ಎಟಿಎಂ ದರೋಡೆಗೆ ಬಂದವರು ಅಂದರ್
Team Udayavani, Jan 17, 2018, 8:55 AM IST
ಶಿವಮೊಗ್ಗ: ಎಟಿಎಂ ದರೋಡೆಗೆ ಯತ್ನಿಸಿದ್ದ ಮೂವರನ್ನು ಕಟ್ಟಡ ಮಾಲೀಕರ ಸಮಯಪ್ರಜ್ಞೆ ಯಿಂದ ಪೊಲೀಸರು ಬಂಧಿಸಿರುವ ಘಟನೆ ನಗರ ಹೊರವಲಯದ ಸಂತೆಕಡೂರಿನಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಎನ್.ಆರ್. ಪುರ ಮುಖ್ಯ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ಗೆ ಸೇರಿರುವ ಎಟಿಎಂ ಕೇಂದ್ರಕ್ಕೆ ಮಂಗಳವಾರ ಬೆಳಗಿನ ಜಾವ ಸ್ಕಾರ್ಪಿಯೋ ಕಾರಿನಲ್ಲಿ ಬಂದಿದ್ದ ಆರು ದರೋಡೆಕೋರರ ತಂಡ ಎಟಿಎಂಗೆ ನುಗ್ಗುವ ಮೊದಲು ಬೀದಿ ದೀಪಗಳ ಸಂಪರ್ಕ ಸಿಸಿ ಕ್ಯಾಮೆರಾ ಸಂಪರ್ಕ ಕಡಿತಗೊಳಿಸಿದರು. ಮೂವರು ಹೊರಗೆ ನಿಂತು ಕಾವಲು ಕಾಯುತ್ತಿದ್ದರೆ, ಉಳಿದವರು ಗ್ಯಾಸ್ ಕಟರ್, ಕಬ್ಬಿಣದ ಸಲಾಕೆ ಮತ್ತಿತರ ಮಾರಕಾಸ್ತ್ರಗಳೊಂದಿಗೆ ಎಟಿಎಂ ಕೇಂದ್ರದ ಒಳಗೆ ನುಗ್ಗಿದ್ದರು.
ಎಟಿಎಂ ಯಂತ್ರವನ್ನು ತೆರೆದರಾದರೂ ನಗದು ಇರಿಸಿದ್ದ ಪೆಟ್ಟಿಗೆಯನ್ನು ಹೊರತೆಗೆಯಲು ಸಾಧ್ಯವಾಗಿರಲಿಲ್ಲ. ಇದೇ ವೇಳೆ ಎಟಿಎಂ ಕೇಂದ್ರವಿರುವ ಕಟ್ಟಡದಲ್ಲಿಯೇ ವಾಸವಾಗಿರುವ ಮಾಲೀಕ ಮುರುಗೇಶ್ ಎಚ್ಚರಗೊಂಡಿದ್ದಾರೆ. ಮನೆಯ ಕೆಳಭಾಗದಲ್ಲಿರುವ ಮಳಿಗೆಯಿಂದ ಶಬ್ದ ಬರುತ್ತಿರುವುದನ್ನು ಕೇಳಿದ್ದಾರೆ. ತಕ್ಷಣ ಪಕ್ಕದ ಮನೆಯಲ್ಲಿದ್ದ ತಮ್ಮ ಸಹೋದರ ವೆಂಕಟೇಶ್ಗೆ ದೂರವಾಣಿ ಕರೆ ಮಾಡಿ ಕರೆಸಿಕೊಂಡಿದ್ದಾರೆ. ಇಬ್ಬರೂ ಕೆಳಗಿಳಿದು ಅರ್ಧ ಮುಚ್ಚಲಾಗಿದ್ದ ಎಟಿಎಂ ಕೇಂದ್ರದ ಶೆಟರ್ನ್ನು ಪೂರ್ಣ ಕೆಳಗಿಳಿಸಿ ಹೊರಭಾಗದಿಂದ ಲಾಕ್ ಮಾಡಿದ್ದಾರೆ. ಇದರಿಂದ ಒಳಗಿದ್ದ ದರೋಡೆಕೋರರು ಸಿಲುಕಿಕೊಂಡಿದ್ದಾರೆ.
ಜನ ಸೇರುತ್ತಿದ್ದಂತೆ ಹೊರಗೆ ವಾಹನದಲ್ಲಿ ಕಾಯುತ್ತಿದ್ದ ಮೂವರು ಪರಾರಿಯಾದರು. ಅಷ್ಟರಲ್ಲಾಗಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ, ಒಳಗಿದ್ದ ದರೋಡೆಕೋರರನ್ನು ಹೊರಗೆ ಕರೆಸಿದರು. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತರ ವಿಚಾರಣೆ ನಡೆದಿದ್ದು, ಪರಾರಿಯಾಗಿರುವ ಇತರೆ ದರೋಡೆಕೋರರ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್.ಯಡಿಯೂರಪ್ಪ
Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.