ರೈತರಿಗೆ ಮತ್ತೆ ಬಂದೂಕಿನಾಟ!

Team Udayavani, Oct 15, 2018, 4:00 PM IST

shiv.jpg

ಹೊಸನಗರ: ರಾಜ್ಯದಲ್ಲಿ ಮತ್ತೆ ಚುನಾವಣೆ ಬಂದಿದೆ. ಈ ಚುನಾವಣೆಯೇ ಸುಖಾಸುಮ್ಮನೆ ದುಂದುವೆಚ್ಚ ಎಂಬ ಚರ್ಚೆ ನಡೆಯುತ್ತಿರುವ ಮಧ್ಯೆಯೇ ಗ್ರಾಮೀಣ ಭಾಗದ ಕೃಷಿಕರು, ಮಲೆನಾಡಿನ ಒಂಟಿಮನೆ ಹೊಂದಿರುವ ಕುಟುಂಬಗಳು ಪರದಾಡುವಂತಾಗಿದೆ. ರೈತರು ತಮ್ಮಲ್ಲಿರುವ ಪರವಾನಗಿ ಹೊಂದಿರುವ ಬಂದೂಕುಗಳನ್ನು ಸ್ಥಳೀಯ ಠಾಣೆಯಲ್ಲಿ ಠೇವಣಿ ಮಾಡುವ ಬಗ್ಗೆ ಜಿಲ್ಲಾಡಳಿತ ಸೂಚಿಸಿರುವುದರಿಂದ ರೈತರು ಪರದಾಡುವಂತಾಗಿದೆ. ಚುನಾವಣೆ ಹೊತ್ತಿನಲ್ಲಿ ಇದು ಮಾಮೂಲಿ ಎಂದೆನಿಸಿದರೂ ಪ್ರಸಕ್ತ ಸನ್ನಿವೇಶದಲ್ಲಿ ತಮ್ಮಲ್ಲಿರುವ ಬಂದೂಕು ಒಪ್ಪಿಸಲು ಮಲೆನಾಡಿಗರು ಮೀನಮೇಷ ಎಣಿಸುವಂತಾಗಿದೆ. ಒಮ್ಮೆ ಬರ ಮತ್ತೂಮ್ಮೆ ಅತಿವೃಷ್ಟಿಯಾದರೆ ಇದೀಗ ಕಾಡುಪ್ರಾಣಿಗಳ ಕಾಟದಿಂದ ತಮ್ಮ ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ಈ ನಡುವೆ ತಮ್ಮಲ್ಲಿದ್ದ ಬಂದೂಕಿನಿಂದ ಹೆದರಿಸಿ ಬೆದರಿಸಿ ಕಷ್ಟಪಟ್ಟು ತಮ್ಮ ಬೆಳೆ ರಕ್ಷಿಸುಕೊಳ್ಳುತ್ತಿದ್ದ ಮಲೆನಾಡ ರೈತರ ಪಾಲಿಗೆ ಬಂದೂಕನ್ನು ಠಾಣೆಗಳಿಗೆ ಒಪ್ಪಿಸುವುದು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.
 
ಒಂಟಿಮನೆ ಪಚೀತಿ!: ಕೃಷಿ ಕುಟುಂಬಗಳ ಪರದಾಟ ಒಂದಡೆಯಾದರೆ ಇನ್ನು ಕಾಡು ಪ್ರದೇಶದಲ್ಲಿ ಹೆಚ್ಚಿರುವ ಒಂಟಿಮನೆ ಕುಟುಂಬಗಳು ತಮ್ಮ ರಕ್ಷಣೆಗಾಗಿ ಪರವಾನಗಿ ಬಂದೂಕು ಪಡೆದುಕೊಂಡಿವೆ. ಒಂದು ಕಡೆ ತಾವು ಭಿತ್ತನೆ ಮಾಡಿದ ಭತ್ತ, ಜೋಳ, ಮೆಣಸು, ಏಲಕ್ಕಿ, ತೆಂಗು, ಅಡಕೆ ಬೆಳೆಯನ್ನು ಕಾಡುಕೋಣ, ಹಂದಿ, ಮಂಗಗಳಿಂದ ರಕ್ಷಿಸಕೊಳ್ಳಬೇಕು. ಮತ್ತೂಂದಡೆ ನಿರ್ಜನ ಪ್ರದೇಶದಲ್ಲಿರುವ ಒಂಟಿಮನೆ ರಕ್ಷಣೆಗಾಗಿ ಪಡೆದ ಬಂದೂಕನ್ನು ಸ್ಥಳೀಯ ಠಾಣೆ ಸುಪರ್ದಿಗೆ ನೀಡುವ ಅಸಹಾಯಕ ಸ್ಥಿತಿ. ಇದು ಇವರ ಪಾಲಿಗೆ ನುಂಗಲಾರದ ಬಿಸಿತುಪ್ಪವಾಗಿದೆ.

ಪದೇ ಪದೇ ಚುನಾವಣೆ: ಮೊನ್ನೆ ಮೊನ್ನೆಯಷ್ಟೆ ನಡೆದ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಲೆನಾಡ ರೈತರು ತಮ್ಮಲ್ಲಿದ್ದ ಬಂದೂಕನ್ನು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಠೇವಣಿ ಮಾಡಿ ಒಂದೂವರೆ ತಿಂಗಳಿಗೆ ವಾಪಸ್‌ ಪಡೆದಿದ್ದರು. ಇದೀಗ ಶಿವಮೊಗ್ಗ ಲೋಕಸಭಾ ಉಪ ಚುನಾವಣೆ ಹಿನ್ನಲೆಯಲ್ಲಿ ಮತ್ತೆ ಬಂದೂಕು ಹಿಡಿದು ಠಾಣೆಗೆ ಬರುವಂತಾಗಿದೆ. 

ಈ ಚುನಾವಣೆ ಮುಗಿಯುವ ಹೊತ್ತಿಗೆ ಲೋಕಸಭಾ ಚುನಾವಣೆ ನಡೆಯಲಿದ್ದು ಮತ್ತೆ ಬಂದೂಕು ಒಪ್ಪಿಸಬೇಕಾದ ಅನಿವಾರ್ಯತೆ. ಹೀಗಾದರೆ ನಮ್ಮ ಬದುಕು ಹೇಗೆ ಸ್ವಾಮಿ. ಯಾರಲ್ಲಿ ನಮ್ಮ ಕಷ್ಟ ಹೇಳಿಕೊಳ್ಳೋದು ಎಂದು ಮಲೆನಾಡಿಗರು ಅಲವತ್ತುಕೊಳ್ಳುವಂತಾಗಿದೆ.

ಹೊಸನಗರದಲ್ಲಿ 700 ಬಂದೂಕುಗಳು! ಮಲೆನಾಡ ನಡುಮನೆಯಂತಿರುವ ಹೊಸನಗರ ತಾಲೂಕಿನ ಮೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸುಮಾರು 700 ಬಂದೂಕುಗಳಿವೆ. ಹೊಸನಗರ ಠಾಣೆಯಲ್ಲಿ 192, ರಿಪ್ಪನ್‌ಪೇಟೆಯಲ್ಲಿ 313 ಮತ್ತು ನಗರ ಠಾಣೆಯಲ್ಲಿ 197 ಬಂದೂಕುಗಳನ್ನು ರೈತರು ಹೊಂದಿದ್ದಾರೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ತಮ್ಮಲ್ಲಿರುವ ಬಂದೂಕುಗಳನ್ನು ಠಾಣೆಯಲ್ಲಿ ಠೇವಣಿ ಮಾಡುತ್ತಿದ್ದಾರೆ.

„ಕುಮುದಾ ಬಿದನೂರು

ಟಾಪ್ ನ್ಯೂಸ್

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ

Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.