Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು
Team Udayavani, Apr 18, 2024, 7:45 AM IST
ಶಿವಮೊಗ್ಗ: ರೈಲ್ವೆ ಹಳಿಗಳು ಏರುಪೇರಾಗಿ ಬೆಂಗಳೂರಿನಿಂದ ಬಂದ ಮೈಸೂರು -ಬೆಂಗಳೂರು ತಾಳಗೊಪ್ಪ ರೈಲು ಭದ್ರಾವತಿ ನಿಲ್ದಾಣದಲ್ಲಿ ನಿಂತಿದ್ದು, ಇತ್ತ ಶಿವಮೊಗ್ಗದಿಂದ – ಬೆಂಗಳೂರು ಹೊರಟಿರುವ ಜನಶತಾಬ್ದಿ ರೈಲು ಶಿವಮೊಗ್ಗದಲ್ಲೇ ನಿಂತಿರುವ ಘಟನೆ ನಡೆದಿದ್ದು, ಪ್ರಯಾಣಿಕರು ಕಂಗಾಲಾಗಿದ್ದಾರೆ.
ಬುಧವಾರ ರಾತ್ರಿ ಭದ್ರಾವತಿ ರೈಲ್ವೆ ಅಂಡರ್‌ಪಾಸ್ ಬಳಿ ದೊಡ್ಡ ವಾಹನವೊಂದು ಹೋಗುವಾಗ ರೈಲ್ವೆ ಹಳಿ ಸುರಕ್ಷತೆಗಾಗಿ ಹಾಕಿದ್ದ 4 ಮೀಟರ್ ಎತ್ತರದ ಬ್ಯಾರಿಕೇಡ್ ಅನ್ನು ಮುರಿದಿದೆ. ಡಿಕ್ಕಿ ರಭಸಕ್ಕೆ ರೈಲ್ವೆ ಹಳಿಗಳು ಒಂದು ಅಡಿಯಷ್ಟು ಏರುಪೇರಾಗಿತ್ತು.
ವಿಷಯ ತಿಳಿದ ರೈಲ್ವೆ ಇಲಾಖೆ ಸಿಬ್ಬಂದಿ ಮಧ್ಯ ರಾತ್ರಿಯಿಂದ ದುರಸ್ತಿ ಕಾರ್ಯ ನಡೆಸುತ್ತಿದ್ದಾರೆ. ಮೈಸೂರು – ಬೆಂಗಳೂರು – ಶಿವಮೊಗ್ಗ ರೈಲು 4.30ಕ್ಕೆ ಭದ್ರಾವತಿ ನಿಲ್ದಾಣಕ್ಕೆ ಬಂದಿದ್ದು ಅಲ್ಲೇ ನಿಂತಿದೆ. ಶಿವಮೊಗ್ಗದಿಂದ ಬೆಂಗಳೂರಿಗೆ ಬೆಳಗ್ಗೆ 5.15ಕ್ಕೆ ಹೊರಡಬೇಕಿದ್ದ ರೈಲು ಶಿವಮೊಗ್ಗ ನಿಲ್ದಾಣದಲ್ಲೇ ಇದೆ.
ವಾಹನವೊಂದರ ಎಡವಟ್ಟಿನಿಂದ ಸಾವಿರಾರು ಪ್ರಯಾಣಿಕರು ಕಾದು ಕಾದು ಸುಸ್ತಾಗಿ ಹಿಡಿಶಾಪ ಹಾಕುತ್ತಿದ್ದಾರೆ.
ಬೆಂಗಳೂರಿನಿಂದ ಬಂದ ತಾಳಗೊಪ್ಪ ರೈಲು 7 ಗಂಟೆಗೆ ಶಿವಮೊಗ್ಗಕ್ಕೆ ತಲುಪಿದೆ . ಬೆಂಗಳೂರು ಹೊರಟಿರುವ ಜನಶತಾಬ್ದಿ 7.05 ಕ್ಕೆ ಬೆಂಗಳೂರಿಗೆ ಹೊರಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಭೀಕರ ಅಪಘಾತ… ರಿಕ್ಷಾ ಚಾಲಕ ಸೇರಿ ಇಬ್ಬರು ಮೃತ್ಯು, ಮೂವರಿಗೆ ಗಾಯ
Anandapura: ಬಟ್ಟೆ ತೊಳೆಯಲು ಹೋದ ಮಹಿಳೆ ಕೆರೆಗೆ ಬಿದ್ದು ಮೃತ್ಯು
Hosanagara: ಬಿಸಿ ಟೀ ಮೈ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ಎರಡು ವರ್ಷದ ಮಗು ಸಾವು
Anandapura: ಚಾಲಕನ ನಿಯಂತ್ರಣ ತಪ್ಪಿದ ಬಸ್; ಹಲವರಿಗೆ ಗಾಯ
Hosanagara: ಹಾಡುಹಗಲೇ ಮನೆಯ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.