ದೊರಸ್ವಾಮಿ ನೂರು ವರ್ಷದಲ್ಲಿ ಅನುಭವಿಸದೇ ಇರುವುದನ್ನು ಈಗ ಅನುಭವಿಸುವಂತಾಗಿದೆ: ಅಯನೂರು
Team Udayavani, Mar 1, 2020, 1:05 PM IST
ಶಿವಮೊಗ್ಗ: ಬಸನಗೌಡ ಯತ್ನಾಳ್ ಮತ್ತು ದೊರೆಸ್ವಾಮಿ ಬಗ್ಗೆ ಪರ ವಿರೋಧ ಹೇಳಿಕೆ ನಡುವೆ ದೊರೆಸ್ವಾಮಿ ನಿತ್ಯ ಅಪಮಾನಕ್ಕೆ ಒಳಗಾಗುತ್ತಿದ್ದಾರೆ. ದೊರೆಸ್ವಾಮಿಯವರು ಶತಾಯುಷಿ. ದೊರಸ್ವಾಮಿ ನೂರು ವರ್ಷದಲ್ಲಿ ಅನುಭವಿಸದೇ ಇರುವುದನ್ನು ಈಗ ಅನುಭವಿಸುವಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಅಯನೂರು ಮಂಜುನಾಥ್ ಹೇಳಿದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರು ತಮ್ಮ ಕ್ರೆಡಿಟ್ ಅನ್ನು ಎಲ್ಲದಕ್ಕೂ ಬಳಸಬಾರದು. ದೊರೆಸ್ವಾಮಿಯಾಗಿ ತಮ್ಮ ನಿಲುವು ಪ್ರಕಟ ಮಾಡುತ್ತಾರೋ? ಅಥವಾ ಸ್ವಾತಂತ್ರ್ಯ ಹೋರಾಟಗಾರರಾಗಿ ಪ್ರಕಟ ಮಾಡುತ್ತಾರೋ ಅವರು ಸ್ಪಷ್ಟಪಡಿಸಬೇಕು ಎಂದರು.
ಯತ್ನಾಳ ಹೇಳಿಕೆಯಲ್ಲಿ ಕೆಲ ಪದಗಳ ಬಳಕೆ ಅಷ್ಟು ಸಮಂಜಸವಾಗಿಲ್ಲ ಎಂದ ಅವರು, ಈ ವಿವಾದ ಇಲ್ಲಿಗೆ ನಿಲ್ಲಿಸುವಂತೆ ಮನವಿ ಮಾಡುತ್ತೇನೆ ಎಂದರು.
ಸಿದ್ದರಾಮಯ್ಯನವರಿಗೆ ಬೇರೆ ವಿಷಯವೇ ಸಿಕ್ಕಿಲ್ಲ. ಅದಕ್ಕೆ ಯತ್ನಾಳ ಹೇಳಿಕೆ ವಿಷಯ ಕುರಿತು ಅಧಿವೇಶನದಲ್ಲಿ ಮಾತನಾಡುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಜೀವಂತವಾಗಿ ಇರುವುದಕ್ಕೆ ಈ ವಿಷಯ ತೆಗೆದುಕೊಂಡಿದ್ದಾರೆ. ಸಿದ್ದರಾಮಯ್ಯ ಶಾಸಕ, ಸಿಎಂ ಆದರೂ ಉತ್ತಮ ಪಾರ್ಲಿಮೆಂಟರಿಯನ್ ಆಗಲಿಲ್ಲ ಎಂದು ಅಯನೂರು ಟೀಕಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.