ಗ್ರಾಮದಲ್ಲಿ ಕಾಣಿಸಿಕೊಂಡ ಚಿರತೆ… ಅರಣ್ಯ ಇಲಾಖೆಯ ಸಿಬ್ಬಂದಿ ವರ್ತನೆಗೆ ಗ್ರಾಮಸ್ಥರ ಆಕ್ರೋಶ
Team Udayavani, Aug 22, 2024, 5:24 PM IST
ಹೊಳೆಹೊನ್ನೂರು: ಕರಡಿ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯವರು ಮೀನಾಮೇಷ ಎಣಿಸುತ್ತಿದ್ದಾರೆ. ಜನರ ಜೀವದೊಂದಿಗೆ ಆಟವಾಡುತ್ತಿದ್ದಾರೆ ಎಂದು ಅಗಸನಹಳ್ಳಿ ಹಾಗೂ ಎಮ್ಮೆಹಟ್ಟಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ರಾತ್ರಿ ಸುಮಾರು 8 ಗಂಟೆಗೆ ವೇಳೆಗೆ ಅಗಸನಹಳ್ಳಿ ಗ್ರಾಮದಲ್ಲಿ ಕರಡಿ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿಗೆ ಪೋನ್ ಮಾಡಿದ್ದಾರೆ. ಕತ್ತಲಾಗಿದ್ದರಿಂದ ಗ್ರಾಮಸ್ಥರು ಬೈಕ್ ಹಾಗೂ ಅನೇಕ ವಾಹನಗಳ ಜೊತೆ ನೂರಾರು ಸಂಖ್ಯೆಯಲ್ಲಿ ಬಂದು ಕರಡಿಯನ್ನು ಹಿಂಬಾಲಿಸುತ್ತಿದ್ದರು. ಇದನ್ನ ತಿಳಿದ ಎಮ್ಮೆಹಟ್ಟಿ ಗ್ರಾಮಸ್ಥರು ಇನ್ನೊಂದು ಕಡೆಯಿಂದ ಕರಡಿ ಶೋಧನೆ ಇಳಿದರು.
ಅಷ್ಟು ಸಮಯಕ್ಕೆ ಸರಿಯಾಗಿ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಜೀಪ್ ಎರಡು ಗ್ರಾಮಸ್ಥರೊಂದಿಗೆ ಕರಡಿಯನ್ನು ಹುಡುಕಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ಕೆಲವು ಯುವಕರು ಮುಂದೆ ಹೋದಾಗ ವಡ್ಡರಹಟ್ಟಿಯ ಚೌಡಮ್ಮ ದೇವಸ್ಥಾನ ಬಳಿ ಹೋಗುತ್ತಿರುವುದು ಕಂಡ ಬಂದ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು ಯಾವುದೇ ಪ್ರಯೋಜವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಅರಣ್ಯ ಇಲಾಖೆ ಸಿಬ್ಬಂದಿಗಳು ಜನರಿಗೆ ನೀತಿ ಭೋದನೆ ಮಾಡಿದ್ದು ಬಿಟ್ಟರೆ ಕರಡಿ ನೋಡಿದರೂ ತಮ್ಮ ಜೀಪ್ ನ ಮುಖಾಂತರ ಹಿಂಬಾಲಿಸಿ, ದೇವಸ್ಥಾನಕ್ಕೆ ಕರಡಿ ಹೋದ ನಂತರ ಕೇವಲ ಮೊಬೈಲ್ ಬಳಸಿ ಪೋಟೋ ಕ್ಲಿಕ್ಕಿಸಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಅಗಸನಹಳ್ಳಿ ಆರ್. ಈಶ್ವರ್ ರವರು ನೇರವಾಗಿ ಆರೋಪಿಸಿದ್ದಾರೆ.
ದೇವಸ್ಥಾನ ಬಳಿ ಜೀಪ್ ತೆಗೆದುಕೊಂಡು ಹೋದ ಸಿಬ್ಬಂದಿ ದೇವಸ್ಥಾನ ಗೇಟ್ ಗಳನ್ನು ಮುಚ್ಚಿದ್ದರೆ, ಗುರುವಾರ ಬೆಳಿಗ್ಗೆಯಾದರೂ ಕರಡಿಯನ್ನು ಬಂದಿಸಬಹುತ್ತಿತ್ತು. ಆದರೆ ಅವರು ಪ್ರವಾಸ ಸ್ಥಳಗಳಿಗೆ ಹೋಗಿ ಪ್ರವಾಸಿಗರು ತಮ್ಮ ಮೊಬೈಲ್ ಗಳಲ್ಲಿ ಪೋಟೋಗಳನ್ನು ಕ್ಲಿಕ್ಕಿಸುವಂತೆ ಮಾಡಿಕೊಂಡು ಹೋಗಿದ್ದಾರೆ. ಅರಣ್ಯ ಇಲಾಖೆಯ ಈ ವರ್ತನೆಯನ್ನು ಗ್ರಾಮಸ್ಥರು ಖಂಡಿಸಿದ್ದಾರೆ.
ಗುರುವಾರ ಮಧ್ಯಾಹ್ನ 12 ಗಂಟೆ ವೇಳೆಯಲ್ಲಿ ಎಮ್ಮೆಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಕಾಣಿಸಿಕೊಂಡಿದ್ದು, ಇಲ್ಲಿಗೂ ಸಹ ಆಗಮಿಸಿ ಅಧಿಕಾರಿಗಳು ರಸ್ತೆಯಲ್ಲಿಯೇ ಜೀಪಿನಲ್ಲಿ ಕುಳಿತುಕೊಂಡು ಗ್ರಾಮಸ್ಥರೊಂದಿಗೆ ಕಾಲಾ ಹರಣ ಮಾಡಿ ಕರಡಿ ಪಲಾಯನ ಮಾಡಿದ ನಂತರ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಕರಡಿ ಹಿಡಿಯುವುದಕ್ಕೆ ಬರುವ ಅರಣ್ಯ ಅಧಿಕಾರಿಗಳು ನೆಂಟರ ಮನೆಗೆ ಬರುವಂತೆ ಬರುತ್ತಿದ್ದು, ಕೈಯಲ್ಲಿ ಯಾವುದೇ ಬಲೆಯಾಗಲಿ ಅಥವಾ ಮತ್ತು ಬರುವ ಚುಚ್ಚುಮದ್ದು ಹಾಕಿ ಹಿಡಿಯಬಹುದು. ಆದರೆ ಉಡಾಫೆ ಉತ್ತರ ನೀಡುತ್ತಾ ಎರಡು ಗ್ರಾಮಸ್ಥರ ಜೀವ ಜೊತೆಗೆ ಆಟವಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಈಗಾಗಲೇ ಅಡಿಕೆ ಬರದಿಂದ ಅಡಿಕೆ ಕ್ಯೂಯ್ಯಲು ಪ್ರಾರಂಭವಾಗಿದ್ದು, ಗ್ರಾಮದಿಂದ ಹೊರಗಡೆ ಅಡಿಕೆ ಮನೆಗಳಿದ್ದು, ಅಡಿಕೆ ಮನೆಯಲ್ಲಿ ಒಬ್ಬೊಬ್ಬರೇ ಇರುವ ಪರಿಸ್ಥಿತಿ ಇರುತ್ತದೆ. ಮಲಗಿದ ನಂತರ ಕರಡಿ ದಾಳಿ ನಡೆಸಿದರೇ ಅವರ ಪರಿಸ್ಥಿತಿ ಊಹಿಸಿಕೊಳ್ಳಲು ಸಹ ಸಾಧ್ಯವಾಗುವುದಿಲ್ಲ. ಅಕಸ್ಮಾತ್ ಪ್ರಾಣ ಕಳೆದುಕೊಂಡರೆ ಅರಣ್ಯ ಇಲಾಖೆಯವರು ನಮ್ಮ ಪ್ರಾಣವನ್ನು ಹಿಂದಿರುಸಿ ಕೊಡುವರೇ ಎಂಬುದು ವೈ. ಮಲ್ಲೇಶಪ್ಪ ರವರ ಪ್ರಶ್ನೆಯಾಗಿದೆ.
ಆದ್ದರಿಂದ ಕೂಡಲೇ ಅರಣ್ಯ ಇಲಾಖೆಯವರು ಕರಡಿಯನ್ನು ಆದಷ್ಟು ಬೇಗ ಹಿಡಿದು ಕಾಡಿಗೆ ರವಾನಿಸಲಿ ಎಂಬುದು ಗ್ರಾಮಸ್ಥರ ಆಶಯವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.