ಮನೆ ಬಾಗಿಲಲ್ಲೇ ಸಿಗಲಿದೆ ಮಟನ್, ಚಿಕನ್
Team Udayavani, Nov 29, 2018, 6:00 AM IST
ಶಿವಮೊಗ್ಗ: ಮಟನ್ ಅಥವಾ ಚಿಕನ್ ಬೇಕು ಅಂದ್ರೆ ಸಮೀಪದ ಪೌಲಿó ಫಾರಂ, ಚಿಕನ್ ಸೆಂಟರ್ ಅಥವಾ ದೊಡ್ಡ ಮಾಲ್‌ಗಳಿಗೆ ಹೋಗಬೇಕು. ಆದರೆ, ಇನ್ಮುಂದೆ ತರಕಾರಿಯಂತೆ ಮನೆ ಬಾಗಿಲಲ್ಲೇ ಬೇಕಾದ ಮಾಂಸ ಖರೀದಿಸಬಹುದು.
ಅಚ್ಚರಿ ಎನಿಸಿದರೂ ಇಂತಹದ್ದೊಂದು ಪ್ರಯತ್ನ ನಡೆಯುತ್ತಿದ್ದು, ಸರಕಾರವೇ ಹೊಸ ಯೋಜನೆ ಜಾರಿಗೆ ತರಲು ನಿರ್ಧರಿಸಿ ಮನೆ ಬಾಗಿಲಲ್ಲೇ ತಾಜಾ ಚಿಕನ್,ಮಟನ್ ಸಿಗುವಂತೆ ಮಾಡಲು ಮುಂದಾಗಿದೆ.
ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಯೋಜನೆ ರೂಪಿಸಲಾಗಿದ್ದು, ಮಾಂಸ ಹಾಗೂ ಮಾಂಸದಿಂದ ತಯಾರಿಸಿದ ಖಾದ್ಯಗಳ ಮಾರಾಟಕ್ಕೆ ಸಂಚಾರಿ ಘಟಕ ತೆರೆಯಲು ಸಹಾಯಧನ ನೀಡಲಾಗುತ್ತಿದೆ. ಹೀಗಾಗಿ, ಮಟನ್ ಸಿಗುವ ಬೀದಿ ಅಂಗಡಿಗಳನ್ನು ಹುಡುಕಿ
ಹೋಗಬೇಕಾದ ಕಷ್ಟ ತಪ್ಪಲಿದೆ.
ಶೇ.75ರಷ್ಟು ಸಬ್ಸಿಡಿ: ಮಾಂಸ ಮಾರಾಟ ಮಾಡಲು ಪಿಕ್‌ಅಪ್ ವ್ಯಾನ್ ರೀತಿಯ ವಾಹನಕ್ಕೆ 6 ಲಕ್ಷ, ಸ್ಟೆçನ್‌ಲೆಸ್ ಸ್ಟೀಲ್ ಫ್ಯಾಬ್ರಿಕೇಷನ್ 3.1ಲಕ್ಷ, ಎಲೆಕ್ಟ್ರಿಕಲ್ ಜನರೇಟರ್ ಸೆಟ್ 60 ಸಾವಿರ, ಡೀಪ್μÅಜರ್ ಯುನಿಟ್ 80 ಸಾವಿರ, ಗ್ಯಾಸ್ ಸ್ಟವ್ 20 ಸಾವಿರ, ಫುಡ್‌ಗೆÅàಡ್ ಅಡುಗೆ ಪಾತ್ರೆಗಳಿಗೆ 30 ಸಾವಿರ ಒಟ್ಟು 11 ಲಕ್ಷ ರೂ. ವೆಚ್ಚದ ಯೋಜನೆ ಇದಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಶೇ.75ರಷ್ಟು (8,25000 ರೂ.) ಸಹಾಯಧನ ಸಿಗಲಿದೆ. ಬಾಕಿ 2,75.000 ರೂ.ಗಳನ್ನು ಬ್ಯಾಂಕ್‌ನಿಂದ ಸಾಲದ ರೂಪದಲ್ಲಿ ಪಡೆಯಬಹುದಾಗಿದೆ.
ಯಾರಿಗೆ ಅವಕಾಶ:ಎಸ್‌ಟಿ, ಎಸ್‌ಸಿ ಫಲಾನುಭವಿಗಳಿಗೆ ಈಗಾಗಲೇ ಮಾಂಸ ಮಾರಾಟ ಹಾಗೂ ಮಾಂಸದಿಂದ ತಯಾರಿಸಿದ ಖಾದ್ಯ ವಸ್ತುಗಳ ಮಾರಾಟದಲ್ಲಿ ತೊಡಗಿಸಿಕೊಂಡವರಿಗೆ ಮೊದಲ ಆದ್ಯತೆಯಾಗಿ ಸಹಾಯಧನ ದೊರೆಯಲಿದೆ. ಅದರಲ್ಲೂ ಮಹಿಳೆಯರಿಗೆ ಶೇ.33, ದಿವ್ಯಾಂಗರಿಗೆ ಶೇ.3ರಷ್ಟು ಮೀಸಲಾತಿ ಇದೆ. ಮಾಂಸಗಳ ಖಾದ್ಯ ತಯಾರಿಸುವ ಸಂಚಾರಿ ವಾಹನಗಳು ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿವೆ.
ನಗರ ಪ್ರದೇಶಗಳಲ್ಲಂತೂ ಬೀದಿ ಬೀದಿಗಳಲ್ಲಿವೆ. ಇಂತಹ ಸಂದರ್ಭದಲ್ಲಿ ಈ ಯೋಜನೆ ಯಶಸ್ಸು ಪಡೆಯಲಿದೆಯೇ ಎಂಬುದು ಎದುರಾಗಿರುವ ಪ್ರಶ್ನೆ. ಯೋಜನೆ ಬಗ್ಗೆ ಸ್ಪಷ್ಟತೆ ಇಲ್ಲ:ಮಟನ್ ಅಥವಾ ಚಿಕನ್ ಮಾರಾಟ ಮಾಡಬಹುದೇ ಅಥವಾ ಬರೀ ಮಟನ್ ಮಾರಾಟ ಮಾಡಬಹುದೇ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಫಲಾನುಭವಿಗಳು ಏನು ಮಾಡುತ್ತಿದ್ದಾರೆ ಎಂಬುದನ್ನು ಯಾರು ಪರಿಶೀಲಿಸಬೇಕು ಎಂಬುದರ ಬಗ್ಗೆಯೂ ತಿಳಿಸಿಲ್ಲ. ಯೋಜನೆ ದುರುಪಯೋಗವಾದರೆ ಅದಕ್ಕೆ ಯಾರು ಹೊಣೆ ಎಂದು ಅ ಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ತರಕಾರಿಯಂತೆ ಮಾಂಸವೂ ಮನೆ ಬಾಗಿಲಲ್ಲಿ ಸಿಗುವಂತಾಗಲು ಹೊಸ ಯೋಜನೆ ಜಾರಿಯಾಗುತ್ತಿದೆ. ಆದರೆ, ಇದಕ್ಕೆ ಜನರ ಪ್ರತಿಕ್ರಿಯೆ ಹೇಗೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಷರತ್ತು ಅನ್ವಯ
ಫಲಾನುಭವಿಗಳು ಲಘು ಸಾರಿಗೆ ವಾಹನದ ಚಾಲನಾ ಪ್ರಮಾಣ ಪತ್ರ ಹೊಂದಿರಬೇಕು. ಗುಣಮಟ್ಟದ ಆಹಾರ ಒದಗಿಸಬೇಕು. ಕಡಿಮೆ ಗುಣಮಟ್ಟದ ಆಹಾರದಿಂದ ಸಾರ್ವಜನಿಕರ ಆರೋಗ್ಯಕ್ಕೆ ಹಾನಿಯಾದಲ್ಲಿ ಫಲಾನುಭವಿಯೇ ಅದಕ್ಕೆ ಹೊಣೆಯಾಗಿರುತ್ತಾನೆ. ವಾಹನ/ ಪರಿಕರಗಳನ್ನು ಕನಿಷ್ಠ 5 ವರ್ಷದವರೆಗೆ ಯಾರಿಗೂ ಪರಭಾರೆ ಮಾಡುವಂತಿಲ್ಲ.ಅಲ್ಲದೆ,ಬಾಡಿಗೆ ಕೊಡುವುದನ್ನು ನಿಷೇಧಿಸಲಾಗಿದೆ. ಇವಕ್ಕೆಲ್ಲ ಒಪ್ಪಿದರೆ ಸಹಾಯಧನ ಸಿಗಲಿದೆ.
ಎಲ್ಲಿ, ಎಷ್ಟು ಫಲಾನುಭವಿಗಳು?
ಬೆಂಗಳೂರು ನಗರ 3, ಗ್ರಾಮಾಂತರ 3, ಚಿತ್ರದುರ್ಗ 3, ಚಿಕ್ಕಬಳ್ಳಾಪುರ 2, ದಾವಣಗೆರೆ 5, ಕೋಲಾರ 3, ರಾಮನಗರ 5, ಶಿವಮೊಗ್ಗ 3, ತುಮಕೂರು 5, ಮೈಸೂರು 6, ಚಾಮರಾಜನಗರ 4, ಚಿಕ್ಕಮಗಳೂರು 3, ದಕ್ಷಿಣ ಕನ್ನಡ 2, ಹಾಸನ 5, ಕೊಡಗು 1, ಮಂಡ್ಯ 5, ಉಡುಪಿ 1, ಬೆಳಗಾವಿ 5, ಬಾಗಲಕೋಟೆ 3, ಧಾರವಾಡ 1, ಗದಗ 2, ಹಾವೇರಿ 3, ಉತ್ತರ ಕನ್ನಡ 1, ವಿಜಯಪುರ 4, ಕಲಬುರಗಿ 7, ಬಳ್ಳಾರಿ 6, ಬೀದರ್ 5, ಕೊಪ್ಪಳ 4, ರಾಯಚೂರು 13, ಯಾದಗಿರಿಯಲ್ಲಿ 8 ಫಲಾನುಭವಿಗಳಿಗೆ ಅವಕಾಶ ಸಿಗಲಿದೆ. ಈಗಾಗಲೇ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
– ಶರತ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Liquor: ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.