ಮೊದಲು ಬಜರಂಗದಳ, ಶ್ರೀರಾಮಸೇನೆ, RSS, ಹಿಂದೂಮಹಾಸಭಾಕ್ಕೆ ಬುಲ್ಡೋಜರ್ ಹೊಡಿಬೇಕು:ಸಿದ್ದರಾಮಯ್ಯ
Team Udayavani, Apr 24, 2022, 1:24 PM IST
ಶಿವಮೊಗ್ಗ: ಮೊದಲು ಶ್ರೀರಾಮಸೇನೆ, ಭಜರಂಗದಳ, ಆರ್ ಎಸ್ ಎಸ್ ಹಾಗೂ ಹಿಂದೂ ಮಹಾಸಭಾಕ್ಕೆ ಬುಲ್ಡೋಜರ್ ಹೊಡಿಬೇಕು. ಅವರಿಗೆ ಹೊಡೆದರೆ ಎಲ್ಲವೂ ಸರಿಯಾಗುತ್ತದೆ, ಸಮಾಜವು ಸರಿಯಾಗುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಇರುವುದು ಯಾರದ್ದು? ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾಯ್ತು, 144 ಸೆಕ್ಷನ್ ಹಾಕಿದ್ದು ಯಾರು? ಈಶ್ವರಪ್ಪ ಯಾವ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಉಲ್ಲಂಘನೆ ಮಾಡಿದ್ದು ಯಾರು.? ಶವಯಾತ್ರೆ ಮಾಡಿದ್ದು ಯಾರು? ಹರ್ಷನ ಕುಟುಂಬಕ್ಕೆ 25 ಲಕ್ಷ ಕೊಡಿಸಿದ್ದು ಯಾರು? ನಾನು ಕೂಡ ಹರ್ಷನ ಕೊಲೆ ಖಂಡಿಸಿದ್ದೇನೆ. ಯಾರೇ ಅದ್ರೂ ಕೊಲೆಗಾರರಿಗೆ ಶಿಕ್ಷೆಯಾಗಬೇಕು. ಆದರೆ, ಒಂದು ಕಣ್ಣಿಗೆ ಬೆಣ್ಣೆ. ಇನ್ನೊಂದು ಕಣ್ಣಿಗೆ ಸುಣ್ಣ ಎಂದು ಮಾಡಬಾರದು ಎಂದರು.
ಹರ್ಷನ ಕುಟುಂಬಕ್ಕೆ 25 ಲಕ್ಷ ರೂ. ಸರ್ಕಾರ ಪರಿಹಾರ ಕೊಟ್ಟಿದೆ. ಅದೇ ಬೆಳ್ತಂಗಡಿಯ ದಿನೇಶ್ ಕೊಲೆಯಾದಾಗ ಕುಟುಂಬಕ್ಕೆ ಎಷ್ಟು ಕೊಟ್ಟರು? ಅವನ ಕೊಲೆ ಮಾಡಿದವರು ಭಜರಂಗದಳದವರು. ನರಗುಂದದಲ್ಲಿ ಕೊಲೆಯಾದ ಮುಸ್ಲಿಂಗೆ ಎಷ್ಟು ಪರಿಹಾರ ಕೊಟ್ಟರು? ನರಗುಂದದಲ್ಲಿ ಕೊಲೆ ಮಾಡಿದವರು ಶ್ರೀ ರಾಮಸೇನೆಯವರು. ಕೊಲೆಯಾದವರಿಗೆ ಒಂದು ಪೈಸೆ ಸಹ ಪರಿಹಾರ ಕೊಡಲಿಲ್ಲ. ಯಾಕೇ ಹೀಗೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಆಹಾರದಲ್ಲಿ ರಾಸಾಯನಿಕಗಳ ಬಳಕೆಯಿಂದ ಅನಾರೋಗ್ಯ: ಶೋಭಾ ಕರಂದ್ಲಾಜೆ
ನಮ್ಮ ಕಾಲದಲ್ಲಿ ಅಷ್ಟು ಕೊಲೆಯಾಯ್ತು ಎನ್ನುತ್ತಾರೆ. ವಿಪಕ್ಷದಲ್ಲಿದ್ದ ಇವರು ಕಡ್ಲೇಪುರಿ ತಿನ್ನತ್ತಿದ್ದರಾ? ಅವರು ಕಾಲದಲ್ಲಿ ನಡೀತು, ಇವಾಗ ನಡೀತು ಅಂದರೆ ಏನು ಪ್ರಯೋಜನ. ನಾವು ಪರಿಹಾರ ಕೊಡದಿದ್ದಾಗ ನೀವು ಯಾಕೆ ಕೇಳಲಿಲ್ಲ. ಅಧಿಕೃತ ವಿರೋಧ ಪಕ್ಷದಲ್ಲಿದ್ದು ಏನು ಮಾಡಿದ್ದರಿ, ನಾನೀಗ ವಿರೋಧ ಪಕ್ಷದಲ್ಲಿದ್ದು ಕೇಳುತ್ತಿದ್ದೇನೆ. ಅವರು ತಪ್ಪು ಮುಚ್ಚಿಕೊಳ್ಳೊಕೆ ಹಿಂದಿನ ಸರ್ಕಾರದ ಬಗ್ಗೆ ಮಾತನಾಡ್ತಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ಚುನಾವಣೆಗೆ ತಯಾರಿ ನಡೆಯುತ್ತಿದೆ. ಯಾವಾಗಲೇ ಚುನಾವಣೆ ನಡೆದರರೂ ನಾವು ಸಿದ್ಧ. ಚುನಾವಣೆಗೆ ಬೇಕಾದಷ್ಟು ವಿಚಾರ ಇದೆ. ಬ್ರಹ್ಮಾಂಡ ಭ್ರಷ್ಟಾಚಾರ ಇದೆಯಲ್ಲಾ ಎಂದ ಅವರು, ಪಕ್ಷದ ಆಂತರಿಕ ವಿಚಾರಗಳನ್ನು ಬಗೆಹರಿಸಿಕೊಳ್ಳುತ್ತೇವೆ. ಅಸಮಾಧಾನ ಇಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.