Thirthahalli: ಕಳೆದ ಬಾರಿಯ ಟೀಕೆಗೆ ಈ ಬಾರಿ ಉತ್ತರ ಸಿಕ್ಕಿದೆ: ಆರಗ ಜ್ಞಾನೇಂದ್ರ


Team Udayavani, Sep 8, 2023, 3:25 PM IST

Thirthahalli: ಕಳೆದ ಬಾರಿಯ ಟೀಕೆಗೆ ಈ ಬಾರಿ ಉತ್ತರ ಸಿಕ್ಕಿದೆ: ಆರಗ ಜ್ಞಾನೇಂದ್ರ

ತೀರ್ಥಹಳ್ಳಿ : ಕಳೆದ ಬಾರಿ ವರಮಹಾಲಕ್ಷ್ಮಿ ಹಬ್ಬ ಮಾಡಿದಾಗ ವಿರೋಧ ಪಕ್ಷದವರು ಟೀಕೆ ಮಾಡಿದ್ದರು. ಚುನಾವಣೆಗಾಗಿ ಗಿಮಿಕ್ ಮಾಡುತ್ತಾರೆ ಎಂದು ಹೇಳಿದ್ದರು. ಆದರೆ ನಾನು ಹೇಳುತ್ತೀನಿ ಟೀಕೆ ಬಿಡಿ ನೀವು ಇಂತಹ ಕೆಲಸ ಮಾಡಿ. ಎಷ್ಟೋ ಬಡವರಿಗೆ ಹಬ್ಬವನ್ನು ಆಚರಿಸಲು ಆಗುವುದಿಲ್ಲ ಅಂತವರಿಗಾಗಿ ಸಾಮೂಹಿಕವಾಗಿ ಇಂತಹ ಕೆಲಸ ಮಾಡಿದರೆ ಎಷ್ಟೋ ತಾಯಂದಿರಿಗೆ ಅನುಕೂಲವಾಗುತ್ತದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಶುಕ್ರವಾರ ನೆಡೆದ ವರಮಹಾಲಕ್ಷ್ಮಿ ವ್ರತದ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ವರ್ಷವೂ ಕೂಡ ನಮ್ಮ ನಿರೀಕ್ಷೆ ಮೀರಿ ಸೇರಿದ್ದಾರೆ. ಇದ್ದನ್ನು ನೋಡಿದರೆ ಕಳೆದ ಬಾರಿಯ ಟೀಕೆಗೆ ಉತ್ತರ ಸಿಕ್ಕಂತೆ ಇದೆ. ನಮ್ಮಲ್ಲಿ ಕಾರ್ಯಕ್ರಮ ಮಾಡಲು ಸಭಾಂಗಣ ಇಲ್ಲ ಎಂದಾಗ ಯಡಿಯೂರಪ್ಪನವರು ಈ ಸಭಾಂಗಣ ಮಾಡಲು ಸಹಾಯ ಮಾಡಿದ್ದರು ನಮ್ಮ ಬಡ ಆತಿಥ್ಯವನ್ನು ಸ್ವೀಕರಿಸಿ ನನಗೆ ರಾಘಣ್ಣ ನಿಗೆ ಆಶೀರ್ವಾದ ಮಾಡಿ ಎಂದರು.

ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೆ ನಮ್ಮ ತಾಲೂಕಿಗೆ 64 ಸಮುದಾಯ ಭವನ, ಅರಸಾಳಿನಲ್ಲಿ ರೈಲ್ವೆ ನಿಲ್ಲಲು ಅವಕಾಶ,, ತೀರ್ಥಹಳ್ಳಿಗೆ ಹೊಸ ಸೇತುವೆ, ಸಂಘ ಸಂಸ್ಥೆಗಳಿಗೆ ಅನುಕೂಲವಾಗುವಂತೆ ಬಿ ವೈ ರಾಘವೇಂದ್ರ ಕೆಲಸ ಮಾಡಿದ್ದಾರೆ. ಅವರ ಸಹಾಯ ಮರೆಯುವುದಿಲ್ಲ ಎಂದರು.

ನನ್ನ ಗೆಲುವಿಗೆ ಕ್ಷೇತ್ರದ ಮಹಿಳೆಯರೇ ಕಾರಣ:
ನನ್ನ ತಾಯಿ ಈಗಿಲ್ಲ ಆದರೆ ನಿಮಲ್ಲಿ ನನ್ನ ತಾಯಿ ಕಾಣುತ್ತಿದ್ದೇನೆ, ಬಾಳೆಬೈಲಿನಲ್ಲಿ ಕಾಲೇಜು ತರಲು ಹೆಣ್ಣು ಮಕ್ಕಳೇ ಕಾರಣ, ಕಾಲೇಜು ತರದಿದ್ದರೆ ಹೆಣ್ಣು ಮಕ್ಕಳಿಗೆ ಶಿಕ್ಷಣವೇ ಇರುತ್ತಿರಲಿಲ್ಲ ಎಂದು ಕೆಲವರು ಹೇಳುತ್ತಿದ್ದರು. ಭಾರತೀಪುರದ ತಿರುವಿನಲ್ಲಿ ಅಪಘಾತದಲ್ಲಿ ನನ್ನ ಮಗಳು ಹಾಗೂ ಅತ್ತೆ ತೀರಿಕೊಂಡರು ಆ ರೀತಿ ಬೇರೆ ಯಾರಿಗೂ ಆಗಬಾರದು ಎಂದು ಫ್ಲೈ ಓವರ್ ನಿರ್ಮಾಣದ ಕೆಲಸ ಆಗುತ್ತಿದೆ. ಕುಡಿಯುವ ನೀರಿಗಾಗಿ ಜಲಜೀವನ್ ಯೋಜನೆ ಅಡಿಯಲ್ಲಿ ಶುದ್ಧ ಕುಡಿಯುವ ನೀರನ್ನು ತಂದಿದ್ದೇವೆ ಎಂದರು.

ಧರ್ಮವನ್ನು ಅವಹೇಳನ ಮಾಡುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಸರ್ಕಾರ ಕೂಡ ಬೆಂಬಲಿಸಿ ಮಾತನಾಡುತ್ತಿದೆ. ನಿಮ್ಮ ಅಧಿಕಾರವನ್ನು ಜನರು ಸಂಹಾರ ಮಾಡುತ್ತಾರೆ. ಸದ್ಯದಲ್ಲೇ ನಮ್ಮ ಕನಸಿನ ರಾಮಮಂದಿರ ಉದ್ಘಾಟನೆ ಆಗಲಿದೆ. ಇಂತಹ ಒಳ್ಳೊಳ್ಳೆ ಕೆಲಸ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಸದ ಬಿ ವೈ ರಾಘವೇಂದ್ರ ಅವರ ಮೇಲೆ ಮುಂದಿನ ಚುನಾವಣೆಯಲ್ಲಿ ಆಶೀರ್ವಾದ ಇರಲಿ. ವರಮಹಾಲಕ್ಷ್ಮಿ ಎಲ್ಲರಿಗೂ ಒಳ್ಳೆಯದು ಮಾಡಲಿ. ಇಲ್ಲಿರುವ ತಾಯಂದಿರ ಆಯಸ್ಸು ಹೆಚ್ಚಾಗಲಿ. ನಿಮ್ಮೆಲ್ಲರಲ್ಲೂ ಸಂತೋಷ ತುಂಬಿರಲಿ ಎಂದರು.

ಬಿ ವೈ ರಾಘವೇಂದ್ರ ಮಾತನಾಡಿ ಹತ್ತು ಸಾವಿರಕ್ಕೂ ಜನ ಮಹಿಳೆಯರು ಸೇರಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ವ್ರತವನ್ನು ವಯಕ್ತಿಕವಾಗಿ ಮಾಡುವುದು ಬೇರೆ ಸಂಘಟನೆ ಮೂಲಕ ಮಾಡುವುದು ಬೇರೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರು ಸೇರಿರುವುದು ನೋಡಿದರೆ ಭಾರತ ಕಟ್ಟಲು ಇಷ್ಟು ಸಾಕು ಎಂದರು.

ಜ್ಞಾನೇಂದ್ರ ಸೋತಾಗ ಕ್ಷೇತ್ರದ ಅಭಿವೃದ್ಧಿ ಯಾಕೆ ಎಂದು ನಾನು ಕೇಳಿದ್ದೆ, ನಾನು ಸೋತಿರಬಹುದು ಆದರೆ ನನ್ನ ಜನ ಕ್ಷೇತ್ರ ಸೋಲಬಾರದು ಎಂದು ಆರಗ ಜ್ಞಾನೇಂದ್ರ ಹೇಳಿದ್ದರು. ಶ್ರಾವಣ ಮಾಸ ಎಂದರೆ ಹಬ್ಬದ ಸಡಗರ. ಈ ಮಾಸದಲ್ಲಿ ನಾಡಿಗೆ ದೊಡ್ಡ ದೊಡ್ಡ ಹಬ್ಬಗಳನ್ನು ಮಾಡುವ ಸಂದರ್ಭ ಈ ಸಂದರ್ಭದಲ್ಲಿ ಇಷ್ಟು ಜನ ಸೇರಿರುವುದು ನೋಡಿದರೆ ಸಂತೋಷವಾಗುತ್ತದೆ ಎಂದರು.

ಭಾಗ್ಯಲಕ್ಷ್ಮಿ ಯೋಜನೆಯನ್ನು ಬಿ ಎಸ್ ಯಡಿಯೂರಪ್ಪ ಮಾಡಿದ್ದರು. ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಮೋದಿ ಎಷ್ಟೋ ಯೋಜನೆ ಮಾಡಿದ್ದಾರೆ. ಆದರೆ ಈಗಿನ ಸರ್ಕಾರ ಅದನ್ನು ನಿಲ್ಲಿಸಿದೆ. ಗ್ಯಾಸ್ ರೇಟ್ ಜಾಸ್ತಿ ಆಗಿದೆ ಎನ್ನುತ್ತಾರೆ ಆದರೆ ಈ ಮೊದಲು ಸೌದೆಯನ್ನು ತಂದು ಅಡಿಗೆ ಮಾಡುತ್ತಿದ್ದರು ಆದರೆ ಈಗ ಗ್ಯಾಸ್ ಮನೆ ಬಾಗಿಲಿಗೆ ಬರುತ್ತದೆ. ಆಯುಷ್ಮಾನ್ ಭಾರತ್ ಮೂಲಕ 5 ಲಕ್ಷದವರೆಗೆ ಹಣ ಕೊಡುವಂತಹದ್ದು ಹಾಗೂ ಮೋದಿ ಕೇರ್ ನಲ್ಲಿ ಮೆಡಿಸನ್ ಅತೀ ಕಡಿಮೆ ಮೊತ್ತಕ್ಕೆ ಮಾತ್ರೆಗಳು ಸಿಗುತ್ತದೆ ಇಂತಹ ಎಷ್ಟೋ ಕೆಲಸವನ್ನು ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಮಾಡಿದೆ ಎಂದರು.

ಈಗಾಗಲೇ ಚಂದ್ರಯಾನ 3 ಯಶಸ್ವಿಯಲ್ಲಿ ತೀರ್ಥಹಳ್ಳಿಯ ಕೋಣಂದೂರಿನ ಶಿವಾನಿ ಎಂಬ ಮಹಿಳೆ ಕೂಡ ಇದ್ದರು. ಲಕ್ಷ್ಮೀ ಹಾಗೂ ಸರಸ್ವತಿ ಪುತ್ರರನ್ನು ಕೊಟ್ಟಿರುವ ತೀರ್ಥಹಳ್ಳಿ ಕ್ಷೇತ್ರದಲ್ಲಿ ಈ ರೀತಿಯಾದ ಹಬ್ಬವನ್ನು ಮಾಡುತ್ತಿರುವುದು ಸಂತಸದ ವಿಷಯ ಎಂದರು.

ತಲೆ ಕೆಟ್ಟ ರಾಜಕಾರಣಿಯೊಬ್ಬ ಸನಾತನ ಧರ್ಮದ ವಿರುದ್ಧ ಮಾತನಾಡುತ್ತಾನೆ. ನಮ್ಮ ಧರ್ಮವನ್ನು ಒಡೆಯಲು ಇಂತಹ ಹೇಳಿಕೆ ನೀಡುತ್ತಾರೆ. ಅಂತಹ ವಿಷಯಗಳನ್ನು ನೀವುಗಳು ಚರ್ಚೆ ಮಾಡದೇ ದೇಶದಲ್ಲಿ ಧರ್ಮ ಸ್ಥಾಪನೆಗೆ ಕೆಲಸ
ಮಾಡಬೇಕು. ಗೋವಿನ ರಕ್ಷಣೆ ಮಾಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಿ ಗೋ ಹತ್ಯೆ ನಿಷೇದ ಕಾಯ್ದೆ ತಂದರೆ ಅದನ್ನು ವಿರೋಧಿಸುವ ಕೆಲಸವನ್ನು ಕೆಲವರು ಮಾಡುತ್ತಾರೆ ಹಾಗೂ ಈಗಿನ ಸರ್ಕಾರ ಅದನ್ನು ರದ್ದು ಪಡಿಸುತ್ತೆ ಎಂದರು.

ಜಿಲ್ಲೆಯಲ್ಲಿ ಏನೆಲ್ಲಾ ಕೆಲಸ ಆಗಬೇಕೋ ಅದನ್ನು ನಾನು ಮಾಡುತ್ತೇನೆ. ವಿಮಾನ ಹಾರಾಟದಿಂದ ಜಿಲ್ಲೆಗೆ ಸಾಕಷ್ಟು ಅನುಕೂಲವಾಗಲಿದೆ. ವಿಮಾನ ನಿಲ್ದಾಣಕ್ಕೆ ತೀರ್ಥಹಳ್ಳಿ ಸಾರಥಿಯಾಗಿರುವ ಕುವೆಂಪು ಅವರ ಹೆಸರು ಇಟ್ಟಿದ್ದೇವೆ ಎಂದರು.

ಟಿ ಡಿ ಮೇಘರಾಜ್ ಮಾತನಾಡಿ ಈ ರೀತಿ ದೊಡ್ಡ ಕಾರ್ಯಕ್ರಮ ಮಾಡಿರುವ ಮಹಿಳಾ ಮೋರ್ಚಾ ಕಾರ್ಯಕರ್ತರಿಗೆ ಧನ್ಯವಾದಗಳು. ತೀರ್ಥಹಳ್ಳಿಯಲ್ಲಿ ಲಕ್ಷ್ಮೀ ನೆಲೆಸಲಿ. ಕಳೆದ ಚುನಾವಣೆಯಲ್ಲಿ ತೀರ್ಥಹಳ್ಳಿ ತಾಕತ್ತು ಏನು ಎಂದು ತೋರಿಸಿದ್ದೀರಾ. ಭಾಗ್ಯಗಳಿಂದ ಆಚೆ ಈಚೆ ಆದರೂ ತೀರ್ಥಹಳ್ಳಿ ಯಲ್ಲಿ ಮಹಿಳೆಯರಿಂದ ಬದಲಾವಣೆ ಆಗಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ತೀರ್ಥಹಳ್ಳಿಯಲ್ಲಿ ಅತೀ ಹೆಚ್ಚಿನ ಮತ ಬಂದಿತ್ತು. ಮುಂದಿನ ಚುನಾವಣೆ ರಾಘಣ್ಣ ಮೋದಿಯ ಚುನಾವಣೆ ಅಲ್ಲ ಭಾರತದ ಅಸ್ತಿತ್ವದ ಚುನಾವಣೆಯಾಗಲಿದೆ.

ಈಗಾಗಲೇ ಚಂದ್ರಯಾನ ಮಾಡುವ ಮೂಲಕ ಭಾರತದ ಶಕ್ತಿ ಏನು ಎಂದು ತೋರಿಸಿದ್ದೇವೆ. ಭಾರತ ಪ್ರಜ್ವಲಿಸಬೇಕು ಎಂದರೆ ಮುಂದಿನ ಚುನಾವಣೆಯಲ್ಲಿ ರಾಘಣ್ಣನಿಗೆ ಆಶೀರ್ವಾದ ಮಾಡಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ಹದಿನೈದು ಸಾವಿರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು

ಈ ಸಂದರ್ಭದಲ್ಲಿ ಬಾಳೆಬೈಲು ರಾಘವೇಂದ್ರ, ಗೀತಾ ಶೆಟ್ಟಿ, ದತ್ತಾತ್ರಿ, ಸವಿತಾ ಉಮೇಶ್, ಸುಮಾ ರಾಮಚಂದ್ರ ಸೇರಿದಂತೆ ಸಾವಿರಾರು ಮಹಿಳೆಯರು ಭಾಗಿಯಾಗಿದ್ದರು.

ಇದನ್ನೂ ಓದಿ: BJP-JDS Alliance; ಯಡಿಯೂರಪ್ಪರ ಯಾವುದೇ ನಿರ್ಧಾರಕ್ಕೂ ನಮ್ಮ ಸಹಮತವಿದೆ: ಪ್ರತಾಪ್ ಸಿಂಹ

ಟಾಪ್ ನ್ಯೂಸ್

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

1-srrrr

English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.