ನೀರಿನ ರಭಸಕ್ಕೆ ಕೊಚ್ಚಿ ಹೋಗುವ ಭೀತಿಯಲ್ಲಿ ಕಾಲು ಸಂಕ: ಅಣುವಳ್ಳಿ ಗ್ರಾಮಸ್ಥರ ಆಕ್ರೋಶ
Team Udayavani, Jul 4, 2022, 12:52 PM IST
ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಅಣುವಳ್ಳಿಯಿಂದ ಮೇಗರವಳ್ಳಿಗೆ ಹೋಗಬೇಕೆಂದರೆ ಅಲ್ಲಿರುವ ಹಳ್ಳವನ್ನು ದಾಟಿಕೊಂಡು ಹೋಗಬೇಕು.
ನಾಲ್ಕು ವರ್ಷಗಳ ಹಿಂದೆ ಈ ಕಾಲು ಸಂಕ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು ನಂತರ ಸಂಪರ್ಕ ಪೂರ್ಣ ಕಡಿತವಾಗಿದ್ದು ಈ ಹಳ್ಳಕ್ಕೆ ಅಲ್ಲಿನ ಗ್ರಾಮಸ್ಥರೆ ಎಲ್ಲಾ ಸೇರಿ ಗ್ರಾಮಪಂಚಾಯಿತಿ ಅನುದಾನ ದಿಂದ ಸತತ ನಾಲ್ಕು ವರ್ಷಗಳಿಂದ ತಾತ್ಕಾಲಿಕವಾಗಿ ಅಡಿಕೆ ಮರದ ಸೇತುವೆ ( ಕಾಲು ಸಂಕ ) ಮಾಡಿಕೊಂಡಿದ್ದು ಅದರಲ್ಲಿ ನೆಡೆದುಕೊಂಡು ಹೋಗುತ್ತಿದ್ದರು ಆದರೆ ಈಗ ಈ ಕಾಲುಸಂಕದಲ್ಲಿ ನಡೆದುಕೊಂಡು ಹೋಗುವುದು ಕಷ್ಟ ಸಾಧ್ಯವಾಗಿದೆ.
ಈ ಹಿಂದೆ ಹೊನ್ನೇತಾಳು ಗ್ರಾಮಪಂಚಾಯಿತಿ ವ್ಯಾಪ್ತಿಯ ಕೆಂದಾಳಬೈಲು ಸಮೀಪ ಕಾಲು ಸಂಕದಲ್ಲಿ ಹಳ್ಳ ದಾಟುತ್ತಿರುವಾಗ ಶಾಲಾ ಬಾಲಕಿಯೊಬ್ಬಳು ನೀರಿನಲ್ಲಿ ಕೊಚ್ಚಿ ತೇಲಿ ಹೋದ ನಿದರ್ಶನ ಕೂಡ ನಮ್ಮ ಮುಂದಿದ್ದು ಈ ವಿಷಯ ಕೂಡ ರಾಜ್ಯ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು. ತದನಂತರದಲ್ಲಿ ರಾಜ್ಯಾದ್ಯಂತ ಕಾಲು ಸಂಕಗಳಿಗೆ ವಿಶೇಷ ಹಣವನ್ನಿಟ್ಟು ಎಲ್ಲಾ ಕಾಲು ಸಂಕಗಳು ನಿರ್ಮಾಣ ಮಾಡುವತ್ತ ಸರ್ಕಾರ ಮುಂದಾಗಿತ್ತು .
ಆದರೆ ಕೆಂದಾಳಬೈಲಿನ ಪಕ್ಕದ ಕೆಲವೇ ಕಿಲೋ ಮೀಟರ್ ದೂರದ ಊರಾದ ಅಣುವಳ್ಳಿಯಲ್ಲಿ ಅರ್ಧ ಬರ್ಧ ( ಅರ್ಧ ಕಲ್ಲು ಚಪ್ಪಡಿ, ಅರ್ಧ ಅಡಿಕೆ ಮರ ) ಕಾಲು ಸಂಕ ಇರುವುದು ದುರಂತವೇ ಸರಿ. ಅಣುವಳ್ಳಿ ಕಾಲು ಸಂಕದಲ್ಲಿ ಪ್ರತಿನಿತ್ಯ ಶಾಲೆಗೆ ಹೋಗುವ ಮಕ್ಕಳು, ಕೆಲಸಕ್ಕೆ ಹೋಗುವವರು, ವಯೋ ವೃದ್ದರು ಎಲ್ಲರು ಕೂಡ ಇದರಲ್ಲಿಯೇ ನೆಡೆದುಕೊಂಡು ಹೋಗಬೇಕಾಗಿದೆ.
ಹಾಗೆಯೇ ಈ ಭಾಗದಲ್ಲಿ ವೀರಭದ್ರೇಶ್ವರ ದೇವಸ್ಥಾನವಿದ್ದು ಈ ದೇವಸ್ಥಾನಕ್ಕೆ ಹೋಗಬೇಕಾದರೆ ಅನೇಕ ಭಕ್ತಾದಿಗಳು ಇದೆ ಕಾಲು ಸಂಕವನ್ನು ಅವಲಂಬಿಸಬೇಕು. ಮಲೆನಾಡಿನ ಮಳೆ ಅಬ್ಬರ ಜೋರಾಗಿರುವುದರಿಂದ ತಾತ್ಕಾಲಿಕವಾಗಿ ನಿರ್ಮಾಣ ಮಾಡಿರುವ ಈ ಕಾಲು ಸಂಕ ನೀರಿನಲ್ಲಿ ಕೊಚ್ಚಿ ಹೋಗುವ ಸಾಧ್ಯತೆ ಇದ್ದು ಅಪಾಯ ಮುನ್ಸೂಚನೆ ನೀಡುತ್ತಿದೆ. ಯಾವುದಾದರೂ ದುರಂತವಾಗುವ ಮುಂಚೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ ಸೇತುವೆ ನಿರ್ಮಾಣ ಮಾಡಿಕೊಡಬೇಕೆಂದು ಅಲ್ಲಿನ ಗ್ರಾಮಸ್ಥರು ತಿಳಿಸಿದ್ದಾರೆ.
-ಶ್ರೀಕಾಂತ್ ವಿ ನಾಯಕ್ , ತೀರ್ಥಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್ ಸಿಸಿಬಿಗೆ ವರ್ಗಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.