ಭದ್ರಾವತಿ: ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರ ಪ್ರತಿಭಟನೆ
Team Udayavani, Feb 17, 2022, 3:13 PM IST
ಭದ್ರಾವತಿ: ಹಿಜಾಬ್ ಧರಿಸಿ ಬಂದಿದ್ದ ಹಳೇನಗರದ ಸಂಚಿಯ ಹೊನ್ನಮ್ಮ ಸರಕಾರಿಬಾಲಕಿಯರ ಪಪೂ ಕಾಲೇಜಿನ ಪ್ರಥಮ ಪಿಯು ಮತ್ತು ಪ್ರೌಢಶಾಲಾ ವಿಭಾಗದವಿದ್ಯಾರ್ಥಿನಿಯರು ಬುಧವಾರ ಶಾಲೆಗೆ ಹಿಜಾಬ್ ಧರಿಸಿ ಪ್ರವೇಶಿಸಲು ಪೊಲೀಸರುಹಾಗೂ ಪ್ರಾಂಶುಪಾಲರು ನಿರಾಕರಿಸಿದಾಗ ಹಿಜಾಬ್, ಹಿಜಾಬ್ ಎಂದು ಕೂಗುತ್ತಾಶಾಲೆಯ ಆವರಣದೊಳಗೆ ಧರಣಿ ಕುಳಿತರು.
230 ಮುಸ್ಲಿಂ ಬಾಲಕಿಯರ ಪೈಕಿ ಪಪೂ, ಪಿಯು 70 ಮಂದಿ,ಪ್ರೌಢಶಾಲೆಯ 136 ಮುಸ್ಲಿಂ ವಿದ್ಯಾರ್ಥಿಗಳ ಪೈಕಿ 20ಕ್ಕೂ ಅಧಿ ಕ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಶಾಲೆಗೆ 11ಗಂಟೆಗೆ ಬಂದಾಗ ಹಿಜಾಬ್ ತೆಗೆದು ಒಳಗೆ ಬರುವಂತೆ ಶಾಲೆಯವರುತಿಳಿಸಿದಾಗ ಅದಕ್ಕೆ ಒಪ್ಪದೆ ಪ್ರತಿಭಟನೆಗೆ ಕುಳಿತರು. ಆಗ ಸ್ಥಳದಲ್ಲಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರಿಗೆ ತಿಳಿ ಹೇಳುವಂತೆ ಸೂಚಿಸಿದರಾದರೂ ವಿದ್ಯಾರ್ಥಿನಿಯರುಯಾರದೇ ಮಾತನ್ನು ಕೇಳುವ ಮನಸ್ಥಿತಿಯಲ್ಲಿರಲಿಲ್ಲ.
ಕಾಲೇಜು ಆವರಣದಲ್ಲಿಯೇಕುಳಿತಿದ್ದರು. ಉಳಿದವರು ಶಾಲಾ ಕೊಠಡಿಗಳಿಗೆ ತೆರಳಿದ್ದರು. ಉಪಪ್ರಾಚಾರ್ಯಶಾಂತಮ್ಮ ಮತ್ತು ಶಿಕ್ಷಕರ ಶಿಕ್ಷಕಿಯರ ತಂಡ ವಿದ್ಯಾರ್ಥಿಗಳಿಗೆ ಕೊಠಡಿಗಳಿಗೆ ಹೋಗಿ,ಇಲ್ಲದಿದ್ದರೆ ಮನೆಗಳಿಗಾದರೂ ಹೋಗಿ ಇಲ್ಲಿ ಕೂರಬಾರದು. ಮನೆಗೆ ಹೋದರೆ ಆನ್‌ಲೈನ್ ಪಾಠ ಮಾಡಿ ಹಾಜರಿ ಸಹ ಕೊಡುವುದಾಗಿ ತಿಳಿ ಹೇಳಿದರೂ ಜಗ್ಗದೆ ಮಧ್ಯಾಹ್ನ12 ಗಂಟೆಯಾದರೂ ಕುಳಿತಿದ್ದರು.
ನಂತರ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ಪ್ರದೀಪ್ ನಿಕ್ಕಂ, ಉಪತಹಶೀಲ್ದಾರ್ ಮಂಜನಾಯ್ಕ, ಕಂದಾಯಾಧಿ ಕಾರಿ ನಾನೋಜಿರಾವ್, ಕ್ಷೇತ್ರ ಶಿಕ್ಷಣಾ ಧಿಕಾರಿ ಟಿ.ಎನ್. ಸೋಮಶೇಖರಯ್ಯ, ಅ ಧಿಕಾರಿಗಳಾದರವಿಕುಮಾರ್ ವಿದ್ಯಾರ್ಥಿನಿಯರಿಗೆ ತಿಳಿ ಹೇಳಿ ಸರಕಾರ ಮತ್ತು ನ್ಯಾಯಾಲಯದಆದೇಶದಂತೆ ನಾವು ಕಾನೂನು ಪಾಲನೆ ಮಾಡಬೇಕಾಗುತ್ತದೆ ಎಂದು ವಿವರಿಸಿದನಂತರ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿಗೆ ಪ್ರವೇಶಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Infectious Disease: ರಾಜ್ಯಕ್ಕೂ ಬೇಕಿದೆ “ವಿಷಾಣು ಯುದ್ಧ ಅಭ್ಯಾಸ್”
Sagara: ಭೀಕರ ಅಪಘಾತ… ರಿಕ್ಷಾ ಚಾಲಕ ಸೇರಿ ಇಬ್ಬರು ಮೃತ್ಯು, ಮೂವರಿಗೆ ಗಾಯ
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.