ಕಸಸಂಗ್ರಹ ವಾಹನದಲ್ಲಿ ಜಾಗೃತಿ ಸಂದೇಶ
•ಆನ್‌ಲೈನ್ ವಂಚನೆ ತಡೆಗೆ ವಿನೂತನ ಪ್ರಯೋಗ •ಪ್ರತಿ ವಾರ್ಡ್‌ಗಳಲ್ಲೂ ಸಂಚಾರ
Team Udayavani, Jul 30, 2019, 12:15 PM IST
ಶಿವಮೊಗ್ಗ: ಬಡಾವಣೆಯೊಂದರಲ್ಲಿ ಕಸದ ವಾಹನದೊಂದಿಗೆ ಜಾಗೃತಿ ಕಾರ್ಯ.
ಶಿವಮೊಗ್ಗ: ಜಿಲ್ಲೆಯಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವಿನೂತನ ಪ್ರಯತ್ನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.
ಎಸ್‌ಎಂಎಸ್, ಕರಪತ್ರಗಳ ಮೂಲಕ ಜಾಗೃತಿ ಸಂದೇಶ ಕಳುಹಿಸಿದರೂ ಅದನ್ನು ನೋಡುವರು, ಓದುವವರ ಸಂಖ್ಯೆ ಕಡಿಮೆ ಆಗಿರುವುದರಿಂದ ವಂಚನೆಗೆ ಒಳಗಾಗುವವರ ಪ್ರಮಾಣ ಏರಿಕೆಯಾಗುತ್ತಲೇ ಇತ್ತು. ಕಳೆದ ಒಂದೂವರೆ ವರ್ಷದಲ್ಲಿ 3 ಕೋಟಿ ಅಧಿಕ ಮೊತ್ತವನ್ನು ಕಳೆದುಕೊಂಡಿರುವುದೇ ಇದಕ್ಕೆ ಸಾಕ್ಷಿಯಾಗಿತ್ತು. ಹೀಗಾಗಿ ಇಲಾಖೆ ಈಗ ಹೊಸ ಪ್ರಯೋಗಕ್ಕೆ ಮುಂದಾಗಿದ್ದು ಕಸದ ವಾಹನದ ಮೂಲಕ ಜನರಿಗೆ ಸಂದೇಶ ನೀಡುವ ಪ್ರಯತ್ನ ನಡೆದಿದೆ.
ಜನಜಾಗೃತಿಯೇ ಮದ್ದು: ಪ್ರಸ್ತುತ ದಿನಗಳಲ್ಲಿ ಜನ ಡಿಜಿಟಲ್ ಆಗುತ್ತಿದ್ದಾರೆ. ಆದರೆ ಸಣ್ಣಪುಟ್ಟ ವ್ಯತ್ಯಾಸಗಳನ್ನು ಗಮನಿಸದೆ ಆಸೆ, ಆಮಿಷಗಳಿಗೆ ಒಳಗಾಗಿ ಹಣ ಕಳೆದುಕೊಳ್ಳುತ್ತಿದ್ದರು. ನಿಮ್ಮ ಎಟಿಎಂ ಹ್ಯಾಕ್ ಆಗಿದೆ, ಎಟಿಎಂ ಅವಧಿ ಮುಗಿದಿದೆ. ಹೀಗೆ ಅನೇಕ ಕಾರಣ ನೀಡಿ ಓಟಿಪಿ ಪಡೆದು ಕ್ಷಣಾರ್ಧದಲ್ಲಿ ಹಣ ಲಪಟಾಯಿಸುತ್ತಿದ್ದರು. ವಂಚಕರು ದೇಶದ ಯಾವುದೋ ಮೂಲೆಯಲ್ಲಿ ಕುಳಿತು ಇಂತಹ ಕೃತ್ಯ ಎಸಗುವುದರಿಂದ ಅವರನ್ನು ಪತ್ತೆ ಹಚ್ಚುವುದು ಸುಲಭವಾಗಿರುವುದಿಲ್ಲ. ನಕಲಿ ದಾಖಲೆ, ನಕಲಿ ಸಿಎಂ ಕೊಟ್ಟು ಬ್ಯಾಂಕ್ ಅಕೌಂಟ್ ಓಪನ್ ಮಾಡುವ ಅವರು ಹಣ ವರ್ಗಾವಣೆಯಾದ ತಕ್ಷಣ ಹಣ ತೆಗೆದುಕೊಂಡು ಎಸ್ಕೇಪ್ ಆಗುತ್ತಾರೆ. ಫೇಸ್‌ಬುಕ್, ವಾಟ್ಸಾಪ್ ಹ್ಯಾಕ್ ಮಾಡುವ ಮೂಲಕವು ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಹಾಗಾಗಿ ಇಂತಹ ಸಮಸ್ಯೆಗಳಿಗೆ ಜನರೇ ಜಾಗೃತರಾಗುವುದು ಅನಿವಾರ್ಯವಾಗಿದೆ. ಹಾಗಾಗಿ ಪೊಲೀಸ್ ಇಲಾಖೆ ಮನೆ ಮನೆಗೆ ಸಂದೇಶ ತಲುಪಿಸುವ ವ್ಯವಸ್ಥೆ ಮಾಡಿದೆ.
ಜಾಗೃತಿ ಹೇಗೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 35 ವಾರ್ಡ್‌ಗಳಿದ್ದು ಪ್ರತಿ ವಾರ್ಡ್‌ಗಳಿಗೆ ಎರಡು ಕಸ ಸ್ವೀಕರಿಸುವ ವಾಹನಗಳಿವೆ. ಪ್ರತಿ ದಿನ ಬೆಳಗ್ಗೆ ನಗರದ ಪ್ರತಿ ರಸ್ತೆಗಳಿಗೆ ಹೋಗುವ ಅವು ಕಸ ಸಂಗ್ರಹಿಸುತ್ತವೆ. ಜತೆಗೆ ಸ್ವಚ್ಛತೆ ಬಗ್ಗೆ ಪಾಠ ಮಾಡುತ್ತವೆ. ಇಂತಹ ವಾಹನಗಳನ್ನೇ ಬಳಸಿಕೊಂಡಿರುವ ಪೊಲೀಸರು ಸ್ವಚ್ಛತೆ ಜಾಗೃತಿ ಹಾಡುಗಳ ಜತೆಗೆ ಆನ್‌ಲೈನ್ ವಂಚನೆಗಳಿಂದ ಹುಷಾರಾಗಿರುವಂತೆ ಮಾಹಿತಿ ನೀಡಲಿವೆ. ದುನಿಯಾ ಸಿನಿಮಾದ ಹಾಡಿದ ಸಂಗೀತ ಬಂತೆಂದರೆ ಕಸದ ಗಾಡಿ ಬಂತು ಎಂದು ಅಂದುಕೊಳ್ಳುತ್ತಿದ್ದ ಜನ ಇನ್ಮೇಲೆ ಜಾಗೃತಿ ಮಾತಗಳನ್ನು ಸಹ ಕೇಳಿಸಿಕೊಳ್ಳಲಿದ್ದಾರೆ.
ಇದಕ್ಕಾಗಿ ಪ್ರತ್ಯೇಕ ಸಂದೇಶ ಸಿದ್ಧಪಡಿಸಿ ಕಸದ ಗಾಡಿಗಳಲ್ಲಿ ಅಳವಡಿಸಲಾಗಿದೆ. ಮೂರು ದಿನಗಳಿಂದ ಶಿವಮೊಗ್ಗ ನಗರದ ಪ್ರತಿ ವಾರ್ಡ್‌ಗಳಲ್ಲಿ ಈ ಸಂದೇಶ ಕೇಳಿಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anandapura: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ತಪ್ಪಿದ ಅನಾಹುತ
ಸಾಗರಕ್ಕೆ ಆಗಮಿಸಿದ ಡಾ.ನಾ.ಡಿಸೋಜಾ ಪಾರ್ಥಿವ ಶರೀರ; ಗಣ್ಯರು, ಅಧಿಕಾರಿಗಳಿಂದ ಅಂತಿಮ ದರ್ಶನ
Hosanagar: ಪ್ರಪಾತಕ್ಕೆ ಉರುಳಿದ ಬಸ್; ಸಣ್ಣ ಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರು
Sarji sweet box case: ಲವ್ ಫೈಲ್ಯೂರ್ ಆಗಿದ್ದಕ್ಕೆ ಸೇಡಿಗಾಗಿ ಕೃತ್ಯ ಮಾಡಿದ್ದ ಲಾಯರ್!
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
MUST WATCH
ಹೊಸ ಸೇರ್ಪಡೆ
ಎಎನ್‌ಎಫ್‌ಗೆ ಸಿಗದ ನಕ್ಸಲರು ಸಿಎಂಗೆ ಸಿಕ್ಕಿದ್ದು ಹೇಗೆ?: ಶಾಸಕ ಸುನೀಲ್ ಕುಮಾರ್
Sam Konstas: ಇದೇ ಪರಿಸ್ಥಿತಿ ಮರುಕಳಿಸಿದರೆ ಸುಮ್ಮನಿರುವೆ
Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ
ICC ಚಾಂಪಿಯನ್ಸ್ ಟ್ರೋಫಿ ಪಾಕ್ ಕ್ರೀಡಾಂಗಣಗಳೇ ಸಜ್ಜಾಗಿಲ್ಲ !
ವಿದ್ಯುತ್ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.