ಛಲ ಬಿಡದೆ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಯಡಿಯೂರಪ್ಪ ವಿರುದ್ದ ತೊಡೆ ತಟ್ಟಿ ಶಿಕಾರಿಪುರದಿಂದ ಕಣಕ್ಕಿಳಿದರು. ಆದರೆ, ಶಿಕಾರಿಪುರದ ಜನ ಬಂಗಾರಪ್ಪ ಅವರಿಗೆ ಸುಮಾರು 46 ಸಾವಿರ ಮತಗಳ ಅಂತರದಿಂದ ಸೋಲುಣಿಸಿದ್ದರು. ಅದಾಗಿ ಒಂದೇ ವರ್ಷದಲ್ಲಿ ಬಂದ 2009ರ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಬಂಗಾರಪ್ಪ ತಮ್ಮ ಕಟ್ಟಕಡೆಯ ಸ್ಪರ್ಧೆಯಲ್ಲಿ ಬಿ.ವೈ. ರಾಘವೇಂದ್ರಗೆ ಪ್ರತಿಸ್ಪ ರ್ಧಿಯಾಗಿದ್ದರು. ವಯೋಮಾನ, ಕಾಯಿಲೆ ನಡುವೆ ಸ್ಪರ್ಧಿಸಿ 52 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದರು. ತಮ್ಮ ತಂದೆಯ ಜೀವನದ ಕಡೇ ಎರಡು ಚುನಾವಣೆ ಸೋಲಿನ ವಿರುದ್ದ ರಾಜಕೀಯವಾಗಿ ಸೇಡು ತೀರಿಸಿಕೊಳ್ಳುವ ಅವಕಾಶ ಮಧು ಬಂಗಾರಪ್ಪ ಅವರಿಗೆ ದೊರೆತಿದೆ. ಅವಕಾಶ ಎಷ್ಟರ ಮಟ್ಟಿಗೆ ಸದುಪಯೋಗವಾಗಲಿದೆ ಎಂಬ ಕುತೂಹಲ ಜನರಲ್ಲಿದೆ.
ಬಿಎಸ್‌ವೈ ಎದುರು ಶಿವಪ್ಪ ಗೆಲುವು
80ರ ದಶಕದಿಂದಲೂ ಎರಡು ಪ್ರತ್ಯೇಕ ಪಕ್ಷಗಳಲ್ಲಿದ್ದುಕೊಂಡು ರಾಜಕೀಯ ಮಾಡಿಕೊಂಡು ಬಂದಿದ್ದ ಅವರಿಬ್ಬರೂ 1991ರ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಎದುರಾಳಿಗಳಾದರು. ಶಿಕಾರಿಪುರ ವಿಧಾಸಭೆಯಲ್ಲಿ ಸತತ ಎರಡು ಚುನಾವಣೆಗಳಲ್ಲಿ ಜಯಗಳಿಸಿದ್ದ ಯಡಿಯೂರಪ್ಪ ಮೊದಲ ಬಾರಿಗೆ 1991ರಲ್ಲಿ ಲೋಕಸಭೆಗೆ ಸ್ಪರ್ಧೆಗಿಳಿದರು. ಬಂಗಾರಪ್ಪ ಅವರು ತಮ್ಮ ಸಂಬಂಧಿ ಕೆ.ಜಿ.ಶಿವಪ್ಪ ಅವರನ್ನು ಚುನಾವಣೆ ರಾಜಕೀಯಕ್ಕೆ ಕರೆ ತಂದಿದ್ದರು. ಶಿವಪ್ಪ ಅವರು ಹೆಸರಿಗೆ ಮಾತ್ರ ಸ್ಪರ್ಧಿಯಾಗಿದ್ದರೂ ನೈಜವಾಗಿ ಅಲ್ಲಿ ಸ್ಪರ್ಧೆ ಏರ್ಪಟ್ಟಿದ್ದು ಯಡಿಯೂರಪ್ಪ ಮತ್ತು ಬಂಗಾರಪ್ಪ ನಡುವೆ. ಯಡಿಯೂರಪ್ಪರನ್ನು 41 ಸಾವಿರ ಮತಗಳ ಅಂತರದಿಂದ ಮಣಿಸಿ ಕೆ.ಜಿ. ಶಿವಪ್ಪರನ್ನು ಬಂಗಾರಪ್ಪ ಗೆಲ್ಲಿಸಿಕೊಂಡಿದ್ದರು.
● ಶರತ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ
CT Ravi ಜಾಮೀನು ಅರ್ಜಿ ವಿಚಾರಣೆ ಇಂದು ಬೆಳಗಾವಿ ಕೋರ್ಟ್‌ನಿಂದ ಬೆಂಗಳೂರಿಗೆ ವರ್ಗ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.