ಆನಂದಪುರ: ಮೊಹರಂ ಆಚರಣೆ
Team Udayavani, Sep 22, 2018, 9:28 AM IST
ಆನಂದಪುರ: ಸಮೀಪದ ಆಚಾಪುರ ಗ್ರಾಪಂ ವ್ಯಾಪ್ತಿಯ ಇಸ್ಲಾಂಪುರ, ಮುರುಘಾಮಠ, ಆಚಾಪುರಗಳಲ್ಲಿ ಮೊಹರಂ
ಆಚರಿಸಲಾಯಿತು. ತ್ಯಾಗ- ಬಲಿದಾನದ ಸಂಕೇತವಾದ ಈ ಹಬ್ಬವನ್ನು ಏಳು ದಿನಗಳಿಂದ ಆಚರಿಸಲಾಯಿತು. ಇದರಲ್ಲಿ 6ನೇ ದಿನ ರಾತ್ರಿ ಕೆಂಡ ಹಾಯುವ ಮೂಲಕ ಕತ್ತಲ ರಾತ್ರಿಯನ್ನು ಆಚರಿಸುತ್ತಾರೆ. ಕೆಂಡ ಹಾಯ್ದ ನಂತರ ಸಾಮೂಹಿಕ ಅನ್ನ ಸಂರ್ತಪಣೆ ನಡೆಯುತ್ತದೆ. ಎಲ್ಲಾ ಭಕ್ತರು ಭಾಗವಹಿಸುತ್ತಾರೆ.
ಈ ಕತ್ತಲ ರಾತ್ರಿಯ ಪೂಜೆಯಲ್ಲಿ ಹಿಂದೆ ದೇವರಿಗೆ ಹರಕೆ ಮಾಡಿಕೊಂಡವರು ಹರಕೆಯನ್ನು ತೀರಿಸುತ್ತಾರೆ. ಹಿಂದೂ ಮತ್ತು ಮುಸ್ಲಿಮರು ಒಂದಾಗಿ ಸಂಭ್ರಮದಿಂದ ಆಚರಿಸುವಂತಹ ಹಬ್ಬವಾಗಿದ್ದು ಇದರಿಂದ ಹಿಂದೂ ಮತ್ತು
ಮುಸ್ಲಿಮರಲ್ಲಿ ಐಕ್ಯತೆಯ ಭಾವನೆ ಮೂಡಲಿದೆ ಎಂದು ಸಮಿತಿಯ ಅಧ್ಯಕ್ಷ ಅಬ್ಬಲ್ ಖನ್ನಿ ಹೇಳಿದರು. ಶುಕ್ರವಾರ ಬೆಳಗ್ಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಮೊಹರಂ ಉತ್ಸವ ಸಾಗಿದ್ದು ದೇವರಿಗೆ ಭಕ್ತರು ಸಕ್ಕರೆ, ಊದಿನಬತ್ತಿ ನೀಡಿ ಪೂಜೆ ಸಲ್ಲಿಸಿದರು. ಇಸ್ಲಾಂಪುರದ ಹಬ್ಬದ ಸಮಿತಿಯ ಕಾರ್ಯದರ್ಶಿ ನಬಿ, ಸದಸ್ಯರಾದ ಶಾಂತಕುಮಾರ್, ಗೌಸ್ ಬಷೀರ್, ಯೂಸೂಬ್, ಮಹಮದ್ ಗೌಸ್, ಮಹಮದ್ ಆಲಿ, ಅಸ್ಲಾಂ, ತಾಪಂ ಸದಸ್ಯೆ ಆನಂದಿ ಲಿಂಗರಾಜ್, ಆಚಾಪುರ ಗ್ರಾಪಂ ಉಪಾಧ್ಯಕ್ಷೆ ಮೇನಕಾ, ಸದಸ್ಯರಾದ ಸುರೇಶ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Anandapura: ನಿಂತಿದ್ದ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದು ಕಾರು ಪಲ್ಟಿ
Sagara: ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗೆ ನೇಣು ಬಿಗಿದು ಯುವಕ ಆತ್ಮಹತ್ಯೆ
Sagara: ಮಿಡಿ ಮಾವು, ವಿಶ್ವವಿದ್ಯಾಲಯದ ನಡೆದಾಡುವ ವಿಶ್ವಕೋಶ ಬಿ.ವಿ.ಸುಬ್ಬರಾವ್ ಇನ್ನಿಲ್ಲ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.