ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ಸಹಕಾರಿ ಸಂಘಗಳಲ್ಲಿ ಆತಂಕ
Team Udayavani, May 21, 2020, 1:25 PM IST
ಭದ್ರಾವತಿ: ಕೃಷಿ ವ್ಯವಸಾಯೋತ್ಪನ್ನ ಮಾರುಕಟ್ಟೆಯ ನೋಟ.
ಭದ್ರಾವತಿ: ಲಾಕ್‌ಡೌನ್ ಕಾರಣದಿಂದ ನೆಲಕಚ್ಚಿದ್ದ ವ್ಯವಸಾಯೋತ್ಪನ್ನ ಮಾರುಕಟ್ಟೆಯಲ್ಲಿನ ವ್ಯಾಪಾರ ನಿಧಾನವಾಗಿ ತರಿಸಿಕೊಳ್ಳತ್ತಾ ವ್ಯಾಪಾರ-ವಹಿವಾಟನ್ನು ಆರಂಭಿಸಿದೆ ಆದರೂ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿ ಇಲ್ಲಿನ ಸಹಕಾರಿ ಕ್ಷೇತ್ರದ ಸಂಸ್ಥೆಗಳ ಅಸ್ತಿತ್ವದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬ ಆತಂಕವನ್ನು ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರಮುಖರು ವ್ಯಕ್ತಪಡಿಸುತ್ತಾರೆ.
ತಾಲೂಕಿನ ಕೃಷಿ ಉತ್ಪನ್ನಗಳ ಮಾರಾಟಕ್ಕೆ ರೈತರಿಗೆ ಎಪಿಎಂಸಿ ವೇದಿಕೆಯಾಗಿತ್ತು. ಆದರೆ ಈಗ ಸರ್ಕಾರ ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿ ಕಾಯ್ದೆಯಿಂದಾಗಿ ರೈತರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಎಪಿಎಂಸಿ ಹೊರಗೆ ಸಹ ಅವಕಾಶ ದೊರಕಿರುವುದರಿಂದ ಎಪಿಎಂಸಿ ಮೇಲಿನ ಅವಲಂಬನೆ ಕಡಿಮೆಯಾದಂತಾಗಿದೆ.
ತಾಲೂಕಿನಲ್ಲಿರುವ ಸುಮಾರು 180ಕ್ಕೂ ಅಧಿಕ ಗ್ರಾಮಾಂತರ ಪ್ರದೇಶಗಳಲ್ಲಿನ ಬಹುತೇಕ ರೈತರು ತಮ್ಮ ಜಮೀನುಗಳನ್ನು ಅಡಕೆ ತೋಟವನ್ನಾಗಿ ಮಾಡಿರುವುದರಿಂದ ಅಡಕೆ ಬೆಳೆ ಹೆಚ್ಚಾಗಿದೆ. ಅಡಕೆ ಬೆಳೆಗರರಿಗೆ ಸಹಕಾರಿಯಾಗಿ ಎಪಿಎಂಸಿ ಪ್ರಾಂಗಣದಲ್ಲಿ (ರ್‍ಯಾಂಕೋಸ್) ಮತ್ತು ಮ್ಯಾಮ್ಕೋಸ್, ಕ್ಯಾಂಪ್ಕೋ ಸಹಕಾರ ಸಂಘಗಳು ರೈತರು ಬೆಳೆದ ಅಡಕೆಗೆ ಬೆಳೆ ಪರಿಷ್ಕರಣೆ ಮತ್ತು ದಾಸ್ತಾನು ಮಾಡಲು ಉತ್ತಮ ಗೋಡೌನ್ ಸೌಲಭ್ಯ ನೀಡುತ್ತಾ ತಾಲೂಕಿನ ಅಡಕೆ ಬೆಳೆಗಾರರ ಹಿತ ಕಾಯುತ್ತಾ ಬಂದಿವೆ. ಈಗ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಭವಿಷ್ಯತ್ತಿನಲ್ಲಿ ರಾಂಕೋಸ್, ಮಾಮ್ಕೋಸ್ ವ್ಯಾಪಾರ-ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರಬಹುದೆಂಬ ಆತಂಕ ಈ ಸಂಸ್ಥೆಗಳ ಮೇಲೆ ಆವರಿಸಿದೆ.
ಈವರೆಗೆ ಇಲ್ಲಿನ ಅಡಕೆ ಬೆಳೆಗಾರರು ತಾವು ಬೆಳೆದ ಅಡಕೆಯನ್ನು ಈ ಸಂಸ್ಥೆಗಳ ಮೂಲಕವೇ ಮಾರಾಟ ಮಾಡುತ್ತಾ ಬಂದಿರುವುದರಿಂದ ಈ ಸಂಸ್ಥೆಗಳು ತಾವೂ ಬೆಳೆದು ಸದಸ್ಯ ರೈತರನ್ನೂ ಬೆಳೆಸುತ್ತಾ ಬಂದಿದ್ದವು. ಆದರೆ ಇನ್ನು ಮುಂದೆ ಇದೇ ಪರಿಸ್ಥಿತಿ ಇರುವುದು ಅನುಮಾನ ಎಂಬ ಆತಂಕ ಸಹಕಾರಿ ಸಂಘಗಳನ್ನು ಕಾಡುತ್ತಿದೆ. ಬಂಡವಾಳಶಾಹಿಗಳು ನೇರವಾಗಿ ಅಡಕೆ ಬೆಳೆಗಾರರ ತೋಟದಿಂದಲೇ ಅಡಕೆ ಖರೀದಿಸಿ ಅವರಿಗೆ ಹಣ ನೀಡುವ ಅವಕಾಶವಿರುವುದರಿಂದ ರೈತರಿಗೆ ಸಾಗಾಟದ ವೆಚ್ಚವಿಲ್ಲದೆ ಕುಳಿತಲ್ಲೇ ಅಡಕೆ ಮಾರಾಟವಾಗುತ್ತದೆ. ಆದ್ದರಿಂದ ರೈತರು ಈ ವ್ಯವಸ್ಥೆಗೆ ಮಣೆ ಹಾಕುತ್ತಾರೆ. ಆದರೆ ಇದರ ಪರಿಣಾಮವಾಗಿ ಸಹಕಾರಿ ಕ್ಷೇತ್ರದ ಆಧಾರ ಮೇಲೆ ಬೆಳೆದುಬಂದ ರಾಂಕೋಸ್ ಮತ್ತು ಮಾಮ್ಕೋಸ್‌ನಂತಹ ಸಂಸ್ಥೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದೆಂಬ ಆತಂಕ ಸೃಷ್ಟಿಯಾಗಿದೆ.
ಒಟ್ಟಿನಲ್ಲಿ ಒಂದೆಡೆ ಸರ್ಕಾರ ರೈತರ ಅನುಕೂಲಕ್ಕೆ ಪೂರಕವಾಗಿ ಜಾರಿಗೆ ತಂದಿದೆ ಎನ್ನಲಾಗುವ ಎಪಿಎಂಸಿ ತಿದ್ದಪಡಿ ಕಾಯ್ದೆ, ಮತ್ತೂಂದೆಡೆ ರೈತರ ಹಿತ ಕಾಯುವುದಕ್ಕಾಗಿ ರೈತರಿಂದಲೇ ಅಸ್ತಿತ್ವಕ್ಕೆ ಬಂದ ರಾಂಕೋಸ್, ಮಾಮ್ಕೋಸ್‌ನಂತಹ ಸಹಕಾರಿ ಸಂಘಗಳ ಅಸ್ತಿತ್ವಕ್ಕೆ ಎಲ್ಲಿ ಮಾರಕವಾಗುತ್ತದೆಯೋ ಎಂಬ ಆತಂಕ ಸಹಕಾರಿ ಸಂಘ-ಸಂಸ್ಥೆಗಳಲ್ಲಿ ಹುಟ್ಟಿದೆ.
ಎಪಿಎಂಸಿ ಕಾಯ್ದೆಗೆ ಸರ್ಕಾರ ತಂದಿರುವ ತಿದ್ದುಪಡಿ ಆರಂಭದಲ್ಲಿ ರೈತರಿಗೆ ಆಪ್ಯಾಯಮಾನವಾಗಿ ಕಾಣಬಹುದಾದರೂ ಕಾಲಾ ನಂತರದಲ್ಲಿ ರೈತರು ತಮಗರಿವಿಲ್ಲದಂತೆ ಬಂಡವಾಳಶಾಹಿಗಳ, ಬಹುರಾಷ್ಟ್ರೀಯ ಕಂಪನಿಗಳ ಕಪಿಮುಷ್ಠಿಗೆ ಸಿಲುಕಿ ನರಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ವಿರೂಪಾಕ್ಷಪ್ಪ, ರ್‍ಯಾಂಕೋಸ್
ಸಂಸ್ಥೆಯ ವ್ಯವಸ್ಥಾಪಕ, ಭದ್ರಾವತಿ
ಕೆ.ಎಸ್. ಸುಧೀಂದ್ರ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Holehonnur: ಎರಡು ಪ್ರತ್ಯೇಕ ರಸ್ತೆ ಅಪಘಾತ
Shivamogga: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ ಈಶ್ವರಪ್ಪ
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.