ಶಾಲಾ ಕಾಲೇಜುಗಳಲ್ಲಿ ಮಾತ್ರವಲ್ಲ ಎಲ್ಲಾ ಕಡೆ ಹಿಜಾಬ್ ಬ್ಯಾನ್ ಮಾಡಿ: ವಿಶ್ವಸಂತೋಷ ಭಾರತೀ ಶ್ರೀ
Team Udayavani, Feb 22, 2022, 3:20 PM IST
ಶಿವಮೊಗ್ಗ: ಇಲ್ಲಿನ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷ ಹತ್ಯೆಗೆ ಹಿಜಾಬ್ ವಿವಾದ ಸಹಾ ಒಂದು ಕಾರಣ. ಕೇವಲ ಶಾಲಾ ಕಾಲೇಜಿಗಳಲ್ಲಿ ಮಾತ್ರವಲ್ಲದೆ ಬಹುತೇಕ ಕಡೆ ಹಿಜಾಬ್ ನಿಷೇಧ ಮಾಡಬೇಕು ಎಂದು ತೀರ್ಥಹಳ್ಳಿ ಬೆಜ್ಜವಳ್ಳಿ ಮಠದ ಡಾ. ವಿಶ್ವಸಂತೋಷ ಭಾರತೀ ಶ್ರೀ ಗುರೂಜಿ ಹೇಳಿದರು.
ಶಿವಮೊಗ್ಗದ ಹರ್ಷ ಮನೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷೆಯಲ್ಲಿ ನಕಲು ಮಾಡಲು ಹಿಜಾಬ್ ಬಳಕೆಯಾಗುತ್ತದೆ. ಬ್ಯಾಂಕ್ ದರೋಡೆಗೂ ಬಳಕೆಯಾಗುತ್ತದೆ. ಹಿಜಾಬ್ ಧರಿಸಿ ಆಭರಣದಂಗಡಿಗಳಲ್ಲಿ ಕಳ್ಳತನ ಮಾಡುವ ಸಾಧ್ಯತೆ ಇದೆ. ಈಗಾಗಿ ಕೇವಲ ಶಾಲಾ ಕಾಲೇಜುಗಳಲ್ಲಿ ಮಾತ್ರವಲ್ಲ ಎಲ್ಲಾ ಕಡೆ ಹಿಜಾಬ್ ಬ್ಯಾನ್ ಮಾಡಿ ಎಂದು ಒತ್ತಾಯಿಸಿದರು.
ಹಿಜಾಬ್ ಹಾಕಿ ಬರುವ ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿ, ಇದರಿಂದ ಇತರರು ಬುದ್ದಿ ಕಲಿಯುತ್ತಾರೆ ಎಂದು ಸಂತೋಷ್ ಗುರೂಜಿ ಹೇಳಿದರು.
ಎನ್ ಕೌಂಟರ್ ಮಾಡಿ: ಹರ್ಷ ಕೊಲೆ ಆರೋಪಿಗಳಿಗೆ ಬೇರೆ ಶಿಕ್ಷೆ ಬೇಡ, ಎನ್ ಕೌಂಟರ್ ಮಾಡಿ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಗೆ ಸಾಧ್ಯವಾಗುವುದು ಇವರಿಗೆ ಯಾಕೆ ಆಗುವುದಿಲ್ಲ? ಇಲ್ಲಿನ ಗುಂಡು ಅಪರಾಧಿಗಳ ಒಳಗೆ ಹೋಗುವುದಿಲ್ಲವೇ ಎಂದು ಸಂತೋಷ್ ಗುರೂಜಿ ಪ್ರಶ್ನಿಸಿದರು.
ಇದನ್ನೂ ಓದಿ:ಶಿವಮೊಗ್ಗ : ನಿಷೇಧಾಜ್ಞೆಯ ನಡುವೆಯೂ ಕಿಡಿಗೇಡಿಗಳಿಂದ ಮೂರು ವಾಹನಗಳಿಗೆ ಬೆಂಕಿ
ಜೈಲಿನಲ್ಲಿ ಬಿರಿಯಾನಿ: ಕೊಲೆ ಮಾಡಿದವರಿಗೆ ಜೈಲಿನಲ್ಲಿ ಬಿರಿಯಾನಿ, ಟಿವಿ ವ್ಯವಸ್ಥೆ ಮಾಡಲಾಗುತ್ತದೆ. ಈ ಹಿಂದೆಯೂ ಶಿವಮೊಗ್ಗದಲ್ಲಿ ಹಲವು ಕೊಲೆ ನಡೆದಿದೆ. ಜೈಲಿಗೆ ಹೋದವರಿಗೆ ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ. ಸ್ವಲ್ಪ ದಿನದಲ್ಲೇ ಜಾಮೀನಿನ ಮೇಲೆ ಹೊರ ಬರುತ್ತಾರೆ. ಹಿಂದೂ ಸಂಘಟನೆಯಲ್ಲಿ ಸಕ್ರಿಯವಾಗಿರುವವರೇ ಟಾರ್ಗೆಟ್ ಮಾಡಿ ಕೊಲೆ ಮಾಡಲಾಗುತ್ತಿದೆ ಎಂದು ಸಂತೋಷ್ ಗುರೂಜಿ ಗಂಭೀರ ಆರೋಪ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.