ನಿವೇಶನ ಪರಭಾರೆ ಪ್ರಕರಣ ಸಿಒಡಿಗೊಪ್ಪಿಸಿ

Team Udayavani, Jul 27, 2017, 2:46 PM IST

27-SHIV-5.jpg

ಶಿವಮೊಗ್ಗ: ಆಶ್ರಯ ಸಮಿತಿಯಿಂದ ಈ ಹಿಂದೆ ಮಂಜೂರು ಮಾಡಿರುವ ನಿವೇಶನಗಳ ಅಕ್ರಮ ಪರಭಾರೆ ಮತ್ತು ಖಾತೆ ಬದಲಾವಣೆ ಪ್ರಕರಣಗಳನ್ನು ಸಿಒಡಿ ತನಿಖೆಗೊಪ್ಪಿಸಲು ಬುಧವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಪಾಲಿಕೆ ಸಭಾಂಗಣದಲ್ಲಿ ನಡೆದ ಸಭೆಯ ಆರಂಭದಲ್ಲಿ ಸದಸ್ಯ ಮೋಹನರೆಡ್ಡಿ ಮಾತನಾಡಿ, ಪಾಲಿಕೆಯಿಂದ ನೀಡಲಾದ ಸುಮಾರು ನಾಲ್ಕು ನೂರಕ್ಕೂ ಅಧಿಕ ನಿವೇಶನಗಳ ಮೂಲ ಮಾಲೀಕರ ಖಾತೆಯನ್ನು ಅಕ್ರಮವಾಗಿ ಬದಲಾವಣೆ ಮಾಡಲಾಗಿದೆ ಎಂದು ಆರೋಪಿಸಿದರು. ಆಶ್ರಯ ಮನೆ, ನಿವೇಶನಗಳ ಹಕ್ಕುಪತ್ರ ಮತ್ತು ಸಾಲ ತೀರುವಳಿ ಪತ್ರ ಮೂಲ ಮಾಲೀಕರ ಹೆಸರಿನಲ್ಲಿದೆ. ಆದರೆ ಪಾಲಿಕೆ ಕೆಲ ಅಧಿಕಾರಿ, ಸಿಬ್ಬಂದಿಗಳು ಅಕ್ರಮವಾಗಿ ಬೇರೆಯವರ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಟ್ಟಿದ್ದಾರೆ. ಇದು ಭಾರೀ ದೊಡ್ಡ ಹಗರಣವಾಗಿದ್ದು, ಹಲವು ವರ್ಷಗಳಿಂದ ಗುಪ್ತವಾಗಿ
ನಡೆದುಕೊಂಡು ಬರುತ್ತಿದೆ. ಈ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಆಶ್ರಯ ನಿವೇಶನಗಳನ್ನು ಬೇರೆಯವರಿಗೆ ಅಕ್ರಮ ಖಾತೆ ಮಾಡಿಸುತ್ತಿರುವ ಬ್ರೋಕರ್‌ಗಳು, ಇದಕ್ಕೆ  ಪಾಲಿಕೆ ಅಧಿಕಾರಿಗಳ ಸಹಕಾರ ಪಡೆಯುತ್ತಿದ್ದಾರೆ. ಇದರಿಂದ ಜನಪ್ರತಿನಿಧಿಗಳಿಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಆರೋಪಿಸಿದರು. ಆಶ್ರಯ ಸಮಿತಿ ಅಧ್ಯಕ್ಷರೂ ಆದ ಶಾಸಕ
ಕೆ.ಬಿ. ಪ್ರಸನ್ನಕುಮಾರ್‌ ಮಾತನಾಡಿ, ಆಕ್ರಮ ಖಾತೆಗಳಾಗಿ ಬಾರೀ ಅನಾಹುತ ನಡೆದಿದೆ. ಪಾಲಿಕೆಯಿಂದಲೇ ತನಿಖೆ ನಡೆಸಿ ಬಗೆಹರಿಸಲು
ಸಾಧ್ಯವಿಲ್ಲ. ಯಾರದೋ ಹೆಸರಲ್ಲಿ ಹಕ್ಕುಪತ್ರ ಇದ್ದರೆ, ಮತ್ಯಾರೋ ಖಾತೆ ಮಾಡಿಸಿಕೊಂಡಿದ್ದಾರೆ, ಆದ್ದರಿಂದ ಸಿಒಡಿ , ಎಸಿಬಿ ಅಥವಾ ಲೋಕಾಯುಕ್ತ ತನಿಖೆ ಅಗತ್ಯವಿದೆ ಎಂದರು.

ಆಡಳಿತ ಪಕ್ಷದ ನಾಯಕ ನಾಗರಾಜ್‌ ಕಂಕಾರಿ ಮಾತನಾಡಿ, ಇದೊಂದು ದೊಡ್ಡ ಹಗರಣ, ಇದರ ತನಿಖೆಯಾಗಲೇ ಬೇಕು ಎಂದರೆ, ಸದಸ್ಯ ಪಾಲಾಕ್ಷಿ, ಈ ಹಗರಣದ ತನಿಖೆ ನಡೆಯುವವರೆಗೂ ಹೊಸ ಖಾತೆ ಮಾಡುವುದನ್ನು ನಿಲ್ಲಿಸಬೇಕು, ಅಕ್ರಮಗಳನ್ನು ತಡೆಯಬೇಕು ಎಂದು ಸಲಹೆ ನೀಡಿದರು. ಇದಕ್ಕೆ ಧ್ವನಿಗೂಡಿಸಿದ ವಿಧಾನಪರಿಷತ್‌ ಸದಸ್ಯ ಎಂ.ಬಿ. ಭಾನುಪ್ರಕಾಶ್‌, ಇದು ನಿಜಕ್ಕೂ ಗಂಭೀರ ವಿಷಯವಾಗಿದೆ. ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಜರುಗಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರನ್ನೊಳಗೊಂಡ ತನಿಖಾ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು.  ಪಾಲಿಕೆಯ ಸದಸ್ಯರು ಪಕ್ಷಾತೀತವಾಗಿ ಆರೋಪ ಮಾಡಿದ ಹಿನ್ನೆಲೆಯಲ್ಲಿ ಮೇಯರ್‌ ಏಳುಮಲೈ ಪ್ರಕರಣವನ್ನು ಸಿಒಡಿಗೆ ವಹಿಸಲು ಆದೇಶಿಸಿದರು.

ಅಕ್ರಮ ಖಾತೆ: ನಗರದ 19ನೇ ವಾರ್ಡ್‌ನಲ್ಲಿ ನೀರಾವರಿ ಇಲಾಖೆ ಜಾಗವನ್ನು ಪಾಲಿಕೆಯಲ್ಲಿ ಅಕ್ರಮ ಖಾತೆ ಮಾಡಿಸಲಾಗಿದೆ. ರೆವಿನ್ಯೂ ವಿಭಾಗದ 
ಉಪ ಆಯುಕ್ತ ನಾಗರಾಜ್‌ ಅವರೇ ಇದಕ್ಕೆ ಕಾರಣ ಎಂದು ಆಡಳಿತ ಪಕ್ಷದ ನಾಯಕ ನಾಗರಾಜ್‌ ಕಂಕಾರಿ ಆರೋಪಿಸಿದರು. 

ಪಾಲಿಕೆ ಸದಸ್ಯರಾದ ಮಾಲತೇಶ್‌, ಸುನೀತಾ ಅಣ್ಣಪ್ಪ ಇದೇ ರೀತಿ ಪ್ರಕರಣಗಳನ್ನು ಸಭೆಯ ಗಮನಕ್ಕೆ ತಂದರು. ಅಂತಿಮವಾಗಿ ನಾಗರಾಜ್‌ ಅವರಿಗೆ ಈ ಖಾತೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಭೆಯ ಮುಂದಿಡಲು ಸೂಚಿಸಿ ಸಭೆಯಿಂದ ಹೊರ ಕಳುಹಿಸಲಾಯಿತು. ಪಾಲಿಕೆಯ ಸಭೆಯಲ್ಲಿ ಬೀದಿ ದೀಪದ ಸಮಸ್ಯೆ ಬಗ್ಗೆ ಸುಧೀರ್ಘ‌ ಚರ್ಚೆ ನಡೆಯಿತು. ಆರಂಭದಲ್ಲಿ ಸದಸ್ಯ ನರಸಿಂಹಮೂರ್ತಿ ಮಾತನಾಡಿ, ವಿದ್ಯುತ್‌ ದೀಪಗಳು ಹಾಳಾದರೆ ಬದಲಿಸುವ ವ್ಯವಸ್ಥೆಯೇ ಪಾಲಿಕೆಯಲ್ಲಿಲ್ಲ. ಟೆಂಡರ್‌ ಪಡೆದವರು ಸರಿಯಾಗಿ ನಿರ್ವಹಣೆ ಕೆಲಸ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಂತಿಮವಾಗಿ ವಿದ್ಯುತ್‌ ದೀಪ ನಿರ್ವಹಣೆ ಮಾಡದ ಟೆಂಡರ್‌ದಾರರಿಗೆ ನೋಟಿಸ್‌ ನೀಡಲು, ಮುಂದೆ ಬ್ಲಾಕ್‌ ಲೀಸ್ಟ್‌ಗೆ ಸೇರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಕಾಂಗ್ರೆಸ್‌ನ ಯೋಗೀಶ್‌, ದುರ್ಗಿಗುಡಿ ಬಡಾವಣೆಯಲ್ಲಿ ಹೊಸದಾಗಿ ವಸತಿ ಗೃಹ ಆರಂಭಿಸಿದ್ದು, ಇದಕ್ಕೆ ಪಾಲಿಕೆಯಿಂದ ಲೈಸೆನ್ಸ್‌ ಪಡೆದಿಲ್ಲ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಉಪಮೇಯರ್‌ ರೂಪಾ ಲಕ್ಷ್ಮಣ್‌, ಆಯುಕ್ತ ಮುಲೈ ಮುಹಿಲನ್‌ ಇದ್ದರು.

ಟಾಪ್ ನ್ಯೂಸ್

Tamilnadu:  ಪಟಾಕಿ ತಯಾರಿಕೆ ಕಾರ್ಖಾನೆಯಲ್ಲಿ ಸ್ಫೋಟ- ಆರು ಮಂದಿ ಸಾ*ವು

Tamilnadu:  ಪಟಾಕಿ ತಯಾರಿಕೆ ಕಾರ್ಖಾನೆಯಲ್ಲಿ ಸ್ಫೋಟ- ಆರು ಮಂದಿ ಸಾ*ವು

Siddaramaiah is the outgoing CM: R Ashok

Kalaburagi; ಸಿದ್ದರಾಮಯ್ಯ ಔಟ್‌ ಗೋಯಿಂಗ್ ಸಿಎಂ: ಆರ್ ಅಶೋಕ್

Interview: ಚಿತ್ರ ಒಳ್ಳೆಯದಿದ್ರೆ ಪ್ರೇಕ್ಷಕರು ಕೈಹಿಡಿಯುತ್ತಾರೆ; ದಸ್ಕತ್ ನಿರ್ದೇಶಕ ಅನೀಶ್‌

Interview: ಚಿತ್ರ ಒಳ್ಳೆಯದಿದ್ರೆ ಪ್ರೇಕ್ಷಕರು ಕೈಹಿಡಿಯುತ್ತಾರೆ; ದಸ್ಕತ್ ನಿರ್ದೇಶಕ ಅನೀಶ್‌

8-social-media

Social Media A/c: ಮಕ್ಕಳ ಸೋಷಿಯಲ್‌ ಮೀಡಿಯಾ ಖಾತೆಗೆ ಹೆತ್ತವರ ಒಪ್ಪಿಗೆ ಕಡ್ಡಾಯ?

Jagdeep Singh: ಈ ಸಿಇಒ ಪ್ರತಿದಿನ ಪಡೆಯುವ ಸಂಬಳ 48 ಕೋಟಿ ರೂ!…ಯಾರೀತ ಜಗದೀಪ್‌ ಸಿಂಗ್?

Jagdeep Singh: ಈ ಸಿಇಒ ಪ್ರತಿದಿನ ಪಡೆಯುವ ಸಂಬಳ 48 ಕೋಟಿ ರೂ!…ಯಾರೀತ ಜಗದೀಪ್‌ ಸಿಂಗ್?

6-kambala

Punjalakatte: ಹೊಕ್ಕಾಡಿಗೋಳಿ ವೀರ ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

5-spcl

India- China border: ಭಾರತದ ಗಡಿಯಲ್ಲಿ ಚೀನ ದುಸ್ಸಾಹಸ !

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6=anadpura

Anandapura: ಅಪರಿಚಿತ ವ್ಯಕ್ತಿಯ ಶವ ಪತ್ತೆ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

ಈಶ್ವರಪ್ಪ

Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

Hosanagara: ರಸ್ತೆ ಅಪಘಾತದಲ್ಲಿ ಪತಿ ಮೃತಪಟ್ಟ ಸುದ್ದಿ ಕೇಳಿ ಆತ್ಮಹತ್ಯೆಗೆ ಶರಣಾದ ಪತ್ನಿ

Hosanagara: ರಸ್ತೆ ಅಪಘಾತದಲ್ಲಿ ಪತಿ ಮೃತಪಟ್ಟ ಸುದ್ದಿ ಕೇಳಿ ಆತ್ಮಹತ್ಯೆಗೆ ಶರಣಾದ ಪತ್ನಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

9-chamarajanagara

Chamarajanagar: ದಲಿತರಿಗೆ ಬಾಡಿಗೆ ಮನೆ ನೀಡಿದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ

Tamilnadu:  ಪಟಾಕಿ ತಯಾರಿಕೆ ಕಾರ್ಖಾನೆಯಲ್ಲಿ ಸ್ಫೋಟ- ಆರು ಮಂದಿ ಸಾ*ವು

Tamilnadu:  ಪಟಾಕಿ ತಯಾರಿಕೆ ಕಾರ್ಖಾನೆಯಲ್ಲಿ ಸ್ಫೋಟ- ಆರು ಮಂದಿ ಸಾ*ವು

Siddaramaiah is the outgoing CM: R Ashok

Kalaburagi; ಸಿದ್ದರಾಮಯ್ಯ ಔಟ್‌ ಗೋಯಿಂಗ್ ಸಿಎಂ: ಆರ್ ಅಶೋಕ್

Interview: ಚಿತ್ರ ಒಳ್ಳೆಯದಿದ್ರೆ ಪ್ರೇಕ್ಷಕರು ಕೈಹಿಡಿಯುತ್ತಾರೆ; ದಸ್ಕತ್ ನಿರ್ದೇಶಕ ಅನೀಶ್‌

Interview: ಚಿತ್ರ ಒಳ್ಳೆಯದಿದ್ರೆ ಪ್ರೇಕ್ಷಕರು ಕೈಹಿಡಿಯುತ್ತಾರೆ; ದಸ್ಕತ್ ನಿರ್ದೇಶಕ ಅನೀಶ್‌

8-social-media

Social Media A/c: ಮಕ್ಕಳ ಸೋಷಿಯಲ್‌ ಮೀಡಿಯಾ ಖಾತೆಗೆ ಹೆತ್ತವರ ಒಪ್ಪಿಗೆ ಕಡ್ಡಾಯ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.